IND vs ENG: ಇಂಗ್ಲೆಂಡ್ ತಂಡದಲ್ಲಿ ಹೆಚ್ಚಿದ ಇಂಜುರಿ ಸಮಸ್ಯೆ; ಮೂರನೇ ಟೆಸ್ಟ್​ನಿಂದ ತಂಡದ ಸ್ಟಾರ್ ಬೌಲರ್ ಔಟ್

IND vs ENG: ಇಂಗ್ಲೆಂಡ್​ನ ಗಾಯಗೊಂಡ ಆಟಗಾರರ ಪಟ್ಟಿಯಲ್ಲಿ ಮಾರ್ಕ್ ವುಡ್ ಇತ್ತೀಚಿನ ಹೆಸರು. ಅವರಿಗಿಂತ ಮುಂಚೆ, ಕ್ರಿಸ್ ವೋಕ್ಸ್, ಸ್ಟುವರ್ಟ್ ಬ್ರಾಡ್, ಜೋಫ್ರಾ ಆರ್ಚರ್, ಓಲಿ ಸ್ಟೋನ್ ಗಾಯದಿಂದಾಗಿ ಭಾರತದ ವಿರುದ್ಧದ ಸರಣಿಯಲ್ಲಿ ಆಡುತ್ತಿಲ್ಲ.

IND vs ENG: ಇಂಗ್ಲೆಂಡ್ ತಂಡದಲ್ಲಿ ಹೆಚ್ಚಿದ ಇಂಜುರಿ ಸಮಸ್ಯೆ; ಮೂರನೇ ಟೆಸ್ಟ್​ನಿಂದ ತಂಡದ ಸ್ಟಾರ್ ಬೌಲರ್ ಔಟ್
ಜೋ ರೂಟ್, ಮಾರ್ಕ್ ವುಡ್
Follow us
TV9 Web
| Updated By: ಪೃಥ್ವಿಶಂಕರ

Updated on: Aug 23, 2021 | 4:32 PM

ಇಂಗ್ಲೆಂಡ್ ಕ್ರಿಕೆಟ್ ತಂಡವು ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲು ದೊಡ್ಡ ಹಿನ್ನಡೆ ಅನುಭವಿಸಿದೆ. ತಂಡದ ವೇಗದ ಬೌಲರ್ ಮಾರ್ಕ್ ವುಡ್ 3ನೇ ಟೆಸ್ಟ್​ನಿಂದ ಹೊರಗುಳಿದಿದ್ದಾರೆ. ಭುಜದ ಗಾಯದಿಂದಾಗಿ, ಅವರು ಹೆಡಿಂಗ್ಲಿಯಲ್ಲಿ ನಡೆಯಲಿರುವ ಭಾರತ vs ಇಂಗ್ಲೆಂಡ್ ಟೆಸ್ಟ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಎರಡನೇ ಪಂದ್ಯದ ವೇಳೆ ಅವರು ಗಾಯಗೊಂಡರು. ಅಂದಿನಿಂದ ಮಾರ್ಕ್ ವುಡ್ ಇನ್ನೂ ಚೇತರಿಸಿಕೊಂಡಿಲ್ಲ. ಲಾರ್ಡ್ಸ್ ಟೆಸ್ಟ್​ನ ನಾಲ್ಕನೇ ದಿನ ಫೀಲ್ಡಿಂಗ್ ಮಾಡುವಾಗ ಮಾರ್ಕ್ ವುಡ್ ಗಾಯಗೊಂಡರು. ಚೆಂಡನ್ನು ಬೌಂಡರಿಯ ಬಳಿ ನಿಲ್ಲಿಸುವಾಗ, ಅವರ ಭುಜ ನೆಲಕ್ಕೆ ಅಪ್ಪಳಿಸಿತು. ಅದರ ನಂತರ ಅವರು ಪಂದ್ಯದಲ್ಲಿ ಆಡುವುದನ್ನು ಮುಂದುವರಿಸಿದರು. ಐದನೇ ದಿನ ಬೌಲಿಂಗ್ ಮಾಡಿದ ನಂತರ ಅವರ ಗಾಯ ಉಲ್ಬಣಗೊಂಡಿತು. ಎರಡನೇ ಟೆಸ್ಟ್‌ನ ಕೊನೆಯ ದಿನದಂದು ಅವರು ಕೇವಲ ನಾಲ್ಕು ಓವರ್‌ಗಳನ್ನು ಬೌಲ್ ಮಾಡಲು ಸಾಧ್ಯವಾಯಿತು.

ಇಂಗ್ಲೆಂಡ್​ನ ಗಾಯಗೊಂಡ ಆಟಗಾರರ ಪಟ್ಟಿಯಲ್ಲಿ ಮಾರ್ಕ್ ವುಡ್ ಇತ್ತೀಚಿನ ಹೆಸರು. ಅವರಿಗಿಂತ ಮುಂಚೆ, ಕ್ರಿಸ್ ವೋಕ್ಸ್, ಸ್ಟುವರ್ಟ್ ಬ್ರಾಡ್, ಜೋಫ್ರಾ ಆರ್ಚರ್, ಓಲಿ ಸ್ಟೋನ್ ಗಾಯದಿಂದಾಗಿ ಭಾರತದ ವಿರುದ್ಧದ ಸರಣಿಯಲ್ಲಿ ಆಡುತ್ತಿಲ್ಲ. ಅದೇ ಸಮಯದಲ್ಲಿ, ಬೆನ್ ಸ್ಟೋಕ್ಸ್ ಮಾನಸಿಕ ಆರೋಗ್ಯದ ಕಾರಣದಿಂದ ಹೊರನಡೆಯುತ್ತಿದ್ದಾರೆ. ಆದಾಗ್ಯೂ, ಮಾರ್ಕ್ ವುಡ್ ತಂಡದೊಂದಿಗೆ ಉಳಿಯುತ್ತಾರೆ. ಮೂರನೇ ಟೆಸ್ಟ್​ನ ಕೊನೆಯಲ್ಲಿ ವುಡ್ ಅವರ ಗಾಯದ ಬಗ್ಗೆ ವಿಚಾರ ಮಾಡಲಾಗುವುದು ಎಂದು ಇಂಗ್ಲೆಂಡ್ ತಂಡದಿಂದ ಹೇಳಲಾಗಿದೆ. ಇವರುಗಳಲ್ಲಿ, ಆರ್ಚರ್, ಸ್ಟೋಕ್ಸ್, ಬ್ರಾಡ್ ಮತ್ತು ಸ್ಟೋನ್ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ವೋಕ್ಸ್‌ಗೆ ಸಂಬಂಧಿಸಿದಂತೆ, ಅವರನ್ನು ವಾರ್‌ವಿಕ್‌ಶೈರ್ ಎರಡನೇ ಇಲೆವೆನ್‌ನಲ್ಲಿ ಆಯ್ಕೆ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಅವರು ಸರಣಿಯ ಕೊನೆಯ ಪಂದ್ಯಗಳಲ್ಲಿ ಆಡಬಹುದು ಎಂದು ಊಹಿಸಲಾಗಿದೆ.

ಇಂಗ್ಲೆಂಡ್​ನ ನಾಲ್ಕನೇ ವೇಗಿ ಯಾರು ಇಂಗ್ಲೆಂಡ್ ತಂಡವು ಹೆಚ್ಚುವರಿ ಟೆಸ್ಟ್ ಬೌಲರ್ ಅನ್ನು ಮೂರನೇ ಟೆಸ್ಟ್ ಪಂದ್ಯದ ಕವರ್ ಆಗಿ ಕರೆದಿಲ್ಲ. ಆದಾಗ್ಯೂ, ವುಡ್‌ ಗಾಯದ ನಂತರ, ಸಕಿಬ್ ಮಹಮೂದ್ ಹೆಡಿಂಗ್ಲಿಯಲ್ಲಿ ಚೊಚ್ಚಲ ಟೆಸ್ಟ್ ಆಡುತ್ತಾರೆ ಎಂದು ಊಹಿಸಲಾಗಿದೆ. ಅವರ ಜೊತೆಯಲ್ಲಿ, ಕ್ರೇಗ್ ಓರ್ಟನ್ ಕೂಡ ಸ್ಪರ್ಧೆಯಲ್ಲಿದ್ದಾರೆ. ಮೂವರು ವೇಗದ ಬೌಲರ್‌ಗಳನ್ನು ಜೇಮ್ಸ್ ಆಂಡರ್ಸನ್, ಓಲಿ ರಾಬರ್ಟ್‌ಸನ್ ಮತ್ತು ಸ್ಯಾಮ್ ಕುರ್ರನ್ ರೂಪದಲ್ಲಿ ಸ್ಥಿರಗೊಳಿಸಲಾಗಿದೆ. ಐದು ಟೆಸ್ಟ್‌ಗಳ ಸರಣಿಯಲ್ಲಿ ಮೊದಲ ಪಂದ್ಯ ಡ್ರಾ ಆದರೆ ಭಾರತ ಎರಡನೇ ಟೆಸ್ಟ್‌ನಲ್ಲಿ 151 ರನ್‌ಗಳಿಂದ ಗೆದ್ದಿತು. ಈ ಮೂಲಕ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ