Tata- Airbus Deal: ಇದೇ ಮೊದಲ ಬಾರಿಗೆ ಖಾಸಗಿ ವಲಯದ ಟಾಟಾ- ಏರ್ಬಸ್ಗೆ ಮಿಲಿಟರಿ ವೈಮಾನಿಕ ಡೀಲ್
ಇದೇ ಮೊದಲ ಬಾರಿಗೆ ಖಾಸಗಿ ಸಂಸ್ಥೆಗಳಾದ ಟಾಟಾ- ಏರ್ಬಸ್ಗೆ ಮಿಲಿಟರಿ ವೈಮಾನಿಕ ಒಪ್ಪಂದ ಆಗಿದೆ. ಆ ಬಗ್ಗೆ ವಿವರ ಇಲ್ಲಿದೆ.
ಭಾರತೀಯ ವಾಯು ಸೇನೆಗೆ ಬಲ ತುಂಬುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಎರಡು ಮೆಗಾ ಯೋಜನೆಗಳಿಗೆ ಸಮ್ಮತಿ ಸೂಚಿಸಿದೆ. ಅದರಲ್ಲಿ ಆರು ಭಾರತದಲ್ಲಿ ನಿರ್ಮಿಸಿದ ಏರ್ಬೋರ್ನ್ ಅರ್ಲಿ ವಾರ್ನಿಂಗ್ ಅಂಡ್ ಕಂಟ್ರೋಲ್ ಏರ್ಕ್ರಾಫ್ಟ್ (AEW&C) ಮತ್ತು 56 C-295 ವಿಮಾನಗಳು ಒಳಗೊಂಡಿವೆ. ಆ ಪೈಕಿ 40 ಅನ್ನು ಭಾರತದಲ್ಲೇ ಏರ್ಬಸ್- ಟಾಟಾ ಜತೆಯಾಗಿ ನಿರ್ಮಿಸಲಿದೆ. ಆರು AEW&C ವಿಮಾನಗಳ ಖರೀದಿಗೆ ಕೇಂದ್ರ ಸಂಪುಟ ಭದ್ರತಾ ಸಮಿತಿ (ಸಿಸಿಎಸ್) ಒಪ್ಪಿಗೆ ನೀಡಿದೆ ಮತ್ತು ಏರ್ಬಸ್ 319 ವಿಮಾನ ನಿರ್ಮಿಸಿ, ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾಗೆ ನೀಡಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ ಎಂದು ಎಎನ್ಐ ವರದಿ ಮಾಡಿದೆ. ಇದಕ್ಕೂ ಮುನ್ನ ಸರ್ಕಾರವು ಘೋಷಣೆ ಮಾಡಿದಂತೆ Avro ಬದಲಿ ಯೋಜನೆಗೆ ಒಪ್ಪಿಗೆ ನೀಡಿದ್ದು, ಈ ಯೋಜನೆಯನ್ನು ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ನಿರ್ಮಿಸಲಾಗುವುದು.
ಮೂಲಗಳು ಹೇಳಿರುವಂತೆ, ಡಿಆರ್ಡಿಒದಿಂದ ನಿರ್ಮಾಣ ಆಗುವ ವಿಮಾನದಿಂದ ಚೀನಾ ಮತ್ತು ಪಾಕಿಸ್ತಾನದ ಗಡಿ ಭಾಗದಲ್ಲಿ ವಾಯು ಸೇನೆಯ ನಿಗಾ ಸಾಮಾರ್ಥ್ಯವನ್ನು ಇನ್ನಷ್ಟು ವಿಸ್ತರಿಸುತ್ತದೆ. AEW&C ಬ್ಲಾಕ್ 2 ವಿಮಾನಗಳನ್ನು ಡಿಆರ್ಡಿಒದಿಂದ ಅಭಿವೃದ್ಧಿ ಪಡಿಸಲಾಗುವುದು. ಅದು 11,000 ಕೋಟಿ ರೂಪಾಯಿಯ ಯೋಜನೆ ಆಗಿದೆ. ಈ ಆರು ವಿಮಾನಗಳನ್ನು ಹೇಗೆ ಮಾರ್ಪಾಟು ಮಾಡಲಾಗುವುದು ಅಂದರೆ, ರಕ್ಷಣಾ ಪಡೆಗಳಿಗೆ ರಾಡಾರ್ ಮೂಲಕ 360 ಡಿಗ್ರಿ ನಿಗಾ ಸಾಮರ್ಥ್ಯವನ್ನು ನೀಡುತ್ತದೆ. ಈ ಯೋಜನೆಯು AEW&C ವ್ಯವಸ್ಥೆಯನ್ನು ಈಗಿರುವ ಏರ್ ಇಂಡಿಯಾದ ವಿಮಾನಗಳಿಗೆ ನಿರ್ಮಿಸಲಾಗುವುದು. ಇದರರ್ಥ ಏನೆಂದರೆ, ಭಾರತವು ಆರು ಏರ್ಬಸ್ 330 ಸಂಚಾರ ವಿಮಾನವನ್ನು ಈ ಹಿಂದೆ ಯೋಜನೆ ಮಾಡಿದಂತೆ ಯುರೋಪಿಯನ್ ಸಂಸ್ಥೆಯಿಂದ ಖರೀದಿಸದೆ ಹೋಗಬಹುದು.
C-295 ವಿಮಾನದ ವಹಿವಾಟಿಗೆ ಭಾರತೀಯ ವಾಯು ಸೇನೆ 56 Avro ಸಂಚಾರ ವಿಮಾನಕ್ಕೆ ಸಹಿ ಹಾಕಬೇಕಿತ್ತು. ಏಕೆಂದರೆ, ಅದು ತುರ್ತಾದ ಬದಲಿ ಆಗಿತ್ತು. 16 ವಿಮಾನಗಳನ್ನು ಹಾರಾಡುವ ಸ್ಥಿತಿಯಲ್ಲೇ ಒಪ್ಪಂದಕ್ಕೆ ಸಹಿ ಹಾಕಿದ 48 ತಿಂಗಳಲ್ಲಿ ಸ್ಪೇನ್ನಿಂದ ಡೆಲಿವರಿ ಆಗುತ್ತಿದೆ. ಈ ವಿಮಾನವು 5ರಿಂದ 10 ಟನ್ ಸಾಮರ್ಥ್ಯದ ಲೋಡ್ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ ಮತ್ತು An 32s ಮತ್ತು C-130Js ಮಧ್ಯದ ಅಂತರವನ್ನು ಸರಿತೂಗಿಸುತ್ತದೆ.
ಟಾಟಾ- ಏರ್ಬಸ್ ಸಹಯೋಗದಲ್ಲಿ ಏರ್ಪಡುತ್ತಿರುವ ಮಿಲಿಟರಿ ವೈಮಾನಿಕ ಒಪ್ಪಂದವು ಇದೇ ಮೊದಲ ಬಾರಿಗೆ ಭಾರತೀಯ ಖಾಸಗಿ ವಲಯಕ್ಕೆ ಅವಕಾಶ ಸಿಕ್ಕಿದೆ. ಈ ಮೂಲಕ ಮುಂಬರುವ ವರ್ಷಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಜತೆಗೆ, 6600ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗುತ್ತದೆ.
ಇದನ್ನೂ ಓದಿ: Explainer: ಭೂಸೇನೆ, ವಾಯುಪಡೆ, ನೌಕಾಪಡೆಗಳ ಏಕೀಕೃತ ಕಮಾಂಡ್ ರಚನೆ ಪ್ರಸ್ತಾವಕ್ಕೆ ಹೊಸವೇಗ, ದೇಶದ ಭದ್ರತೆಗೆ ಇದೇಕೆ ಅತ್ಯಗತ್ಯ?
(Tata- Airbus First Indian Private Firms Got Military Aviation Contract Here Is The Details)