ಕಮಲ್ ಹಾಸನ್ ವಿವಾದದ ಬಳಿಕ ಮೊದಲ ಬಾರಿಗೆ ವೇದಿಕೆ ಮೇಲೆ ಮಾತನಾಡಿದ ಶಿವಣ್ಣ
ತೆಲುಗು ಚಿತ್ರ 'ಕಣ್ಣಪ್ಪ' ಜೂನ್ 27 ರಂದು ತೆರೆಗೆ ಬರುತ್ತಿದೆ. ಚಿತ್ರದ ಕನ್ನಡ ರಿಲೀಸ್‌ಗಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿವರಾಜ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು. ಕಮಲ್ ಹಾಸನ್ ವಿವಾದದ ಬಳಿಕ ಅವರು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಆದರೆ ವಿವಾದದ ಬಗ್ಗೆ ಮಾತನಾಡಲಿಲ್ಲ. ಶಿವಣ್ಣ ಅವರು ಚಿತ್ರದ ಯಶಸ್ಸಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ತೆಲುಗಿನ ‘ಕಣ್ಣಪ್ಪ’ ಸಿನಿಮಾ (Kannappa Movie) ಜೂನ್ 27ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗಲಿದೆ. ಈ ಕಾರಣಕ್ಕೆ ಚಿತ್ರದ ಸುದ್ದಿಗೋಷ್ಠಿ ಇಂದು (ಮೇ 31) ಬೆಂಗಳೂರಿನಲ್ಲಿ ನಡೆಯಿತು. ಇದಕ್ಕೆ ಶಿವರಾಜ್ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಮಲ್ ಹಾಸನ್ ಕನ್ನಡದ ಬಗ್ಗೆ ಮಾಡಿದ ವಿವಾದದ ಬಳಿಕ ಅವರು ಮೊದಲ ಬಾರಿಗೆ ಎಲ್ಲರ ಎದುರು ಮಾತನಾಡಿದರು. ಆದರೆ, ಈ ವೇಳೆ ಅವರು ವಿವಾದದ ಬಗ್ಗೆ ಮಾತನಾಡಲು ಇಷ್ಟಪಟ್ಟಿಲ್ಲ. ಅವರು ಮಾತನಾಡಲು ನಿರಾಕರಿಸಿದ್ದಾರೆ.
‘ಈಗಿನ ಜನರೇಶನ್ ಅವರು ಈ ರೀತಿಯ ಸಿನಿಮಾಗಳನ್ನು ಮಾಡಲು ಗಟ್ಸ್ ಬೇಕು. ಪೌರಾಣಿಕ ಸಿನಿಮಾ ಮಾಡುವ ರಿಸ್ಕ್ನ ಅವರು ತೆಗೆದುಕೊಂಡಿದ್ದಾರೆ. ವಿಶ್ಯುವಲ್ಸ್ ನೋಡಿದಾಗ ಅದ್ಭುತ ಎನಿಸುತ್ತದೆ. ಈಗಿನವರಿಗೆ ಭಕ್ತಿ-ಭಯ ಹೋಗುತ್ತಿದೆ ಅನಿಸುತ್ತದೆ. ಹೀಗಿರುವಾಗ ಈ ಸಿನಿಮಾ ಮಾಡಿದ್ದಾರೆ. ಅಪ್ಪಾಜಿ ಮಾಡಿದ ಸಿನಿಮಾ ಇದು. ನಾನು ಮಾಡುವಾಗ ಭಯ ಇತ್ತು. ಕಷ್ಟ ನಾನು ಮಾಡಲ್ಲ ಎಂದೆ. ಆದರೆ, ಅಪ್ಪಾಜಿ ನನ್ನ ಆಸೆ ಮಾಡು ಎಂದರು. ನಾನು ಮಾಡಿದೆ. ಈಗ ವಿಷ್ಣು ಈ ಸಿನಿಮಾ ಮಾಡ್ತಿದ್ದಾನೆ ಎನ್ನುವಾಗ ಖುಷಿ ಆಯ್ತು. ಅವರ ಮೇಲೆ ಗೌರವ ಹೆಚ್ಚಾಯ್ತು’ ಎಂದಿದ್ದಾರೆ ಅವರು.
‘ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುತ್ತದೆ. ಶಿವನ ಲೀಲೆ ಯಾವಾಗಲೂ ಕಾಪಾಡುತ್ತದೆ. ಕಣ್ಣಪ್ಪನ ಪಾತ್ರವನ್ನು ನಾನು ಮಾಡಬೇಕಿತ್ತು. ಆದರೆ, ಡೇಟ್ ಹೊಂದಾಣಿಕೆ ಮಾಡಲು ಸಾಧ್ಯವಾಗಿಲ್ಲ. ಮೋಹನ್ ಬಾಬು ಅವರು ಕರೆದರೆ ದುಡ್ಡು ಕೊಡಲಿ ಬಿಡಲಿ ನಾನು ಪಾತ್ರ ಮಾಡಿ ಹೋಗ್ತೆನೆ’ ಎಂದಿದ್ದಾರೆ ಶಿವಣ್ಣ.
ಮೋಹನ್ ಬಾಬು ಅವರು ವೇದಿಕೆ ಮೇಲೆ ಮಾತನಾಡುವಾಗ ‘ಶಿವರಾಜ್ಕುಮಾರ್ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಬೇಕು’ ಎಂದರು. ಆದರೆ, ಇದಕ್ಕೆ ಶಿವಣ್ಣ ಒಪ್ಪಲಿಲ್ಲ. ‘ವಿಲನ್ ಪಾತ್ರ ಬೇಡ. ನನ್ನ ಸಹೋದರನ ಪಾತ್ರ ಕೊಡುತ್ತೇನೆ’ ಎಂದು ಶಿವಣ್ಣ ಹೇಳಿದರು.
ಇದನ್ನೂ ಓದಿ: ಶಿವರಾಜ್ಕುಮಾರ್ ಜೊತೆ ನಟಿಸಿದ ಈ ನಟಿ ಈಗ ಐಟಿ ಉದ್ಯೋಗಿ
ಆದರೆ, ವೇದಿಕೆ ಮೇಲೆ ಶಿವರಾಜ್ಕುಮಾರ್ ಅವರು ವಿವಾದದ ಬಗ್ಗೆ ಮಾತನಾಡಲು ಇಷ್ಟಪಡಲಿಲ್ಲ. ಇತ್ತೀಚೆಗೆ ಅವರು ಕಾರ್ಯಕ್ರಮ ಒಂದರಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದರು. ಆದರೆ, ಈ ಕಾರ್ಯಕ್ರಮದಲ್ಲಿ ಅವರು ಮೌನ ವಹಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:23 pm, Sat, 31 May 25








