AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಯೂನಿಫಾರ್ಮ್ ಎಲ್ಲಿ ಎಂದ ಪ್ರಿನ್ಸಿಪಾಲ್ ತಲೆಗೆ ಗನ್ ಹಿಡಿದ ವಿದ್ಯಾರ್ಥಿ!

Shocking News: ಸಮವಸ್ತ್ರ ಧರಿಸಿಲ್ಲ ಎಂದು ಬೈದಿದ್ದಕ್ಕೆ ಪ್ರಿನ್ಸಿಪಾಲ್​ ಹಣೆಗೇ ಗನ್ ಇಟ್ಟ 17 ವರ್ಷದ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Crime News: ಯೂನಿಫಾರ್ಮ್ ಎಲ್ಲಿ ಎಂದ ಪ್ರಿನ್ಸಿಪಾಲ್ ತಲೆಗೆ ಗನ್ ಹಿಡಿದ ವಿದ್ಯಾರ್ಥಿ!
ಗನ್
TV9 Web
| Edited By: |

Updated on: Aug 25, 2021 | 5:33 PM

Share

ನವದೆಹಲಿ: ಕೊರೊನಾದಿಂದಾಗಿ ಒಂದೂವರೆ ವರ್ಷದಿಂದ ಶಾಲಾ- ಕಾಲೇಜುಗಳನ್ನು ಮುಚ್ಚಲಾಗಿತ್ತು. ಆನ್​ಲೈನ್​ನಲ್ಲಿ​ ಪಾಠ ನಡೆಸಿ, ಕೆಲವು ತರಗತಿಗೆ ಪರೀಕ್ಷೆಯೂ ಇಲ್ಲದೆ ಈ ಬಾರಿ ಪಾಸ್ ಮಾಡಲಾಗಿತ್ತು. ಈಗಾಗಲೇ ಕೆಲವು ರಾಜ್ಯಗಳಲ್ಲಿ ಶಾಲೆಗಳನ್ನು ಶುರು ಮಾಡಲಾಗಿದೆ. ಹೀಗೆ ಉತ್ತರ ಪ್ರದೇಶದಲ್ಲಿ ಕೂಡ ಶಾಲೆ-ಕಾಲೇಜುಗಳನ್ನು ಆರಂಭಿಸಲಾಗಿದೆ. ಈ ಕಾಲೇಜಿಗೆ ಬಂದ 17 ವರ್ಷದ ಬಾಲಕನೊಬ್ಬ ಯೂನಿಫಾರ್ಮ್ ಧರಿಸಿಲ್ಲ ಎಂಬ ಕಾರಣಕ್ಕೆ ಆನಿಗೆ ಪ್ರಿನ್ಸಿಪಾಲ್ ಬೈದಿದ್ದಾರೆ. ಅದರಿಂದ ಕೋಪಗೊಂಡ ಆ ವಿದ್ಯಾರ್ಥಿ ಪ್ರಿನ್ಸಿಪಾಲ್​ ತಲೆಗೆ ಪಿಸ್ತೂಲ್ ಇಟ್ಟಿದ್ದಾನೆ.

ಸಮವಸ್ತ್ರ ಧರಿಸಿಲ್ಲ ಎಂದು ಬೈದಿದ್ದಕ್ಕೆ ಪ್ರಿನ್ಸಿಪಾಲ್​ ಹಣೆಗೇ ಗನ್ ಇಟ್ಟ 17 ವರ್ಷದ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉತ್ತರ ಪ್ರದೇಶದ ಭಗುವಾಲದಲ್ಲಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದೆ.

ಈ ಬಗ್ಗೆ ಕಾಲೇಜಿನ ಪ್ರಿನ್ಸಿಪಾಲ್ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕಾಲೇಜು ಶುರುವಾಗಿದ್ದರಿಂದ ಎಲ್ಲ ತರಗತಿಗಳಿಗೂ ಭೇಟಿ ನೀಡುತ್ತಿದ್ದೆವು. ಆಗ ಅಲ್ಲಿದ್ದ ಬಾಲಕ ಯೂನಿಫಾರ್ಮ್ ಧರಿಸಿರಲಿಲ್ಲ. ಮುಂದಿನ ತರಗತಿಗೆ ಸಮವಸ್ತ್ರ ಧರಿಸದೆ ಬರುವಂತಿಲ್ಲ ಎಂದು ಆತನಿಗೆ ಎಚ್ಚರಿಕೆ ನೀಡಿದ್ದೆ. ಸ್ವಲ್ಪ ಹೊತ್ತಾದ ನಂತರ ಸ್ಟಾಫ್​ ರೂಮಿಗೆ ಬಂದ ಆ ಬಾಲಕ ನನ್ನ ಹಣೆಗೆ ರಿವಾಲ್ವರ್ ಇಟ್ಟು, ಮನಬಂದಂತೆ ಬೈಯತೊಡಗಿದ. ಗಲಾಟೆ ಕೆಳಿ ಓಡಿಬಂದ ಶಿಕ್ಷಕರು ಆತನ ಕೈಯಿಂದ ಪಿಸ್ತೂಲ್ ಕಿತ್ತುಕೊಂಡರು. ಜನ ಸೇರಿದ್ದನ್ನು ನೋಡಿ ಗಾಬರಿಯಾದ ಆತ ಓಡಿ ಹೋದ. ಆತನನ್ನು ಹಿಂಬಾಲಿಸಿದ ಶಾಲಾ ಸಿಬ್ಬಂದಿ ಆತನನ್ನು ಹಿಡಿದುಕೊಂಡು ಬಂದರು ಎಂದು ತಿಳಿಸಿದ್ದಾರೆ.

ಪೊಲೀಸರ ತನಿಖೆಯ ಮಾಹಿತಿ ಪ್ರಕಾರ, ಅ ಬಾಲಕ ಆ ಶಾಲೆಯವನಲ್ಲ. ಹೊರಗಿನವನಾದ ಆತ ಬೇರೆ ವಿದ್ಯಾರ್ಥಿಗಳ ಜೊತೆ ಕ್ಲಾಸ್​ಗೆ ಬಂದು ಕುಳಿತಿದ್ದ. ಆತನ ಕೈಗೆ ಹೇಗೆ ಪಿಸ್ತೂಲ್ ಸಿಕ್ಕಿತು ಎಂಬುದು ಇನ್ನೂ ಗೊತ್ತಾಗಿಲ್ಲ.

ಇದನ್ನೂ ಓದಿ: Crime News: ತ್ರಿಶೂಲದಿಂದ ಇರಿದು ಅರ್ಚಕನ ಬರ್ಬರ ಹತ್ಯೆ; ದೇವಸ್ಥಾನದಲ್ಲಿ ಅರೆ ಸುಟ್ಟ ಶವ ಪತ್ತೆ

Murder: ಇದು ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಕತೆ!; ಸೇಡಿಗಾಗಿ ಹನಿಮೂನ್​ನಲ್ಲೇ ಹೆಂಡತಿಯನ್ನು ಕೊಂದ ಗಂಡ

(Crime News: 17 Year Old Boy Puts Gun On Principal Head After Getting Scolded For Not Wearing Uniform in College)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ