ಸುಹಾಸಿನಿ ಸರಳತೆಗೆ ಅವರೇ ಸಾಟಿ; ಬೀದಿ ಬದಿ ಕಲಾವಿದನ ಹಾಡನ್ನು ಶ್ರದ್ಧೆಯಿಂದ ಕೇಳಿ ಮೆಚ್ಚಿದ ನಟಿ
ಪ್ರಸಿದ್ಧ ನಟಿ ಸುಹಾಸಿನಿ ಅವರ ಸರಳತೆ ಮತ್ತು ಕಲಾವಿದರನ್ನು ಗೌರವಿಸುವ ರೀತಿ ಜನರನ್ನು ಸೆಳೆದಿದೆ. ದಾರಿಯಲ್ಲಿ ಹಾಡುವ ಕಲಾವಿದನಿಗೆ ಗೌರವ ತೋರಿದ ವಿಡಿಯೋ ವೈರಲ್ ಆಗಿದೆ.ಇದರಿಂದ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಜನಪ್ರಿಯರಾಗಿದ್ದಾರೆ. ಕನ್ನಡದಲ್ಲಿ ಅವರು ‘ಬಂಧನ’, ‘ಮುತ್ತಿನ ಹಾರ’ ರೀತಿಯ ಸಿನಿಮಾಗಳನ್ನು ನೀಡಿದರು.

ಹಿರಿಯ ನಟಿ ಸುಹಾಸಿನಿ (Suhasini) ಅವರು ಕನ್ನಡ, ತಮಿಳು ಸೇರಿದಂತೆ ಅನೇಕ ಭಾಷಿಗರಿಗೆ ಪರಿಚಯ ಇದ್ದಾರೆ. ಅವರು ಯಾವಾಗಲೂ ತಮ್ಮ ಸರಳತೆಯ ಕಾರಣದಿಂದ ಪ್ರೇಕ್ಷಕರಿಗೆ ಇಷ್ಟ ಆಗುತ್ತಾರೆ. ಈಗ ಅವರ ಸರಳತೆಗೆ ಮತ್ತು ಕಲಾವಿದರನ್ನು ಗೌರವಿಸುವ ರೀತಿಗೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ನಟಿ ಸುಹಾಸಿನಿ ಸರಳತೆಯನ್ನು ನೋಡಿ ಎಲ್ಲರೂ ಕೊಂಡಾಡುತ್ತಿದ್ದಾರೆ.
ಸಾಮಾನ್ಯವಾಗಿ ದೊಡ್ಡ ಸೆಲೆಬ್ರಿಟಿಗಳು ಹಾಗೆಲ್ಲ ಕೈಗೆ ಸಿಗೋದಿಲ್ಲ. ದೊಡ್ಡ ದೊಡ್ಡ ಕಾರ್ಯಕ್ರಮದಲ್ಲಿ ಅವರು ಕಾಣ ಸಿಗುತ್ತಾರೆ. ಸುಹಾಸಿನಿ ಅವರು ಎಷ್ಟೇ ಜನಪ್ರಿಯತೆ ಪಡೆದಿದ್ದರು, ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಪತಿ ಎನಿಸಿಕೊಂಡರೂ ಜನ ಸಾಮಾನ್ಯರನ್ನು ಭೇಟಿ ಆಗುತ್ತಾರೆ. ವಿಮಾನ ನಿಲ್ದಾಣದಲ್ಲಿ ಅವರು ಭೇಟಿ ಆದರೆ ಅಭಿಮಾನಿಗಳ ಬಳಿ ಮಾತನಾಡುತ್ತಾರೆ, ಆಟೋಗ್ರಾಫ್ ನೀಡುತ್ತಾರೆ, ಸೆಲ್ಫಿಗೆ ಪೋಸ್ ಕೊಡುತ್ತಾರೆ. ಇದು ಅವರ ಸರಳತೆಗೆ ಹಿಡಿದ ಕನ್ನಡಿ.
ಇದನ್ನೂ ಓದಿ: ‘ನಾನು ನಿಮ್ಮ ದೊಡ್ಡ ಅಭಿಮಾನಿ’; ಮಣಿರತ್ನಂನಿಂದ ಸಾಯಿ ಪಲ್ಲವಿಗೆ ವಿಶೇಷ ಮೆಚ್ಚುಗೆ
ಇತ್ತೀಚೆಗೆ ಸುಹಾಸಿನಿ ಅವರು ದಾರಿಬದಿಯಲ್ಲಿ ನಿಂತು ಹನುಮಂತನ ವೇಷ ಧರಿಸಿ ಬಂದ ವ್ಯಕ್ತಿಯ ಹಾಡನ್ನು ಕೇಳಿದ್ದಾರೆ. ಈ ಹಾಡಿಗೆ ಅವರು ತಲೆದೂಗಿದ್ದಾರೆ. ಅತ್ಯಂತ ಶ್ರದ್ಧೆಯಿಂದ ಹಾಡನ್ನು ಆಲಿಸಿದ ಬಳಿಕ ಅವರು ಕಲಾವಿದನಿಗೆ ಧನ್ಯವಾದ ಹೇಳಿದ್ದಾರೆ. ಸುಹಾಸಿನಿ ಅವರು ಸಣ್ಣ ಕಲಾವಿದರನ್ನೂ ಎಷ್ಟು ಗೌರವಿಸುತ್ತಾರೆ ಎಂಬುದಕ್ಕೆ ಇದು ಒಂದು ಒಳ್ಳೆಯ ನಿದರ್ಶನ. ಈ ವಿಡಿಯೋ ಸಾಕಷ್ಟು ಲೈಕ್ಸ್ ಪಡೆದುಕೊಂಡಿದೆ.
ಸುಹಾಸಿನಿ ಹುಟ್ಟಿದ್ದು ತಮಿಳುನಾಡಿನಲ್ಲಿ. ಅವರು 1980ರಲ್ಲಿ ‘ನೆಂಜತಾಯ್ ಕಿಲ್ಲತ್ತೆ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದರು. 1981ರಲ್ಲಿ ‘ಕೊತ್ತ ಜೀವಿತಲು’ ಸಿನಿಮಾದ ಮೂಲಕ ತೆಲುಗು ರಂಗ ಪ್ರವೇಶಿಸಿದರು. 1983ರಲ್ಲಿ ‘ಬೆಂಕಿಯಲ್ಲಿ ಅರಳಿದ ಹೂವು’ ಸಿನಿಮಾ ಮೂಲಕ ಕನ್ನಡಕ್ಕೆ ಪರಿಚಯ ಆದರು. ಕನ್ನಡದಲ್ಲಿ ಅವರು ‘ಬಂಧನ’, ‘ಮುತ್ತಿನ ಹಾರ’ ರೀತಿಯ ಸಿನಿಮಾಗಳನ್ನು ನೀಡಿದರು. 1997ರಲ್ಲಿ ಬಂದ ‘ಅಮೃತವರ್ಷಿಣಿ’ ಚಿತ್ರ ಈಗಲೂ ಅನೇಕರ ಫೇವರಿಟ್ ಸಿನಿಮಾ. ಈ ಚಿತ್ರದಲ್ಲಿ ಸುಹಾಸಿನಿ, ರಮೇಶ್ ಅರವಿಂದ್ ಹಾಗೂ ಶರತ್ ಬಾಬು ನಟಿಸಿದ್ದರು. 1988ರಲ್ಲಿ ಸುಹಾಸಿನಿ ಮಣಿರತ್ನಂ ಅವರನ್ನು ವಿವಾಹ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








