ತುಮಕೂರು: ತರಕಾರಿ ಮಾರಿ ಮನೆಗೆ ಹೋಗುತ್ತಿದ್ದ ರೈತನನ್ನು ಅಡ್ಡಗಟ್ಟಿ 15 ಸಾವಿರ ರೂ. ಹಣ ಹಾಗೂ 2 ಮೊಬೈಲ್​ ದೋಚಿದ ಕಳ್ಳರು

ಜಾಕ್​ ನೀಡುವಂತೆ ಕೇಳಿದ ಕಳ್ಳರ ಮಾತನ್ನು ನಂಬಿ ರಾಮಚಂದ್ರ ಕಾರು ನಿಲ್ಲಿಸಿದ್ದಾರೆ. ಆದರೆ, ತಕ್ಷಣವೇ ಮಾರಕಾಸ್ತ್ರ ತೋರಿಸಿ, ಬೆದರಿಸಿದ ಕಳ್ಳರು ಅವರ ಬಳಿಯಿದ್ದ 15 ಸಾವಿರ ರೂಪಾಯಿ ಹಣ ಹಾಗೂ ಎರಡು ಮೊಬೈಲ್​ ಫೋನ್​ಗಳನ್ನು ದೋಚಿ ಪರಾರಿಯಾಗಿದ್ದಾರೆ.

ತುಮಕೂರು: ತರಕಾರಿ ಮಾರಿ ಮನೆಗೆ ಹೋಗುತ್ತಿದ್ದ ರೈತನನ್ನು ಅಡ್ಡಗಟ್ಟಿ 15 ಸಾವಿರ ರೂ. ಹಣ ಹಾಗೂ 2 ಮೊಬೈಲ್​ ದೋಚಿದ ಕಳ್ಳರು
ದರೋಡೆ (ಸಾಂಕೇತಿಕ ಚಿತ್ರ)

ತುಮಕೂರು: ಕಳೆದ ಕೆಲ ದಿನಗಳಿಂದ ದರೋಡೆ, ಸುಲಿಗೆ ಪ್ರಕರಣಗಳು ನಿರಂತರವಾಗಿ ಘಟಿಸುತ್ತಿದ್ದು, ಇದೀಗ ತುಮಕೂರಿನಲ್ಲಿ ರೈತರೊಬ್ಬರನ್ನು ಅಡ್ಡಗಟ್ಟಿದ ಪುಂಡರ ಗುಂಪು ಮಾರಕಾಸ್ತ್ರಗಳನ್ನು ತೋರಿಸಿ 15 ಸಾವಿರ ರೂಪಾಯಿ ನಗದು ಹಾಗೂ ಎರಡು ಮೊಬೈಲ್​ ಫೋನ್​ಗಳನ್ನು ದೋಚಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ಬಿಟ್ಟಗೊಂಡನಹಳ್ಳಿ ಗೇಟ್​ ಬಳಿ ಈ ದುಷ್ಕೃತ್ಯ ಸಂಭವಿಸಿದ್ದು, ರೈತ ರಾಮಚಂದ್ರ‌ ಎಂಬುವವರು ಹಣ ಮತ್ತು ಮೊಬೈಲ್​ ಕಳೆದುಕೊಂಡಿದ್ದಾರೆ.

ತುಮಕೂರು ಮಾರುಕಟ್ಟೆಯಲ್ಲಿ ತರಕಾರಿ ಮಾರಿ ಅದರಿಂದ ಬಂದ 15 ಸಾವಿರ ರೂಪಾಯಿ ಹಣದೊಂದಿಗೆ ರೈತ ರಾಮಚಂದ್ರ‌ ಮನೆಗೆ ಹೋಗುತ್ತಿದ್ದರು. ತರಕಾರಿ ಮಾರಲೆಂದು ಕಾರು ತೆಗೆದುಕೊಂಡು ಹೋಗಿದ್ದ ಅವರನ್ನು ವಾಪಾಸು ಬರುವಾಗ ಅಡ್ಡಗಟ್ಟಿದ ಕಳ್ಳರು ಕಾರ್​ ನಿಲ್ಲಿಸಿದಾಗ ಜಾಕ್​ ನೀಡುವಂತೆ ಕೇಳಿದ್ದಾರೆ. ಅವರ ಮಾತನ್ನು ನಂಬಿದ ರಾಮಚಂದ್ರ ಸಹಾಯಕ್ಕೆಂದು ಕಾರು ನಿಲ್ಲಿಸಿದ್ದಾರೆ. ಆದರೆ, ತಕ್ಷಣವೇ ಮಾರಕಾಸ್ತ್ರ ತೋರಿಸಿ, ಬೆದರಿಸಿದ ಕಳ್ಳರು ಅವರ ಬಳಿಯಿದ್ದ 15 ಸಾವಿರ ರೂಪಾಯಿ ಹಣ ಹಾಗೂ ಎರಡು ಮೊಬೈಲ್​ ಫೋನ್​ಗಳನ್ನು ದೋಚಿ ಪರಾರಿಯಾಗಿದ್ದಾರೆ.

ಜಾಕ್​ ನೀಡಲೆಂದು ಕಾರು ನಿಲ್ಲಿಸಿ ಹಣ ಹಾಗೂ ಮೊಬೈಲ್​ ಫೋನ್​ಗಳನ್ನು ಕಳೆದುಕೊಂಡ ರೈತ ರಾಮಚಂದ್ರ ಕೂಡಲೇ ಸಿ‌.ಎಸ್.ಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ. ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ ಇತ್ತೀಚೆಗೆ ಪುಂಡ ಪೋಕರಿಗಳ ಹಾವಳಿ ಜಾಸ್ತಿಯಾಗಿದ್ದು, ರಸ್ತೆಯಲ್ಲಿ ಓಡಾಡುವುದಕ್ಕೂ ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಂಚು ಹಾಕಿ ಅಡ್ಡಗಟ್ಟುವ ಕಳ್ಳರು ಮಾರಕಾಸ್ತ್ರಗಳನ್ನು ತೋರಿಸಿದರೆ ಜೀವ ಭಯದಿಂದ ಕೈಯಲ್ಲಿರುವುದನ್ನೆಲ್ಲಾ ಕೊಡಬೇಕಾಗುತ್ತದೆ. ಆ ಸಂದರ್ಭದಲ್ಲಿ ಯಾರನ್ನು ಸಹಾಯಕ್ಕೆ ಕರೆಯಲು ಸಾಧ್ಯ? ಇದಕ್ಕೆ ಪರಿಹಾರವೆಂದರೆ ಪೊಲೀಸರೇ ಸೂಕ್ತ ಭದ್ರತೆ ಒದಗಿಸಿ ಪುಂಡರ ಹೆಡೆಮುರಿ ಕಟ್ಟಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:
ಹಾಸನ: ಗ್ರಾನೈಟ್​ ಉದ್ಯಮಿಯ ಮನೆ ಬಾಗಿಲು ಮುರಿದು 3 ಕೆಜಿ ಚಿನ್ನ, 24 ಲಕ್ಷ ರೂಪಾಯಿ ಹಣ ಕಳವು 

Japan: ಸ್ತ್ರೀಯರ ಒಳಉಡುಪುಗಳ ಕಳ್ಳ ಅರೆಸ್ಟ್; ಮನೆಯಲ್ಲಿ ಇದ್ದ ಅಂಡರ್​​ವೇರ್​​ಗಳ ಸಂಖ್ಯೆ​ ನೋಡಿ ಪೊಲೀಸರೇ ಕಂಗಾಲು

(Robbers stolen Rs 15 thousand and 2 mobile phones from a farmer in Tumakuru)

Click on your DTH Provider to Add TV9 Kannada