ದೆಹಲಿಗೆ ಹೊರಟಿದ್ದ ಸಾಧ್ವಿ ಯೋಗಮಾತಾ ಬ್ಯಾಗ್ನಲ್ಲಿ ತಲೆಬುರುಡೆ; ಹೇಳಿದ್ದ ಸುಳ್ಳು ಕೆಲವೇ ಕ್ಷಣದಲ್ಲಿ ಗೊತ್ತಾಯ್ತು !
ಸಾಧ್ವಿ ಯೋಗಮಾತಾ ಉಜ್ಜಯಿನಿಯವರು. ದೆಹಲಿ ಏರ್ಪೋರ್ಟ್ನಲ್ಲಿ ಸಿಕ್ಕಿಬಿದ್ದ ಅವರನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ಈ ವೇಳೆ ಅವರು, ತಲೆ ಬುರುಡೆ ನನ್ನ ಮೃತ ಗುರುಗಳದ್ದು ಎಂದಿದ್ದಾರೆ.
ಮಧ್ಯಪ್ರದೇಶದ ಉಜ್ಜಯನಿ(Ujjain)ಯಿಂದ ದೆಹಲಿಗೆ ಹೊರಟಿದ್ದ ಸಾಧ್ವಿ (Sadhvi)ಯೊಬ್ಬರ ಬ್ಯಾಗ್ನಲ್ಲಿದ್ದ ವಸ್ತುಗಳನ್ನು ನೋಡಿ ಇಂಧೋರ್ ಏರ್ಪೋರ್ಟ್ (Indore Airport) ಸಿಬ್ಬಂದಿಯೇ ಕಂಗಾಲಾಗಿದ್ದಾರೆ. ಅವರ ಚೀಲದಲ್ಲಿದ್ದ ಮನುಷ್ಯನ ತಲೆಬುರುಡೆ ನೋಡಿದ ಬಳಿಕ ಅಧಿಕಾರಿಗಳು ಸಾಧ್ವಿಗೆ ದೆಹಲಿಗೆ ಪ್ರಯಾಣ ಮಾಡಲು ಅವಕಾಶ ಕೊಡಲಿಲ್ಲ. ಅಂದಹಾಗೆ ಈ ಸಾಧ್ವಿಯ ಹೆಸರು ಯೋಗಮಾತಾ ಸಚ್ದೇವಾ. ಇವರು ದೆಹಲಿಗೆ ತೆರಳಲು ಇಂಧೋರ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಚೀಲದಲ್ಲಿ ಏನಿದೆ ಎಂದು ಕೇಳಿದ ಸಿಐಎಸ್ಎಪ್ ಮತ್ತು ಪೊಲೀಸ್ ಅಧಿಕಾರಿಗಳಿಗೆ, ‘ನನ್ನ ಚೀಲದಲ್ಲಿ ಸನ್ಯಾಸಿಯೊಬ್ಬ ಚಿತಾಭಸ್ಮವಿದೆ. ಅದನ್ನು ಹರಿದ್ವಾರದಲ್ಲಿ ಗಂಗಾ ನದಿಯಲ್ಲಿ ನಿಮಜ್ಜನ ಮಾಡಬೇಕು’ ಎಂದು ಉತ್ತರಿಸಿದ್ದರು.
ಪೊಲೀಸರು ಮತ್ತು ಸಿಐಎಸ್ಎಫ್ ಸಿಬ್ಬಂದಿ ಬಳಿ ತನ್ನ ಬ್ಯಾಗ್ನಲ್ಲಿ ಚಿತಾಭಸ್ಮವಿದೆ ಎಂದು ಸುಳ್ಳು ಹೇಳಿದ್ದ ಸಾಧ್ವಿ ಯೋಗಮಾತಾ ಕೆಲವೇ ಕ್ಷಣದಲ್ಲಿ ಸಿಕ್ಕಿಬಿದ್ದರು. ಏರ್ಪೋರ್ಟ್ ಭದ್ರತಾ ಸಿಬ್ಬಂದಿ ಲಗೇಜ್ನ್ನು ಸ್ಕ್ಯಾನ್ ಮಾಡುವಾಗ ಸಾಧ್ವಿಯವರ ಬಳಿ ಚೀಲ ತೆರೆಯುವಂತೆ ಹೇಳಿದರು. ಬ್ಯಾಗ್ ತೆರೆದ ನಂತರ ಅದರಲ್ಲಿದ್ದ ತಲೆಬುರುಡೆ, ಎಲುಬುಗಳನ್ನು ನೋಡಿ ಒಂದು ಕ್ಷಣ ಹೌಹಾರಿದರು. ನಂತರ ಏರ್ಪೋರ್ಟ್ ಆಡಳಿತಕ್ಕೆ ಸುದ್ದಿ ಮುಟ್ಟಿಸಿದರು. ಕೊನೆಗೂ ಪೊಲೀಸರು ಸಾಧ್ವಿಗೆ ಆ ವಸ್ತುಗಳನ್ನು ತೆಗೆದುಕೊಂಡು ದೆಹಲಿಗೆ ಹೋಗಲು ಬಿಡಲಿಲ್ಲ.
ಸಾಧ್ವಿ ಯೋಗಮಾತಾ ಉಜ್ಜಯಿನಿ ಜಿಲ್ಲೆಯವರಾಗಿದ್ದಾರೆ. ದೆಹಲಿ ಏರ್ಪೋರ್ಟ್ನಲ್ಲಿ ಸಿಕ್ಕಿಬಿದ್ದ ಅವರನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ಈ ವೇಳೆ ಅವರು, ತಲೆ ಬುರುಡೆ ನನ್ನ ಮೃತ ಗುರುಗಳದ್ದು. ಅದನ್ನು ಗಂಗಾನದಿಯಲ್ಲಿ ನಿಮಜ್ಜನ ಮಾಡಲು ಹೊರಟಿದ್ದೆ ಎಂದು ಹೇಳಿದ್ದಾಗಿ ಪೊಲೀಸ್ ಅಧಿಕಾರಿ ರಾಹುಲ್ ಶರ್ಮಾ ತಿಳಿಸಿದ್ದಾರೆ. ಆದರೆ ಸಾಧ್ವಿ, ತಲೆಬುರುಡೆ ತೆಗೆದುಕೊಂಡು ಹೋಗಲು ಯಾರ ಅನುಮತಿಯನ್ನೂ ಪಡೆದಿರಲಿಲ್ಲ. ಅದಕ್ಕಾಗಿ ಮುಂದೆ ಹೋಗಲು ಅನುಮತಿ ನೀಡಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ದೇಶವಿರೋಧಿ’ ಉಪನ್ಯಾಸ, ಟೀಕೆಗಳು ಬೇಡ: ಸಿಬ್ಬಂದಿಗಳಿಗೆ ಸೂಚನೆ ನೀಡಿದ ಕೇರಳದ ಸೆಂಟ್ರಲ್ ಯುನಿವರ್ಸಿಟಿ
Tata- Airbus Deal: ಇದೇ ಮೊದಲ ಬಾರಿಗೆ ಖಾಸಗಿ ವಲಯದ ಟಾಟಾ- ಏರ್ಬಸ್ಗೆ ಮಿಲಿಟರಿ ವೈಮಾನಿಕ ಡೀಲ್