AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್: 15 ಲಕ್ಷ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಸಿಕ್ಕಿ ಬಿದ್ದ ಲೇಡಿ ತಹಶೀಲ್ದಾರ್!

ಎಸಿಬಿ ಕಲಬುರಗಿ ಎಸ್​ಪಿ ಮಹೇಶ್ ಮೆಗ್ಗಣವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ. ಬೀದರ್ ಎಸಿಬಿ ಡಿಎಸ್​ಪಿ ಹಣಮಂತರಾಯ ಮತ್ತು ಅವರ ತಂಡ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ತಹಶೀಲ್ದಾರ್​ನ ತಮ್ಮ ಬಲೆಗೆ ಬೀಳಿಸಿದ್ದಾರೆ.

ಬೀದರ್: 15 ಲಕ್ಷ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಸಿಕ್ಕಿ ಬಿದ್ದ ಲೇಡಿ ತಹಶೀಲ್ದಾರ್!
ಎಸಿಬಿ ಅಧಿಕಾರಿಗಳ ದಾಳಿ, ತಹಶೀಲ್ದಾರ್ ಗಂಗಾದೇವಿ
TV9 Web
| Edited By: |

Updated on:Jul 28, 2021 | 1:01 PM

Share

ಬೀದರ್: ಸುಮಾರು 15 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಬೀದರ್ ತಹಶೀಲ್ದಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ತಹಶೀಲ್ದಾರ್ ಗಂಗಾದೇವಿ, ಭೂಮಿ ಮ್ಯುಟೇಷನ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲೀಲಾಧರ್ ಎಂಬುವವರ ಬಳಿ ತಹಶೀಲ್ದಾರ್ ಗಂಗಾದೇವಿ ಸುಮಾರು 20 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. 20 ಲಕ್ಷದಲ್ಲಿ 15 ಲಕ್ಷ ಲಂಚ ಸ್ವೀಕರಿಸುವಾಗ ತಹಶೀಲ್ದಾರ್ ಸಿಕ್ಕಿಬಿದ್ದಿದ್ದಾರೆ. ಗಂಗಾದೇವಿ ಮನೆಯಲ್ಲಿ ಲಂಚ ಸ್ವೀಕಾರಿಸುತ್ತಿದ್ದ ಸಮಯದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಎಸಿಬಿ ಕಲಬುರಗಿ ಎಸ್​ಪಿ ಮಹೇಶ್ ಮೆಗ್ಗಣವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ. ಬೀದರ್ ಎಸಿಬಿ ಡಿಎಸ್​ಪಿ ಹಣಮಂತರಾಯ ಮತ್ತು ಅವರ ತಂಡ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ತಹಶೀಲ್ದಾರ್​ನ ತಮ್ಮ ಬಲೆಗೆ ಬೀಳಿಸಿದ್ದಾರೆ.

ಟ್ರಾಫಿಕ್ ಕಂಟ್ರೋಲರ್ ಎಸಿಬಿ ಬಲೆಗೆ ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ಡಿಪೋದ ಕೆಎಸ್ಆರ್​ಟಿಸಿ ಟ್ರಾಫಿಕ್ ಕಂಟ್ರೋಲರ್​ನ ಎಸಿಬಿ ಅಧಿಕಾರಿಗಳು ಜುಲೈ 21ರಂದು ವಶಕ್ಕೆ ಪಡೆದಿದ್ದಾರೆ. ಟ್ರಾಫಿಕ್ ಕಂಟ್ರೋಲರ್ ಬಿ.ಎಸ್.ವೆಂಕಟಾಚಲಪತಿ ಸ್ವಯಂ ನಿವೃತ್ತಿ ಪ್ರಮಾಣ ಪತ್ರ ನೀಡಲು ಸುಮಾರು 50.000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಡ್ರೈವರ್ ಕಂ ಕಂಡಕ್ಟರ್ ಜಿ.ಎನ್.ವೆಂಕಟಾಚಲಪತಿಯಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 50.000 ರೂ. ನಲ್ಲಿ ಜುಲೈ 21 40,000 ರೂ. ಲಂಚ ಸ್ವೀಕರಿಸುತ್ತಿದ್ದಾಗ ಬಿ.ಎಸ್.ವೆಂಕಟಾಚಲಪತಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಇದನ್ನೂ ಓದಿ

ಕಾನ್ಸ್‌ಟೇಬಲ್ ಪತಿ ಜೊತೆ ಅಡುಗೆ ಮಾಡುವ ವಿಷಯವಾಗಿ ಭಿನ್ನಾಭಿಪ್ರಾಯ; ನವ ವಿವಾಹಿತ ಮಹಿಳಾ ಕಾನ್ಸ್‌ಟೆಬಲ್​ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಕೆಎಸ್ಆರ್​ಟಿಸಿ ಟ್ರಾಫಿಕ್ ಕಂಟ್ರೋಲರ್

(ACB officials have Detained a Bidar Tahsildar who was accepting a bribe)

Published On - 12:32 pm, Wed, 28 July 21