Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!

Crime News in Kannada: ಮಹಿಳೆಯ ವಿಕೃತ ನಡೆಯಿಂದ ಬಾಲಕಿ ಮಾನಸಿಕವಾಗಿ ನೊಂದಿದ್ದಾಳೆ. ಈ ಘಟನೆಯು ಬಾಲಕಿಯ ಜೀವನದ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಪೋಷಕರು ತಿಳಿಸಿದ್ದಾರೆ.

Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 23, 2021 | 10:32 PM

ಸಾಮಾನ್ಯವಾಗಿ ಅಪರಾಧ ಲೋಕದಲ್ಲಿ ಅಶ್ಲೀಲ ವೀಡಿಯೋ ಕಳುಹಿಸುವ ವಿಕೃತಕಾಮಿಗಳ ಬಗ್ಗೆ ವರದಿಯಾಗುತ್ತಿರುತ್ತದೆ. ಆದರೆ ಇಲ್ಲೊಬ್ಬಳು ಮಹಿಳೆ ಅಶ್ಲೀಲ ವೀಡಿಯೋ ಹಾಗೂ ಫೋಟೋ ಕಳುಹಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಇಂತಹ ವಿಕೃತ ಘಟನೆ ನಡೆದಿರುವುದು ಭೋಪಾಲ್​ನ ಗ್ವಾಲಿವಾರ್​ ಪ್ರದೇಶದಲ್ಲಿ. ಕೊರೋನಾ ಕಾರಣದಿಂದ ದೇಶದೆಲ್ಲೆಡೆ ಆನ್​ಲೈನ್ ಕ್ಲಾಸ್​ಗಳು ನಡೆಯುತ್ತಿದೆ. ಅದರಂತೆ 11 ವರ್ಷದ ಬಾಲಕಿಯೊಬ್ಬಳಿಗೆ ಮನೆಯವರು ಸ್ಮಾರ್ಟ್​ಫೋನ್ ಕೊಡಿಸಿದ್ದರು. ಈ ಫೋನ್​ಗೆ ನಿರಂತರವಾಗಿ ಅಶ್ಲೀಲ ವೀಡಿಯೋ ಹಾಗೂ ಅಶ್ಲೀಲ ಫೋಟೋಗಳು ಬರುತ್ತಿದ್ದವು. ಆರಂಭದಲ್ಲಿಯಾರೋ ಪುರುಷರು ಕಳುಹಿಸುತ್ತಿದ್ದಾರೆ ಎಂಬ ಭಾವಿಸಲಾಗಿತ್ತು. ಈ ಬಗ್ಗೆ ಎಚ್ಚರಿಕೆಯ ಸಂದೇಶವನ್ನೂ ಸಹ ರವಾನಿಸಲಾಗಿತ್ತು.

ಆದರೆ ಈ ಚಾಳಿ ಮುಂದುವರೆಯುತ್ತಿದ್ದಂತೆ ಬಾಲಕಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಆ ಬಳಿಕ ನಡೆದ ತನಿಖೆಯಿಂದ ವೀಡಿಯೋ-ಫೋಟೋ ಕಳುಹಿಸುತ್ತಿರೋದು ಪುರುಷನಲ್ಲ, ಮಹಿಳೆ ಎಂಬುದು ಗೊತ್ತಾಗಿದೆ. ಅದರ ಬೆನ್ನಲ್ಲೇ ಭೋಪಾಲ್ ನಿವಾಸಿಯಾಗಿರುವ ಆಂಟಿಯನ್ನು ಪೊಲೀಸರು ಬಂಧಿಸಿ ಎಫ್​ಐಆರ್​ ದಾಖಲಿಸಿದ್ದಾರೆ.

ಅಷ್ಟೇ ಅಲ್ಲದೆ ಆಂಟಿಯನ್ನು ಈ ಬಗ್ಗೆ ವಿಚಾರಿಸಿದಾಗ ವಿಚಿತ್ರ ಸತ್ಯವೊಂದನ್ನು ಬಾಯಿಬಿಟ್ಟಿದ್ದಾರೆ. ಹೌದು, ಇಂತಹದೊಂದು ಅಶ್ಲೀಲ ಕೃತ್ಯ ಎಸಗಲು ಬಾಲಕಿಯ ತಂದೆ ಜೊತೆಗಿನ ವೈಮನಸ್ಸು ಕಾರಣ ಎಂದಿದ್ದಾಳೆ. ಆರೋಪಿ ಮಹಿಳೆ ಹಾಗೂ ಬಾಲಕಿ ತಂದೆ ವ್ಯವಹಾರ ನಡೆಸುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ಇದರ ಸೇಡು ತೀರಿಸಿಕೊಳ್ಳಲು ಮಹಿಳೆಯು ಬಾಲಕಿಗೆ ಕೆಟ್ಟ ವೀಡಿಯೋಗಳನ್ನು ಕಳುಹಿಸಿ ವಿಕೃತ ಆನಂದ ಪಡುತ್ತಿದ್ದಳು.

ಮಹಿಳೆಯ ವಿಕೃತ ನಡೆಯಿಂದ ಬಾಲಕಿ ಮಾನಸಿಕವಾಗಿ ನೊಂದಿದ್ದಾಳೆ. ಈ ಘಟನೆಯು ಬಾಲಕಿಯ ಜೀವನದ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಪೋಷಕರು ತಿಳಿಸಿದ್ದಾರೆ. ಇದೀಗ ಆಂಟಿಯನ್ನು ಬಂಧಿಸಿರುವ ಪೊಲೀಸರು ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದೇವೆ ಗ್ವಾಲಿಯರ್ ಠಾಣೆಯ ಇನ್‍ಸ್ಪೆಕ್ಟರ್ ಸಂಜೀವ್ ಶರ್ಮಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Steve Smith: ಅಫ್ಘಾನಿಸ್ತಾನದ ಮಕ್ಕಳ ರಕ್ಷಣೆಗೆ ಮುಂದಾದ ಸ್ಟೀವ್ ಸ್ಮಿತ್! ಏನಿದರ ಅಸಲಿಯತ್ತು?

ಇದನ್ನೂ ಓದಿ: IPL 2021: RCB ತಂಡಕ್ಕೆ ಇಂಗ್ಲೆಂಡ್​ನ ಎಡಗೈ ವೇಗಿ..?

ಇದನ್ನೂ ಓದಿ: IPL 2021: CSK ತಂಡಕ್ಕೆ ಆಸ್ಟ್ರೇಲಿಯಾ ವೇಗಿ ರಿಎಂಟ್ರಿ..!

(woman send nude videos obscene photos on minor girl mobile)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ