Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು

TV9 Digital Desk

| Edited By: Zahir Yusuf

Updated on: Sep 09, 2021 | 7:23 PM

Crime News In Kannada: ಗೌರವಕ್ಕೆ ಧಕ್ಕೆ ಬರುವ ಭಯದಲ್ಲಿ ವ್ಯಕ್ತಿಯು ಆರಂಭದಲ್ಲೇ ತನ್ನ ಕಾರು ಬೈಕ್​ಗಳನ್ನು ಮಾರಾಟ ಮಾಡಿ 2 ಲಕ್ಷ 60 ಸಾವಿರ ರೂ. ಪಾವತಿಸಿದ್ದಾನೆ.

Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು
ಸಾಂದರ್ಭಿಕ ಚಿತ್ರ
Follow us

ಸಾಮಾನ್ಯವಾಗಿ ಅನೈತಿಕ ಸಂಬಂಧ ಪ್ರಕರಣಗಳು ಕೊಲೆಯಲ್ಲೋ ಅಥವಾ ಇನ್ಯಾವುದೇ ರೀತಿಯಲ್ಲೋ ಅಂತ್ಯವಾಗಿರುತ್ತದೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ತಾಯಿ ಲೀಡ್ ರೋಲ್ ಆದರೆ, ಮಗಳೇ ಖಳ ನಾಯಕಿ ಎನ್ನಬಹುದು. ಹೌದು, ಮಹಾರಾಷ್ಟ್ರದ ಪುಣೆಯ ಮಹಿಳೆಯೊಬ್ಬಳು ಅನೈತಿಕ ಸಂಬಂಧ ಹೊಂದಿದ್ದಳು. ಈ ಸಂಬಂಧದ ಬಗ್ಗೆ ಮಗಳಿಗೆ ಸಂಶಯ ಮೂಡಿತ್ತು. ಹಾಗಾಗಿ ತಾಯಿಯ ವಾಟ್ಸ್​ಆ್ಯಪ್​ ಅನ್ನು ಹ್ಯಾಕ್ ಮಾಡಲು ಮುಂದಾದಳು. ಇದಕ್ಕಾಗಿ ತನ್ನ ಗೆಳೆಯನ ಸಹಾಯ ಪಡೆದ ಯುವತಿ ತಾಯಿಯ ವಾಟ್ಸ್​ಆ್ಯಪ್ ಮಾಹಿತಿಗಳನ್ನು ಕಲೆಹಾಕಿದ್ದಳು. ವಾಟ್ಸ್​ಆ್ಯಪ್​ ಸಂದೇಶಗಳ ಮಾಹಿತಿಯಂತೆ ತಾಯಿಗೆ ಅನೈತಿಕ ಸಂಬಂಧ ಇರುವುದು ಮಗಳು ದೃಢಪಡಿಸಿಕೊಂಡಳು.

ಆದರೆ ಇದೇ ವೇಳೆ  ತಾಯಿಯ ವಾಟ್ಸ್​ಆ್ಯಪ್ ಚಾಟ್​​ನಲ್ಲಿ ವ್ಯಕ್ತಿಯೊಂದಿಗಿನ ಕೆಲ ನಗ್ನ ಫೋಟೋ ಹಾಗೂ ವಿಡಿಯೋಗಳು ಸಿಕ್ಕಿದೆ. ಇದನ್ನು ಡೌನ್​ಲೋಡ್ ಮಾಡಿಕೊಂಡ ಮಗಳು ತಾಯಿಯೊಂದಿಗೆ ಎಲ್ಲಾ ವಿಚಾರಗಳನ್ನು ಮುಚ್ಚಿಟ್ಟಿದ್ದಾಳೆ. ಅಲ್ಲದೆ ತಾಯಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಟಾರ್ಗೆಟ್ ಮಾಡಿದ್ದಾಳೆ. ತನ್ನ ಪ್ರಿಯಕರನ ಜೊತೆಗೂಡಿ ತಾಯಿಯ ಬಾಯ್​ ಫ್ರೆಂಡ್​ ಅನ್ನು ಸಂಪರ್ಕಿಸಿದ ಯುವತಿ 15 ಲಕ್ಷ ರೂ. ಬೇಡಿಕೆಯಿಟ್ಟಿದ್ದಾಳೆ.

ಒಂದು ವೇಳೆ ಹಣ ನೀಡದಿದ್ದರೆ ಫೋಟೋಗಳನ್ನುಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ಎಲ್ಲಾ ಕೆಲಸಗಳನ್ನು ಯುವತಿ ತನ್ನ ಪ್ರಿಯಕರನಿಂದ ಮಾಡಿಸುತ್ತಿದ್ದಳು. ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಮಾರಾಟ ಮಾಡುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಆ ವ್ಯಕ್ತಿಗೆ ಫೋಟೋ ಹಾಗೂ ವಿಡಿಯೋ ತೋರಿಸಿದ ಯುವತಿಯ ಪ್ರಿಯಕರ 15 ಲಕ್ಷ ರೂ. ಹಾಗೂ ಪ್ರತಿ ತಿಂಗಳು ಒಂದು ಲಕ್ಷ ನೀಡುವಂತೆ ಬೆದರಿಕೆ ಹಾಕಿದ್ದನು.

ಅತ್ತ ತನ್ನ ಗೌರವಕ್ಕೆ ಧಕ್ಕೆ ಬರುವ ಭಯದಲ್ಲಿ ವ್ಯಕ್ತಿಯು ಆರಂಭದಲ್ಲೇ ತನ್ನ ಕಾರು ಬೈಕ್​ಗಳನ್ನು ಮಾರಾಟ ಮಾಡಿ 2 ಲಕ್ಷ 60 ಸಾವಿರ ರೂ. ಅನ್ನು ಪಾವತಿಸಿದ್ದಾನೆ. ಇದಾಗ್ಯೂ ಹೆಚ್ಚಿನ ಮೊತ್ತಕ್ಕಾಗಿ ಪದೇ ಪದೇ ಬೇಡಿಕೆಯಿಟ್ಟಿದ್ದರ ಪರಿಣಾಮ ಆತ ಪೊಲೀಸರ ಮೊರೆ ಹೋಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಲು ಪ್ಲ್ಯಾನ್ ಮಾಡಿದರು. ಪೊಲೀಸರ ಸಲಹೆಯಂತೆ ಬ್ಲ್ಯಾಕ್ ಮೇಲರ್​ಗೆ ಕರೆ ಮಾಡಿ ಹಣ ನೀಡುವುದಾಗಿ ಕರೆಸಿಕೊಂಡಿದ್ದರು.

ಈ ವೇಳೆ ಹಣ ಪಡೆಯಲು ಬಂದ ಆರೋಪಿ ಮಿಥುನ್ ಗಾಯಕ್ವಾಡ್ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಇಡೀ ಪ್ರಕರಣದ ಹಿಂದಿರುವುದು ತನ್ನ ಪ್ರೇಯಸಿ ಎಂದು ಬಾಯಿ ಬಿಟ್ಟಿದ್ದಾನೆ. ಆಕೆ ಯಾರೆಂದು ಅನ್ವೇಷಿಸಿದಾಗ ಪ್ರಕರಣವು ದೂರುದಾರನ ಅನೈತಿಕ ಸಂಬಂಧದ ವಿಚಾರಕ್ಕೆ ಬಂದು ನಿಂತಿದೆ. ಅದರಂತೆ ದೂರು ನೀಡಿದ ವ್ಯಕ್ತಿಗೆ ತಾನು ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಮಗಳೇ ತನ್ನನ್ನು ಬ್ಲ್ಯಾಕ್ ಮೇಲ್ ಮಾಡಿ ಹಣ ಪೀಕಿದ್ದಳು ಎಂಬುದು ಗೊತ್ತಾಗಿದೆ. ಇದೀಗ ಯುವತಿ ಹಾಗೂ ಪ್ರಿಯಕರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:  MS Dhoni: 3 ವಿಶ್ವಕಪ್​ ಮೇಲೆ ಬಿಸಿಸಿಐ ಕಣ್ಣು: ಟೀಮ್ ಇಂಡಿಯಾದ ಮುಂದಿನ ಕೋಚ್ ಧೋನಿ?

ಇದನ್ನೂ ಓದಿ: ವಿಚ್ಛೇದಿತ ಮಹಿಳೆಯರನ್ನು ಪ್ರೀತಿಸಿ ಮದುವೆಯಾದ ಭಾರತೀಯ ಕ್ರಿಕೆಟಿಗರು ಇವರೇ

ಇದನ್ನೂ ಓದಿ: Shardul Thakur: ಮುಂಬೈ ಲೋಕಲ್ ಟ್ರೈನ್ ಹುಡುಗ ಇದೀಗ ಟೀಮ್ ಇಂಡಿಯಾ ಸೆನ್ಸೇಷನ್

ಇದನ್ನೂ ಓದಿ: IPL 2022: ಐಪಿಎಲ್​ನ 2 ಹೊಸ ತಂಡಗಳಿಗಾಗಿ 6 ನಗರಗಳ ಆಯ್ಕೆ

(Maharashtra Pune Crime as daughter demands ransom from her mother’s lover)

ತಾಜಾ ಸುದ್ದಿ

Related Stories

Click on your DTH Provider to Add TV9 Kannada