AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಬದಲು ಗುಪ್ತಾಂಗಕ್ಕೆ ಗಮ್ ಅಂಟಿಸಿಕೊಂಡ ಯುವಕ ಸಾವು!

Crime News Today: ಮಾಜಿ ಪ್ರೇಯಸಿಯೊಂದಿಗೆ ಹೋಟೆಲ್ ರೂಮಿಗೆ ಹೋದ ಯುವಕ ಆಕೆಯೊಂದಿಗೆ ಡ್ರಗ್ ಸೇವಿಸಿದ್ದ. ಬಳಿಕ ಲೈಂಗಿಕ ಕ್ರಿಯೆ ನಡೆಸಲು ಮುಂದಾದಾಗ ಕಾಂಡೋಮ್ ಇಲ್ಲವೆಂಬುದು ನೆನಪಾಗಿತ್ತು. ಹೀಗಾಗಿ, ಗುಪ್ತಾಂಗಕ್ಕೆ ಗಮ್ ಹಚ್ಚಿಕೊಂಡಿದ್ದ.

Shocking News: ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಬದಲು ಗುಪ್ತಾಂಗಕ್ಕೆ ಗಮ್ ಅಂಟಿಸಿಕೊಂಡ ಯುವಕ ಸಾವು!
ಅಧೇಸಿವ್ ಗಮ್
TV9 Web
| Updated By: ಸುಷ್ಮಾ ಚಕ್ರೆ|

Updated on: Aug 25, 2021 | 6:52 PM

Share

ಅಹಮದಾಬಾದ್: ಕೆಲವೊಮ್ಮೆ ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾಡಿಕೊಳ್ಳುವ ಎಡವಟ್ಟಿನಿಂದ ಪ್ರಾಣವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿಯೂ ಬರುತ್ತದೆ. ಮಾಜಿ ಪ್ರೇಯಸಿಯ ಜೊತೆ ಲೈಂಗಿಕ ಕ್ರಿಯೆ ನಡೆಸಲು ಹೋಗಿದ್ದ ಯುವಕನೊಬ್ಬ ಕಾಂಡೋಮ್ ತೆಗೆದುಕೊಂಡು ಹೋಗಿರಲಿಲ್ಲ. ಕಾಂಡೋಮ್ ಧರಿಸದಿದ್ದರೆ ಎಡವಟ್ಟಾಗಬಹುದು ಎಂಬ ಭೀತಿಯಿಂದ ಆತ ತನ್ನ ಗುಪ್ತಾಂಗಕ್ಕೆ ಫೆವಿಕ್ವಿಕ್ ರೀತಿಯ ಎಪೋಕ್ಸಿ ಅಧೇಸಿವ್ ಎಂಬ ಗಮ್ ಹಚ್ಚಿಕೊಂಡಿದ್ದಾನೆ. ಒಂದು ಎಡವಟ್ಟು ತಪ್ಪಿಸಲು ಆತ ಮಾಡಿಕೊಂಡ ಈ ಎಡವಟ್ಟಿನಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಗುಪ್ತಾಂಗಕ್ಕೆ ಗಮ್ ಅಂಟಿಸಿಕೊಂಡಿದ್ದರಿಂದ ಮಾಜಿ ಗರ್ಲ್​ಫ್ರೆಂಡ್ ಜೊತೆ ಹೋಟೆಲ್ ರೂಮಿನಲ್ಲಿ ಸೆಕ್ಸ್​ ನಡೆಸಿದ ಸ್ವಲ್ಪ ಹೊತ್ತಿನಲ್ಲೇ ಆತ ಸಾವನ್ನಪ್ಪಿದ್ದಾನೆ.

ಅಹಮದಾಬಾದ್​ನ ಫತೇವಾಡಿಯಲ್ಲಿ ವಾಸವಾಗಿದ್ದ 25 ವರ್ಷದ ಸಲ್ಮಾನ್ ಮಿರ್ಜಾ ಎಂಬಾತ ಒಬ್ಬಳು ಹುಡುಗಿಯೊಂದಿಗೆ ಬ್ರೇಕಪ್ ಮಾಡಿಕೊಂಡು ಇನ್ನೊಬ್ಬಳನ್ನು ಲವ್ ಮಾಡುತ್ತಿದ್ದ. ಆದರೆ, ಅಚಾನಕ್ಕಾಗಿ ಎದುರು ಸಿಕ್ಕ ಹಳೇ ಪ್ರೇಯಸಿಯೊಂದಿಗೆ ಆತ ಹೋಟೆಲ್​ ರೂಮಿಗೆ ಹೋಗಿದ್ದ. ಆದರೆ, ಆತ ಕಾಂಡೋಮ್ ತರದಿದ್ದ ಕಾರಣ ಲೈಂಗಿಕ ಕ್ರಿಯೆ ನಡೆಸಲು ಆತನ ಪ್ರೇಯಸಿ ಹಿಂದೇಟು ಹಾಕಿದ್ದಳು. ಆ ಯುವತಿ ಮತ್ತು ಸಲ್ಮಾನ್ ಇಬ್ಬರೂ ಡ್ರಗ್ ಅಡಿಕ್ಟ್ ಆಗಿದ್ದು, ಕಾಂಡೋಮ್ ಇಲ್ಲದ ಕಾರಣ ಆತ ತನ್ನ ಗುಪ್ತಾಂಗಕ್ಕೆ ಗಮ್ ಅಂಟಿಸಿಕೊಂಡಿದ್ದ.

ಹೋಟೆಲ್ ರೂಮಿಗೆ ಹೋಗುತ್ತಿದ್ದಂತೆ ಡ್ರಗ್ಸ್​ ಸೇವಿಸಿದ ಅವರಿಬ್ಬರೂ ಬಳಿಕ ಲೈಂಗಿಕ ಕ್ರಿಯೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಆ ಯುವತಿ ಗರ್ಭ ಧರಿಸದಂತೆ ತಡೆಯಲು ಆತ ಕಾಂಡೋಮ್ ಬದಲು ಗುಪ್ತಾಂಗಕ್ಕೆ ಅಧೇಸಿವ್​ ಹಚ್ಚಿಕೊಂಡು ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಅದೆಲ್ಲ ಆದ ಕೆಲಕಾಲದ ನಂತರ ಸಲ್ಮಾನ್ ಹೋಟೆಲ್ ಬಳಿ ಪೊದೆಗಳ ಹಿಂದೆ ಪ್ರಜ್ಞೆ ತಪ್ಪಿ ಬಿದ್ದಿದ್ದ. ಆತನನ್ನು ನೋಡಿದ ಆತನ ಪರಿಚಯದ ವ್ಯಕ್ತಿಯೋರ್ವ ಸಲ್ಮಾನ್​ನನ್ನು ಆತನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಮನೆಯಲ್ಲಿ ಎಷ್ಟೇ ಪ್ರಯತ್ನಿಸಿದರೂ ಸಲ್ಮಾನ್​ಗೆ ಪ್ರಜ್ಞೆ ಬಾರದ ಕಾರಣ ಆತನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.

ಕೆಲವರು ಕೆಲವು ಗಮ್​, ವೈಟ್​ನರ್​ ಅನ್ನು ಅಮಲು ಬರಿಸಲು ಉಪಯೋಗಿಸುತ್ತಾರೆ. ಗಮ್ ಹಾಗೂ ವೈಟ್​ನರ್​ ವಾಸನೆಯನ್ನು ಪದೇಪದೆ ತೆಗೆದುಕೊಂಡರೆ ಅಮಲೇರುತ್ತದೆ. ಅದೇ ರೀತಿ ಸಲ್ಮಾನ್ ಕೂಡ ತನ್ನ ಬಳಿ ಗಮ್ ಅನ್ನು ಇಟ್ಟುಕೊಂಡಿರುತ್ತದೆ. ಆ ಗಮ್​ ಅನ್ನು ಆತ ಗುಪ್ತಾಂಗಕ್ಕೆ ಹಚ್ಚಿಕೊಂಡಿದ್ದ. ಇದರಿಂದ ಬಹು ಅಂಗಾಂಗ ವೈಫಲ್ಯದಿಂದ ಆತ ಮೃತಪಟ್ಟಿದ್ದಾನೆ.

ಸಲ್ಮಾನ್ ಉಳಿದುಕೊಂಡಿದ್ದ ಹೋಟೆಲ್​ನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಅದರಲ್ಲಿ ಆತ ಮಾಜಿ ಪ್ರೇಯಸಿಯೊಂದಿಗೆ ರೂಮಿಗೆ ಹೋಗಿರುವುದು ಸೆರೆಯಾಗಿದೆ. ಆತನ ಜೊತೆ ಹೋಗಿದ್ದ ಯುವತಿಯನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: Crime News: ಯೂನಿಫಾರ್ಮ್ ಎಲ್ಲಿ ಎಂದ ಪ್ರಿನ್ಸಿಪಾಲ್ ತಲೆಗೆ ಗನ್ ಹಿಡಿದ ವಿದ್ಯಾರ್ಥಿ!

Crime News: ತ್ರಿಶೂಲದಿಂದ ಇರಿದು ಅರ್ಚಕನ ಬರ್ಬರ ಹತ್ಯೆ; ದೇವಸ್ಥಾನದಲ್ಲಿ ಅರೆ ಸುಟ್ಟ ಶವ ಪತ್ತೆ

(Shocking News Gujarat Man Dies after Seals Private Parts Using Adhesive Instead of Condom During Sex)