AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್​ಎಸ್​ ವೆಂಕಟೇಶಮೂರ್ತಿ ನಿಧನ; ಖ್ಯಾತ ಸಾಹಿತಿ, ಕವಿ ಇನ್ನಿಲ್ಲ

HS Venkateshamurthy Death: ಖ್ಯಾತ ಕನ್ನಡ ಗೀತರಚನೆಕಾರ, ಕಥೆಗಾರ ಮತ್ತು ಸಂಭಾಷಣಕಾರ ಎಚ್.ಎಸ್. ವೆಂಕಟೇಶಮೂರ್ತಿ ಅವರು ನಿಧನರಾಗಿದ್ದಾರೆ. ಅವರು ಅನೇಕ ಚಿತ್ರಗಳಿಗೆ ಹಾಡುಗಳು, ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸಾಹಿತ್ಯ ಲೋಕ ಹಾಗೂ ಚಿತ್ರ ಲೋಕಕ್ಕೆ ಕೊಡುಗೆಯನ್ನು ಗಮನಿಸಿ ಕೆಲವು ಪ್ರಶಸ್ತಿಗಳು  ಕೂಡ ಲಭ್ಯವಾಗಿವೆ.

ಎಚ್​ಎಸ್​ ವೆಂಕಟೇಶಮೂರ್ತಿ ನಿಧನ; ಖ್ಯಾತ ಸಾಹಿತಿ, ಕವಿ ಇನ್ನಿಲ್ಲ
ವೆಂಕಟೇಶಮೂರ್ತಿ
ರಾಜೇಶ್ ದುಗ್ಗುಮನೆ
|

Updated on:May 30, 2025 | 10:13 AM

Share

ಇತ್ತೀಚೆಗೆ ಚಿತ್ರರಂಗಕ್ಕೆ ಒಂದಾದ ಮೇಲೆ ಒಂದರಂತೆ ಶಾಕ್​ಗಳು ಎದುರಾಗುತ್ತಿವೆ. ಈ ಮೊದಲು ನಟ ಹಾಗೂ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ನಿಧನ ಹೊಂದಿದರು. ಇತ್ತೀಚೆಗೆ, ನಟ ಶ್ರೀಧರ್ ನಾಯಕ್ ಕೊನೆಯುಸಿರು ಎಳೆದರು. ಈಗ ಕನ್ನಡದ ಗೀತ ಸಾಹಿತಿ, ಸಾಹಿತಿ, ಕವಿ ಕಥೆಗಾರ, ಸಂಭಾಷಣಕಾರ ಎಚ್​ಎಸ್​ ವೆಂಕಟೇಶಮೂರ್ತಿ (HS Venkateshamurthy)  ನಿಧನ ಹೊಂದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

1944ರ ಜೂನ್ 23ರಂದು ವೆಂಕಟೇಶಮೂರ್ತಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೊದಿಗೆರೆ ಎಂಬ ಹಳ್ಳಿಯಲ್ಲಿ ಜನಿಸಿದರು. ಅವರದ್ದು ಮಧ್ಯಮವರ್ಗದ ಕುಟುಂಬ. ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದರು. ‘ಕನ್ನಡದಲ್ಲಿ ಕಥನ ಕವನಗಳು’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದರು. 1973ರಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕ ಆದರು. 2000ರಲ್ಲಿ ಅವರು ನಿವೃತ್ತಿ ಹೊಂದಿದರು. ಆ ಬಳಿಕವೂ ಬೆಂಗಳೂರನಲ್ಲೇ ನೆಲಿಸಿದ್ದ ಅವರು, ಬರಹ ಕೃಷಿಯಲ್ಲಿ ತೊಡಗಿಕೊಂಡಿದ್ದರು.

ವೆಂಕಟೇಶಮೂರ್ತಿ ಅವರಿಗೆ ಬಣ್ಣದ ಲೋಕದ ಮೇಲೆ ಒಲವು ಮೂಡಲು ಕಾರಣ ಆಗಿದ್ದು ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು. ಅವರು ಬಾಲ್ಯದಲ್ಲಿ ಇದ್ದಾಗ ಸಾಕಷ್ಟು ಕೃತಿಗಳನ್ನು ಅವರು ಓದುತ್ತಿದ್ದರು. ಅವರು ಕವಿಯಾಗಿ, ನಾಟಕಕಾರನಗಿಯೂ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ
Image
ಹೊಂಬಾಳೆ ನಿರ್ಮಾಣದ ಹೃತಿಕ್ ಚಿತ್ರಕ್ಕೆ ದಕ್ಷಿಣದ ಖ್ಯಾತ ಹೀರೋ ಡೈರೆಕ್ಷನ್
Image
ಸುಹಾಸಿನಿ ಸರಳತೆ; ಬೀದಿ ಬದಿ ಕಲಾವಿದ ಹಾಡು ಕೇಳಿ ಮೆಚ್ಚುಗೆ
Image
ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದು ಕರೆದ ಅಭಿಮಾನಿ; ನಟಿಯ ಪ್ರತಿಕ್ರಿಯೆ ಏನು?
Image
ಕಿಚ್ಚ ಸುದೀಪ್-ರಾಜೇಶ್ ಕೃಷ್ಣನ್ ಹಾಡಿನ್ ಜುಗಲ್​ಬಂದಿ; ಅಪರೂಪದ ವಿಡಿಯೋ

ಕನ್ನಡ ಅಧ್ಯಾಪಕರಾಗಿದ್ದ ನರಸಿಂಹ ಶಾಸ್ತ್ರಿಗಳು ವೆಂಕಟೇಶಮೂರ್ತಿ ಮೇಲೆ ಸಾಕಷ್ಟು ಪ್ರಭಾವ ಬೀರಿದರು. ತಮ್ಮ ಬಳಿಯಿದ್ದ ಕುವೆಂಪು, ಬೇಂದ್ರೆ, ಗೋರೂರು, ಮಾಸ್ತಿ, ಕಾರಂತ ಮೊದಲಾದವರ ಕೃತಿಗಳನ್ನು ಮೂರ್ತಿಯವರಿಗೆ ನೀಡಿದರು. ತಾವು ಬರೆದ ಮೊದಲ ಕವನ ಸಂಕಲನ ‘ಪರಿವೃತ್ತ’ವನ್ನು ವೆಂಕಟೇಶಮೂರ್ತಿ ಅವರು ನರಸಿಂಹ ಶಾಸ್ತ್ರಿಗಳಿಗೆ  ಅರ್ಪಿಸಿದ್ದಾರೆ.

‘ಪರಿವೃತ್ತ’, ‘ಬಾಗಿಲು ಬಡಿವ ಜನಗಳು’ ಸೇರಿದಂತೆ 15ಕ್ಕೂ ಹೆಚ್ಚು ಕವನ ಸಂಕಲಗಳನ್ನು ಅವರು ರಚಿಸಿದ್ದಾರೆ. ‘ಬಾನಸವಾಡಿಯ ಬೆಂಕಿ’, ‘ಪುಟ್ಟಾರಿಯ ಮತಾಂತರ’ ಕಥಾ ಸಂಕಲನ ಇವರಿಂದ ರಚಿತವಾಗಿದೆ. ‘ತಾಪಿ’, ‘ಅಮಾನುಷರು’, ‘ಕದಿರಿನ ಕೋಟೆ’, ‘ಅಗ್ನಿಮುಖಿ’ ಇವರಿಂದ ರಚಿತವಾದ ಕಾದಂಬರಿಗಳು.

ಚಿತ್ರರಂಗಕ್ಕೂ ವೆಂಕಟೇಶಮೂರ್ತಿ ಕೊಡುಗೆ ಅಪಾರ

ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ‘ಚಿನ್ನಾರಿ ಮುತ್ತ’ಗೆ ಇವರೇ ಕಥೆ, ಸಂಭಾಷಣೆ ಹಾಗೂ ಎಲ್ಲಾ ಹಾಡುಗಳನ್ನು ಬರೆದಿದ್ದರು. ‘ಅಮೆರಿಕ ಅಮೆರಿಕ’ ಚಿತ್ರದ ‘ಬಾನಲ್ಲಿ ಓಡೋ ಮೋಡ..’ ಹಾಡು ಇವರ ಬರಹದಲ್ಲೇ ಮೂಡಿ ಬಂದಿದೆ. ಪುನೀತ್ ನಟನೆಯ ‘ಮೈತ್ರಿ’ ಚಿತ್ರಕ್ಕೆ ಹಾಡು ಬರೆದಿದ್ದರು. ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಬಳಕೆ ಆದ ‘ತೂಗು ಮಂಚದಲ್ಲಿ ಕೂತು..’ ಇವರೇ ಬರೆದ ಹಾಡು.

ಇದನ್ನೂ ಓದಿ: ‘ಪಾರು’ ಖ್ಯಾತಿಯ ನಟ ಶ್ರೀಧರ್ ನಾಯಕ್ ನಿಧನ; ಫಲಿಸಲಿಲ್ಲ ಪ್ರಾರ್ಥನೆ

ಮಕ್ಕಳು, ಯುವಕರು ಮತ್ತು ಮಹಿಳೆಯರಿಗೆ ಬೇಕಾದ ಗೀತೆಗಳನ್ನು ರಚಿಸಿ, ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ‘ಮುಕ್ತ’ ಧಾರಾವಾಹಿಯ ಟೈಟಲ್ ಸಾಂಗ್ ಸಾಕಷ್ಟು ಜನಪ್ರಿಯತೆ ಪಡೆದಿದೆ. ಇದನ್ನು ವೆಂಕಟೇಶಮೂರ್ತಿ ಅವರೇ ರಚಿಸಿದ್ದಾರೆ. ಸಾಹಿತ್ಯ ಲೋಕ ಹಾಗೂ ಚಿತ್ರ ಲೋಕಕ್ಕೆ ನೀಡಿದ ಕೊಡುಗೆಗಾಗಿ ಅನೇಕ ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:13 am, Fri, 30 May 25

Follow Us
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು