Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಚ ಸ್ವೀಕರಿಸಿದ ಶಾಲಾ ವಾರ್ಡನ್‌ಗೆ ಜೈಲು ಶಿಕ್ಷೆ, ಕೆರೆಯಲ್ಲಿ ದನ‌‌ ತೊಳೆಯಲು ಹೋಗಿದ್ದಾಗ ಯುವಕರಿಬ್ಬರು ನೀರುಪಾಲು

ಲಂಚ ಸ್ವೀಕರಿಸಿದ ಪ್ರಕರಣವೊಂದರಲ್ಲಿ ಶಾಲಾ ವಾರ್ಡನ್‌ಗೆ ಜೈಲು ಶಿಕ್ಷೆಯಾಗಿದೆ. ಗಣಪತಿ ಜಕಾತಿ ಎಂಬ ಶಾಲಾ ವಾರ್ಡನ್‌ಗೆ 3 ವರ್ಷ ಸಾದಾ ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಲಂಚ ಸ್ವೀಕರಿಸಿದ  ಶಾಲಾ ವಾರ್ಡನ್‌ಗೆ ಜೈಲು ಶಿಕ್ಷೆ, ಕೆರೆಯಲ್ಲಿ ದನ‌‌ ತೊಳೆಯಲು ಹೋಗಿದ್ದಾಗ ಯುವಕರಿಬ್ಬರು ನೀರುಪಾಲು
ಲಂಚ ಸ್ವೀಕರಿಸಿದ ಶಾಲಾ ವಾರ್ಡನ್‌ಗೆ ಜೈಲು ಶಿಕ್ಷೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Aug 24, 2021 | 8:26 AM

ಮೈಸೂರು: ಲಂಚ ಸ್ವೀಕರಿಸಿದ ಪ್ರಕರಣವೊಂದರಲ್ಲಿ ಶಾಲಾ ವಾರ್ಡನ್‌ಗೆ ಜೈಲು ಶಿಕ್ಷೆಯಾಗಿದೆ. ಗಣಪತಿ ಜಕಾತಿ ಎಂಬ ಶಾಲಾ ವಾರ್ಡನ್‌ಗೆ 3 ವರ್ಷ ಸಾದಾ ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಮೈಸೂರಿನ 3ನೇ ಹೆಚ್ಚುವರಿ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜೆರಾಲ್ಡ್ ಆರ್ ಮೆಂಡೋನ್ಸ್ ತೀರ್ಪು ನೀಡಿದ್ದಾರೆ.

ಸರ್ಕಾರಿ ವಿಶೇಷ ಅಭಿಯೋಜಕಿ ಕಲಿಯಂಡ ಮುತ್ತಮ್ಮ ಪೂಣಚ್ಚ ಅವರು ಗೋಳೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಾರ್ಡನ್ ವಿರುದ್ಧ ವಾದ ಮಂಡಿಸಿದ್ದರು .

ಏನಿದು ಪ್ರಕರಣ:

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಗೋಳೂರಿನಲ್ಲಿ ಪ್ರಕರಣದ ನಡೆದಿತ್ತು. ಹಾಸ್ಟೆಲ್​ಗೆ ಎಲೆಕ್ಟ್ರಾನಿಕ್ ಉಪಕರಣ ರಿಪೇರಿ ಶುಲ್ಕ ನೀಡಲು ವಾರ್ಡನ್‌ ಗಣಪತಿ ಜಕಾತಿ ಲಂಚ ಕೇಳಿದ್ದರು. ಆ ಸಂಬಂಧ 2 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದರು.  ಅಂದಿನ ಎಸಿಬಿ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ಇನ್ಸ್​​ಪೆಕ್ಟರ್ ಅನಿಲ್‌ ಕುಮಾರ್ ಅವರು ವಾರ್ಡನ್‌ ಗಣಪತಿ ಜಕಾತಿ ವಿರುದ್ಧ ಪ್ರಕರಣದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಕೆರೆಯಲ್ಲಿ ದನ‌‌ ತೊಳೆಯಲು ಹೋಗಿದ್ದಾಗ ಯುವಕರಿಬ್ಬರು ನೀರುಪಾಲು: ತರಿಕಲ್‌ ಬಳಿಯ ಬಾಲಕೆರೆಯಲ್ಲಿ ಯುವಕರಿಬ್ಬರು ಜಲಸಮಾಧಿಯಾಗಿದ್ದಾರೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ತರಿಕಲ್‌ ಗ್ರಾಮದ ದರ್ಶನ್‌(21) ಮತ್ತು ರಂಜಿತ್‌(19) ಮೃತಪಟ್ಟವರು.

ಕೆರೆಯಲ್ಲಿ ದನ‌‌ ತೊಳೆಯಲು ಹೋಗಿದ್ದಾಗ ದರ್ಶನ್  ಹಗ್ಗ ಹಿಡಿದುಕೊಂಡು ದನ ತೊಳೆಯುತ್ತಿದ್ದ. ಈ‌ ವೇಳೆ ದನ ಹಗ್ಗದ ಸಮೇತ ಕೆರೆಯ ನೀರಿಗೆ ಎಳೆದಿತ್ತು. ಈಜು ಬಾರದ ದರ್ಶನ್‌ನನ್ನು ರಕ್ಷಿಸಲು ರಕ್ಷಿತ್ ಮುಂದಾಗಿದ್ದ. ಆ ವೇಳೆ ಈಜು ಬಾರದ ದರ್ಶನ್‌ ಜೊತೆ ರಕ್ಷಿತ್ ಸಹ ನೀರುಪಾಲಾಗಿದ್ದಾನೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

two youth drowned

ಕೆರೆಯಲ್ಲಿ ದನ‌‌ ತೊಳೆಯಲು ಹೋಗಿದ್ದಾಗ ಯುವಕರಿಬ್ಬರು ನೀರುಪಾಲು

ಇದನ್ನೂ ಓದಿ: ಲಂಚ ತೆಗೆದುಕೊಳ್ಳೋದು ಮತ್ತು ಕೊಡೋದು ಎರಡೂ ಅಪರಾಧ ಅಂತಾದ್ರೆ ಇಬ್ಬರಿಗೂ ಶಿಕ್ಷೆಯಾಗಬೇಕು!

ಲಂಚ ಪಡೆದಿದ್ದೇನೆ ಏನೀಗಾ ? ಸಾರ್ವಜನಿಕರ ಜೊತೆ ನಂಜನಗೂಡು ಪಿಡಿಓ ಪುರುಷೋತ್ತಮ ಮಾತಿನ ಚಕಮಕಿ: ವಿಡಿಯೋ ವೈರಲ್ ( hostel warden jailed for taking bribe in nanjangud taluk)

Published On - 8:13 am, Tue, 24 August 21

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ