AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಕ್ಷ್ಯ ಹೇಳ್ತಾನೆ ಅನ್ನೋ ಕಾರಣಕ್ಕೆ ಜೈಲಿನಲ್ಲೇ ಕುಳಿತು ಮರ್ಡರ್ ಸ್ಕೆಚ್; ಇಬ್ಬರು ಆರೋಪಿಗಳ ಬಂಧನ

ರೌಡಿಶೀಟರ್ ಒಬ್ಬ ಜೈಲಿನಲ್ಲೇ ಕುಳಿತು ಎದುರಾಳಿ ಕತೆಯನ್ನು ಮುಗಿಸುವುದಕ್ಕೆ ಸ್ಕೆಚ್ ಹಾಕಿರುವುದು ಬಹಿರಂಗವಾಗಿದೆ. ಸಾಕ್ಷ್ಯ ಹೇಳುತ್ತಾನೆ ಎಂದು ನಾರಾಯಣಸ್ವಾಮಿ ಎಂಬುವವರ ಹತ್ಯೆಗೆ ರೌಡಿಶೀಟರ್ ಸುಂದರೇಶ್ ಜೈಲಿಂದಲೇ ಸ್ಕೆಚ್ ಹಾಕಿ, ಅದನ್ನು ಕಾರ್ಯಗತಗೊಳಿಸುವುದಕ್ಕೂ ಯತ್ನ ನಡೆಸಿದ್ದ. ಆದರೆ ಅದು ವಿಫಲವಾಗಿತ್ತು.

ಸಾಕ್ಷ್ಯ ಹೇಳ್ತಾನೆ ಅನ್ನೋ ಕಾರಣಕ್ಕೆ ಜೈಲಿನಲ್ಲೇ ಕುಳಿತು ಮರ್ಡರ್ ಸ್ಕೆಚ್; ಇಬ್ಬರು ಆರೋಪಿಗಳ ಬಂಧನ
ಸಾಕ್ಷ್ಯ ಹೇಳ್ತಾನೆ ಅನ್ನೋ ಕಾರಣಕ್ಕೆ ಜೈಲಿನಲ್ಲೇ ಕುಳಿತು ಮರ್ಡರ್​ಗೆ (ಹಸಿರು ಟೀ ಶರ್ಟ್ ಹಾಕಿರುವ ಹಿಂಬದಿ ವ್ಯಕ್ತಿ ನಾರಾಯಣಸ್ವಾಮಿ​​ ಹತ್ಯೆಗೆ) ಸ್ಕೆಚ್
TV9 Web
| Edited By: ಸಾಧು ಶ್ರೀನಾಥ್​|

Updated on:Aug 24, 2021 | 10:28 AM

Share

ಬೆಂಗಳೂರು: ರೌಡಿಶೀಟರ್ ಒಬ್ಬ ಜೈಲಿನಲ್ಲೇ ಕುಳಿತು ಎದುರಾಳಿ ಕತೆಯನ್ನು ಮುಗಿಸುವುದಕ್ಕೆ ಸ್ಕೆಚ್ ಹಾಕಿರುವುದು ಬಹಿರಂಗವಾಗಿದೆ. ಸಾಕ್ಷ್ಯ ಹೇಳುತ್ತಾನೆ ಎಂದು ನಾರಾಯಣಸ್ವಾಮಿ ಎಂಬುವವರ ಹತ್ಯೆಗೆ ರೌಡಿಶೀಟರ್ ಸುಂದರೇಶ್ ಜೈಲಿಂದಲೇ ಸ್ಕೆಚ್ ಹಾಕಿ, ಅದನ್ನು ಕಾರ್ಯಗತಗೊಳಿಸುವುದಕ್ಕೂ ಯತ್ನ ನಡೆಸಿದ್ದ. ಆದರೆ ಅದು ವಿಫಲವಾಗಿತ್ತು. ನಾರಾಯಣಸ್ವಾಮಿಯ ಹತ್ಯೆ ಮಾಡುವುದಕ್ಕೆ ಸುಂದರೇಶನ ಸಹಚರರಾದ ಮುನಿರಾಜು ಮತ್ತು ವೆಂಕಟೇಶ ಅಲಿಯಾಸ್ ಚಿಕ್ಕ ಹೊಸಕೋಟೆ ಟೀಂ ಡೀಲ್ ಒಪ್ಪಿಕೊಂಡು, ವಿಫಲ ಯತ್ನ ನಡೆಸಿದ್ದರು ಎಂಬುದು ಗಮನಾರ್ಹ.

ಜುಲೈ 31 ರಂದು ಬೈಯಪ್ಪನಹಳ್ಳಿಯಲ್ಲಿ ಏನಾಗಿತ್ತು?

ಜುಲೈ 31 ರಂದು ಬೈಯಪ್ಪನಹಳ್ಳಿಯ ಸುರಂಜನಾದಾಸ್ ರಸ್ತೆಯಲ್ಲಿ ವಾಯುವಿಹಾರಕ್ಕೆ ತೆರಳುತ್ತಿದ್ದ ನಾರಾಯಣಸ್ವಾಮಿ ಎಂಬುವವರ ಮೇಲೆ ಅಟ್ಯಾಕ್ ನಡೆದಿತ್ತು. ಈ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕೊಲೆ ಯತ್ನ ನಡೆಸಿದ್ದರು. ಯಾರೋ ತನ್ನನ್ನ ಮುಗಿಸೋಕೆ ಬರುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ನಾರಾಯಣಸ್ವಾಮಿ ಓಡೋಕೆ ಶುರು ಮಾಡಿದ್ದರು. ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಲಾಂಗ್​ನಿಂದ ಅಟ್ಯಾಕ್ ಮಾಡೋಕೆ ಮುಂದಾಗಿದ್ದರು. ಆಗ ರಸ್ತೆ ವಿಭಜಕ ದಾಟಿ, ಮುಂದೆ ಹೋದ ನಾರಾಯಣಸ್ವಾಮಿ ಜೀವ ಉಳಿಸಿಕೊಂಡಿದ್ದರು.

ಕೊಲೆಗಡುಕರು ನಾರಾಯಣಸ್ವಾಮಿಯನ್ನ ಚೇಸ್ ಮಾಡೋ ಎಕ್ಸ್​​ಕ್ಲೂಸಿವ್ ಸಿಸಿಟಿವಿ ದೃಶ್ಯ ಟಿವಿ9 ಗೆ ದೊರೆತಿದೆ. ಪ್ರಕರಣ ದಾಖಲಿಸಿಕೊಂಡಿರುವ ಬೈಯಪ್ಪನಹಳ್ಳಿ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಾದ ಮುನಿರಾಜು ಮತ್ತು ವೆಂಕಟೇಶ್ ಅಂದರ್ ಆಗಿದ್ದಾರೆ.

ಪ್ರಕರಣದ ಬೆನ್ನುಹತ್ತಿದ ಬೈಯಪ್ಪನಹಳ್ಳಿ ಪೊಲೀಸರು ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದ ಇನ್ನೊಂದು ಮಹತ್ವದ ಒಳಸುಳಿ ಪತ್ತೆಯಾಗಿದೆ. ಆಕ್ಚುಯಲಿ, ಜೈಲಿನಲ್ಲಿದ್ದುಕೊಂಡೇ ರೌಡಿ ಸುಂದರೇಶ, ನಾರಾಯಣಸ್ವಾಮಿ ಹತ್ಯೆಗೆ ಸುಪಾರಿ‌ ನೀಡಿದ್ದ ಎಂದು ತಿಳಿದುಬಂದಿದೆ. ಹಾಗಾಗಿ ಸುಂದರೇಶನನ್ನ ಬಾಡಿವಾರೆಂಟ್ ಮೂಲಕ ಬೈಯಪ್ಪನಹಳ್ಳಿ ಪೊಲೀಸರು ಕರೆತಂದು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ನಾರಾಯಣಸ್ವಾಮಿ ಕೊಲೆ ಯತ್ನದ ಬಗ್ಗೆ ಸುಂದರೇಶ್ ಬಾಯ್ಬಿಟ್ಟಿದ್ದಾನೆ. ಕೊಲೆಯತ್ನದ ಇನ್ನರ್ ಡಿಟೇಲ್ಸ್​​ ರಿವೀಲ್ ಮಾಡಿದ್ದಾನೆ. 2017 ರಲ್ಲಿ ನಾಗಾವಾರಪಾಳ್ಯದ ಬಳಿ ಶಿವಕುಮಾರ್ ಎಂಬಾತನನ್ನ ಸುಂದರೇಶ್ ಟೀಂ ಕೊಲೆಗೈದಿತ್ತು. ಕೊಲೆಯಾದ ಶಿವಕುಮಾರ್, ನಾರಾಯಣಸ್ವಾಮಿಯ ಭಾವಮೈದನಾಗಿದ್ದ. ಇದೇ ಕಾರಣಕ್ಕೆ ಕೊಲೆ ಸಂಬಂಧ ಸಾಕ್ಷಿಯಾಗಿ ನಾರಾಯಣಸ್ವಾಮಿ ಕೋರ್ಟ್ ಮೆಟ್ಟಿಲೇರಿದ್ದರು. ನಾರಾಯಣಸ್ವಾಮಿ ಸಾಕ್ಷ್ಯ ಹೇಳ್ತಾರೆ ಅನ್ನೋ ಕಾರಣಕ್ಕೆ ಅವರ ಮರ್ಡರ್​​ಗೆ ಸ್ಕೆಚ್ ಹಾಕಿದ್ರಂತೆ. ಈ ಕೊಲೆಯತ್ನ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

(rowdy sheeter sundaresh murder sketch to kill witness of a murder case in bayyappanahalli)

Published On - 10:20 am, Tue, 24 August 21

Follow Us
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ