- Kannada News Photo gallery Cricket photos Indian T20 World Cup team selection Toss up between spinner
T20 World Cup 2021: ಟಿ20 ವಿಶ್ವಕಪ್ ತಂಡಕ್ಕೆ ಈ 14 ಮಂದಿ ಆಯ್ಕೆ ಬಹುತೇಕ ಖಚಿತ
Indian T20 World Cup team: ಕೆಲ ಮೂಲಗಳ ಪ್ರಕಾರ 14 ಆಟಗಾರರ ಆಯ್ಕೆ ಖಚಿತವಾಗಿದ್ದು, ಅದರಂತೆ ಆರಂಭಿಕರಾಗಿ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾಆಯ್ಕೆಯಾಗಲಿದ್ದಾರೆ.
Updated on: Sep 07, 2021 | 3:33 PM

ಇನ್ನು ಟಿ20 ಕ್ರಿಕೆಟ್ನ ಟಾಪ್ 8 ರ್ಯಾಂಕಿಂಗ್ ತಂಡಗಳು ಈಗಾಗಲೇ ನೇರವಾಗಿ ಸೂಪರ್ 12 ಹಂತಕ್ಕೇರಿದೆ. ಈ ತಂಡಗಳೆಂದರೆ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ. ಈ ತಂಡಗಳ ಜೊತೆ ಅರ್ಹತಾ ಸುತ್ತಿನಿಂದ 4 ತಂಡಗಳು ಸೇರ್ಪಡೆಯಾಗಲಿದ್ದು, ಆ ಬಳಿಕ ಸೂಪರ್ 12 ಪಂದ್ಯಗಳು ಶುರುವಾಗಲಿದೆ.

ವಿಶ್ವಕಪ್ ಟ್ರೋಪಿ

ಕೆಲ ಮೂಲಗಳ ಪ್ರಕಾರ 14 ಆಟಗಾರರ ಆಯ್ಕೆ ಖಚಿತವಾಗಿದ್ದು, ಅದರಂತೆ ಆರಂಭಿಕರಾಗಿ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾಆಯ್ಕೆಯಾಗಲಿದ್ದಾರೆ. ಇನ್ನು ರಿಷಭ್ ಪಂತ್ ಹಾಗೂ ಇಶಾನ್ ಕಿಶನ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಸ್ಥಾನ ಪಡೆಯಲಿದ್ದಾರೆ. ಅದೇ ರೀತಿ ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಹಾಗೂ ಸೂರ್ಯಕುಮಾರ್ ಯಾದವ್ ಸ್ಥಾನ ಖಚಿತ. ಜೊತೆಗೆ ಶೇಯಸ್ ಅಯ್ಯರ್ ಸಹ ತಂಡದಲ್ಲಿ ಅವಕಾಶ ಪಡೆಯಲಿದ್ದಾರೆ.

ಆಲ್ರೌಂಡರ್ಗಳಾಗಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಹಾಗೂ ಶಾರ್ದೂಲ್ ಠಾಕೂರ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಸ್ಪಿನ್ನರ್ ಆಗಿ ಯಜುವೇಂದ್ರ ಚಹಲ್ ತಂಡದಲ್ಲಿರಲಿದ್ದಾರೆ. ಇನ್ನು ವೇಗಿಗಳಾಗಿ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ (ಸಂಪೂರ್ಣ ಫಿಟ್ ಆಗಿದ್ದರೆ) ವೇಗದ ಬೌಲಿಂಗ್ ವಿಭಾಗದಲ್ಲಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಇದಲ್ಲದೇ ಇಬ್ಬರೂ ವೇಗದ ಬೌಲರ್‌ಗಳಿಗೆ ತಂಡದಲ್ಲಿ ಸ್ಥಾನ ನೀಡುವ ಸಾಧ್ಯತೆ ಕೂಡ ಇದೆ. ಇದಕ್ಕಾಗಿ ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಟಿ ನಟರಾಜನ್, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ನಡುವೆ ಪೈಪೋಟಿ ಎಂದು ತಿಳಿದು ಬಂದಿದೆ. ಇನ್ನು ಮೂರನೇ ಆಲ್ರೌಂಡರ್ ಸ್ಥಾನಕ್ಕಾಗಿ ಅಕ್ಸರ್ ಪಟೇಲ್, ಕೃನಾಲ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ಆಯ್ಕೆದಾರರ ಪಟ್ಟಿಯಲ್ಲಿದ್ದಾರೆ.

ತಂಡದಲ್ಲಿ ಸ್ಥಾನ ಪಡೆಯುವ ಖಚಿತತೆ ಹೊಂದಿರುವ ಆಟಗಾರರು: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್ , ಇಶಾನ್ ಕಿಶನ್, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್




