Income Tax Returns: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 31ರ ತನಕ ಕಾಲಾವಧಿ ವಿಸ್ತರಣೆ

ವಿವಿಧ ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಕೆ ಅಂತಿಮ ಗಡುವನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ ಮತ್ತೊಮ್ಮೆ ವಿಸ್ತರಣೆ ಮಾಡಿದೆ. ಆ ಬಗ್ಗೆ ವಿವರಣೆ ಇಲ್ಲಿದೆ.

Income Tax Returns: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 31ರ ತನಕ ಕಾಲಾವಧಿ ವಿಸ್ತರಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Sep 09, 2021 | 10:14 PM

ವಯಕ್ತಿಕ ತೆರಿಗೆ ಪಾವತಿದಾರರು 2020- 21ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವುದಕ್ಕೆ ಡಿಸೆಂಬರ್ 31, 2021ರ ತನಕ ಕಾಲಾವಧಿ ವಿಸ್ತರಿಸಿ, ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಗುರುವಾರ ಆದೇಶ ನೀಡಿದೆ. ಕೊವಿಡ್- 19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತೆರಿಗೆದಾರರು ತೊಂದರೆ ಎದುರಿಸುತ್ತಿರುವುದರಿಂದ ಈ ತೀರ್ಮಾನ ಮಾಡಲಾಗಿದೆ. “ಅಸೆಸ್​ಮೆಂಟ್ ವರ್ಷ 2021-22ಕ್ಕೆ ಆದಾಯದ ರಿಟರ್ನ್ಸ್ ಸಲ್ಲಿಸುವುದಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139ರ ಸಬ್​ಸೆಕ್ಷನ್ (1)ರ ಅಡಿಯಲ್ಲಿ ಅಂತಿಮ ದಿನಾಂಕ 31 ನೇ ಜುಲೈ, 2021 ಆಗಿತ್ತು. ಸುತ್ತೋಲೆ ಸಂಖ್ಯೆ 9/2021 ದಿನಾಂಕ 20.05.2021ರ ಪ್ರಕಾರ, 30ನೇ ಸೆಪ್ಟೆಂಬರ್, 2021ಕ್ಕೆ ವಿಸ್ತರಿಸಲಾಯಿತು. ಇದೀಗ ಗಡುವನ್ನು 31ನೇ ಡಿಸೆಂಬರ್, 2021ಕ್ಕೆ ಮತ್ತಷ್ಟು ವಿಸ್ತರಿಸಲಾಗಿದೆ,” ಎಂದು ಹಣಕಾಸು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ.

ಈ ಮೊದಲು ಐಟಿಆರ್ ಸಲ್ಲಿಸುವ ಗಡುವನ್ನು ಸಾಮಾನ್ಯವಾಗಿ ಇರುತ್ತಿದ್ದ ಜುಲೈ 31, 2021ರಿಂದ ಸೆಪ್ಟೆಂಬರ್ 30, 2021ರ ವರೆಗೆ ವಿಸ್ತರಿಸಲಾಗಿತ್ತು. ಟ್ವೀಟ್​ನಲ್ಲಿ ತೆರಿಗೆ ಇಲಾಖೆಯು ಹೀಗೆ ಹೇಳಿದೆ: “ಅಸೆಸ್​ಮೆಂಟ್​ ವರ್ಷ 2021-22ಕ್ಕೆ ಐಟಿಆರ್ ಮತ್ತು ಆಡಿಟ್ ವರದಿಗಳನ್ನು ಸಲ್ಲಿಸುವಲ್ಲಿ ತೆರಿಗೆದಾರರಿಗೆ ಇರುವ ತೊಂದರೆಗಳನ್ನು ಪರಿಗಣಿಸಿ, ಐಟಿ ಕಾಯ್ದೆ, 1961ರ ಅಡಿಯಲ್ಲಿ ಸಿಬಿಡಿಟಿಯಿಂದ ಐಟಿಆರ್ ಮತ್ತು ಆಡಿಟ್ ವರದಿಗಳನ್ನು ಸಲ್ಲಿಸುವ ಅಸೆಸ್​ಮೆಂಟ್​ ವರ್ಷ 21-22ರ ಅಂತಿಮ ದಿನಾಂಕಗಳನ್ನು ವಿಸ್ತರಿಸಿದೆ.” CBDTಯಿಂದ 2021-2022 ಅಸೆಸ್​ಮೆಂಟ್​ ವರ್ಷದ ಆದಾಯ ತೆರಿಗೆ 1961 (ಕಾಯ್ದೆ) ಅಡಿಯಲ್ಲಿ ಹಲವು ಇತರ ಫಾರ್ಮ್​ಗಳ ಅಂತಿಮ ಗಡುವನ್ನು ಸಹ ವಿಸ್ತರಿಸಿದೆ:

-ಹಿಂದಿನ ವರ್ಷದ 2020-21ರ ಯಾವುದೇ ಅಧಿನಿಯಮದ ಅಡಿಯಲ್ಲಿ ಸಲ್ಲಿಸಬೇಕಾದ ಆಡಿಟ್‌ನ ವರದಿಯ ಅಂತಿಮ ದಿನಾಂಕವು 30ನೇ ಸೆಪ್ಟೆಂಬರ್, 2021ರಿಂದ ಅಕ್ಟೋಬರ್ 31, 2021ಕ್ಕೆ ವಿಸ್ತರಿಸಿದ್ದು, ಜನವರಿ 15, 2022ರ ವರೆಗೆ ವಿಸ್ತರಿಸಲಾಗಿದೆ

– ಅಕೌಂಟೆಂಟ್‌ನಿಂದ ಅಂತಾರಾಷ್ಟ್ರೀಯ ವಹಿವಾಟು ಅಥವಾ ನಿರ್ದಿಷ್ಟ ದೇಶೀಯ ವಹಿವಾಟಿಗೆ ಒಳಪಡುವ ವ್ಯಕ್ತಿಗಳಿಂದ ವರದಿಯನ್ನು ಸಲ್ಲಿಸುವ ಅಂತಿಮ ದಿನಾಂಕ 2020-21ರ ಹಿಂದಿನ ವರ್ಷದ ಕಾಯ್ದೆಯ ಸೆಕ್ಷನ್ 92E ಅಡಿಯಲ್ಲಿ, ಅಂದರೆ 31ನೇ ಅಕ್ಟೋಬರ್, 2021 ಎಂದು ಇದ್ದದ್ದು, ನವೆಂಬರ್ 30, 2021ರ ವರೆಗೆ ವಿಸ್ತರಿಸಲಾಗಿತ್ತು. ಇದೀಗ 31ನೇ ಜನವರಿ, 2022ಕ್ಕೆ ಮತ್ತಷ್ಟು ವಿಸ್ತರಿಸಲಾಗಿದೆ.

– 2021-22ನೆ ಅಸೆಸ್​ಮೆಂಟ್​ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅಂತಿಮ ದಿನಾಂಕ ಕಾಯ್ದೆಯ ಸೆಕ್ಷನ್ 139ರ ಸಬ್​ಸೆಕ್ಷನ್ (1) ರ ಅಡಿಯಲ್ಲಿ 31 ನೇ ಅಕ್ಟೋಬರ್, 2021 ಇತ್ತು. ಆ ನಂತರ 30ನೇ ನವೆಂಬರ್, 2021ರವರೆಗೆ ವಿಸ್ತರಿಸಲಾಗಿದ್ದು, ಈ ಮೂಲಕ 15 ಫೆಬ್ರವರಿ, 2022ರ ತನಕ ಮತ್ತಷ್ಟು ವಿಸ್ತರಿಸಲಾಗಿದೆ.

– 2021-22 ಅಸೆಸ್​ಮೆಂಟ್​ ವರ್ಷಕ್ಕೆ ಐಟಿಆರ್​ ಸಲ್ಲಿಕೆಗೆ ಕಾಯ್ದೆಯ ಸೆಕ್ಷನ್ 139ರ ಸಬ್​ಸೆಕ್ಷನ್ (1)ರ ಅಡಿಯಲ್ಲಿ ಅಂತಿಮ ದಿನಾಂಕ 30ನೇ ನವೆಂಬರ್, 2021 ಇತ್ತು. ಅಲ್ಲಿಂದ 31ನೇ ಡಿಸೆಂಬರ್, 2021ರ ವರೆಗೆ ವಿಸ್ತರಣೆ ಆಗಿದ್ದು, ಈ ಮೂಲಕ ಮತ್ತಷ್ಟು ವಿಸ್ತರಣೆ ಆಗಿ, 28 ಫೆಬ್ರವರಿ, 2022ಕ್ಕೆ ಹೋಗಿದೆ.

– 2021-22 ಅಸೆಸ್​ಮೆಂಟ್​ ವರ್ಷಕ್ಕೆ ತಡವಾಗಿ ಐಟಿಆರ್​ ಸಲ್ಲಿಕೆಗೆ ಕಾಯ್ದೆಯ ಸೆಕ್ಷನ್ 139ರ ಸಬ್​ಸೆಕ್ಷನ್ (4)/ಸಬ್​ಸೆಕ್ಷನ್ (5)ರ ಅಡಿಯಲ್ಲಿ ಅಂತಿಮ ದಿನಾಂಕವು 31ನೇ ಡಿಸೆಂಬರ್, 2021 ಇತ್ತು. ಆ ನಂತರ 31 ಜನವರಿ, 2022ಕ್ಕೆ ಹೋಯಿತು. ಈ ಮೂಲಕ 31ನೇ ಮಾರ್ಚ್, 2022ಕ್ಕೆ ವಿಸ್ತರಿಸಲಾಗಿದೆ.

ಹಣಕಾಸು ಸಚಿವಾಲಯವು ಬುಧವಾರ ತಿಳಿಸಿದಂತೆ, ಹಲವಾರು ತಾಂತ್ರಿಕ ಸಮಸ್ಯೆಗಳನ್ನು “ಹಂತಹಂತವಾಗಿ ಪರಿಹರಿಸಲಾಗುತ್ತಿದೆ” ಎಂದು ಹೇಳಿದೆ. ಮತ್ತು ವೆಬ್‌ಸೈಟ್‌ನಲ್ಲಿನ ವಿವಿಧ ಫೈಲಿಂಗ್‌ಗಳ ಅಂಕಿ-ಅಂಶಗಳಲ್ಲಿ ಸಕಾರಾತ್ಮಕ ಟ್ರೆಂಡ್​ ಕಾಣಿಸಿಕೊಂಡಿದೆ.

8.83 ಕೋಟಿಗೂ ಹೆಚ್ಚು ವಿಶಿಷ್ಟ (ಯೂನಿಕ್) ತೆರಿಗೆದಾರರು ಮಂಗಳವಾರದವರೆಗೆ ಲಾಗಿನ್ ಆಗಿದ್ದು, ಸೆಪ್ಟೆಂಬರ್‌ನಲ್ಲಿ ದೈನಂದಿನ ಸರಾಸರಿ 15.55 ಲಕ್ಷಕ್ಕೂ ಅಧಿಕವಾಗಿದೆ. ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಸೆಪ್ಟೆಂಬರ್‌ನಲ್ಲಿ ಪ್ರತಿದಿನ 3.2 ಲಕ್ಷಕ್ಕೆ ಏರಿಕೆಯಾಗಿದೆ ಮತ್ತು ಹಣಕಾಸು ವರ್ಷ 2021-22ಕ್ಕೆ 1.19 ಕೋಟಿ ಐಟಿಆರ್‌ಗಳನ್ನು ಸಲ್ಲಿಸಲಾಗಿದೆ. ಈ ಪೈಕಿ 76.2 ಲಕ್ಷ ತೆರಿಗೆದಾರರು ಪೋರ್ಟಲ್‌ನ ಆನ್‌ಲೈನ್ ಉಪಯುಕ್ತತೆಯನ್ನು ರಿಟರ್ನ್ಸ್ ಸಲ್ಲಿಸಲು ಬಳಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. 94.88 ಲಕ್ಷ ಐಟಿಆರ್‌ಗಳನ್ನು ಇ-ವೆರಿಫೈ ಮಾಡಲಾಗಿದೆ. ಅದರಲ್ಲಿ 7.07 ಲಕ್ಷ ಐಟಿಆರ್‌ಗಳನ್ನು ಪ್ರೊಸೆಸ್​ ಆಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹೊಸ ಐ.ಟಿ. ಪೋರ್ಟಲ್ ಪ್ರಾರಂಭವಾದ ಸಮಯದಿಂದ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದೆ. ಇತ್ತೀಚೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರಿಗೆ ಸರ್ಕಾರದ “ತೀವ್ರ ನಿರಾಶೆ ಮತ್ತು ಕಳವಳವನ್ನು” ವ್ಯಕ್ತಪಡಿಸಿದ್ದರು. ಹೊಸ ಆದಾಯ ತೆರಿಗೆ ಫೈಲಿಂಗ್ ಪೋರ್ಟಲ್​ನಲ್ಲಿ ಮುಂದುವರಿದ ತೊಡಕುಗಳ ಬಗ್ಗೆ ಮತ್ತು ಎಲ್ಲ ತೊಂದರೆಗಳನ್ನು ಪರಿಹರಿಸಲು ಸೆಪ್ಟೆಂಬರ್ 15ರ ಗಡುವು ಕೂಡ ನಿಗದಿ ಪಡಿಸಿದರು. ಪೋರ್ಟಲ್ ಪ್ರಾರಂಭವಾದ ಎರಡು ತಿಂಗಳ ನಂತರವೂ ತೊಂದರೆಗಳು ಉಂಟಾಗುತ್ತಿದ್ದಂತೆ, ನಿರ್ಮಲಾ ಸೀತಾರಾಮನ್ ಅವರು ಪರೇಖ್ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು, ಪೋರ್ಟಲ್‌ನ ಸಮಸ್ಯೆ ಬಗೆಹರಿಯದಿರುವುದಕ್ಕೆ ಕಾರಣ ಕೇಳಿದ್ದಾರೆ.

ಆದಾಯ ತೆರಿಗೆ ಇಲಾಖೆಯು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸಭೆಯಲ್ಲಿ ಹಣಕಾಸು ಸಚಿವರು ಇನ್ಫೋಸಿಸ್ ಕಡೆಯಿಂದ ಹೆಚ್ಚಿನ ಸಂಪನ್ಮೂಲಗಳನ್ನು ಮತ್ತು ಪ್ರಯತ್ನಗಳನ್ನು ಮಾಡುವ ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದರು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಆದಾಯ ತೆರಿಗೆ ಪೋರ್ಟಲ್​ ಸಮಸ್ಯೆಗಳಿವು; ಇನ್​ಫೋಸಿಸ್ ಸಿಇಒಗೆ ಹಣಕಾಸು ಸಚಿವರು ಬುಲಾವ್ ಕಳಿಸಿದ್ದು ಈ ಕಾರಣಕ್ಕೆ

(Income Tax Returns Filing Deadline For FY21 Extended Again By CBDT Here Is The Details)

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ