- Kannada News Photo gallery Cricket photos IPL 2022: BCCI shortlists six cities for two new franchises for IPL 15
IPL 2022: ಐಪಿಎಲ್ನ 2 ಹೊಸ ತಂಡಗಳಿಗಾಗಿ 6 ನಗರಗಳ ಆಯ್ಕೆ
IPL 2022: ಹೊಸ ಎರಡು ತಂಡಗಳ ಹರಾಜಿಗಾಗಿ ಬಿಸಿಸಿಐ ಮೂಲ ಬೆಲೆ ನಿಗದಿಪಡಿಸಿದ್ದು, ಅದರಂತೆ ಒಂದು ತಂಡದ ಬೆಲೆ 2 ಸಾವಿರ ರೂ. ಕೋಟಿ ಆಗಿರಲಿದೆ. ಅದರಂತೆ ಎರಡು ತಂಡಗಳ ಹರಾಜಿನ ಮೂಲಕ ಬಿಸಿಸಿಐ ಬರೋಬ್ಬರಿ 5 ಸಾವಿರ ರೂ. ಕೋಟಿ ಆದಾಯಗಳಿಸುವ ಇರಾದೆಯಲ್ಲಿದೆ.
Updated on:Sep 06, 2021 | 6:00 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ನ ದ್ವಿತಿಯಾರ್ಧ ರಂಗೇರಲು ಇನ್ನು ವಾರಗಳು ಮಾತ್ರ ಉಳಿದಿವೆ. ಇದರ ಬೆನ್ನಲ್ಲೇ ಇದೀಗ ಬಿಸಿಸಿಐ ಮುಂದಿನ ಸೀಸನ್ಗಾಗಿ ತಯಾರಿಗಳನ್ನು ಆರಂಭಿಸಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಹೊಸ ತಂಡಗಳ ಸೇರ್ಪಡೆಗೆ ಸಿದ್ಧತೆಗಳನ್ನು ಶುರು ಮಾಡಿದೆ.

ಈ ಹಿಂದೆಯೇ ಬಿಸಿಸಿಐ ತಿಳಿಸಿದಂತೆ, 15ನೇ ಸೀಸನ್ ಐಪಿಎಲ್ನಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿದೆ. ಪ್ರಸ್ತುತ ಇರುವ 8 ತಂಡಗಳೊಂದಿಗೆ ಮತ್ತೆರಡು ತಂಡಗಳು ಸೇರ್ಪಡೆಯಾಗಲಿದೆ. ಆದರೆ ಆ ಎರಡು ಹೊಸ ತಂಡಗಳು ಯಾವ ನಗರವನ್ನು ಪ್ರತಿನಿಧಿಸಲಿದೆ ಎಂಬುದನ್ನು ಇದುವರೆಗೆ ಸ್ಪಷ್ಟಪಡಿಸಿರಲಿಲ್ಲ.

ಇದೀಗ ಬಿಸಿಸಿಐ ಮೂಲಗಳ ಮಾಹಿತಿ ಪ್ರಕಾರ, 2 ತಂಡಗಳ ಫ್ರಾಂಚೈಸಿಗಾಗಿ ಒಟ್ಟು 6 ನಗರಗಳನ್ನು ಆಯ್ಕೆ ಮಾಡಲಾಗಿದೆ. ಈ ನಗರಗಳ ಸ್ಟೇಡಿಯಂಗಳನ್ನು ಕೇಂದ್ರೀಕರಿಸಿ ತಂಡಗಳ ಬಿಡ್ಡಿಂಗ್ ನಡೆಯಲಿದೆ. ಅದರಂತೆ ಹೊಸ 2 ತಂಡಗಳ ಕೇಂದ್ರಗಳಾಗಿ ಲಕ್ನೋ, ಅಹಮದಾಬಾದ್, ರಾಂಚಿ, ಕಟಕ್, ಗುವಾಹಟಿ ಮತ್ತು ಧರ್ಮಶಾಲಾ ನಗರಗಳ ಸ್ಟೇಡಿಯಂಗಳನ್ನು ಆಯ್ಕೆ ಮಾಡಲಾಗಿದೆ.

ಮಾಧ್ಯಮ ವರದಿಯ ಪ್ರಕಾರ, ಬಿಸಿಸಿಐ ಹಿಂದಿ ಮಾತನಾಡುವ ಪ್ರದೇಶಗಳ ಸ್ಟೇಡಿಯಂಗಳನ್ನು ಆಯ್ಕೆ ಮಾಡಿಕೊಂಡಿದೆ. ಏಕೆಂದರೆ ಕಳೆದ ವರ್ಷ ಶೇಕಡಾ 65 ರಷ್ಟು ಐಪಿಎಲ್ ವೀಕ್ಷಕರು ಹಿಂದಿ ಮಾತನಾಡುವ ಪ್ರದೇಶಗಳ ಮೂಲದವರಾಗಿದ್ದರು. ಹೀಗಾಗಿ ಹೊಸ ತಂಡಗಳ ಆಯ್ಕೆಯಲ್ಲಿ ದಕ್ಷಿಣ ರಾಜ್ಯದ ನಗರಗಳನ್ನು ಕೈ ಬಿಡಲಾಗಿದೆ ಎಂದು ತಿಳಿಸಲಾಗಿದೆ.

ಲಕ್ನೋ, ರಾಂಚಿ, ಧರ್ಮಶಾಲಾ ನಗರಗಳು ಹೆಚ್ಚು ಹಿಂದಿ ಮಾತನಾಡುವ ಪ್ರದೇಶಗಳಾಗಿದ್ದು, ಹೀಗಾಗಿ ಇದೇ ನಗರಗಳ ಸ್ಟೇಡಿಯಂಗಳನ್ನು ಆಯ್ಕೆ ಮಾಡಿ ಐಪಿಎಲ್ ವೀಕ್ಷಕರ ಹಾಗೂ ಪ್ರೇಕ್ಷಕರನ್ನು ಹೆಚ್ಚಿಸಲು ಬಿಸಿಸಿಐ ಪ್ಲ್ಯಾನ್ ಮಾಡಿಕೊಂಡಿದೆ ಎಂದು ಹೇಳಲಾಗಿದೆ. ಇನ್ನು ಎರಡು ಹೊಸ ತಂಡಗಳ ಹರಾಜು ದಿನಾಂಕವನ್ನು ಬಿಸಿಸಿಐ ಇನ್ನೂ ಘೋಷಿಸಿಲ್ಲ.

ಇದಾಗ್ಯೂ ಹೊಸ ಎರಡು ತಂಡಗಳ ಹರಾಜಿಗಾಗಿ ಬಿಸಿಸಿಐ ಮೂಲ ಬೆಲೆ ನಿಗದಿಪಡಿಸಿದ್ದು, ಅದರಂತೆ ಒಂದು ತಂಡದ ಬೆಲೆ 2 ಸಾವಿರ ರೂ. ಕೋಟಿ ಆಗಿರಲಿದೆ. ಅದರಂತೆ ಎರಡು ತಂಡಗಳ ಹರಾಜಿನ ಮೂಲಕ ಬಿಸಿಸಿಐ ಬರೋಬ್ಬರಿ 5 ಸಾವಿರ ರೂ. ಕೋಟಿ ಆದಾಯಗಳಿಸುವ ಇರಾದೆಯಲ್ಲಿದೆ.

ಐಪಿಎಲ್ ದ್ವಿತಿಯಾರ್ಧ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮೊದಲ ಪಂದ್ಯದಲ್ಲಿಮುಂಬೈ ಇಂಡಿಯನ್ಸ್ ಹಾಗೂ ಸಿಎಸ್ಕೆ ಮುಖಾಮುಖಿಯಾಗಲಿದ್ದು, ಇದರೊಂದಿಗೆ ಉಳಿದ 31 ಪಂದ್ಯಗಳಿಗೆ ಚಾಲನೆ ದೊರೆಯಲಿದೆ.
Published On - 5:59 pm, Mon, 6 September 21




