ಮೈಸೂರು: ತಮ್ಮನ್ನು ಹಿಡಿಯಲು ಬರುತ್ತಿದ್ದಾನೆ ಎಂದು ಭಾವಿಸಿ ಅಮಾಯಕ ಹುಡುಗನಿಗೆ ಗುಂಡು ಹೊಡೆದು ಕೊಂದ ಕಳ್ಳರು
ದರೋಡೆಕೋರರು ಕಳ್ಳತನ ಮಾಡಿ ಶಟರ್ ತೆಗೆದಾಗ ಚಂದ್ರು ಅಂಗಡಿ ಕಡೆ ಹೆಜ್ಜೆ ಹಾಕಿದ್ದರು. ಕಳ್ಳರು ಹೊರಬರುವಾಗ ಚಂದ್ರು ಚಿನ್ನದಂಗಡಿ ಕಡೆ ತೆರಳಿದ್ದು ತಪ್ಪಿಸಿಕೊಳ್ಳುವಾಗ ಅಡ್ಡ ಬಂದ ಕಾರಣ ಆತ ನಮ್ಮನ್ನು ಹಿಡಿಯಬಹುದು ಎಂದು ಹೆದರಿದ ಕಳ್ಳರು ಗುಂಡಿನ ದಾಳಿ ನಡೆಸಿದ್ದಾರೆ.

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಿನ್ನೆ (ಆಗಸ್ಟ್ 23) ನಡೆದಿದ್ದ ಆಭರಣ ಮಳಿಗೆಯ ದರೋಡೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸದರಿ ಘಟನೆಗೆ ಸಂಬಂಧಿಸಿದಂತೆ ಕೆಲ ಮಾಹಿತಿ ಲಭ್ಯವಾಗಿದ್ದು, ತಮ್ಮನ್ನು ಹಿಡಿಯಲು ಬರುತ್ತಿದ್ದಾನೆ ಎಂದು ಭಾವಿಸಿ ಯುವಕನಿಗೆ ಕಳ್ಳರು ಗುಂಡು ಹೊಡೆದಿರುವುದು ತಿಳಿದುಬಂದಿದೆ.
ಮೈಸೂರು ತಾಲ್ಲೂಕಿನ ದಡದಹಳ್ಳಿ ಗ್ರಾಮದ ಚಂದ್ರು (23) ಈ ಘಟನೆಯಲ್ಲಿ ದುರ್ಮರಣಕ್ಕೀಡಾಗಿದ್ದು, ಗಾರೆ ಕೆಲಸ ಮಾಡುತ್ತಿದ್ದ ಅವರು ತನ್ನ ಚಿಕ್ಕಪ್ಪನ ಮಗ ರಂಗಸ್ವಾಮಿ ಜತೆ ಓಲೆ ಖರೀದಿಸಲು ಬಂದಿದ್ದರು ಎಂದು ತಿಳಿದುಬಂದಿದೆ. ವಿದ್ಯಾರಣ್ಯಪುರಂನಲ್ಲಿರುವ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್ಗೆ ನುಗ್ಗಿದ್ದ ಕಳ್ಳರು ಕಳ್ಳತನ ನಡೆಸುತ್ತಿದ್ದರು. ಚಂದ್ರು ಬರುವ ಮುನ್ನವೇ ಅಂಗಡಿ ಒಳಗೆ ಇದ್ದ ದರೋಡೆಕೋರರು ಬಾಗಿಲು ಹಾಕಿದ್ದ ಕಾರಣ ಚಂದ್ರು ಹೊರಗೆ ನಿಂತಿದ್ದರು. ದರೋಡೆಕೋರರು ಕಳ್ಳತನ ಮಾಡಿ ಶಟರ್ ತೆಗೆದಾಗ ಚಂದ್ರು ಅಂಗಡಿ ಕಡೆ ಹೆಜ್ಜೆ ಹಾಕಿದ್ದರು. ಕಳ್ಳರು ಹೊರಬರುವಾಗ ಚಂದ್ರು ಚಿನ್ನದಂಗಡಿ ಕಡೆ ತೆರಳಿದ್ದು ತಪ್ಪಿಸಿಕೊಳ್ಳುವಾಗ ಅಡ್ಡ ಬಂದ ಕಾರಣ ಆತ ನಮ್ಮನ್ನು ಹಿಡಿಯಬಹುದು ಎಂದು ಹೆದರಿದ ಕಳ್ಳರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡು ನೇರವಾಗಿ ಚಂದ್ರು ತಲೆಗೆ ಹೊಕ್ಕು ಅವರು ಮೃತಪಟ್ಟಿದ್ದಾರೆ ಎನ್ನುವುದು ಗೊತ್ತಾಗಿದೆ.
ಚಿನ್ನಾಭರಣ ದೋಚುವ ವೇಳೆ ಬ್ಲೂ ಶರ್ಟ್ ಧರಿಸಿದ್ದ ಕಳ್ಳ, ಎಸ್ಕೇಪ್ ಆಗುವ ವೇಳೆ ಅದನ್ನು ಬದಲಾಯಿಸಿ ವೈಟ್ ಶರ್ಟ್ ಧರಿಸಿರುವುದು ಕೂಡಾ ತಿಳಿದುಬಂದಿದೆ. ಚಿನ್ನಾಭರಣ ದೋಚಿ ಓಡುವ ವೇಳೆ ಬ್ಲೂ ಶರ್ಟ್ ಕಳಚಿದ ಕಳ್ಳ, ಅಂಗಿಯನ್ನು ರಸ್ತೆ ಬದಿಯ ಕಾಂಪೌಡ್ ಕಡೆಗೆ ಎಸೆದು ಪರಾರಿಯಾಗಿದ್ದಾನೆ. ದರೋಡೆಕೋರನ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದರೋಡೆಕೋರರ ಪತ್ತೆಗಾಗಿ ಡಿಸಿಪಿ ಗೀತಾ ಪ್ರಸನ್ನ ನೇತೃತ್ವದಲ್ಲಿ ಪೊಲೀಸರ ವಿಶೇಷ ತಂಡ ರಚನೆಯಾಗಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ಚಿನ್ನದ ಅಂಗಡಿ ದರೋಡೆ ಯತ್ನ, ತಡೆಯಲು ಯತ್ನಿಸಿದವರ ಮೇಲೆ ಗುಂಡು ಹಾರಿಸಿ ಪರಾರಿಯಾದ ದರೋಡೆಕೋರರು
ಮಲೆನಾಡು, ಕೊಡಗಿನಲ್ಲಿ ತುಂಬಾ ಖುಷಿ ಅಥವಾ ದುಃಖ ಆದಾಗ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ: ಗೃಹ ಸಚಿವ ಆರಗ ಜ್ಞಾನೇಂದ್ರ
(Mysuru youth shot dead by robbers as they thought he might catch us)