ಫುಟ್ಬಾಲ್ ಪಂದ್ಯದ ವೇಳೆ ಘರ್ಷಣೆ: ವಾಹನಗಳಿಗೆ ಬೆಂಕಿ, ಇಬ್ಬರ ಹತ್ಯೆ
ಈ ಘರ್ಷಣೆಯಿಂದ ಪಾತುರ ನಿವಾಸಿ ವಿನಯ್ ಸಾಹು, ಕಾರ್ಮಿ ದೇವಿ ಮತ್ತು ಕಿಂಡಿರ್ಕೇಲ ನಿವಾಸಿ ಶೇಖ್ ಬೆಲಾಲ್ ಗಂಭೀರ ಗಾಯಗೊಂಡಿದ್ದಾರೆ.
ಫುಟ್ಬಾಲ್ ಪಂದ್ಯದ ವೇಳೆ ಶುರುವಾದ ಜಗಳ ಇಬ್ಬರ ಕೊಲೆಯೊಂದಿಗೆ ಅಂತ್ಯಗೊಂಡ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಗುಮ್ಲಾ ಜಿಲ್ಲೆಯ ಬಾಸಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಬಸ್ತೋಲಿಯಲ್ಲಿ ರಾತ್ರಿ ನಡೆದ ಫುಟ್ಬಾಲ್ ಪಂದ್ಯದ ಬಳಿಕ ಈ ಘಟನೆ ಜರುಗಿದೆ. ಈ ಪಂದ್ಯದಲ್ಲಿ ಪಾತುರಾ vs ಪೀಠಕ್ ಟೋಲಿ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯದ ನಡುವೆ ರೆಫರಿ ನೀಡಿದ ತೀರ್ಪಿನ ವಿರುದ್ದ ಒಂದು ತಂಡವು ಆಕ್ರೋಶ ವ್ಯಕ್ತಪಡಿಸಿತ್ತು. ಇದೇ ವೇಳೆ ಉಭಯ ತಂಡಗಳ ಅಭಿಮಾನಿಗಳು ಮೈದಾನಕ್ಕಿಳಿದ್ದರಿಂದ ವಾಗ್ವಾದ ತಾರಕ್ಕೇರಿತು. ಪ್ರೇಕ್ಷಕರ ನಡುವಣ ಈ ಘರ್ಷಣೆಯು ಆ ಬಳಿಕ ಎರಡು ತಂಡಗಳ ಗ್ರಾಮಗಳಿಗೆ ಪಸರಿಸಿದೆ.
ಫುಟ್ಬಾಲ್ ಮೈದಾನದಲ್ಲಿ ಗಲಾಟೆಯ ವಿಚಾರ ಎರಡು ಗ್ರಾಮಗಳ ನಡುವೆ ಕಿಡಿ ಹೊತ್ತಿಸಿದ್ದು, ಪರಸ್ಪರ ದಾಳಿಗೆ ಮುಂದಾಗಿದ್ದಾರೆ. ಈ ದಾಳಿ ವೇಳೆ ಪತುರಾ ಗ್ರಾಮದಲ್ಲಿ ಒಂದು ಬೊಲೆರೋ ಮತ್ತು ಮೂರು ಮೋಟಾರ್ ಸೈಕಲ್‌ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇದರಿಂದ ಗ್ರಾಮದಲ್ಲಿ ಮತ್ತಷ್ಟು ಉದ್ವಿಗ್ನತೆ ಉಂಟಾಗಿದೆ.
ಈ ಘರ್ಷಣೆಯಿಂದ ಪಾತುರ ನಿವಾಸಿ ವಿನಯ್ ಸಾಹು, ಕಾರ್ಮಿ ದೇವಿ ಮತ್ತು ಕಿಂಡಿರ್ಕೇಲ ನಿವಾಸಿ ಶೇಖ್ ಬೆಲಾಲ್ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ರೆಫರಲ್ ಆಸ್ಪತ್ರೆ ಬಾಸಿಯಾಕ್ಕೆ ಕರೆಕೊಂಡು ಹೋದರು. ಅಲ್ಲಿಂದ ಶೇಖ್ ಬೆಲಾಲ್ ಮತ್ತು ವಿನಯ್ ಅವರನ್ನು ಉತ್ತಮ ಚಿಕಿತ್ಸೆಗಾಗಿ ರಿಮ್ಸ್ ರಾಂಚಿಗೆ ಕಳುಹಿಸಲಾಗಿದೆ.
ಇನ್ನು ಗುಂಪು ಘರ್ಷಣೆಯಲ್ಲಿ ಸಿಲುಕಿದ್ದ ಘಘರ ಬ್ಲಾಕ್ನ ಬಾಳೆ ತೋಟದ ನಿರ್ದೇಶಕ ಲೋಕೇಶ್ ಪುಟ್ಟಸ್ವಾಮಿ ಮತ್ತು ಸಹವರ್ತಿ ಎಂ ದೇವ ವಾಸು ಅವರನ್ನು ಆಕ್ರೋಶಿತ ಗುಂಪು ಹತ್ಯೆ ಮಾಡಿದೆ. ತೀಕ್ಷ್ಣವಾದ ಆಯುಧಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದ್ದು, ಕೊಲೆಗಡುಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಬಾಸಿಯಾ ಠಾಣಾ ವ್ಯಾಪ್ತಿಯ ಈ ಎರಡು ಗ್ರಾಮಗಳು ಸಹಜ ಸ್ಥಿತಿ ಬಂದಿದ್ದು, ಯಾವಾಗ ಬೇಕಾದರೂ ಮತ್ತೆ ಗಲಭೆ ಉಂಟಾಗುವ ಭಯದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ಪೆಟ್ರೋಲ್, ಡಿಸೇಲ್ ಹಾಕಬೇಕಿಲ್ಲ, ಚಾರ್ಜ್ ಕೂಡ ಮಾಡಬೇಕಿಲ್ಲ: ಇದು ಮಾರುತಿ ಸುಜುಕಿ ಹೊಸ ಕಾರು
ಇದನ್ನೂ ಓದಿ: Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!
ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!
Published On - 10:30 pm, Wed, 25 August 21