ಲಂಚ ಪಡೆದಿದ್ದೇನೆ ಏನೀಗಾ ? ಸಾರ್ವಜನಿಕರ ಜೊತೆ ನಂಜನಗೂಡು ಪಿಡಿಓ ಪುರುಷೋತ್ತಮ ಮಾತಿನ ಚಕಮಕಿ: ವಿಡಿಯೋ ವೈರಲ್

ಮೈಸೂರು: ಲಂಚ ಪಡೆದಿದ್ದೇನೆ ಏನೀಗಾ ? ಯಾರು ಕೊಟ್ಟಿದ್ದಾರೆ ಕರೆದುಕೊಂಡು ಬಾ ಎಂದು ಸಾರ್ವಜನಿಕವಾಗಿ ಜನರ ಜೊತೆ ಒಬ್ಬ ಪಿಡಿಓ ಮಾತಿನ ಚಕಮಕಿ ನಡೆಸಿದ್ದಾರೆ.  ಪಿಡಿಓ ಹೀಗೆ ಮಾತನಾಡಿರುವುದು ವಿಡಿಯೋ ರೂಪದಲ್ಲಿ ಇದೀಗ ವೈರಲ್ ಆಗಿದೆ.  ಪಿಡಿಓ ಪುರುಷೋತ್ತಮ ವಿರುದ್ದ ಲಂಚ ಪಡೆದ ಆರೋಪ ಕೇಳಿಬಂದಿದೆ. ನಂಜನಗೂಡು ತಾಲ್ಲೂಕು ಕವಲಂದೆ ಗ್ರಾಮ ಪಂಚಾಯತ್ ಪಿಡಿಓ ಪುರುಷೋತ್ತಮ ಖಾತೆ ಬದಲಾವಣೆಗೆ ಮೂರೂವರೆ ಸಾವಿರ ರೂಪಾಯಿ ಲಂಚ ಕೇಳಿರುವ ಆರೋಪ ಕೇಳಿಬಂದಿದೆ. ಲಂಚ ಪಡೆದರೂ ಸಹ ಕೆಲಸ ಮಾಡಿಕೊಟ್ಟಿಲ್ಲ ಅಂತಾ […]

ಲಂಚ ಪಡೆದಿದ್ದೇನೆ ಏನೀಗಾ ? ಸಾರ್ವಜನಿಕರ ಜೊತೆ ನಂಜನಗೂಡು ಪಿಡಿಓ ಪುರುಷೋತ್ತಮ ಮಾತಿನ ಚಕಮಕಿ: ವಿಡಿಯೋ ವೈರಲ್
PDO Bribe: ಲಂಚ ಪಡೆದಿದ್ದೇನೆ ಏನೀಗಾ ? ಸಾರ್ವಜನಿಕರ ಜೊತೆ ನಂಜನಗೂಡು ಪಿಡಿಓ ಪುರುಷೋತ್ತಮ ಮಾತಿನ ಚಕಮಕಿ
TV9kannada Web Team

| Edited By: sadhu srinath

Jul 31, 2021 | 9:28 AM


ಮೈಸೂರು: ಲಂಚ ಪಡೆದಿದ್ದೇನೆ ಏನೀಗಾ ? ಯಾರು ಕೊಟ್ಟಿದ್ದಾರೆ ಕರೆದುಕೊಂಡು ಬಾ ಎಂದು ಸಾರ್ವಜನಿಕವಾಗಿ ಜನರ ಜೊತೆ ಒಬ್ಬ ಪಿಡಿಓ ಮಾತಿನ ಚಕಮಕಿ ನಡೆಸಿದ್ದಾರೆ.  ಪಿಡಿಓ ಹೀಗೆ ಮಾತನಾಡಿರುವುದು ವಿಡಿಯೋ ರೂಪದಲ್ಲಿ ಇದೀಗ ವೈರಲ್ ಆಗಿದೆ.  ಪಿಡಿಓ ಪುರುಷೋತ್ತಮ ವಿರುದ್ದ ಲಂಚ ಪಡೆದ ಆರೋಪ ಕೇಳಿಬಂದಿದೆ.

ನಂಜನಗೂಡು ತಾಲ್ಲೂಕು ಕವಲಂದೆ ಗ್ರಾಮ ಪಂಚಾಯತ್ ಪಿಡಿಓ ಪುರುಷೋತ್ತಮ ಖಾತೆ ಬದಲಾವಣೆಗೆ ಮೂರೂವರೆ ಸಾವಿರ ರೂಪಾಯಿ ಲಂಚ ಕೇಳಿರುವ ಆರೋಪ ಕೇಳಿಬಂದಿದೆ. ಲಂಚ ಪಡೆದರೂ ಸಹ ಕೆಲಸ ಮಾಡಿಕೊಟ್ಟಿಲ್ಲ ಅಂತಾ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿಡಿಓ ಸಾರ್ವಜನಿಕರ ನಡುವಣ ಮಾತಿನ ಚಕಮಕಿ ವಿಡಿಯೋ ವೈರಲ್ ಆಗಿದೆ. ಪಿಡಿಓ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ. ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ.

Also Read:
ಬೀದರ್: 15 ಲಕ್ಷ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಸಿಕ್ಕಿ ಬಿದ್ದ ಲೇಡಿ ತಹಶೀಲ್ದಾರ್!

(nanjangud taluk pdo demand for bribe alleged public video goes viral)

 

 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada