‘ಕ್ವಾಟ್ಲೆ ಕಿಚನ್ 2’ ಟ್ರೋಫಿ ಗೆದ್ದ ಸೂರಜ್ ಸಿಂಗ್; ಶೆಫ್ಗೆ ಸಿಕ್ಕಿತು ಜಯ
ಬಿಗ್ ಬಾಸ್ ಖ್ಯಾತಿಯ ಮಾಜಿ ಶೆಫ್ ಸೂರಜ್ ಸಿಂಗ್ ‘ಕ್ವಾಟ್ಲೆ ಕಿಚನ್ ಸೀಸನ್ 2’ ರಿಯಾಲಿಟಿ ಶೋ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಗೆಲುವಿನ ಟ್ರೋಫಿ ಹಿಡಿದು ಸಂತಸ ಹಂಚಿಕೊಂಡ ಅವರು, ತೀರ್ಪುಗಾರರು, ಶೋ ತಂಡ ಹಾಗೂ ಪ್ರೇಕ್ಷಕರ ಬೆಂಬಲಕ್ಕೆ ಧನ್ಯವಾದ ಅರ್ಪಿಸಿ, ಶೀಘ್ರದಲ್ಲೇ ತಮ್ಮ ವಿಶೇಷ ರೆಸಿಪಿಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

ಮುಖ್ಯಾಂಶಗಳು
- ಬಿಗ್ ಬಾಸ್‌ನಿಂದ ‘ಕ್ವಾಟ್ಲೆ ಕಿಚನ್’ವರೆಗಿನ ಕಪ್ ಗೆಲುವಿನ ಪಯಣ
- ‘ಇದು ಕನಸೋ ನಿಜವೋ ಗೊತ್ತಿಲ್ಲ’: ಟ್ರೋಫಿ ಗೆದ್ದು ಭಾವುಕರಾದ ಶೆಫ್ ಸೂರಜ್
- ವೀಕ್ಷಕರಿಗೆ ಸೂರಜ್ ಧನ್ಯವಾದ: ಶೀಘ್ರದಲ್ಲೇ ಬರಲಿದೆ ಸ್ಪೆಷಲ್ ರೆಸಿಪಿಸ್!
‘ಬಿಗ್ ಬಾಸ್’ ಶೋನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು, ತಮ್ಮ ವಿಶಿಷ್ಟ ನಡೆ-ನುಡಿ ಹಾಗೂ ಮಾತುಗಳಿಂದ ವೀಕ್ಷಕರ ಗಮನ ಸೆಳೆದಿದ್ದರು ಸೂರಜ್ ಸಿಂಗ್. ಈಗ ಅವರು ರಿಯಾಲಿಟಿ ಶೋನಲ್ಲಿ ಕಪ್ ಗೆದ್ದು ಬೀಗಿದ್ದಾರೆ. ವೃತ್ತಿಯಲ್ಲಿ ಈ ಮೊದಲು ಶೆಫ್ ಆಗಿದ್ದ ಸೂರಜ್, ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಅಡುಗೆ ಆಧಾರಿತ ರಿಯಾಲಿಟಿ ಶೋ ‘ಕ್ವಾಟ್ಲೆ ಕಿಚನ್ ಸೀಸನ್ 2’ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಗೆಲುವಿನ ಟ್ರೋಫಿ ಹಿಡಿದು ಸಂತಸ ಹಂಚಿಕೊಂಡ ಸೂರಜ್ ಸಿಂಗ್, ತಮ್ಮ ಈ ಪಯಣದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
‘ಇದು ಕನಸೋ ಅಥವಾ ನಿಜವೋ ತಿಳಿಯುತ್ತಿಲ್ಲ’
‘ಈ ಗೆಲುವು ನನಗೆ ನಿಜಕ್ಕೂ ನಂಬಲಾಗುತ್ತಿಲ್ಲ. ಎಲ್ಲರೂ ನನ್ನ ಬಳಿ ‘ಹೇಗೆ ಅನಿಸುತ್ತಿದೆ?’ ಎಂದು ಕೇಳುತ್ತಿದ್ದಾರೆ. ಆದರೆ ನನಗೆ ಮಾತುಗಳೇ ಬರುತ್ತಿಲ್ಲ. ಕಲರ್ಸ್ ಕನ್ನಡ ತಂಡಕ್ಕೆ ಹಾಗೂ ‘ಕ್ವಾಟ್ಲೆ ಕಿಚನ್’ ಇಡೀ ಟೀಮ್‌ಗೆ ನಾನು ತುಂಬಾನೇ ಆಭಾರಿಯಾಗಿದ್ದೇನೆ. ಇಲ್ಲಿನ ‘ಕ್ವಾಟ್ಲೆ’ಗಳಾಗಿರಲಿ ಅಥವಾ ‘ಕುಕ್’ಗಳಾಗಿರಲಿ, ಪ್ರತಿಯೊಬ್ಬರ ಶ್ರಮ ಮತ್ತು ಶ್ರಮದ ಫಲವೇ ಈ ಗೆಲುವು’ ಎಂದು ಸೂರಜ್ ಹೇಳಿದ್ದಾರೆ.
View this post on Instagram
View this post on Instagram
ತೀರ್ಪುಗಾರರು ಹಾಗೂ ವೀಕ್ಷಕರಿಗೆ ಧನ್ಯವಾದ
ಶೋನಲ್ಲಿ ತಮಗೆ ಮಾರ್ಗದರ್ಶನ ನೀಡಿದ ತೀರ್ಪುಗಾರರನ್ನು ಸ್ಮರಿಸಿದ ಸೂರಜ್, ‘ನಮ್ಮ ಶೆಫ್ ಕೌಶಿಕ್ ಅವರು, ಮೇಘನಾ ಮೇಡಂ ಹಾಗೂ ಸುಷ್ಮಾ ಮೇಡಂ ಅವರು ನನಗೆ ನಿರಂತರವಾಗಿ ಬೆಂಬಲ ನೀಡಿದರು. ಕೊನೆಯ ಡಿಶ್‌ನ ಫೈನಲ್ ಟಚ್ ನೀಡುವವರೆಗೂ ಅವರ ಸಪೋರ್ಟ್ ಇತ್ತು. ಇದೊಂದು ಪರಿಪೂರ್ಣ ಟೀಮ್ ಎಫರ್ಟ್. ಅಡುಗೆ ಮಾಡುವುದು ನನಗೆ ಯಾವತ್ತೂ ಒಂದು ಪ್ಯಾಶನ್ ಆಗಿತ್ತು. ಈಗ ಅದನ್ನು ರಿಯಾಲಿಟಿ ಶೋ ಮಟ್ಟಕ್ಕೆ ತಂದು ಗೆದ್ದಿರುವುದು ಖುಷಿ ತಂದಿದೆ. ಇಲ್ಲಿಂದ ಮುಂದೆ ಸಾಗುವುದೊಂದೇ ನನ್ನ ಹಾದಿ’ ಎಂದಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಮುಚ್ಚುಮರೆ ಇಲ್ಲದೇ 3 ರಿಲೇಷನ್ಶಿಪ್ ಬಗ್ಗೆ ನಿಜ ಹೇಳಿದ ಸೂರಜ್ ಸಿಂಗ್
ತಮ್ಮನ್ನು ಬೆಂಬಲಿಸಿದ ವೀಕ್ಷಕರಿಗೂ ಧನ್ಯವಾದ ತಿಳಿಸಿದ ಅವರು, ‘ನನ್ನನ್ನು ನೋಡುತ್ತಿರುವ ಮತ್ತು ಪ್ರೀತಿಸುತ್ತಿರುವ ಪ್ರೇಕ್ಷಕರ ಬೆಂಬಲವೇ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ನನ್ನ ಸ್ಪೆಷಲ್ ರೆಸಿಪಿಗಳನ್ನು ಶೀಘ್ರದಲ್ಲೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಎಲ್ಲರೂ ಅದನ್ನು ಟ್ರೈ ಮಾಡಿ ಹೇಗೆ ಬಂದಿದೆ ಎಂದು ತಿಳಿಸಿ’ ಎಂದು ವೀಕ್ಷಕರಲ್ಲಿ ವಿನಂತಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




