Bank Rules Change: ಅಕ್ಟೋಬರ್​ 1ರಿಂದ ಈ ಬ್ಯಾಂಕ್‌ಗಳ ಚೆಕ್ ಬುಕ್ ಕೆಲಸ ಮಾಡುವುದಿಲ್ಲ

ಅಕ್ಟೋಬರ್ 1, 2021ರಿಂದ ಈ ಬ್ಯಾಂಕ್​ಗಳ ಚೆಕ್​ ಪುಸ್ತಕಗಳು ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುತ್ತದೆ, ಅದಕ್ಕೆ ಕಾರಣ ಏನು ಎಂಬುದನ್ನು ತಿಳಿಯಿರಿ.

Bank Rules Change: ಅಕ್ಟೋಬರ್​ 1ರಿಂದ ಈ ಬ್ಯಾಂಕ್‌ಗಳ ಚೆಕ್ ಬುಕ್ ಕೆಲಸ ಮಾಡುವುದಿಲ್ಲ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Sep 09, 2021 | 6:12 PM

ಸರ್ಕಾರಿ ಸ್ವಾಮ್ಯದ ಪ್ರಮುಖ ಬ್ಯಾಂಕ್​ಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಬುಧವಾರ ಟ್ವೀಟ್ ಮಾಡಿ, ಹೊಸ ಬದಲಾವಣೆಯ ಬಗ್ಗೆ ಗ್ರಾಹಕರು ಮತ್ತು ಖಾತೆದಾರರಿಗೆ ಎಚ್ಚರಿಕೆ ನೀಡಿದೆ. ಮುಂದಿನ ತಿಂಗಳಿನಿಂದ (ಅಕ್ಟೋಬರ್) ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (ಒಬಿಸಿ) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಈಗ ಅಸ್ತಿತ್ವದಲ್ಲಿ ಇರುವ ಚೆಕ್ ಪುಸ್ತಕಗಳನ್ನು ಬಳಕೆಯನ್ನು ಕೊನೆಗೊಳಿಸುವುದಾಗಿ ಬ್ಯಾಂಕ್ ಹೇಳಿದೆ. ಈ ಬದಲಾವಣೆಯು ಅಕ್ಟೋಬರ್ 1, 2021ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ. ಇದರ ಜತೆಗೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ತಮ್ಮ ಹಳೆಯ ಚೆಕ್‌ಬುಕ್‌ಗಳನ್ನು ಆದಷ್ಟು ಬೇಗ ಬದಲಿಸಿಕೊಳ್ಳುವಂತೆ ವಿನಂತಿಸಿದೆ.

ಬ್ಯಾಂಕ್​ನ ಅಧಿಕೃತ ಟ್ವಿಟರ್ ಖಾತೆಯಿಂದ ಮಾಡಿರುವ ಟ್ವೀಟ್ ಹೀಗಿದೆ: “ಇಒಬಿಸಿ ಮತ್ತು ಇಯುಎನ್​ಐನ ಹಳೆಯ ಚೆಕ್ ಬುಕ್ ಅನ್ನು 1-10-2021ರಿಂದ ಕೊನೆಗೊಳಿಸಲಾಗುವುದು. ದಯವಿಟ್ಟು ನಿಮ್ಮ ಹಳೆಯ ಇ-ಒಬಿಸಿ ಮತ್ತು ಇ-ಯುಎನ್‍ಐ ಚೆಕ್ ಬುಕ್ ಅನ್ನು ಬದಲಾವಣೆ ಆಗಿರುವ ಪಿಎನ್‌ಬಿ ಐಎಫ್‌ಎಸ್‌ಸಿ ಮತ್ತು ಎಂಐಸಿಆರ್‌ನೊಂದಿಗೆ ಚೆಕ್ ಬುಕ್​ಗೆ ಬದಲಾಯಿಸಿ”. ಬದಲಾವಣೆಗಳನ್ನು ಮಾಡಲು ಬಯಸುವ ಈ ಖಾತೆದಾರರು ವಿಭಿನ್ನ ರೀತಿಯಲ್ಲಿ ಮಾಡಬಹುದು ಎಂದು ಸಹ ಉಲ್ಲೇಖಿಸಲಾಗಿದೆ. ನಿಮ್ಮ ಹೊಸ ಚೆಕ್ ಪುಸ್ತಕಕ್ಕಾಗಿ ATM, ಇಂಟರ್​ನೆಟ್ ಬ್ಯಾಂಕಿಂಗ್, PNB One ಅಥವಾ ಕಾಲ್ ಸೆಂಟರ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಬ್ಯಾಂಕ್ ಹೇಳಿದೆ.

“ನಿಮ್ಮ ಶಾಖೆಯಿಂದ ಹೊಸ ಚೆಕ್ ಪುಸ್ತಕವನ್ನು ಪಡೆದುಕೊಳ್ಳಿ ಅಥವಾ ATM/IBS/PNB ONE ಮೂಲಕ ಅರ್ಜಿ ಸಲ್ಲಿಸಿ. ಯಾವುದೇ ವಹಿವಾಟಿನಲ್ಲಿ ಅನನುಕೂಲ ತಪ್ಪಿಸಲು ಎಲ್ಲ ಗ್ರಾಹಕರು ಈಗಿನಿಂದಲೇ ಅಪ್​ಡೇಟ್ ಆದ PNB IFSC ಮತ್ತು MICR ಹೊಸ PNB ಚೆಕ್ ಪುಸ್ತಕವನ್ನು ಬಳಸಲು ವಿನಂತಿಸಲಾಗಿದೆ. ಯಾವುದೇ ಸಹಾಯ ಅಥವಾ ಪ್ರಶ್ನೆಗಾಗಿ ದಯವಿಟ್ಟು ನಮ್ಮ ಟೋಲ್-ಫ್ರೀ ಸಂಖ್ಯೆ 1800-180-2222 ಅನ್ನು ಸಂಪರ್ಕಿಸಿ,” ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಟ್ವೀಟ್​ನಲ್ಲಿ ತಿಳಿಸಿದೆ. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಎರಡನ್ನೂ 2020ರ ಏಪ್ರಿಲ್‌ನಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ವಿಲೀನಗೊಳಿಸಲಾಯಿತು.

ಪಂಜಾಬ್ ನ್ಯಾಷನಲ್ ಬ್ಯಾಂಕ್​ನ ಇತರ ಬದಲಾವಣೆಗಳು ಹಬ್ಬದ ಸೀಸನ್ ಇರುವುದರಿಂದ ರಜಾದಿನಗಳ ಕೊಡುಗೆಗಳ ಭಾಗವಾಗಿ ರೀಟೇಲ್ ಉತ್ಪನ್ನಗಳ ಮೇಲಿನ ಎಲ್ಲ ಸೇವಾ ಶುಲ್ಕಗಳು ಮತ್ತು ಪ್ರೊಸೆಸಿಂಗ್ ಶುಲ್ಕಗಳನ್ನು ಮನ್ನಾ ಮಾಡಲು ನಿರ್ಧರಿಸಲಾಗಿದೆ. ಗೃಹ, ವಾಹನ, ಆಸ್ತಿ, ವಯಕ್ತಿಕ, ಪಿಂಚಣಿ ಸಾಲಗಳು ಮತ್ತು ಚಿನ್ನದ ಸಾಲಗಳ ಮೇಲಿನ ದಾಖಲಾತಿ ಶುಲ್ಕವನ್ನು ಸಹ ಮನ್ನಾ ಮಾಡಲಿದೆ. ಗೃಹ ಸಾಲದ ಮೇಲೆ ಶೇಕಡಾ 6.80 ರಿಂದ ಆರಂಭವಾಗುವ ಬಡ್ಡಿದರವನ್ನು ಸಹ ನೀಡುತ್ತದೆ. ಕಾರು ಸಾಲಗಳಿಗಾಗಿ ಬ್ಯಾಂಕ್ ಶೇ 7.15ರಷ್ಟು ಬಡ್ಡಿದರವನ್ನು ನೀಡಲು ಆರಂಭಿಸಿದೆ. ಹೆಚ್ಚುವರಿಯಾಗಿ, ಬ್ಯಾಂಕ್ ತನ್ನ ಗೃಹ ಸಾಲದ ಟಾಪ್-ಅಪ್‌ಗಾಗಿ ಆಕರ್ಷಕ ಬಡ್ಡಿದರವನ್ನು ಸಹ ನೀಡಲಿದೆ. ಈ ವರ್ಷದ ಅಂತ್ಯದವರೆಗೆ ಅಂದರೆ ಡಿಸೆಂಬರ್ 31, 2021ರವರೆಗೆ ಗ್ರಾಹಕರು ಈ ಆಫರ್‌ಗಳ ಪ್ರಯೋಜನವನ್ನು ಪಡೆಯಬಹುದು ಎಂದು ಉಲ್ಲೇಖಿಸಿದೆ.

ಮುಂದಿನ ತಿಂಗಳು ಅಲಹಾಬಾದ್ ಬ್ಯಾಂಕ್ ಚೆಕ್ ಬುಕ್ ಬದಲಾವಣೆಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್​ನಂತೆಯೇ ಈ ಹಿಂದಿನ ಅಲಹಾಬಾದ್ ಬ್ಯಾಂಕ್ ಕೂಡ ತನ್ನ ಚೆಕ್ ಪುಸ್ತಕಗಳನ್ನು ಮತ್ತು MICR ಕೋಡ್ ಅನ್ನು ಮುಂದಿನ ತಿಂಗಳ ಆರಂಭದಿಂದಲೇ ಕೊನೆಗೊಳಿಸಲಿದೆ. ಇದು ಟ್ವಿಟ್ಟರ್ ಪೋಸ್ಟ್‌ನಿಂದ ಬಂದಿದ್ದು, ಬ್ಯಾಂಕ್ ಈ ಪ್ರಕ್ರಿಯೆಗಳನ್ನು ಅಕ್ಟೋಬರ್ 1, 2021ರಿಂದ ಕೊನೆಗೊಳಿಸುತ್ತದೆ ಎಂದು ತಿಳಿಸಿದೆ. ಈ ಟ್ವೀಟ್ ಅನ್ನು ಜುಲೈ 31, 2021ರಂದು ಮಾಡಲಾಗಿದೆ. ಬ್ಯಾಂಕ್ ಗ್ರಾಹಕರಿಗೆ ತಮ್ಮ ಹತ್ತಿರದ ಶಾಖೆಗಳಿಂದ ಹೊಸ ಚೆಕ್ ಪುಸ್ತಕಗಳನ್ನು ಪಡೆಯಲು ಅಥವಾ ಇಂಟರ್​ನೆಟ್/ಮೊಬೈಲ್ ಬ್ಯಾಂಕಿಂಗ್ ಮೂಲಕ ಅರ್ಜಿ ಸಲ್ಲಿಸಲು ತಿಳಿಸಿದೆ.

ಇಂಡಿಯನ್​ ಬ್ಯಾಂಕ್ ಟ್ವೀಟ್ ಹೀಗಿದೆ: “ಯಾವುದೇ ತೊಂದರೆಯಿಲ್ಲದೆ ಸುಗಮ ಬ್ಯಾಂಕಿಂಗ್ ವಹಿವಾಟುಗಳನ್ನು ಮಾಡಿ, ಹಿಂದಿನ ಅಲಹಾಬಾದ್ ಬ್ಯಾಂಕ್​ನ MICR ಕೋಡ್ ಮತ್ತು ಚೆಕ್ ಪುಸ್ತಕಗಳನ್ನು 01.10.2021 ರಿಂದ ಸ್ಥಗಿತಗೊಳಿಸಲಾಗುತ್ತದೆ. ನಿಮ್ಮ ಹತ್ತಿರದ ಶಾಖೆಯಿಂದ ಹೊಸ ಚೆಕ್ ಪುಸ್ತಕಗಳನ್ನು ಪಡೆಯಿರಿ ಅಥವಾ ಇಂಟರ್​ನೆಟ್ ಬ್ಯಾಂಕಿಂಗ್/ಮೊಬೈಲ್ ಬ್ಯಾಂಕಿಂಗ್ ಮೂಲಕ ಅರ್ಜಿ ಸಲ್ಲಿಸಿ”.

ಇದನ್ನೂ ಓದಿ:  ICICI Bank: ಐಸಿಐಸಿಐ ಬ್ಯಾಂಕ್ ಎಟಿಎಂ ನಗದು ವಿಥ್​ಡ್ರಾ, ಚೆಕ್​ಬುಕ್​ ಶುಲ್ಕಗಳು ಆಗಸ್ಟ್​ನಿಂದ ಬದಲಾವಣೆ​

(Cheque Book Of These Banks Will Not Work From October 1st Here Is The Reason Know Why)