- Kannada News Sports Cricket news IPL 2021: CSK confirm availability of Australian pacer Josh Hazlewood
IPL 2021: CSK ತಂಡಕ್ಕೆ ಆಸ್ಟ್ರೇಲಿಯಾ ವೇಗಿ ರಿಎಂಟ್ರಿ..!
IPL 2021 CSK Team: ಸಿಎಸ್ಕೆ ಪ್ರಸ್ತುತ ತಂಡ ಹೀಗಿದೆ: ಎಂಎಸ್ ಧೋನಿ (ಕ್ಯಾಪ್ಟನ್), ಅಂಬಟಿ ರಾಯುಡು, ಹರಿ ನಿಶಾಂತ್, ಚೇತೇಶ್ವರ ಪೂಜಾರ, ದೀಪಕ್ ಚಹರ್, ಡ್ವೇನ್ ಬ್ರಾವೋ, ಫಾಫ್ ಡು ಪ್ಲೆಸಿಸ್, ಹರಿಶಂಕರ ರೆಡ್ಡಿ, ಇಮ್ರಾನ್ ತಾಹಿರ್.
Updated on: Aug 23, 2021 | 3:27 PM

IPL 2021ರ ದ್ವಿತಿಯಾರ್ಧ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿದ್ದು, ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ವೇಗಿಗಳಾದ ಪ್ಯಾಟ್ ಕಮಿನ್ಸ್, ರಿಲೆ ಮೆರೆಡಿತ್, ಮತ್ತು ಜೈ ರಿಚರ್ಡ್ಸನ್ ಸೇರಿದಂತೆ ಹಲವು ವಿದೇಶಿ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹಿಂದೆ ಸರಿದಿದ್ದಾರೆ.

ಇತ್ತ ಆರ್ಸಿಬಿ ಸೇರಿದಂತೆ ಕೆಲ ಫ್ರಾಂಚೈಸಿಗಳು ಬದಲಿ ಆಟಗಾರರನ್ನು ಕೂಡ ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ಅತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹಳೆಯ ವೇಗದ ಬೌಲರ್ ರಿ ಎಂಟ್ರಿ ಕೊಟ್ಟಿದ್ದಾರೆ.

ಹೌದು, ಐಪಿಎಲ್ನ ಸೀಸನ್ 14ನ ಮೊದಲಾರ್ಧದ ವೇಳೆ ವೈಯುಕ್ತಿಕ ಕಾರಣಗಳಿಗಾಗಿ ಸಿಎಸ್ಕೆ ತಂಡದಿಂದ ಹಿಂದೆ ಸರಿದಿದ್ದ ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಝಲ್ ವುಡ್ ಇದೀಗ ಐಪಿಎಲ್ನ ಉಳಿದ ಪಂದ್ಯಗಳಲ್ಲಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.

ಅದರಂತೆ ಸಿಎಸ್ಕೆ ತಂಡಕ್ಕೆ ಆಸೀಸ್ ವೇಗಿಯ ರಿ ಎಂಟ್ರಿ ಕನ್ಫರ್ಮ್ ಆಗಿದೆ. ಕಳೆದ ಬಾರಿ ಸಿಎಸ್ಕೆ ತಂಡಕ್ಕೆ ವಿದೇಶಿ ವೇಗದ ಬೌಲರ್ನ ಅಭಾವ ಕಾಡಿತ್ತು. ಇದಾಗ್ಯೂ ಆಲ್ರೌಂಡರ್ ಸ್ಯಾಮ್ ಕರನ್ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.

ಇದೀಗ ಅತ್ಯುತ್ತಮ ಫಾರ್ಮ್ನಲ್ಲಿರುವ ಜೋಶ್ ಹ್ಯಾಝಲ್‌ವುಡ್ ತಂಡಕ್ಕೆ ಮರಳುತ್ತಿರುವುದು ಸಿಎಸ್ಕೆ ತಂಡಕ್ಕೆ ಬಲ ಹೆಚ್ಚಿಸಿದೆ. ಹೀಗಾಗಿ ಐಪಿಎಲ್ನ ದ್ವಿತಿಯಾರ್ಧಲ್ಲಿ ಸ್ಯಾಮ್ ಕರನ್, ಜೋಶ್ ಹ್ಯಾಝಲ್‌ವುಡ್, ಶಾರ್ದುಲ್ ಠಾಕುರ್, ದೀಪಕ್ ಚಹರ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲಿಂಗ್ ಅಸ್ತ್ರಗಳಾಗುವ ಸಾಧ್ಯತೆ ಹೆಚ್ಚಿದೆ.

ಸಿಎಸ್ಕೆ ಪ್ರಸ್ತುತ ತಂಡ ಹೀಗಿದೆ: ಎಂಎಸ್ ಧೋನಿ (ಕ್ಯಾಪ್ಟನ್), ಅಂಬಟಿ ರಾಯುಡು, ಹರಿ ನಿಶಾಂತ್, ಚೇತೇಶ್ವರ ಪೂಜಾರ, ದೀಪಕ್ ಚಹರ್, ಡ್ವೇನ್ ಬ್ರಾವೋ, ಫಾಫ್ ಡು ಪ್ಲೆಸಿಸ್, ಹರಿಶಂಕರ ರೆಡ್ಡಿ, ಇಮ್ರಾನ್ ತಾಹಿರ್, ಜೋಶ್ ಹ್ಯಾಝಲ್‌ವುಡ್, ಕೆ ಭಗತ್, ಕೆ ಗೌತಮ್, ಕರ್ಣ್ ಶರ್ಮಾ, ಕೆಎಂ ಆಸಿಫ್, ಲುಂಗಿ ಎನ್ಗಿಡಿ , ಮಿಚೆಲ್ ಸ್ಯಾಂಟ್ನರ್, ಮೊಯೀನ್ ಅಲಿ, ನಾರಾಯಣ್ ಜಗದೀಸನ್, ಆರ್ ಸಾಯಿ ಕಿಶೋರ್, ರವೀಂದ್ರ ಜಡೇಜಾ, ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಸ್ಯಾಮ್ ಕರನ್, ಶಾರ್ದೂಲ್ ಠಾಕೂರ್, ಸುರೇಶ್ ರೈನಾ.

ಜೋಶ್ ಹ್ಯಾಝಲ್‌ವುಡ್
