ಎಲ್​ಸಲ್ವಡಾರ್, ಲ್ಯಾಟಿನ್ ಅಮೆರಿಕ ಬೆಳವಣಿಗೆಯಲ್ಲಿ ತತ್ತರಿಸಿದ ಬಿಟ್​ಕಾಯಿನ್; ಥರಗುಟ್ಟಿದ ಕ್ರಿಪ್ಟೋಕರೆನ್ಸಿಗಳು

TV9 Digital Desk

| Edited By: Srinivas Mata

Updated on: Sep 09, 2021 | 2:34 PM

Cryptocurrency: ಬಿಟ್​ಕಾಯಿನ್, ಎಥರ್ ಸೇರಿದಂತೆ ಇತರ ಪ್ರಮಖ ಕ್ರಿಪ್ಟೋಕರೆನ್ಸಿಗಳ ದರ ಇಂತಿದೆ. ಎಲ್​ಸಲ್ವಡಾರ್, ಲ್ಯಾಟಿನ್ ಅಮೆರಿಕದಲ್ಲಿನ ಬೆಳವಣಿಗೆಗಳು ಕ್ರಿಪ್ಟೋಕರೆನ್ಸಿ ಮೇಲೆ ಆಗಿದೆ.

ಎಲ್​ಸಲ್ವಡಾರ್, ಲ್ಯಾಟಿನ್ ಅಮೆರಿಕ ಬೆಳವಣಿಗೆಯಲ್ಲಿ ತತ್ತರಿಸಿದ ಬಿಟ್​ಕಾಯಿನ್; ಥರಗುಟ್ಟಿದ ಕ್ರಿಪ್ಟೋಕರೆನ್ಸಿಗಳು
ಪ್ರಾತಿನಿಧಿಕ ಚಿತ್ರ
Follow us

ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಗುರುವಾರ ಶೇ 2.80ರಷ್ಟು ಇಳಿಕೆಯಾಗಿ, 45,813.90 ಯುಎಸ್​ಡಿಗೆ ಕುಸಿದಿದೆ. ಮತ್ತೊಂದೆಡೆ, ಬಿಟ್‌ಕಾಯಿನ್‌ನ ಪ್ರತಿಸ್ಪರ್ಧಿ ಕರೆನ್ಸಿಯಾದ ಎಥೆರಿಯಮ್ ಶೇಕಡಾ 1.13 ರಷ್ಟು ಇಳಿಕೆಯಾಗಿ 3,474.44 ಡಾಲರ್​ಗೆ ಇಳಿದಿದೆ. ಬಿಟ್​ಕಾಯಿನ್ ಮತ್ತು ಎಥೆರಿಯಮ್ ಎರಡರ ಒಟ್ಟು ಮಾರುಕಟ್ಟೆ ಬಂಡವಾಳ ಕ್ರಮವಾಗಿ 861.7 ಬಿಲಿಯನ್ ಯುಎಸ್​ಡಿ, 408.062 ಬಿಲಿಯನ್ ಯುಎಸ್​ಡಿ ಆಗಿದೆ. ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿನ ಈ ಕುಸಿತಕ್ಕೆ ಭಾಗಶಃ ಎಲ್ ಸಲ್ವಡಾರ್, ಲ್ಯಾಟಿನ್ ಅಮೆರಿಕನ್ ದೇಶದಿಂದ ಚಾಲನೆ ಸಿಕ್ಕಿದೆ. ಅಂದಹಾಗೆ ಬಿಟ್ ಕಾಯಿನ್ ಅನ್ನು ಕಾನೂನುಬದ್ಧ ಮಾಡಿ, ಅಳವಡಿಸಿಕೊಂಡ ವಿಶ್ವದ ಮೊದಲ ರಾಷ್ಟ್ರ ಎಲ್​ ಸಲ್ವಡಾರ್​. ದೇಶದಾದ್ಯಂತ ಈ ದೊಡ್ಡ ಪ್ರಮಾಣದ ಬಿಟ್ ಕಾಯಿನ್ ಅಳವಡಿಕೆ ಗೊಂದಲಮಯ ಸನ್ನಿವೇಶವನ್ನು ಸೃಷ್ಟಿಸಿದೆ. ಬಿಟ್​ಕಾಯಿನ್​ ವಿಪರೀತ ಏರಿಳಿಕೆ ದಾಖಲಿಸುವುದರಿಂದ ಆ ದೇಶದ ಜನರು ಬಿಟ್​ಕಾಯಿನ್ ಬಳಸಲು ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ.

ಸೋಮವಾರದಂದು ಎಲ್ ಸಲ್ವಡಾರ್ ತನ್ನ ಮೊದಲ 400 ಕ್ರಿಪ್ಟೋ ಕರೆನ್ಸಿಯನ್ನು ಖರೀದಿಸಿತು. ತಾತ್ಕಾಲಿಕವಾಗಿ ಬಿಟ್‌ಕಾಯಿನ್‌ ಶೇ 1.49ರಷ್ಟು ಬೆಲೆ ಏರಿಕೆಯಾಗಿ, 52,680 ಡಾಲರ್​ಗೂ ಹೆಚ್ಚಾಯಿತು. ಗುರುವಾರದ ಹೊತ್ತಿಗೆ ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಬಂಡವಾಳ 2.09 ಲಕ್ಷ ಕೋಟಿ ಡಾಲರ್​ಗಳಾಗಿವೆ. ಇದು ಕೊನೆಯ ದಿನಕ್ಕಿಂತ ಶೇ 1.11 ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು ಕ್ರಿಪ್ಟೋ ಮಾರುಕಟ್ಟೆ ವಾಲ್ಯೂಮ್ 179.80 ಬಿಲಿಯನ್ ಯುಎಸ್​ಡಿ ಆಗಿದ್ದು, ಅದು ಶೇ 25.59 ಇಳಿಕೆಯಾಗಿದೆ. DeFiನಲ್ಲಿನ ಒಟ್ಟು ವಾಲ್ಯೂಮ್ ಪ್ರಸ್ತುತ 23.66 ಬಿಲಿಯನ್ ಡಾಲರ್ ಆಗಿದ್ದು, ಒಟ್ಟು ಕ್ರಿಪ್ಟೋ ಮಾರುಕಟ್ಟೆಯ ಶೇಕಡಾ 13.16ರಷ್ಟು 24 ಗಂಟೆಯ ವಾಲ್ಯೂಮ್ ಇದಾಗಿದೆ. ಎಲ್ಲ ಸ್ಥಿರ ಕಾಯಿನ್​ಗಳ ವಾಲ್ಯೂಮ್ ಈಗ 140.74 ಬಿಲಿಯನ್ ಡಾಲರ್ ಆಗಿದೆ. ಇದು ಒಟ್ಟು ಕ್ರಿಪ್ಟೋ ಮಾರುಕಟ್ಟೆಯ 24 ಗಂಟೆಗಳ ವಾಲ್ಯೂಮ್​ನ ಶೇಕಡಾ 78.28ರಷ್ಟಾಗುತ್ತದೆ. ಮತ್ತೊಂದೆಡೆ, ಕಳೆದ 24 ಗಂಟೆಗಳಲ್ಲಿ ಬಿಟ್‌ಕಾಯಿನ್‌ನ ಪ್ರಾಬಲ್ಯವು ಶೇ 0.60 ಹೆಚ್ಚಾಗಿದೆ ಮತ್ತು ಪ್ರಸ್ತುತ ಶೇ 41.39ರಲ್ಲಿದೆ. ಕಾರ್ಡಾನೋ ಶೇ 5.65 ಇಳಿಕೆ ಆಗಿ, 2.40 ಡಾಲರ್ ಆಗಿದ್ದರೆ, Dogecoin ಶೇ 3.62ರಷ್ಟು ಇಳಿಕೆ ಆಗಿ, 0.2514 ಡಾಲರ್​ನಲ್ಲಿ ವಹಿವಾಟಾಗುತ್ತಿತ್ತು.

ಬಿಟ್ ಕಾಯಿನ್ 45,813 ಯುಎಸ್​ಡಿ ಅಥವಾ (ಶೇ -2.80) 24 ಗಂಟೆಗಳಲ್ಲಿ ಬದಲಾವಣೆ Ethereum 3,474.44 ಯುಎಸ್​ಡಿ ಅಥವಾ (ಶೇ -1.13) 24 ಗಂಟೆಗಳಲ್ಲಿ ಬದಲಾವಣೆ ಕಾರ್ಡಾನೊ 2.40 ಯುಎಸ್​ಡಿ ಅಥವಾ (ಶೇ -5.65) 24 ಗಂಟೆಗಳಲ್ಲಿ ಬದಲಾವಣೆ Binance ಕಾಯಿನ್ 404.89 ಯುಎಸ್​ಡಿ ಅಥವಾ (ಶೇ -4.35) 24 ಗಂಟೆಗಳಲ್ಲಿ ಬದಲಾವಣೆ ಟೆಥರ್ 1.00 ಯುಎಸ್​ಡಿ ಅಥವಾ (ಶೇ +0.00) 24 ಗಂಟೆಗಳಲ್ಲಿ ಬದಲಾವಣೆ XRP 1.09 ಯುಎಸ್​ಡಿ ಅಥವಾ (ಶೇ -4.42) 24 ಗಂಟೆಗಳಲ್ಲಿ ಬದಲಾವಣೆ ಸೋಲಾನಾ 208.54 ಯುಎಸ್​ಡಿ (ಶೇ 18.33) 24 ಗಂಟೆಗಳಲ್ಲಿ ಬದಲಾವಣೆ Dogecoin 0.2516 ಯುಎಸ್​ಡಿ ಅಥವಾ (ಶೇ -3.47) 24 ಗಂಟೆಗಳಲ್ಲಿ ಬದಲಾವಣೆ ಪೋಲ್ಕಡೋಟ್ 27.18 ಯುಎಸ್​ಡಿ ಅಥವಾ (ಶೇ -4.78) 24 ಗಂಟೆಗಳಲ್ಲಿ ಬದಲಾವಣೆ USD ಕಾಯಿನ್ 1.00 ಯುಎಸ್​ಡಿ ಅಥವಾ (ಶೇ 0.05) ಕಳೆದ 24 ಗಂಟೆಗಳಲ್ಲಿ ಬದಲಾವಣೆ Uniswap 23.07 ಡಾಲರ್ ಅಥವಾ (ಶೇ -6.50) 24 ಗಂಟೆಗಳಲ್ಲಿ ಬದಲಾವಣೆ ಚೈನ್ ಲಿಂಕ್ 26.66 ಯುಎಸ್​ಡಿ ಅಥವಾ (ಶೇ -7.70) 24 ಗಂಟೆಗಳಲ್ಲಿ ಬದಲಾವಣೆ

ಇದನ್ನೂ ಓದಿ: ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ ಬಗ್ಗೆ ಸುಳಿವು ನೀಡಿದ ಹಣಕಾಸು ಸಚಿವೆ

(Including Bitcoin Ether And Other Major Cryptocurrency Today Price Here)

ತಾಜಾ ಸುದ್ದಿ

Related Stories

Click on your DTH Provider to Add TV9 Kannada