AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶುಗರ್ ಡ್ಯಾಡಿ’ ಎಂದು ಟೀಕಿಸಿದ ಪತ್ನಿಗೆ ಬಾಲಿವುಡ್ ನಟ ಗೋವಿಂದ ಖಡಕ್ ವಾರ್ನಿಂಗ್

ಖ್ಯಾತ ನಟ ಗೋವಿಂದ ಹಾಗೂ ಹೊಸ ನಟಿ ಕೋಮಲ್ ರಾಣಿ ನಡುವೆ ಸಂಬಂಧ ಇದೆ ಎಂಬರ್ಥದಲ್ಲಿ ಗೋವಿಂದ ಪತ್ನಿ ಸುನೀತಾ ಅಹುಜಾ ಅವರು ಆರೋಪ ಮಾಡಿದ್ದರು. ಅವರ ಹೇಳಿಕೆಗಳಿಗೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ ಗೋವಿಂದ, ಪತ್ನಿಯ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

‘ಶುಗರ್ ಡ್ಯಾಡಿ’ ಎಂದು ಟೀಕಿಸಿದ ಪತ್ನಿಗೆ ಬಾಲಿವುಡ್ ನಟ ಗೋವಿಂದ ಖಡಕ್ ವಾರ್ನಿಂಗ್
Sunita Ahuja, Govinda, Komal Rani
ಮದನ್​ ಕುಮಾರ್​
|

Updated on: Aug 16, 2026 | 7:15 AM

Share

ಬಾಲಿವುಡ್‌ನ ಹಿರಿಯ ನಟ ಗೋವಿಂದ (Govinda) ಹಾಗೂ ಅವರ ಪತ್ನಿ ಸುನೀತಾ ಅಹುಜಾ ನಡುವಿನ ಕೌಟುಂಬಿಕ ಕಲಹ ಈಗ ಸಾರ್ವಜನಿಕವಾಗಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಿರಿಯ ವಯಸ್ಸಿನ ನಟಿ ಕೋಮಲ್ ರಾಣಿ (Komal Rani) ಜೊತೆ ಕಾಣಿಸಿಕೊಂಡಿದ್ದ ಗೋವಿಂದ ಅವರನ್ನು ಸುನೀತಾ ಅವರು ‘ಶುಗರ್ ಡ್ಯಾಡಿ’ (Sugar Daddy) ಎಂದು ಕಾಲೆಳೆದಿದ್ದರು. ಈ ಟೀಕೆಗೆ ಈಗ ತೀವ್ರವಾಗಿ ತಿರುಗೇಟು ನೀಡಿರುವ ಗೋವಿಂದ, ಪತ್ನಿ ಸುನೀತಾಗೆ ‘ನಿಮ್ಮ ಮಿತಿಯಲ್ಲಿ ಇರಿ’ ಎಂದು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಪಾಪರಾಜಿಗಳ ಮುಂದೆ ಮಾತನಾಡಿದ್ದ ಸುನೀತಾ, ‘ಮೊದಲು ಸಿನಿಮಾ ನಿರ್ಮಾಣವಾಗಲಿ, ಪ್ರಚಾರ ಆಮೇಲೆ. ಆದರೆ ಈಗಿನಿಂದಲೇ ತನ್ನ ಮಗಳ ವಯಸ್ಸಿನ ಹುಡುಗಿಯ ಜೊತೆ ಸುತ್ತಾಡುತ್ತಿದ್ದಾರೆ. ಅವರಿಗೆ ಕೊಂಚವೂ ಮಾನಮರ್ಯಾದೆ ಇಲ್ಲವೇ? ಕನಿಷ್ಠ ಉಡುಪು ಧರಿಸುವ ಪ್ರಜ್ಞೆಯಾದರೂ ಇರಬೇಕು. ನಿಮ್ಮ ಶುಗರ್ ಡ್ಯಾಡಿ ಅಷ್ಟೊಂದು ಶ್ರೀಮಂತನಾಗಿದ್ದರೆ ಸರಿಯಾಗಿ ಬಟ್ಟೆ ಧರಿಸಿ. ನಮ್ಮನ್ನು ನೋಡಿ, ಎಷ್ಟು ಸ್ಟೈಲಿಶ್ ಆಗಿ ಡ್ರೆಸ್ ಮಾಡಿಕೊಂಡಿದ್ದೇವೆ. ಅವರು ತಲೆ ಕೆಡಿಸಿಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದ್ದರು.

ಖಡಕ್ ತಿರುಗೇಟು ನೀಡಿದ ಗೋವಿಂದ

ಸುನೀತಾ ಅಹುಜಾ ಅವರು ಆಡಿದ ಮಾತುಗಳನ್ನು ಗೋವಿಂದ ಖಂಡಿಸಿದ್ದಾರೆ. ಇದು ತಮ್ಮ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಎಂದು ಅವರು ಹೇಳಿದ್ದಾರೆ. ‘ನಾನೀಗ ಹೊಸ ಸಿನಿಮಾವನ್ನು ಪ್ರಾರಂಭಿಸಿದ್ದೇನೆ. ಆದರೆ ನೀವು ನನ್ನ ಗೌರವವನ್ನು ಹಾಳುಮಾಡಲು, ಸಾರ್ವಜನಿಕವಾಗಿ ನನ್ನ ಇಮೇಜ್ ಹಾಳುಮಾಡಲು ಮತ್ತು ನನ್ನ ವ್ಯವಹಾರಕ್ಕೆ ಹಾನಿ ಮಾಡಲು ಸಕಲ ಪ್ರಯತ್ನ ನಡೆಸುತ್ತಿದ್ದೀರಿ’ ಎಂದಿದ್ದಾರೆ ಗೋವಿಂದ.

View this post on Instagram

A post shared by TAHIR JASUS007 (@tahirjasus)

‘ಬಡ ಕುಟುಂಬಗಳ ನಟರ ನಿಂದನೆ ಬೇಡ’

‘ಚಿತ್ರರಂಗಕ್ಕೆ ಬಡ ಕುಟುಂಬಗಳಿಂದ ಅನೇಕರು ಬರುತ್ತಾರೆ. ಅವರ ಬಳಿ ಅಧಿಕಾರ ಅಥವಾ ಹಣ ಇಲ್ಲದಿರಬಹುದು. ಆದರೆ ದೇವರು ನಿಮಗೆ ಎಲ್ಲವನ್ನೂ ನೀಡಿದ್ದಾನೆ ಎಂದಮಾತ್ರಕ್ಕೆ ಬೇರೆಯವರನ್ನು ಈ ಮಟ್ಟಕ್ಕೆ ಅವಮಾನಿಸುವುದು ಶೋಭೆಯಲ್ಲ. ದೇಶದ ಅನೇಕ ಹಿರಿಯ ನಟರು ತಮಗಿಂತ ಕಿರಿಯ ನಟಿಯರ ಜೊತೆ ನಟಿಸಿದ್ದಾರೆ. ಇದರಿಂದ ಅವರಿಗೆ ಯಶಸ್ಸು ಮತ್ತು ಯಂಗ್ ಲುಕ್ ಸಿಕ್ಕಿದೆ. ಆದರೆ ನಾನು ಯಂಗ್ ಆಗಿ ಕಾಣಿಸಿಕೊಳ್ಳುವುದು ನಿಮಗೆ ಇಷ್ಟವಿಲ್ಲದಂತಿದೆ’ ಎಂದು ಗೋವಿಂದ ಹೇಳಿದ್ದಾರೆ.

ಇದನ್ನೂ ಓದಿ: 7 ವರ್ಷಗಳ ಬಳಿಕ ಚಿತ್ರರಂಗಕ್ಕೆ ನಟ ಗೋವಿಂದ ಕಮ್‌ಬ್ಯಾಕ್; ಹೊಸ ಸಿನಿಮಾ ‘ರೂಪಾ’ ಘೋಷಣೆ

‘ನಿಮ್ಮ ಬೆನ್ನ ಹಿಂದಿರುವ ಗ್ಯಾಂಗ್ ಶೀಘ್ರವೇ ಬಯಲಾಗಲಿದೆ’

ಸುನೀತಾಗೆ ವಾರ್ನಿಂಗ್ ನೀಡಿದ ಗೋವಿಂದ, ‘ನಿಮ್ಮ ಪಾಡ್‌ಕಾಸ್ಟ್ ಹಾಗೂ ಹೇಳಿಕೆಗಳ ಹಿಂದೆ ಯಾವ ಗುಂಪು ಅಥವಾ ಗ್ಯಾಂಗ್ ಕೆಲಸ ಮಾಡುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಶೀಘ್ರದಲ್ಲೇ ಅವರೆಲ್ಲರೂ ಹೊರಬರಲಿದ್ದಾರೆ. ಭವಿಷ್ಯದಲ್ಲಿ ನಿಮಗೂ ನನ್ನ ಅಗತ್ಯ ಬರಬಹುದು. ಆದ್ದರಿಂದ ನನ್ನನ್ನು ನಿಂದಿಸುವುದನ್ನು ನಿಲ್ಲಿಸಿ, ನಿಮ್ಮ ಮಿತಿಯಲ್ಲಿರಿ’ ಎಂದು ಎಚ್ಚರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಸ್ವಾತಂತ್ರ್ಯೋತ್ಸವ; HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ
ಸ್ವಾತಂತ್ರ್ಯೋತ್ಸವ; HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ
ಹೆಬ್ಬಾಳ್ಕರ್​​ ಪರ ನಿಂತ ಜಾರಕಿಹೊಳಿ, ಹಾವು ಮುಂಗುಸಿಯಂತಿದ್ದವರು ಒಂದಾದ್ರಾ?
ಹೆಬ್ಬಾಳ್ಕರ್​​ ಪರ ನಿಂತ ಜಾರಕಿಹೊಳಿ, ಹಾವು ಮುಂಗುಸಿಯಂತಿದ್ದವರು ಒಂದಾದ್ರಾ?
ಸೋಮಾವತಿ ನದಿಗೆ ಬಿದ್ದ ಕಾರು: ಬಂಡೆಯಿಂದಾಗಿ ಉಳಿದ ದಂಪತಿ ಜೀವ
ಸೋಮಾವತಿ ನದಿಗೆ ಬಿದ್ದ ಕಾರು: ಬಂಡೆಯಿಂದಾಗಿ ಉಳಿದ ದಂಪತಿ ಜೀವ
ಸ್ವಾತಂತ್ರ್ಯ ದಿನಾಚರಣೆ ವೇಳೆ ಖಡ್ಗ ಪ್ರದರ್ಶನ; ಓರ್ವನ ಬಂಧನ
ಸ್ವಾತಂತ್ರ್ಯ ದಿನಾಚರಣೆ ವೇಳೆ ಖಡ್ಗ ಪ್ರದರ್ಶನ; ಓರ್ವನ ಬಂಧನ
RSS ನೋಂದಣಿ ಆಗಿಲ್ಲ, ಆಗೋದು ಇಲ್ಲ: ಪ್ರಿಯಾಂಕ್ ಖರ್ಗೆ ಸಂತೋಷ್​​ ತಿರುಗೇಟು
RSS ನೋಂದಣಿ ಆಗಿಲ್ಲ, ಆಗೋದು ಇಲ್ಲ: ಪ್ರಿಯಾಂಕ್ ಖರ್ಗೆ ಸಂತೋಷ್​​ ತಿರುಗೇಟು
'ವಂದೇ ಮಾತರಂ' ಗೀತೆಗೆ ಅವಮಾನಿಸಿದರೇ ಸೋನಿಯಾ ಗಾಂಧಿ?
'ವಂದೇ ಮಾತರಂ' ಗೀತೆಗೆ ಅವಮಾನಿಸಿದರೇ ಸೋನಿಯಾ ಗಾಂಧಿ?
ನಾನು ಮಾತಾಡಲ್ಲ ಅಂದ್ರೆ ಸೈಲೆಂಟ್ ಆಗಿದ್ದೀನಿ ಅಂತಾ ಅರ್ಥ ಅಲ್ಲ ಎಂದ ಸಿದ್ದು
ನಾನು ಮಾತಾಡಲ್ಲ ಅಂದ್ರೆ ಸೈಲೆಂಟ್ ಆಗಿದ್ದೀನಿ ಅಂತಾ ಅರ್ಥ ಅಲ್ಲ ಎಂದ ಸಿದ್ದು
ಸ್ವಾತಂತ್ರ್ಯ ದಿನಾಚರಣೆ ವೇಳೆ ಅಸ್ವಸ್ಥಗೊಂಡ ಆಂಧ್ರ ಸಚಿವ
ಸ್ವಾತಂತ್ರ್ಯ ದಿನಾಚರಣೆ ವೇಳೆ ಅಸ್ವಸ್ಥಗೊಂಡ ಆಂಧ್ರ ಸಚಿವ
6ನೇ ತರಗತಿಯಿಂದ AI ಶಿಕ್ಷಣ, AI ವಿಶ್ವವಿದ್ಯಾಲಯ: ಸಿಎಂ ಮಹತ್ವದ ಘೋಷಣೆ
6ನೇ ತರಗತಿಯಿಂದ AI ಶಿಕ್ಷಣ, AI ವಿಶ್ವವಿದ್ಯಾಲಯ: ಸಿಎಂ ಮಹತ್ವದ ಘೋಷಣೆ
ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ ಏನಂದ್ರು?
ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ ಏನಂದ್ರು?