ಭಾರತದಲ್ಲಿ ಕ್ರಿಕೆಟಿಗರಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಹೀಗಾಗಿಯೇ ಮೈದಾನದಲ್ಲಿ ಆಡುವುದರಿಂದ ಹಿಡಿದು ಮೈದಾನದ ಹೊರಗಿನ ಅವರ ವೈಯಕ್ತಿಕ ಜೀವನ ಕೂಡ ಚರ್ಚೆಯ ವಿಷಯವಾಗುತ್ತದೆ. ಇದೀಗ ಟೀಮ್ ಇಂಡಿಯಾ ಆಟಗಾರ ಶಿಖರ್ ಧವನ್ ಡಿವೋರ್ಸ್ ವಿಚಾರ ಮುನ್ನೆಲೆಗೆ ಬಂದಿದೆ.
1 / 8
ಹೀಗೆ ಟೀಮ್ ಇಂಡಿಯಾ ಆಟಗಾರನ ವೈವಾಹಿಕ ಜೀವನ ವಿಚ್ಚೇದನದೊಂದಿಗೆ ಅಂತ್ಯ ಎಂಬ ಸುದ್ದಿ ಬೆನ್ನಲ್ಲೇ, ಧವನ್-ಆಯೇಷಾ ಪ್ರೇಮಕಥೆ ಕೂಡ ಹರಿದಾಡುತ್ತಿದೆ. ಈ ಲವ್ ಸ್ಟೋರಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಧವನ್ ತನಗಿಂತ 10 ವರ್ಷ ಹಿರಿಯಳು ಹಾಗೂ ವಿಚ್ಛೇದಿತ ಮಹಿಳೆ ಆಯೇಷಾರನ್ನು ವಿವಾಹವಾಗಿದ್ದರು ಎಂಬ ವಿಚಾರ.
2 / 8
ಧವನ್ ಅಲ್ಲದೆ ಟೀಮ್ ಇಂಡಿಯಾ ಹಲವು ಆಟಗಾರರು ವಿಚ್ಛೇದಿತ ಮಹಿಳೆಯರನ್ನು ವಿವಾಹವಾಗಿದ್ದಾರೆ ಎಂಬುದು ಅನೇಕರಿಗೆ ಗೊತ್ತಿಲ್ಲ. ಹೀಗೆ ತಮ್ಮ ಕೆರಿಯರ್ ಉತ್ತುಂಗದಲ್ಲಿರುವಾಗ ಡೈವೋರ್ಸ್ ಪಡೆದ ಮಹಿಳೆಯರನ್ನು ವಿವಾಹವಾದ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗರ ಪಟ್ಟಿ ಹೀಗಿದೆ.
3 / 8
ಭಾರತ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ 2012 ರಲ್ಲಿ ಅವರಿಗಿಂತ 10 ವರ್ಷ ಹಿರಿಯರಾದ ಆಯೇಷಾ ಮುಖರ್ಜಿಯವರನ್ನು ವಿವಾಹವಾದರು. ಫೇಸ್ಬುಕ್ ಜೊತೆಗಿನ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ಮದುವೆಯಾದರು. ಆ ಸಮಯದಲ್ಲಿ ಆಯೇಷಾ ವಿಚ್ಛೇದನ ಪಡೆದಿದ್ದರು. ಅಷ್ಟೇ ಅಲ್ಲದೆ ಮೊದಲ ಮದುವೆಯಿಂದ ಇಬ್ಬರು ಮಕ್ಕಳನ್ನು ಹೊಂದಿದ್ದರು. ಇದಾಗ್ಯೂ ಇಬ್ಬರ ನಡುವೆ ಪ್ರೇಮಾಂಕುರವಾಗಿ ವಿವಾಹವಾಗಿದ್ದರು. ಆದರೀಗ ಡೈವೋರ್ಸ್ ಪಡೆದು ಇಬ್ಬರೂ ದೂರವಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
4 / 8
ಭಾರತದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಕೂಡ ವಿಚ್ಛೇದಿತ ಮಹಿಳೆ ಜಯಂತಿಯನ್ನು ವಿವಾಹವಾಗಿದ್ದಾರೆ. ಸ್ನೇಹಿತರೊಬ್ಬರ ಮುಖಾಂತರ ಪರಿಚಿತರಾಗಿದ್ದ ಜಯಂತಿ ಅವರೊಡನೆ ಪ್ರಸಾದ್ ಉತ್ತಮ ಸ್ನೇಹ ಹೊಂದಿದ್ದರು. ಈ ಸ್ನೇಹ ಬಳಿಕ ಪ್ರೀತಿಗೆ ತಿರುಗಿತು. ಅದಾಗಲೇ ವಿವಾಹವಾಗಿ ವಿಚ್ಛೇದನ ಪಡೆದಿದ್ದ ಜಯಂತಿಯನ್ನು ಮದುವೆಯಾಗಲು ವೆಂಕಿ ಮನೆಯವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು. ಅದರಂತೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
5 / 8
ಈ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ಅವರ ಹೆಸರೂ ಇದೆ. 1999 ರಲ್ಲಿ ಕುಂಬ್ಳೆ ಚೇತನಾ ಅವರನ್ನು ವಿವಾಹವಾದರು. ಅದಾಗಲೇ ಮದುವೆಯಾಗಿ ವಿಚ್ಚೇದನ ಪಡೆದಿದ್ದ ಚೇತನಾ ಅವರಿಗೆ ಒಬ್ಬಳು ಮಗಳಿದ್ದಳು. ಇದಾಗ್ಯೂ ಕುಂಬ್ಳೆ-ಚೇತನಾ ನಡುವೆ ಒಳ್ಳೆಯ ಸ್ನೇಹವಿತ್ತು. ಅದುವೇ ಬಳಿಕ ಪ್ರೇಮವಾಗಿ ಮದುವೆಯೊಂದಿಗೆ ಮುಂದುವರೆಯಿತು.
6 / 8
ಇನ್ನು ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಕೂಡ ಹಸಿನ್ ಜಹಾನ್ ಎಂಬ ವಿಚ್ಛೇದಿತ ಮಹಿಳೆಯನ್ನು ವಿವಾಹವಾಗಿದ್ದರು. 2014 ರಲ್ಲಿ ವಿವಾಹವಾಗಿದ್ದ ಈ ಜೋಡಿ 2018 ರಲ್ಲಿ ದೂರವಾಯಿತು. ಇದೀಗ ಹಸಿನ್ ಜಹಾನ್ ಶಮಿ ವಿರುದ್ದ ಕಿರುಕುಳ ಆರೋಪದಡಿಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣ ಚಾಲ್ತಿಯಲ್ಲಿದ್ದು, ಶಮಿ ವಿಚ್ಛೇದನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
7 / 8
ಟೀಮ್ ಇಂಡಿಯಾ ಕ್ರಿಕೆಟಿಗ ಮುರಳಿ ವಿಜಯ್ ಕೂಡ ಈ ಪಟ್ಟಿಯಲ್ಲಿದ್ದಾರೆ. ವಿಜಯ್ ತನ್ನ ಸ್ನೇಹಿತ ಮತ್ತು ಖ್ಯಾತ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಪತ್ನಿಯಾಗಿದ್ದ ನಿಕಿತಾ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದರು. ಈ ವಿಚಾರ ತಿಳಿದು ಕಾರ್ತಿಕ್ ನಿಕಿತಾಗೆ ಡೈವೋರ್ಸ್ ನೀಡಿದ್ದರು. ಆ ಬಳಿಕ ನಿಕಿತಾ ಜೊತೆ ಮುರಳಿ ವಿಜಯ್ ಹಸೆಮಣೆ ಏರಿದ್ದರು.