ಪ್ರವಾಹಕ್ಕೆ ನಲುಗಿದ ರೈತರ ಬದುಕು; ಬೆಳಗಾವಿಯಲ್ಲಿ 36 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿ

TV9 Digital Desk

| Edited By: sandhya thejappa

Updated on:Jul 31, 2021 | 9:06 AM

ಬೆಳಗಾವಿ ತಾಲೂಕಿನ ಅಂಬೇವಾಡಿ, ಕಡೋಲಿ, ಕಂಗ್ರಾಳಿ, ಯಳ್ಳೂರು ಸುತ್ತಮುತ್ತ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, 100ಕ್ಕೂ ಹೆಚ್ಚು ರಸ್ತೆಗಳು ಪ್ರವಾಹಕ್ಕೆ ಕೊಚ್ಚಿಹೋಗಿವೆ.

ಪ್ರವಾಹಕ್ಕೆ ನಲುಗಿದ ರೈತರ ಬದುಕು; ಬೆಳಗಾವಿಯಲ್ಲಿ 36 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿ
ಜಲಾವೃತಗೊಂಡ ಬೆಳೆ

Follow us on

ಬೆಳಗಾವಿ: ಜಿಲ್ಲೆಯಲ್ಲಿ ಸುಮಾರು 10 ದಿನಕ್ಕೂ ಹೆಚ್ಚು ಕಾಲ ಸುರಿದ ಭಾರೀ ಮಳೆಯಿಂದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಕಬ್ಬು, ಭತ್ತ, ಮೆಕ್ಕೆಜೋಳ, ತರಕಾರಿ ಬೆಳೆಗಳು ಸೇರಿ 36 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿಯಾಗಿದೆ. ಬೆಳಗಾವಿ ತಾಲೂಕಿನ ಅಂಬೇವಾಡಿ, ಕಡೋಲಿ, ಕಂಗ್ರಾಳಿ, ಯಳ್ಳೂರು ಸುತ್ತಮುತ್ತ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, 100ಕ್ಕೂ ಹೆಚ್ಚು ರಸ್ತೆಗಳು ಪ್ರವಾಹಕ್ಕೆ ಕೊಚ್ಚಿಹೋಗಿವೆ. ಪ್ರವಾಹಕ್ಕೆ ತುರ್ತಾಗಿ ಬೆಳಗಾವಿಗೆ 220 ಕೋಟಿ ರೂ. ಪರಿಹಾರ ಬೇಕಿದೆ ಎಂದು ಅಂದಾಜಿಸಲಾಗಿದೆ.

ಕೃಷ್ಣಾ ತೀರದಲ್ಲಿ ಮುಂದುವರಿದ ಪ್ರವಾಹದ ಭೀತಿ ಕೃಷ್ಣಾ ತೀರದಲ್ಲಿ ಪ್ರವಾಹದ ಭೀತಿ ಮುಂದುವರಿದಿದೆ. ಆಲಮಟ್ಟಿ ಡ್ಯಾಂಗೆ ಒಳ ಹರಿವು ಮತ್ತು ಹೊರ ಹರಿವು ಸ್ವಲ್ವ ಇಳಿಮುಖವಾಗಿದೆ. ಒಳ ಹರಿವು 3,84,444 ಕ್ಯೂಸೆಕ್, ಹೊರ ಹರಿವು 4,20,000 ಕ್ಯೂಸೆಕ್ ಇದೆ. 519.60 ಮೀಟರ್ ಸಾಮರ್ಥ್ಯದ ಡ್ಯಾಂನಲ್ಲಿ 517.12 ಮೀಟರ್ ನೀರು ಸಂಗ್ರಹವಾಗಿದೆ. ನದಿ ಪಾತ್ರದ ಮೂಲಕ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವ ಸಾಗರಕ್ಕೆ ನೀರು ಹರಿಬಿಡಲಾಗಿದೆ.

ಮುದ್ದೇಬಿಹಾಳ ತಾಲೂಕಿನ ಕೆಲ ಗ್ರಾಮಗಳಲ್ಲಿ ಉಂಟಾದ ಪ್ರವಾಹದಿಂದ ಅಪಾರ ಪ್ರಮಾಣ ಕಬ್ಬು, ಶೇಂಗಾ, ಉದ್ದು, ತೊಗರಿ ಸೇರಿದಂತೆ ಇತರೆ ಬೆಳೆಗಳು ಜಲಾವೃತವಾಗಿದ್ದು, ಗ್ರಾಮಸ್ಥರು ಪ್ರವಾಹದಿಂದ ತತ್ತರಿಸಿದ್ದಾರೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕು ವ್ಯಾಪ್ತಿಯಲ್ಲಿ ಕೃಷ್ಣಾ ನದಿ ನೀರು ನುಗ್ಗಿ ಮ್ಯಾದರಗಡ್ಡೆ ಜಲಾವೃತಗೊಂಡಿದ್ದು, ಜನರು ಪರದಾಟ ಪಡುತ್ತಿದ್ದಾರೆ. ದಿನಬಳಕೆ ವಸ್ತುಗಳಿಲ್ಲದೆ ಸುಮಾರು 20 ಕುಟುಂಬಗಳು ಪರದಾಡುತ್ತಿವೆ. ಸರ್ಕಾರ ನಮ್ಮನ್ನು ಶಾಶ್ವತವಾಗಿ ಸ್ಥಳಾಂತರ ಮಾಡುತ್ತಿಲ್ಲ. ಪರಿಹಾರದ ಹೆಸರಲ್ಲಿ ಅಕ್ರಮ ನಡೆಸುತ್ತಿದ್ದಾರೆ ಅಂತ ನಿವಾಸಿಗಳು ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆ.

ಅಳಲು ತೋಡಿಕೊಂಡ ನಿವಾಸಿಗಳು

ನದಿ ನೀರಿನ ಹರಿವು ಕಡಿಮೆಯಾದರೂ ತಪ್ಪದ‌ ಗೋಳು ಹಾವೇರಿ ಜಿಲ್ಲೆಯ ಸವಣೂರು, ರಟ್ಟೀಹಳ್ಳಿ, ಹಾವೇರಿ, ಹಾನಗಲ್ ತಾಲೂಕಿನ ಹಲವೆಡೆ ಜನರು ಪರದಾಟ ಪಡುತ್ತಿದ್ದಾರೆ. ನದಿಗಳ ನೀರಿನ ಹರಿವು ಹೆಚ್ಚಾಗಿ ಬ್ರಿಡ್ಜ್ ಕಂ ಬಾಂದಾರ್​ಗಳ ರಸ್ತೆಗಳ ಮೇಲೆ ನೀರು ಹರಿಯುತಿತ್ತು. ನೀರಿನ ಹರಿವು ಕಡಿಮೆ ಆಗುತ್ತಿದ್ದಂತೆ ಬ್ರಿಡ್ಜ್ ಕಂ ಬಾಂದಾರ್​ಗಳ ರಸ್ತೆಗಳನ್ನು ತೆರವುಗೊಳಿಸಲಾಗಿದೆ. ಆದರೆ ನದಿ ನೀರಿನ ಹರಿವಿಗೆ ರಸ್ತೆಗಳು ಕಿತ್ತು ಹೋಗಿದ್ದು, ಓಡಾಡುವುದಕ್ಕೆ ಜನರು ಪರದಾಡುತ್ತಿದ್ದಾರೆ.

ಇದನ್ನೂ ಓದಿ

ಕೊರೊನಾ ಆತಂಕ: ಕೇರಳ-ಕರ್ನಾಟಕ ಗಡಿಯಲ್ಲಿ ಕಠಿಣ ಕ್ರಮ ಜಾರಿ; ಇಂದು ಸಂಜೆ ಜಿಲ್ಲಾಡಳಿತಗಳೊಂದಿಗೆ ಸಿಎಂ ಬೊಮ್ಮಾಯಿ ಸಭೆ

ಮುಖ್ಯಮಂತ್ರಿ ಠಾಕ್ರೆ ಮತ್ತು ವಿರೋಧ ಪಕ್ಷದ ನಾಯಕ ಫಡ್ನವೀಸ್ ಕೊಲ್ಹಾಪುರದಲ್ಲಿ ಏಕಕಾಲಕ್ಕೆ ಪ್ರತ್ಯಕ್ಷರಾಗಿ ಮುಖಾಮುಖಿಯಾದರು!

crop which was in the area of ​​36 thousand hectares due to heavy rains was destroyed)

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada