ಮಹಿಳೆಯರು ತಮ್ಮ ಮನೆಯ ಬಳಿ ಆಗಷ್ಟೆ ಮರಿಗಳನ್ನು ಹಾಕಿದ್ದ ತಾಯಿ ನಾಯಿ ಹಾಗೂ ಅದರ 7 ಮರಿಗಳನ್ನು ಅಮಾನವೀಯವಾಗಿ ಸುಟ್ಟು ಹಾಕಿದ್ದಾರೆ. ಈ ವೇಳೆ ನಾಯಿ ಹಾಗೂ ಅದರ 5 ಮರಿಗಳು ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಓಡಿಹೋಗಿ ಪ್ರಾಣ ಉಳಿಸಿಕೊಂಡಿವೆ. ಆದರೆ, ಅವುಗಳ ಮೈ ಚರ್ಮ ಸುಟ್ಟುಹೋಗಿದೆ. ಆದರೆ, ಎರಡು ಮರಿಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆದರೆ, ಸ್ಥಳೀಯ ಮಾಧ್ಯಮ ಮಾತೃಭೂಮಿ ಈ ಘಟನೆಯಲ್ಲಿ 7 ನಾಯಿ ಮರಿಗಳೂ ಬೆಂಕಿಯಲ್ಲಿ ಸುಟ್ಟು ಸಾವನ್ನಪ್ಪಿವೆ ಎಂದು ವರದಿ ಮಾಡಿವೆ. ತನ್ನ ಕಣ್ಣಮುಂದೆಯೇ ಮರಿಗಳಿಗೆ ಈ ರೀತಿ ಬೆಂಕಿ ಹಚ್ಚಿ ಕೊಂದಿದ್ದನ್ನು ನೋಡಿದ ನಾಯಿಯ ಮೂಕವೇದನೆಯನ್ನು ಅರ್ಥ ಮಾಡಿಕೊಳ್ಳದ ಮಹಿಳೆಯರು ನಾಯಿಯ ಜೊತೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.
ಬೆಂಕಿಯಿಂದ ಪಾರಾಗಿ, ಸುಟ್ಟ ಗಾಯದಿಂದ ನರಳುತ್ತಿದ್ದ ನಾಯಿಯನ್ನು ನೋಡಿದ ಮಹಿಳೆಯೊಬ್ಬರು ಪ್ರಾಣಿ ಸಂರಕ್ಷಣಾ ತಂಡಕ್ಕೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅವರು ನಾಯಿಯನ್ನು ಪಶು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿದ್ದಾರೆ. ಆ ನಾಯಿ ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ.
ಪಕ್ಕದ ಮನೆಯವರಾರೋ ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡಿದ್ದರು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ಮಹಿಳೆಯರನ್ನು ಬಂಧಿಸಬೇಕೆಂದು ಒತ್ತಾಯವೂ ಹೆಚ್ಚಾಗಿದೆ. ಲಕ್ಷ್ಮೀ ಮತ್ತು ಮೇರಿ ಎಂಬ ಮಹಿಳೆಯರು ಸೇರಿಕೊಂಡು ನಾಯಿ ಹಾಗೂ ನಾಯಿ ಮರಿಗಳಿಗೆ ಬೆಂಕಿ ಹಚ್ಚಿದ್ದಾರೆ. ಆ ವಿಡಿಯೋದ ಆಧಾರದ ಮೇಲೆ ಕೇರಳದ ಅಲಂಗಡ್ ಪೊಲೀಸ್ ಠಾಣೆಯಲ್ಲಿ ಜಾಮೀನುರಹಿತ ಸೆಕ್ಷನ್ನಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Shocking News: ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಬದಲು ಗುಪ್ತಾಂಗಕ್ಕೆ ಗಮ್ ಅಂಟಿಸಿಕೊಂಡ ಯುವಕ ಸಾವು!
(Kerala women sets mother dog and her seven puppies on fire Shocking Video Viral)