Japan: ಸ್ತ್ರೀಯರ ಒಳಉಡುಪುಗಳ ಕಳ್ಳ ಅರೆಸ್ಟ್; ಮನೆಯಲ್ಲಿ ಇದ್ದ ಅಂಡರ್​​ವೇರ್​​ಗಳ ಸಂಖ್ಯೆ​ ನೋಡಿ ಪೊಲೀಸರೇ ಕಂಗಾಲು

ಹೀಗೆ ಒಳಉಡುಪುಗಳ ಕಳ್ಳನ ಬಗ್ಗೆ ಮೊದಲು ಪೊಲೀಸರಿಗೆ ತಿಳಿಸಿದ್ದು 21ವರ್ಷದ ಕಾಲೇಜು ವಿದ್ಯಾರ್ಥಿನಿ. ನಂತರ ಹೆಚ್ಚಿನ ವಿಚಾರಣೆ ಮಾಡಿದಾಗ ಮತ್ತೆ ಮೂರ್ನಾಲ್ಕು ಮಹಿಳೆಯರು ಇದೇ ದೂರು ನೀಡಿದ್ದರು.

Japan: ಸ್ತ್ರೀಯರ ಒಳಉಡುಪುಗಳ ಕಳ್ಳ ಅರೆಸ್ಟ್; ಮನೆಯಲ್ಲಿ ಇದ್ದ ಅಂಡರ್​​ವೇರ್​​ಗಳ ಸಂಖ್ಯೆ​ ನೋಡಿ ಪೊಲೀಸರೇ ಕಂಗಾಲು
ಜಪಾನ್​ ವ್ಯಕ್ತಿ ಕಳವು ಮಾಡಿರುವ ಮಹಿಳೆಯರ ಒಳಉಡುಪುಗಳು
Follow us
TV9 Web
| Updated By: Lakshmi Hegde

Updated on:Sep 08, 2021 | 9:33 AM

ಹಣ, ಬೆಲೆಬಾಳುವ ವಸ್ತುಗಳನ್ನು ಕದ್ದು ಅರೆಸ್ಟ್​ ಆಗೋದು ತೀರ ಸಾಮಾನ್ಯ. ಆದರೆ ಇಲ್ಲೊಬ್ಬ ವ್ಯಕ್ತಿ ಮಹಿಳೆಯರ ಒಳಉಡುಪು(Underwear)ಗಳನ್ನು ಕದ್ದು ಬಂಧಿತನಾಗಿದ್ದಾನೆ. ಅವನು ಕದ್ದಿದ್ದು ಒಂದೆರಡು ಒಳಉಡುಪಲ್ಲ. 700ಕ್ಕೂ ಹೆಚ್ಚು ಒಳಉಡುಪುಗಳು. ಈ ವ್ಯಕ್ತಿಯ ಅಂಡರ್​ವೇರ್​ ಕಳುವಿನ ಖಯಾಲಿ ಕಂಡು ಪೊಲೀಸರೇ ಶಾಕ್​ ಆಗಿದ್ದಾರೆ. ಅಂದ ಹಾಗೇ, ಇದು ನಡೆದದ್ದು ಜಪಾನ್ (Japan)​​ನಲ್ಲಿ. 56ವರ್ಷದ ಟೆಟ್ಸುವೋ ಉರಾಟಾ ಬಂಧಿತ ವ್ಯಕ್ತಿ. ದಕ್ಷಿಣ ಜಪಾನ್​ನ ಬೆಪ್ಪು ನಗರದ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದ ಉರಾಟಾ, ತನ್ನ ಮನೆಯಲ್ಲಿ ಹೀಗೆ ಒಳಉಡುಪುಗಳನ್ನು ದೊಡ್ಡಮಟ್ಟದಲ್ಲಿ ಸಂಗ್ರಹ ಮಾಡಿದ್ದ ಎಂದು ಅಲ್ಲಿನ ಅಬೆಮಾ ಟಿವಿ ವರದಿ ಮಾಡಿದೆ.  

ಹೀಗೆ ಒಳಉಡುಪುಗಳ ಕಳ್ಳನ ಬಗ್ಗೆ ಮೊದಲು ಪೊಲೀಸರಿಗೆ ತಿಳಿಸಿದ್ದು 21ವರ್ಷದ ಕಾಲೇಜು ವಿದ್ಯಾರ್ಥಿನಿ. ತಾನು ಆಗಸ್ಟ್​ 24ರಂದು ಸಾರ್ವಜನಿಕ ಬಟ್ಟೆತೊಳೆಯುವ ಯಂತ್ರ (laundromat)ದ ಮೂಲಕ ನನ್ನ ಬಟ್ಟೆ ಒಗೆದಿದ್ದೆ. ಅಂದು ನನ್ನ ಆರು ಜತೆ ಒಳಉಡುಪುಗಳು ಕಳವಾಗಿವೆ ಎಂದು ಆಕೆ ದೂರು ನೀಡಿದ್ದಳು. ಅಷ್ಟೇ ಅಲ್ಲ ಉರಾಟಾ ಹೆಸರನ್ನೂ ಉಲ್ಲೇಖಿಸಿದ್ದಳು.  ಅದಾದ ಮೇಲೆ ಮತ್ತೆ ಮೂರ್ನಾಲ್ಕು ಮಹಿಳೆಯರು ಇದೇ ತರಹದ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯ ಬೆಪ್ಪು ನಗರ ಪೊಲೀಸರು ಉರಾಟಾ ಅವರ ಅಪಾರ್ಟ್​ಮೆಂಟ್​ಗೆ ತೆರಳಿ ಅಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 730 ಒಳುಡುಪುಗಳು ಪತ್ತೆಯಾಗಿವೆ.

ತಾನು ಬಂಧಿತನಾಗುತ್ತಿದ್ದಂತೆ ಉರಾಟಾ ಒಳುಡುಪುಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ ಪೊಲೀಸರಂತೂ ಶಾಕ್​ಗೆ ಒಳಗಾಗಿದ್ದಾರೆ. ಜಪಾನ್​ನಲ್ಲಿ ಒಳಉಡುಪು ಕದ್ದಿರುವವರನ್ನು ಬಂಧಿಸುತ್ತಿರುವುದು ಇದೇ ಮೊದಲಲ್ಲ, ಆದರೆ ಇಷ್ಟೆಲ್ಲ ಪ್ರಮಾಣದ ಒಳಉಡುಪುಗಳನ್ನು ನಾವು ಇದುವರೆಗೆ ಜಪ್ತಿ ಮಾಡಿರಲಿಲ್ಲ ಎಂದಿದ್ದಾರೆ. ಈತ ಕದ್ದಿದ್ದ ಒಳಉಡುಪುಗಳ ಫೋಟೋ, ವಿಡಿಯೋಗಳು ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿವೆ.

ಮೊದಲೂ ನಡೆದಿತ್ತು ಜಪಾನ್​ನಲ್ಲಿ ಮಾರ್ಚ್​ ತಿಂಗಳಲ್ಲಿ 30ವರ್ಷದ ಎಲೆಕ್ಟ್ರಿಷಿಯನ್​ ಒಬ್ಬ ಹೀಗೆ ಒಳಉಡುಪು ಕದ್ದು ಬಂಧಿತನಾಗಿದ್ದ. ಆತನಿಂದ 400ಕ್ಕೂ ಹೆಚ್ಚು ಒಳಉಡುಪುಗಳು ಮತ್ತು ಈಜುಡುಗೆ (Swimsuits)ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆತ ಸಾಗಾ ನಗರದ ನಿವಾಸಿಯಾಗಿದ್ದ.

(laundromat-ಹೀಗಂದರೆ ಬಟ್ಟೆತೊಳೆಯುವ ಯಂತ್ರ. ಸಾರ್ವಜನಿಕರ ಬಳಕೆಗೆ ಇರುತ್ತದೆ. ಕಾಯಿನ್​ ಹಾಕುವ ಮೂಲಕ ಬಟ್ಟೆ ತೊಳೆದು, ಒಣಗಿಸಿಕೊಳ್ಳಬಹುದು. ವಿದೇಶಗಳಲ್ಲಿ ಇದರ ಬಳಕೆ ಜಾಸ್ತಿ. ಅಂದ್ರೆ ಲಾಂಡ್ರಿ ತರಹದ್ದೇ ವ್ಯವಸ್ಥೆ)

(Man Arrested In Japan For Allegedly Stealing Women’s Underwear)

Published On - 9:14 am, Wed, 8 September 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್