ಮೈಸೂರಿನಲ್ಲಿ ಚಿನ್ನದ ಅಂಗಡಿ ದರೋಡೆ ಯತ್ನ, ತಡೆಯಲು ಯತ್ನಿಸಿದವರ ಮೇಲೆ ಗುಂಡು ಹಾರಿಸಿ ಪರಾರಿಯಾದ ದರೋಡೆಕೋರರು
ಸ್ಥಳಕ್ಕೆ ವಿದ್ಯಾರಣ್ಯಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೈಸೂರು: ಮೈಸೂರಿನ ಚಿನ್ನಾಭರಣ ಅಂಗಡಿಯೊಂದರಲ್ಲಿ ದರೋಡೆಗೆ ಯತ್ನಿಸಿ, ದರೋಡೆಕೋರರನ್ನು ತಡೆಯಲು ಯತ್ನಿಸಿದ ಚಿನ್ನದವರ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿದೆ. ದರೋಡೆಕೋರರನ್ನು ತಡೆಯಲು ಚಿನ್ನದಂಗಡಿ ಮಾಲೀಕ ಯತ್ನಿಸಿದ್ದಾರೆ. ಈವೇಳೆ ಗುಂಡುಹಾರಿಸಿ ದರೋಡೆಕೋರರು ಪರಾರಿಯಾಗಿದ್ದಾರೆ. ಮೈಸೂರಿನ ವಿದ್ಯಾರಣ್ಯಪುರಂನ ಚಿನ್ನದ ಅಂಗಡಿ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್ನಲ್ಲಿ ದರೋಡೆಕೋರರು ದಾಳಿ ನಡೆಸಿ ಚಿನ್ನವನ್ನು ಕದ್ದೊಯ್ಯಲು ಯತ್ನಿಸಿದ್ದಾರೆ. ಈವೇಳೆ ತಡೆಯಲು ಯತ್ನಿಸಿದ ಅಂಗಡಿ ಮಾಲೀಕ ಧರ್ಮೇಂದ್ರ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ವಿದ್ಯಾರಣ್ಯಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿ ಮೈಸೂರಿನಲ್ಲಿ ದರೋಡೆಕೋರರ ಗುಂಡೇಟಿಗೆ ಯುವಕ ಮೃತಪಟ್ಟಿದ್ದಾನೆ. ಮೈಸೂರು ತಾಲೂಕಿನ ದಡದಹಳ್ಳಿಯ ಚಂದ್ರು(27) ಸಾವನ್ನಪ್ಪಿದ ವ್ಯಕ್ತಿ. ಚಿನ್ನಾಭರಣ ಮಳಿಗೆಯಲ್ಲಿ ಮೂವರಿಂದ ದರೋಡೆಗೆ ಯತ್ನಿಸಿದಾಗ ಅಂಗಡಿ ಮಾಲೀಕ ದರೋಡೆಗೆ ತೀವ್ರ ಪ್ರತಿರೋಧವೊಡ್ಡಿದ್ದ. ಹೀಗಾಗಿ ಪರಾರಿಯಾಗುತ್ತಿದ್ದ ಮೂವರು ದರೋಡೆಕೋರರನ್ನು ಹಿಡಿಯುವುದಕ್ಕೆ ಚಂದ್ರು ಯತ್ನಿಸಿದ್ದ. ಚಂದ್ರು ತಲೆಗೆ ಗುಂಡು ಹಾರಿಸಿ ದರೋಡೆಕೋರರು ಪರಾರಿಯಾಗಿದ್ದರು. ಗಂಭೀರ ಗಾಯಗೊಂಡಿದ್ದ ಚಂದ್ರು ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ:
(Mysuru Gold shop robbery attepmt robbers shoot the owner who tried to stop)
Published On - 6:54 pm, Mon, 23 August 21