ಕೊರೋನಾ ಹೆಸರಲ್ಲಿ 13 ಕೋಟಿ ರೂ. ವಂಚಿಸಿ ಜೈಲು ಪಾಲಾದ ಭಾರತೀಯ ಟೆಕ್ಕಿ..!

ಮುಕುಂದ್ ಮೋಹನ್ ಮಹೆಂಜೊ ಕಂಪೆನಿಯನ್ನು ಮೇ 2020 ರಲ್ಲಿ ಖರೀದಿಸಿರುವುದು ದೃಢಪಟ್ಟಿತ್ತು. ಈ ಕಂಪನಿಯನ್ನು ಖರೀದಿಸಿದ ಸಮಯದಲ್ಲಿ ಯಾವುದೇ ಉದ್ಯೋಗಿಗಳನ್ನು ಹೊಂದಿರಲಿಲ್ಲ.

ಕೊರೋನಾ ಹೆಸರಲ್ಲಿ 13 ಕೋಟಿ ರೂ. ವಂಚಿಸಿ ಜೈಲು ಪಾಲಾದ ಭಾರತೀಯ ಟೆಕ್ಕಿ..!
Mukund mohan
TV9kannada Web Team

| Edited By: Zahir PY

Aug 25, 2021 | 4:42 PM

ಅಮೆರಿಕದ (America) ಫೆಡರಲ್ ಕೋವಿಡ್ -19 (Covid-19) ವಿಪತ್ತು ಪರಿಹಾರ ಸಾಲ ವಂಚನೆ ಪ್ರಕರಣದಲ್ಲಿ 48 ವರ್ಷದ ಭಾರತೀಯ ಮೂಲದ ಟೆಕ್ ಎಕ್ಸಿಕ್ಯೂಟಿವ್‌ ಮುಕುಂದ್ ಮೋಹನ್ (Mukund Mohan) ಜೈಲು ಪಾಲಾಗಿದ್ದಾರೆ. ಅಮೆರಿಕದ ಕೊರೋನಾ ಪರಿಹಾರ ನಿಧಿಗೆ ನಕಲಿ ದಾಖಲೆಯನ್ನು ನೀಡಿ ಮುಕಂದ್ ಸುಮಾರು 1.8 ಮಿಲಿಯನ್ ಯುಎಸ್​ಡಿ ಡಾಲರ್ ಪಡೆದಿದ್ದರು. ಅಂದರೆ ಭಾರತೀಯ ಮೌಲ್ಯ ಸುಮಾರು 13 ಕೋಟಿ ರೂಪಾಯಿ. ಈ ನಕಲಿ ದಾಖಲೆಗಳ ಅಸಲಿಯತ್ತು ಬಯಲಾಗುತ್ತಿದ್ದಂತೆ ಮುಕುಂದ್ ಅವರನ್ನು ಬಂಧಿಸಲಾಗಿತ್ತು. ಇದೀಗ ಅವರ ವಿಚಾರಣೆ ಮುಗಿದಿದ್ದು, ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ವಾಷಿಂಗ್ಟನ್ ರಾಜ್ಯದ ಕ್ಲೈಡ್ ಹಿಲ್ ನಿವಾಸಿಯಾಗಿರುವ ಮುಕುಂದ್ ಮೋಹನ್ ಅವರು ಮಾರ್ಚ್ 15 ರಂದು ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಯುಎಸ್ ನ್ಯಾಯ ಇಲಾಖೆ ಹೇಳಿದೆ. ಇದಕ್ಕೂ ಮುನ್ನ ಮೈಕ್ರೋಸಾಫ್ಟ್ ಮತ್ತು ಅಮೆಜಾನ್ ನಲ್ಲಿ ಮುಕುಂದ್ ಮೋಹನ್ ಕೆಲಸ ಮಾಡಿದ್ದರು. ಈ ವೇಳೆ ಕೂಡ ನಕಲಿ ಉದ್ಯೋಗ ದಾಖಲೆಗಳನ್ನು ಸೃಷ್ಟಿಸಿ ಅಮೆರಿಕ ಸರ್ಕಾರದಿಂದ ಸಾಲಗಳನ್ನು ಪಡೆದಿದ್ದರು.

ಮಹೆಂಜೊ ಇಂಕ್ ಹೆಸರಿನಲ್ಲಿ ಕಂಪೆನಿಯನ್ನು ರಿಜಿಸ್ಟರ್ ಮಾಡಿದ್ದ ಮುಕುಂದ್ ಮೋಹನ್, ತನ್ನ ಕಂಪೆನಿಯಲ್ಲಿ ಹತ್ತಾರು ಉದ್ಯೋಗಿಗಳಿದ್ದಾರೆ. ಕಂಪೆನಿಯು ನೌಕರರ ವೇತನ ಮತ್ತು ವೇತನದಾರರ ತೆರಿಗೆಗಳನ್ನು ಲಕ್ಷಾಂತರ ಡಾಲರ್‌ಗಳಲ್ಲಿ ಪಾವತಿಸಿದೆ ಎಂದು ತಿಳಿಸಿತ್ತು. ಈ ಕಂಪೆನಿಯು 2019 ರಿಂದ ಕಾರ್ಯ ನಿರ್ವಹಿಸುತ್ತಿದ್ದು, ಕೊರೋನಾ ಕಾರಣದಿಂದ ನಷ್ಟದಲ್ಲಿದೆ. ಹೀಗಾಗಿ ಪರಿಹಾರವಾಗಿ ನಕಲಿ ದಾಖಲೆಯನ್ನು ಸಲ್ಲಿಸಿ ಭಾರೀ ಮೊತ್ತವನ್ನು ಪಡೆದಿತ್ತು.

ಆದರೆ ತನಿಖೆ ವೇಳೆ ಮುಕುಂದ್ ಮೋಹನ್ ಮಹೆಂಜೊ ಕಂಪೆನಿಯನ್ನು ಮೇ 2020 ರಲ್ಲಿ ಖರೀದಿಸಿರುವುದು ದೃಢಪಟ್ಟಿತ್ತು. ಈ ಕಂಪನಿಯನ್ನು ಖರೀದಿಸಿದ ಸಮಯದಲ್ಲಿ ಯಾವುದೇ ಉದ್ಯೋಗಿಗಳನ್ನು ಹೊಂದಿರಲಿಲ್ಲ. ಹಾಗೆಯೇ ಯಾವುದೇ ವ್ಯವಹಾರ ಚಟುವಟಿಕೆಯನ್ನು ಹೊಂದಿರಲಿಲ್ಲ ಎಂಬುದು ತಿಳಿದು ಬಂದಿದೆ.

ಇದೀಗ ಮುಕುಂದ್ ಮೋಹನ್ ನಕಲಿ ದಾಖಲೆಯನ್ನು ಸಲ್ಲಿಸಿ ಪರಿಹಾರ ಸಾಲ ಪಡೆದಿರುವುದಾಗಿ ಒಪ್ಪಿಕೊಂಡಿದ್ದು, ಹೀಗಾಗಿ ನ್ಯಾಯಾಲಯ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಷ್ಟೇ ಅಲ್ಲದೆ 1,00,000 USD ಮತ್ತು 1,786,357 USD ದಂಡವನ್ನು ಪಾವತಿಸಲು ಕೋರ್ಟ್​ ಆದೇಶಿಸಿದೆ.

ಇದನ್ನೂ ಓದಿ: ಪೆಟ್ರೋಲ್, ಡಿಸೇಲ್ ಹಾಕಬೇಕಿಲ್ಲ, ಚಾರ್ಜ್​ ಕೂಡ ಮಾಡಬೇಕಿಲ್ಲ: ಇದು ಮಾರುತಿ ಸುಜುಕಿ ಹೊಸ ಕಾರು

ಇದನ್ನೂ ಓದಿ: Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!

ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!

(Indian-Origin Tech Executive Gets 2 Years Jail For Covid Loan Fraud in America)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada