Shardul Thakur: ಮುಂಬೈ ಲೋಕಲ್ ಟ್ರೈನ್ ಹುಡುಗ ಇದೀಗ ಟೀಮ್ ಇಂಡಿಯಾ ಸೆನ್ಸೇಷನ್

Team India: ಶಾರ್ದೂಲ್ ಇದುವರೆಗೆ ಭಾರತದ ಪರ 5 ಟೆಸ್ಟ್ , 15 ಏಕದಿನ ಮತ್ತು 21 ಟಿ20 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on: Sep 06, 2021 | 9:02 PM

ಶಾರ್ದೂಲ್ ಠಾಕೂರ್...ಈ ಹೆಸರು ಇದೀಗ ಎಲ್ಲರಿಗೂ ಚಿರಪರಿಚಿತ. ಅದರಲ್ಲೂ ಇಂಗ್ಲೆಂಡ್ ಪ್ರೇಮಿಗಳೂ ಕೂಡ ಈತನ ಆಲ್​ರೌಂಡರ್ ಪ್ರದರ್ಶನಕ್ಕೆ ಫಿದಾ ಆಗಿದ್ದಾರೆ. ಆದರೆ ನೆನಪಿರಲಿ..ಶಾರ್ದುಲ್ ಎಂಬ ಚಿರ ಯುವಕ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ್ದು 2017 ರಲ್ಲಿ ಎಂಬುದು ಅನೇಕರಿಗೆ ಗೊತ್ತಿಲ್ಲ. ಅಂದರೆ ನಾಲ್ಕು ವರ್ಷಗಳ ಬಳಿಕ ಶಾರ್ದೂಲ್ ಹೆಸರು ಚರ್ಚೆಯಾಗುತ್ತಿದೆ.

1 / 7
2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಶಾರ್ದೂಲ್ ಇದುವರೆಗೆ ಆಡಿದ್ದು ಕೇವಲ 5 ಟೆಸ್ಟ್ ಪಂದ್ಯಗಳನ್ನು ಎಂದರೆ ನಂಬಲೇಬೇಕು. ಹಲವು ಬಾರಿ ತಂಡದಲ್ಲಿ ಸ್ಥಾನ ಲಭಿಸಿದರೂ ಈ ಯುವ ಕ್ರಿಕೆಟಿಗನಿಗೆ ಆಡುವ ಬಳಗದಲ್ಲಿ ಅವಕಾಶ ದೊರೆತಿರಲಿಲ್ಲ. ಇನ್ನು ಕೆಲ ಬಾರಿ ಅವಕಾಶ ಲಭಿಸಿದರೂ ಗಾಯದ ಕಾರಣದಿಂದ ಹೊರಗುಳಿಯಬೇಕಾಗಿ ಬಂತು.

2 / 7
ಆದರೆ ಕಳೆದೊಂದು ವರ್ಷದಿಂದ ಸಿಕ್ಕ ಅವಕಾಶದಲ್ಲಿ ಮಿಂಚುವಲ್ಲಿ ಶಾರ್ದೂಲ್ ಯಶಸ್ವಿಯಾಗುತ್ತಿದ್ದಾರೆ. ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಶಾರ್ದೂಲ್ ಇದೀಗ ಒಂದಾರ್ಥದಲ್ಲಿ ಟೀಮ್ ಇಂಡಿಯಾದ ಖಾಯಂ ಸದಸ್ಯ ಎನ್ನಬಹುದು. ಇದೀಗ ಓವಲ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ದದ ನಾಲ್ಕನೇ ಟೆಸ್ಟ್‌ನಲ್ಲೂ ತಮ್ಮ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ.

3 / 7
 ಕೇವಲ 31 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಶಾರ್ದೂಲ್ ಟೀಮ್ ಇಂಡಿಯಾ ಪಾಲಿನ ಆಪತ್ಭಾಂಧವ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಟೆಸ್ಟ್​ನಲ್ಲಿ ಕಪಿಲ್ ದೇವ್ ನಂತರ ಅತಿ ವೇಗದ ಅರ್ಧಶತಕ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇನ್ನು ಎರಡನೇ ಇನಿಂಗ್ಸ್​ನಲ್ಲೂ ಅರ್ಧಶತಕ ಬಾರಿಸಿ ಬ್ಯಾಕ್ ಟು ಬ್ಯಾಕ್ ಹಾಫ್ ಸೆಂಚುರಿ ಸಿಡಿಸಿದ ಆಟಗಾರ ಎಂಬ ದಾಖಲೆಯ ಪಟ್ಟಿಗೆ ಸೇರ್ಪಡೆಯಾದರು.

4 / 7
ಇದೀಗ ಹೊಸ ಸೆನ್ಸೇಷನ್ ಸೃಷ್ಟಿಸಿರುವ ಶಾರ್ದೂಲ್ ಒಂದು ಕಾಲದಲ್ಲಿ ಓಡಾಡಲು ವಾಹನವಿಲ್ಲದೆ ಪರದಾಡಿದ್ದರು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ತನ್ನ ಅಭ್ಯಾಸಕ್ಕಾಗಿ ಪ್ರತಿ ದಿನ ಜನಜಂಗುಳಿಯಿಂದ ಕೂಡಿರುವ ಮುಂಬೈ ಲೋಕಲ್ ಟ್ರೈನ್​ನಲ್ಲೇ ಪ್ರಯಾಣಿಸುತ್ತಿದ್ದರು. ಹಲವು ಕಷ್ಟ ಕಾರ್ಪಣ್ಯಗಳನ್ನು ದಾಟಿ ಕ್ರಿಕೆಟ್ ಕೆರಿಯರ್ ಕಟ್ಟಿಕೊಂಡಿದ್ದ ಶಾರ್ದೂಲ್ ಟೀಮ್ ಇಂಡಿಯಾ ಪರ ಆಡಿದ ಬಳಿಕ ಕೂಡ ರೈಲಿನಲ್ಲೇ ಪ್ರಯಾಣಿಸಿದ್ದರು ಎಂಬುದು ವಿಶೇಷ.

5 / 7
ಹೌದು, 2018 ರಲ್ಲಿ ದಕ್ಷಿಣ ಆಫ್ರಿಕಾ ಸರಣಿಯಿಂದ ಹಿಂತಿರುಗಿದ ಬಳಿಕ ಶಾರ್ದೂಲ್ ಠಾಕೂರ್ ಮತ್ತೆ ಮುಂಬೈ ಟ್ರೈನ್​ನಲ್ಲಿ ಕಾಣಿಸಿಕೊಂಡಿದ್ದರು. ಅಂಧೇರಿ ನಿಲ್ದಾಣದಿಂದ ಮುಂಬೈ ಲೋಕಲ್ ರೈಲು ಹತ್ತಿದ್ದ ಶಾರ್ದೂಲ್​ನನ್ನು ನೋಡಿ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದರು. ಆದರೆ ಅದಕ್ಕೂ ಮುನ್ನವೇ ಯುವ ಕ್ರಿಕೆಟಿಗ ಅದೇ ರೈಲಿನಲ್ಲಿ ದಿನ ನಿತ್ಯ ಪ್ರಯಾಣಿಸುತ್ತಿದ್ದನ್ನು ಯಾರು ಗಮನಿಸಿರಲಿಲ್ಲ ಅಷ್ಟೇ.

6 / 7
ಶಾರ್ದೂಲ್ ಇದುವರೆಗೆ ಭಾರತದ ಪರ 5 ಟೆಸ್ಟ್ , 15 ಏಕದಿನ ಮತ್ತು 21 ಟಿ20 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಟೆಸ್ಟ್​ನಲ್ಲಿ 16 ವಿಕೆಟ್ ಉರುಳಿಸಿರುವ ಶಾರ್ದುಲ್ ಏಕದಿನದಲ್ಲಿ 22 ಹಾಗೂ ಟಿ20 ಕ್ರಿಕೆಟ್​ನಲ್ಲಿ 31 ವಿಕೆಟ್ ಪಡೆದಿದ್ದಾರೆ. ಹಾಗೆಯೇ  ಐಪಿಎಲ್ ನಲ್ಲಿ 51 ವಿಕೆಟ್ ಕಬಳಿಸಿದ್ದಾರೆ. ಸದ್ಯ ಉತ್ತಮ ಫಾರ್ಮ್​ನಲ್ಲಿರುವ ಶಾರ್ದೂಲ್ ಬ್ಯಾಟಿಂಗ್-ಬೌಲಿಂಗ್​ ಮೂಲಕ ಮಿಂಚುತ್ತಿದ್ದು,  ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.

7 / 7
Follow us
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ

ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್