T20 World Cup: ಭಾರತವನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಕೆರಿಬಿಯನ್ ನಾಯಕ! ಟಿ20 ವಿಶ್ವಕಪ್ಗೂ ಮುನ್ನ ಡ್ಯಾರೆನ್ ಸ್ಯಾಮಿ ಹೇಳಿದ್ದಿದು
T20 World Cup: ವಿರಾಟ್ ಕೊಹ್ಲಿಯಂತಾ ಆಟಗಾರರನ್ನು ನೀವು ಪರಿಗಣಿಸಬಹುದು. ಆದರೆ ಅತಿ ಹೆಚ್ಚು ರನ್‌ಗಳಿಸುವ ಆಟಗಾರರ ತಂಡ ಟೂರ್ನಿಯನ್ನು ಗೆಲ್ಲಲಿದೆ ಎಂದು ಹೇಳಲು ಸಾಧ್ಯವಿಲ್ಲ.
ಬಹುನಿರೀಕ್ಷಿತ ಐಸಿಸಿ ಟಿ 20 ವಿಶ್ವಕಪ್ ಯುಎಇ ಮತ್ತು ಒಮಾನ್‌ನಲ್ಲಿ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯಲಿದೆ. ಪಂದ್ಯಾವಳಿಗೆ ಇನ್ನೂ ಎರಡು ತಿಂಗಳು ಬಾಕಿಯಿರುವಾಗ, ಭವ್ಯ ಸ್ಪರ್ಧೆಯ ಕುರಿತು ಹಲವು ಕ್ರಿಕೆಟಿಗರು ತಮ್ಮ ತಂಡದ ಸಾಮಥ್ಯ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಏತನ್ಮಧ್ಯೆ, ಈ ವರ್ಷದ ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಗೆಲ್ಲುತ್ತದೆ ಎಂಬುದಕ್ಕೆ ವೆಸ್ಟ್ ಇಂಡೀಸ್ ನ ಮಾಜಿ ನಾಯಕ ಡ್ಯಾರೆನ್ ಸ್ಯಾಮಿ ತನ್ನ ಕಾರಣಗಳನ್ನು ನೀಡಿದ್ದಾರೆ. ಸ್ಯಾಮಿ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ 2016 ರಲ್ಲಿ ಟಿ 20 ವಿಶ್ವಕಪ್ ಗೆದ್ದಿತ್ತು. ಅದರ ನಂತರ, ವೆಸ್ಟ್ ಇಂಡೀಸ್ ಮತ್ತೆ ಟೂರ್ನಿಯನ್ನು ಗೆಲ್ಲುತ್ತದೆ ಎಂದು ಸ್ಯಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ಟಿ 20 ವಿಶ್ವಕಪ್ ನಡೆಯಲಿದೆ. ಇದೇ ವೇಳೆ, 2016 ರಲ್ಲಿ ನಡೆದ ಹಿಂದಿನ ಟಿ 20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್‌ನ ಕಾರ್ಲೋಸ್ ಬ್ರೈತ್‌ವೈಟ್ ಕೊನೆಯ ಓವರ್ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಎರಡನೇ ಬಾರಿಗೆ ಟ್ರೋಫಿ ಗೆದ್ದಿದ್ದರು. ಅವರು ಈ ಹಿಂದೆ 2012 ರಲ್ಲಿ ಗೆದ್ದಿದ್ದರು. ನಾನು ಇನ್ನು ಮುಂದೆ ಅದರ ಬಗ್ಗೆ ಯೋಚಿಸಬೇಕಾಗಿಲ್ಲ ಎಂದು ಐಸಿಸಿ ಡಿಜಿಟಲ್ ಪ್ರೋಗ್ರಾಂನಲ್ಲಿ ಸ್ಯಾಮಿ ಹೇಳಿದರು.
ನಾಲ್ಕು ಪಂದ್ಯಾವಳಿಯಲ್ಲಿ ಫೈನಲ್ಗೆ ತಲುಪಿದ್ದೇವೆ ಗೆಲುವಿನ ಕಾರಣವನ್ನು ನೀಡಿದ ಸ್ಯಾಮಿ, ನೀವು ವೆಸ್ಟ್ ಇಂಡೀಸ್ ಅನ್ನು ನೋಡಿದಾಗ, ನಾವು ಕಳೆದ ಕೆಲವು ವರ್ಷಗಳಲ್ಲಿ ಪ್ರಮುಖ ನಾಲ್ಕು ಪಂದ್ಯಾವಳಿಯಲ್ಲಿ ಫೈನಲ್ಗೆ ತಲುಪಿದ್ದೇವೆ. ಅದರಲ್ಲಿ ನಾವು ಎರಡು ಬಾರಿ ಚಾಂಪಿಯನ್ ಆಗಿದ್ದೇವೆ. ಹೀಗಾಗಿ ನಮ್ಮಲ್ಲಿರುವ ಸಾಮರ್ಥ್ಯವನ್ನು ಗಮನಿಸಿದರೆ ಗೆಲುವು ಖಂಡಿತ ನಮ್ಮದಾಗುತ್ತದೆ. ನಾಯಕ ಕೀರನ್ ಪೊಲಾರ್ಡ್, ಕ್ರಿಸ್ ಗೇಲ್, ಆಂಡ್ರೆ ರಸೆಲ್, ಜೇಸನ್ ಹೋಲ್ಡರ್, ಫ್ಯಾಬಿಯನ್ ಅಲೆನ್ ಮತ್ತು ಎವಿನ್ ಲೂಯಿಸ್ ಅವರ ಮರಳುವಿಕೆಯಿಂದ, ಅವರೆಲ್ಲರೂ ಪಂದ್ಯವನ್ನು ನಮ್ಮ ಕಡೆಗೆ ವಾಲುವಂತೆ ಮಾಡುವ ಸಾಮಥ್ರ್ಯ ಹೊಂದಿದ್ದಾರೆ ಎಂದರು.
ಈ ತಂಡದಿಂದ ಉತ್ತಮ ಆಟವನ್ನು ನಿರೀಕ್ಷಿಸಬಹುದು ವೆಸ್ಟ್ ಇಂಡೀಸ್ ಜೊತೆಗೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕೂಡ ಉತ್ತಮ ಪ್ರದರ್ಶನ ನೀಡಲಿದೆ ಎಂದು ಸ್ಯಾಮಿ ಹೇಳಿದ್ದಾರೆ. ನೀವು ಇಂಗ್ಲೆಂಡ್ ತಂಡದ ಬಗ್ಗೆ ಯೋಚಿಸಿದಾಗ, ನೀವು ಇದೀಗ ಟಿ 20 ಕ್ರಿಕೆಟ್ನಲ್ಲಿ ಅವರ ಪ್ರದರ್ಶನವನ್ನು ನೋಡಬಹುದು. ಅವರು ವಿಶ್ವಕಪ್‌ನಲ್ಲಿನ ಪರಿಸ್ಥಿತಿಗಳು ಅವರಿಗೆ ಉತ್ತಮವಾಗಿರುವ ಕಾರಣ ಅವರು ಉತ್ತಮವಾಗಿ ಕಾರ್ಯನಿರ್ವಹಿಸಬಹುದು. ಆಸ್ಟ್ರೇಲಿಯಾ ಇನ್ನೂ ಟಿ 20 ವಿಶ್ವಕಪ್ ಗೆದ್ದಿಲ್ಲ. ಆದ್ದರಿಂದ ಅವರು ಈ ಸ್ಪರ್ಧೆಯಲ್ಲಿ ಗೆಲ್ಲಲು ತುಂಬಾ ಉತ್ಸುಕರಾಗಿದ್ದಾರೆ. ಅವರ ಆಟಗಾರರಿಗೂ ಆ ಸಾಮರ್ಥ್ಯವಿದೆ. ಆದ್ದರಿಂದ, ಅವರ ಆಟ ಖಂಡಿತವಾಗಿಯೂ ಪ್ರವರ್ಧಮಾನಕ್ಕೆ ಬರುತ್ತದೆ ಎಂದಿದ್ದಾರೆ.
ಭಾರತವನ್ನು ಕಡೆಗಣಿಸಿದ ಡ್ಯಾರೆನ್ ಸ್ಯಾಮಿ ವೆಸ್ಟ್ ಇಂಡೀಸ್ ನಾಯಕ ಸ್ಯಾಮಿ ಆಡಿರುವ ಮಾತುಗಳು ಈಗ ಭಾರತದ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಟೀಂ ಇಂಡಿಯಾವನ್ನು ಪ್ರಬಲ ಸ್ಪರ್ಧಿ ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳದ ಸ್ಯಾಮಿ ಟೀಂ ಇಂಡಿಯಾ ನಾಯಕನ ಬಗ್ಗೆ ಮಾತನಾಡಿ, ಬ್ಯಾಟಿಂಗ್‌ನಲ್ಲಿ ಅಗ್ರ ಮೂರು ಕ್ರಮಾಂಕದಲ್ಲಿ ಇಳಿಯುವ ಆಟಗಾರರು ಹೆಚ್ಚಿನ ರನ್‌ಗಳಿಸುತ್ತಾರೆ. ವಿರಾಟ್ ಕೊಹ್ಲಿಯಂತಾ ಆಟಗಾರರನ್ನು ನೀವು ಪರಿಗಣಿಸಬಹುದು. ಆದರೆ ಅತಿ ಹೆಚ್ಚು ರನ್‌ಗಳಿಸುವ ಆಟಗಾರರ ತಂಡ ಟೂರ್ನಿಯನ್ನು ಗೆಲ್ಲಲಿದೆ ಎಂದು ಹೇಳಲು ಸಾಧ್ಯವಿಲ್ಲ. ನನಗೆ ಯಾರು ಸರಣಿ ಶ್ರೇಷ್ಠ ಆಟಗಾರನಾಗುತ್ತಾನೆ ಎಂಬ ಬಗ್ಗೆ ಸಾಕಷ್ಟು ಕುತೂಹಲವಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡನ್ನೂ ಮಾಡುವ ಸಾಮಥ್ಯ್ರವಿರುವ ಆಂಡ್ರೆ ರಸೆಲ್ ಅವರಂತಾ ಆಟಗಾರರು ಈ ಪ್ರಶಸ್ತಿಯನ್ನು ಗೆಲ್ಲಲಿದ್ದಾರೆ ಎಂದು ಡ್ಯಾರೆನ್ ಸ್ಯಾಮಿ ಭವಿಷ್ಯ ನುಡಿದಿದ್ದಾರೆ.