AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

93 ದಿನಗಳ ಬಳಿಕ ಜೈಲಿಂದ ಬಿಡುಗಡೆ ಆದ ಲಾಯರ್ ಜಗದೀಶ್, ಹೇಳಿದ್ದೇನು?

Bigg Boss Kannada: ಬಿಗ್​ಬಾಸ್ ಕನ್ನಡ ಸ್ಪರ್ಧಿಯಾಗಿದ್ದ ಲಾಯರ್ ಜಗದೀಶ್, ಬಿಗ್​ಬಾಸ್ ಮನೆಯಲ್ಲಿ ಗಲಾಟೆ ಮಾಡಿಕೊಂಡು ಹೊರಬಂದಿದ್ದರು. ಹೊರಗೆ ಬಂದ ಮೇಲೂ ಸಹ ಕೊಡಿಗೇಹಳ್ಳಿಯ ಸ್ಥಳೀಯ ನಿವಾಸಿಗಳೊಟ್ಟಿಗೆ ಗಲಾಟೆ ಮಾಡಿದ್ದ ಜಗದೀಶ್ ಅನ್ನು ಪೊಲೀಸರು ಬಂಧಿಸಿದ್ದರು. ಗಲಾಟೆ ವೇಳೆ ನಿಯಮ ಬಾಹಿರವಾಗಿ ಬಂದೂಕು ಬಳಸಿದ ಆರೋಪವೂ ಜಗದೀಶ್​ ಮೇಲಿತ್ತು. ಇದೀಗ 93 ದಿನಗಳ ಬಳಿಕ ಜೈಲಿಂದ ಬಿಡುಗಡೆ ಆಗಿದ್ದಾರೆ ಜಗದೀಶ್.

93 ದಿನಗಳ ಬಳಿಕ ಜೈಲಿಂದ ಬಿಡುಗಡೆ ಆದ ಲಾಯರ್ ಜಗದೀಶ್, ಹೇಳಿದ್ದೇನು?
Lawyer Jagaidh
ಮಂಜುನಾಥ ಸಿ.
|

Updated on:Apr 30, 2025 | 12:59 PM

Share

ಮಾಜಿ ಬಿಗ್​ಬಾಸ್ (Bigg Boss) ಸ್ಪರ್ಧಿ, ವಕೀಲ ಜಗದೀಶ್ (Lawyer Jagadish) ಬರೋಬ್ಬರಿ 93 ದಿನಗಳ ಜೈಲುವಾಸದ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಜಗದೀಶ್, ತಮ್ಮ ಬಂಧನಕ್ಕೆ ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆಯನ್ನು ನೇರ ಹೊಣೆ ಮಾಡಿದ್ದಾರೆ. ಜಗದೀಶ್, ಜನವರಿ 24ರಂದು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಬಂಧನವಾದ ದಿನ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅನ್ನು ಸಹ ಹಂಚಿಕೊಂಡಿದ್ದರು. ಇದೀಗ 93 ದಿನಗಳ ಬಳಿಕ ಅವರು ಜೈಲಿಂದ ಹೊರಬಂದಿದ್ದಾರೆ.

ಫೇಸ್​ಬುಕ್​​ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜಗದೀಶ್, ಹಲವು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಧೀರ ಹೋರಾಟ ನಡೆಸುತ್ತಿರುವ ಹೋರಾಟಗಾರ, ನಾನು, PSI ಹಗರಣವನ್ನು ಬಯಲು ಮಾಡಿದ್ದು , ADGP ಅಮೃತಪಾಲ್ ಅವರನ್ನು ಜೈಲಿಗೆ ಕಳಿಸಿದ್ದು ನಮ್ಮ ಟೀಂ, ದೊಡ್ಡ ರಾಜಕಾರಣಿಗಳ ಸೆಕ್ಸ್ ಸ್ಕ್ಯಾಂಡನ್ನು ಬಹಿರಂಗಪಡಿಸಿದ್ದು , ರವಿ ಚೆನ್ನಣ್ಣನವರ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದು , ಟ್ರಾಫಿಕ್ ಟೋವಿಂಗ್ ಸಿಸ್ಟಂ ಅನ್ನು ನಿಲ್ಲಿಸಿದ್ದು , ಕೊಡಿಗೇಹಳ್ಳಿ ಸುತ್ತಮುತ್ತ ಡ್ರಗ್ಸ್ ವಿರುದ್ಧ ಹೋರಾಟ ನಡೆಸಿದ್ಧು , ಇವೆಲ್ಲವೂ ನನ್ನ ಹೋರಾಟದ ಭಾಗ’ ಎಂದಿದ್ದಾರೆ ಜಗದೀಶ್.

‘ಈ ಧೈರ್ಯದ ಹೋರಾಟವನ್ನು ಸಹಿಸದ ಭ್ರಷ್ಟ ರಾಜಕೀಯ ಮತ್ತು ಪೊಲೀಸ್ ವ್ಯವಸ್ಥೆ, ನನ್ನ ಮತ್ತು ನನ್ನ ಮಗನ ವಿರುದ್ಧ ಸಂಚು ರೂಪಿಸಿ, 25/01/2025 ರಂದು ಸ್ಥಳಿಯ ಪುಂಡರಿಂದ ನನಗೆ ಮಾರಣಾಂತಿಕ ಹಲ್ಲೆ ನಡೆಸಿ, ಅಕ್ರಮವಾಗಿ ಜೈಲಿಗೆ ಕಳುಹಿಸಲಾಗಿತ್ತು. ಇವತ್ತಿಗೆ 93 ದಿನಗಳ ನಂತರ ನನಗೆ ನ್ಯಾಯ ಸಿಕ್ಕಿದೆ. ಜಾಮೀನು ಲಭಿಸಿದೆ. ನ್ಯಾಯಕ್ಕಾಗಿ ನನ್ನ ಹೋರಾಟ ಇನ್ನೂ ಜೀವಂತವಿದೆ, ನಾನು ಶರಣಾಗುವುದಿಲ್ಲ’ ಎಂದಿದ್ದಾರೆ ಜಗದೀಶ್.

ಇದನ್ನೂ ಓದಿ:‘ದರ್ಶನ್ ಫ್ಯಾನ್ಸ್ ಇನ್ಸುರೆನ್ಸ್ ಮಾಡಿಸಿಕೊಂಡು ಬನ್ನಿ’; ಎಚ್ಚರಿಸಿದ ಲಾಯರ್ ಜಗದೀಶ್

ಜಗದೀಶ್ ನಿವಾಸವಿರುವ ಕೊಡಿಗೇಹಳ್ಳಿಯಲ್ಲಿ ಅಣ್ಣಮ್ಮ ದೇವಿ ಉತ್ಸವದ ವಿಚಾರವಾಗಿ ಲಾಯರ್‌ ಜಗದೀಶ್ ಹಾಗೂ ಸ್ಥಳೀಯರ ನಡುವೆ ದೊಡ್ಡ ಗಲಾಟೆ ನಡೆದಿತ್ತು. ಈ ವೇಳೆ ಕಾನೂನು ಬಾಹಿರವಾಗಿ ಬಂದೂಕು ಬಳಕೆ ಮಾಡಿದ ಆರೋಪದ ಮೇಲೆ ಜಗದೀಶ್‌ ಹಾಗೂ ಅವರ ಗನ್​ಮ್ಯಾನ್ ಅನ್ನು ಪೊಲೀಸರು ಬಂಧಿಸಿದ್ದರು. ಉತ್ತರ ಪ್ರದೇಶದಲ್ಲಿ ಮಾತ್ರ ಬಳಸಲು ಲೈಸೆನ್ಸ್ ಪಡೆದಿದ್ದ ಬಂದೂಕನ್ನು ಕೊಡಿಗೇಹಳ್ಳಿಯಲ್ಲಿ ಬಳಸಲಾಗಿತ್ತು. ಈ ಘಟನೆಗೆ ಆದ ಬಳಿಕ ಜಗದೀಶ್ ಅವರದ್ದು ಎನ್ನಲಾದ ಕೆಲ ವಿಡಿಯೋಗಳು ವೈರಲ್ ಆದವು. ಜಗದೀಶ್ ತಮ್ಮ ಮನೆಯ ಮುಂದೆ ದೊಣ್ಣೆ ಹಿಡಿದುಕೊಂಡು ಕೆಲವರನ್ನು ಹೊಡೆದಿದ್ದು, ಸ್ಥಳೀಯರ ಮೇಲೆ ಸುಖಾ ಸುಮ್ಮನೆ ಖ್ಯಾತೆ ತೆಗೆದ ವಿಡಿಯೋಗಳು ವೈರಲ್ ಆಗಿದ್ದವು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:59 pm, Wed, 30 April 25