ಟಾಲಿವುಡ್ನಲ್ಲಿ ರೀ-ಯೂನಿಯನ್ ಸಂಭ್ರಮ; ಸ್ಯಾಂಡಲ್ವುಡ್ನಲ್ಲಿ ನಡೆಯೋದು ಯಾವಾಗ?
Tollywood Reunion: ತೆಲಂಗಾಣ ಸರ್ಕಾರದ ‘ಗದ್ದರ್ ಅವಾರ್ಡ್’ ಘೋಷಣೆ ಮಾಡಿದೆ. ಇದು ತೆಲುಗು ಚಿತ್ರರಂಗದಲ್ಲಿ ಒಂದು ದೊಡ್ಡ ಸಂಭ್ರಮವನ್ನು ತಂದಿದೆ. ಇದರಿಂದ ಸ್ಯಾಂಡಲ್‌ವುಡ್‌ನಲ್ಲಿಯೂ ಇಂತಹ ಒಂದು ಏಕತಾ ಕಾರ್ಯಕ್ರಮದ ಅಗತ್ಯ ಇದೆ ಎಂದು ಅನೇಕರು ಹೇಳಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿನ ಒಡಕು ಇದರಿಂದ ಸರಿ ಹೊಂದಬಹುದು.

14 ವರ್ಷಗಳ ಬಳಿಕ ತೆಲಂಗಾಣ ಸರ್ಕಾರ ‘ಗದ್ದರ್’ ಅವಾರ್ಡ್ನ (Gaddar Award) ಘೋಷಣೆ ಮಾಡಿದೆ. ಅಂದರೆ ತೆಲುಗು ಸಿನಿಮಾ ರಂಗದಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಸರ್ಕಾರ ನೀಡುವ ಅವಾರ್ಡ್ ಇದಾಗಿದೆ. ವಿವಿಧ ಕಲಾವಿದರಿಗೆ ಈ ಅವಾರ್ಡ್ ಸಿಕ್ಕಿದೆ. ಜೂನ್ 14ರಂದು ಪ್ರಶಸ್ತಿ ಪ್ರಧಾನ ಕಾರ್ಯ ನಡೆಯಲಿದೆ. ಈ ಅವಾರ್ಡ್ ಕಾರ್ಯಕ್ರಮದಲ್ಲಿ ಬಹುತೇಕ ಎಲ್ಲಾ ಟಾಲಿವುಡ್ ಸೆಲೆಬ್ರಿಟಿಗಳು ಭಾಗಿ ಆಗಲಿದ್ದಾರೆ. ಹಾಗಾದರೆ ಸ್ಯಾಂಡಲ್ವುಡ್ನಲ್ಲಿ ಈ ರೀತಿ ನಡೆಯೋದು ಯಾವಾಗ ಎನ್ನುವ ಪ್ರಶ್ನೆ ಮೂಡಿದೆ.
ಟಾಲಿವುಡ್ನಲ್ಲಿ ಕಳೆದ 14 ವರ್ಷಗಳಿಂದ ಹೀಗೊಂದು ಅವಾರ್ಡ್ ಕಾರ್ಯಕ್ರಮ ನಡೆದೇ ಇರಲಿಲ್ಲ ಎನ್ನಬಹುದು. ಈ ಮೊದಲು ಸೈಮಾ ರೀತಿಯ ಅವಾರ್ಡ್ ಫಂಕ್ಷನ್ಗಳು ನಡೆದಿವೆ. ಆದರೆ, ಈ ಸಂದರ್ಭದಲ್ಲಿ ಅಲ್ಲಿ ಎಲ್ಲಾ ಕಲಾವಿದರ ಆಗಮನ ಆಗುತ್ತಿರಲಿಲ್ಲ. ಇದು ರಾಜ್ಯ ಪ್ರಶಸ್ತಿ ಆಗಿರುವುದರಿಂದ ಎಲ್ಲರೂ ಒಟ್ಟಾಗಿ ಸೇರುವ ಸಾಧ್ಯತೆ ಇದೆ.
ಇನ್ನು ಕನ್ನಡದಲ್ಲಿಯೂ ಈ ರೀತಿಯ ರೀ-ಯೂನಿಯನ್ ನಡೆಯದೇ ಸಾಕಷ್ಟು ವರ್ಷಗಳು ಕಳೆದಿವೆ. ಟಾಲಿವುಡ್ನಲ್ಲಿ ಆದಂತೆ ಸ್ಯಾಂಡಲ್ವುಡ್ನವರಿಗೂ ಸೈಮಾ ರೀತಿಯ ಅವಾರ್ಡ್ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದ ವೇಳೆ ಎಲ್ಲಾ ಸ್ಟಾರ್ ಹೀರೋಗಳು ಆಗಮಿಸುವುದಿಲ್ಲ. ಇನ್ನು ಕರ್ನಾಟಕ ರಾಜ್ಯ ಪ್ರಶಸ್ತಿ ಕಾರ್ಯಕ್ರಮ ಕೂಡ ಸರಿಯಾಗಿ ಆಯೋಜನೆ ಆಗಿಲ್ಲ. ಕೆಲವರಿಗೆ ಅವಾರ್ಡ್ ನೀಡಿದ ಬಗ್ಗೆಯೇ ಅಪಸ್ವರ ಇದೆ. ಹೀಗಾಗಿ, ರೀ-ಯೂನಿಯನ್ ಕಷ್ಟ.
ಸ್ಯಾಂಡಲ್ವುಡ್ನಲ್ಲಿ ಒಗ್ಗಟ್ಟು ಕಡಿಮೆ ಆಗುತ್ತಿದೆ ಎನ್ನುವ ಆರೋಪ ಜೋರಾಗಿದೆ. ಹೌದು, ಸ್ಯಾಂಡ್ಲ್ವುಡ್ನಲ್ಲಿ ಒಬ್ಬ ಹೀರೋ ವೇದಿಕೆ ಮೇಲೆ ಇದ್ದರೆ ಮತ್ತೋರ್ವ ಹೀರೋ ವೇದಿಕೆ ಏರುವುದಿಲ್ಲ ಎನ್ನುವ ಪರಿಸ್ಥಿತಿ ಇದೆ ಎಂಬುದು ಕೆಲವರ ಅಭಿಪ್ರಾಯ. ಇರುವುದೇ ಕೆಲವೇ ಸ್ಟಾರ್ಸ್ಗಳು. ಅವರು ಒಟ್ಟಾಗಿ ಚಿತ್ರರಂಗದ ಪರವಾಗಿ ನಿಲ್ಲುವ ಅಗತ್ಯವಿದೆ. ಇದಕ್ಕೆ ಒಂದೊಳ್ಳೆಯ ರೀ-ಯೂನಿಯನ್ ಅಗತ್ಯವಿದೆ. ಈ ವೇಳೆ ಮಾತುಕತೆಗಳ ಮೂಲಕ ಒಂದಷ್ಟು ಮನಸ್ತಾಪಗಳನ್ನು ಬಗೆಹರಿಸಿಕೊಳ್ಳಲು ಅವಕಾಶ ಸಿಗಲಿದೆ.
ಇದನ್ನೂ ಓದಿ: ತೆಗಳಿದವರಿಂದಲೇ ಸನ್ಮಾನ, ಅಲ್ಲು ಅರ್ಜುನ್ಗೆ ಪ್ರಶಸ್ತಿ ಘೋಷಿಸಿದ ತೆಲಂಗಾಣ ಸರ್ಕಾರ
ಸದ್ಯ ಕಮಲ್ ಹಾಸನ್ ಅವರು ಕನ್ನಡ ವಿರೋಧಿ ಹೇಳಿಕೆ ನೀಡಿ ತಮ್ಮ ಅಜ್ಞಾನ ತೋರಿಸಿದ್ದಾರೆ. ಈ ಕಾರಣಕ್ಕೆ ಅವರು ಹಲವರ ಟೀಕೆಗೆ ಗುರಿಯಾಗಿದ್ದಾರೆ. ಕನ್ನಡದ ಕೆಲವು ಸೆಲೆಬ್ರಿಟಿಗಳು ಅವರ ಹೇಳಿಕೆಯನ್ನು ತೆಗಳಿದ್ದಾರೆ. ಇನ್ನೂ ಕೆಲವರು ಈ ವಿಚಾರದಲ್ಲಿ ಮೌನ ತಾಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








