Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!
Gulshan Jha: ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಯುವ ವೇಗಿ 7 ಓವರ್‌ಗಳಲ್ಲಿ 36 ರನ್ ನೀಡಿ ಒಟ್ಟು 4 ವಿಕೆಟ್ ಉರುಳಿಸಿದ್ದರು. ಈ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಕ್ರಿಕೆಟಿಗರು (Cricketer) ಮಾಡುವ ಕಸರತ್ತು ಅಷ್ಟಿಷ್ಟಲ್ಲ. ಅದರಲ್ಲೂ ಟೀಮ್ ಇಂಡಿಯಾದಲ್ಲಿ (Team India) ಸ್ಥಾನ ಸಿಗಬೇಕಿದ್ದರೆ ಅದೆಷ್ಟು ವರ್ಷ ಬೆವರಿಳಿಸಬೇಕೋ ದೇವರೇ ಬಲ್ಲ. ಆದರೆ ಇಲ್ಲೊಬ್ಬ ಬೌಲರ್ ಕೇವಲ ಒಂದೇ ಒಂದು ಬೌನ್ಸರ್ ಮೂಲಕ ನೇರವಾಗಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ. ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಲು ಅವಕಾಶ ಪಡೆದ ಕ್ರಿಕೆಟಿಗ ಹೆಸರು ಗುಲ್ಶನ್ ಜಾ (Gulshan Jha). ಇತ್ತೀಚೆಗಷ್ಟೇ ಗುಲ್ಶಾನ್ ಬೌಲಿಂಗ್ ಮಾಡುತ್ತಿರುವ ವಿಡಿಯೋವೊಂದು (Gulshan Jha Bowling Video) ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವೈರಲ್ ವಿಡಿಯೋ ನೇಪಾಳಿ ಕ್ರಿಕೆಟಿಗನದ್ದು ಎಂಬುದು ಗೊತ್ತಾಗುತ್ತಿದ್ದಂತೆ ರಾಷ್ಟ್ರೀಯ ತಂಡದಿಂದ ಬುಲಾವ್ ಬಂದಿದೆ. ಅದರಂತೆ ಗುಲ್ಶನ್ ಓಮಾನ್ನಲ್ಲಿ ನಡೆಯಲಿರುವ ತ್ರಿಕೋನ ಸರಣಿಗೆ ನೇಪಾಳ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಸೆಪ್ಟೆಂಬರ್ 14 ರಿಂದ 20 ರವರೆಗೆ ಒಮಾನ್‌ನಲ್ಲಿ ಅಮೆರಿಕ ಮತ್ತು ಓಮನ್ ವಿರುದ್ಧದ ನೇಪಾಳ ತಂಡ ತ್ರಿಕೋನ ಸರಣಿ ಆಡಲಿದೆ. ಈ ಸರಣಿಗಾಗಿ ಆಯ್ಕೆ ಮಾಡಲಾದ ತಂಡದಲ್ಲಿ ಗುಲ್ಶನ್ ಅವಕಾಶ ಪಡೆದಿದ್ದಾರೆ. ಇಲ್ಲಿ ಅಚ್ಚರಿ ಎಂದರೆ ಗುಲ್ಶನ್ ಇದುವರೆಗೆ ಕೇವಲ 2 ದೇಶೀಯ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ರಾಷ್ಟ್ರೀಯ ತಂಡಕ್ಕೆ ಯುವ ಬೌಲರ್ ಆಯ್ಕೆಯಾಗಿದ್ದಾರೆ.
ದೇಶೀಯ ಕ್ರಿಕೆಟ್ ನಲ್ಲಿ ನೇಪಾಳ ಪೊಲೀಸ್ ತಂಡದ ಪರ ಆಡುತ್ತಿರುವ ಗುಲ್ಶನ್, ಈ ವರ್ಷ ನಡೆದ ಕಠ್ಮಂಡು ಮೇಯರ್ ಕಪ್‌ನಲ್ಲಿ 2 ಪಂದ್ಯಗಳನ್ನು ಆಡಿದ್ದಾರೆ. ಸಶಸ್ತ್ರ ಪೊಲೀಸ್ ಪಡೆ ಕ್ಲಬ್ ವಿರುದ್ಧದ ಪಂದ್ಯದಲ್ಲಿ ಅದ್ಭುತವಾಗಿ ಬೌಲಿಂಗ್ ಪ್ರದರ್ಶಿಸಿದ ಯುವ ವೇಗಿ 7 ಓವರ್‌ಗಳಲ್ಲಿ 36 ರನ್ ನೀಡಿ ಒಟ್ಟು 4 ವಿಕೆಟ್ ಉರುಳಿಸಿದ್ದರು. ಈ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದೇ ಟೂರ್ನಿಯ 2ನೇ ಪಂದ್ಯದಲ್ಲಿ ಕಾಠ್ಮಂಡು ಮೇಯರ್ ಇಲೆವೆನ್ ಬ್ಯಾಟ್ಸ್ ಮನ್ ಖಡಕ್ ಬೊಹೊರಾಗೆ ಬುಲೆಟ್ ವೇಗದ ಬೌನ್ಸರ್ ಎಸೆದಿದ್ದರು. ಹೆಲ್ಮೆಟ್ ಹತ್ತಿರದಿಂದ ಹಾದು ಹೋಗಿದ್ದ ಈ ಬೌನ್ಸರ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಬೆನ್ನಲ್ಲೇ ಗುಲ್ಶನ್ ಜಾ ಅವರನ್ನು ನೇಪಾಳ ಕ್ರಿಕೆಟ್ ಸಂಸ್ಥೆ ತರಬೇತಿ ಕ್ಯಾಂಪ್ಗೆ ಕರೆಸಿಕೊಂಡಿತು. ಇದೀಗ ರಾಷ್ಟ್ರೀಯ ತಂಡದಲ್ಲೂ ಸ್ಥಾನ ನೀಡಲಾಗಿದೆ. ಒಟ್ಟಿನಲ್ಲಿ ಒಂದು ಬೌನ್ಸರ್ ಇದೀಗ ಗುಲ್ಶನ್ ಜಾ ಅವರ ಕ್ರಿಕೆಟ್ ಕೆರಿಯರ್ಗೆ ಟರ್ನಿಂಗ್ ಪಾಯಿಂಟ್ ಆಗಿಬಿಟ್ಟಿದೆ.
Gulshan Jha New Recruit of Team Nepal for #CWCL2 & the series with PNG.@sourabhsanyal @Bibhu237@vmanjunath @Arnavv43 @arunbudhathoki @TheBiddhut @Fancricket12 #KTMMayorsCup pic.twitter.com/xdQj7sfuuW
— Poudel Sagar (@poudelsagar__) August 21, 2021
ಇದನ್ನೂ ಓದಿ: Steve Smith: ಅಫ್ಘಾನಿಸ್ತಾನದ ಮಕ್ಕಳ ರಕ್ಷಣೆಗೆ ಮುಂದಾದ ಸ್ಟೀವ್ ಸ್ಮಿತ್! ಏನಿದರ ಅಸಲಿಯತ್ತು?
ಇದನ್ನೂ ಓದಿ: IPL 2021: RCB ತಂಡಕ್ಕೆ ಇಂಗ್ಲೆಂಡ್ನ ಎಡಗೈ ವೇಗಿ..?
ಇದನ್ನೂ ಓದಿ: IPL 2021: CSK ತಂಡಕ್ಕೆ ಆಸ್ಟ್ರೇಲಿಯಾ ವೇಗಿ ರಿಎಂಟ್ರಿ..!
(a bouncer helped gulshan jha to get selected in nepal cricket team)