ICICI Bank: ಐಸಿಐಸಿಐ ಬ್ಯಾಂಕ್ ಎಟಿಎಂ ನಗದು ವಿಥ್​ಡ್ರಾ, ಚೆಕ್​ಬುಕ್​ ಶುಲ್ಕಗಳು ಆಗಸ್ಟ್​ನಿಂದ ಬದಲಾವಣೆ​

ದೇಶದ ಪ್ರಮುಖ ಖಾಸಗಿ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್​ನಿಂದ ಮುಂದಿನ ತಿಂಗಳಿನಿಂದ ಎಟಿಎಂ, ಚೆಕ್ ಪುಸ್ತಕಗಳು ಮತ್ತು ಇತರ ಹಣಕಾಸು ವಹಿವಾಟುಗಳಿಂದ ಮೊದಲುಗೊಂಡು ಹಣವನ್ನು ಹಿಂಪಡೆಯುವ ಶುಲ್ಕದ ತನಕ ಪರಿಷ್ಕರಿಸಲು ಸಿದ್ಧತೆ ಆಗಿದೆ.

ICICI Bank: ಐಸಿಐಸಿಐ ಬ್ಯಾಂಕ್ ಎಟಿಎಂ ನಗದು ವಿಥ್​ಡ್ರಾ, ಚೆಕ್​ಬುಕ್​ ಶುಲ್ಕಗಳು ಆಗಸ್ಟ್​ನಿಂದ ಬದಲಾವಣೆ​
ಐಸಿಐಸಿಐ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ಎರಡು ಖಾತೆಗಳನ್ನು ನೀಡುತ್ತದೆ - ಯಂಗ್ ಸ್ಟಾರ್ಸ್ ಅಕೌಂಟ್ ಮತ್ತು ಯಂಗ್ ಸ್ಟಾರ್ಸ್ ಮತ್ತು ಸ್ಮಾರ್ಟ್ ಸ್ಟಾರ್ ಖಾತೆ ವಿಶೇಷವಾಗಿ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ. 18 ವರ್ಷದೊಳಗಿನ ಯಾವುದೇ ಮಗುವಿಗಾಗಿ ಯಂಗ್ ಸ್ಟಾರ್ಸ್ ಖಾತೆ ತೆರೆಯಬಹುದು. ಆದರೆ ಈ ಸೌಲಭ್ಯವನ್ನು ಪಡೆಯಲು ಪಾಲಕರು ಐಸಿಐಸಿಐ ಬ್ಯಾಂಕ್​ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ಯಂಗ್ ಸ್ಟಾರ್ಸ್ ಮತ್ತು ಸ್ಮಾರ್ಟ್ ಸ್ಟಾರ್ ಖಾತೆಯನ್ನು 10 ವರ್ಷಕ್ಕಿಂತ ಮೇಲ್ಪಟ್ಟ ಮಗುವಿಗಾಗಿ ತೆರೆಯಬಹುದು. ಆದರೆ ಯಂಗ್ ಸ್ಟಾರ್ಸ್ ಸೇವಿಂಗ್ಸ್ ಖಾತೆಯಲ್ಲಿ ಕನಿಷ್ಠ ಮಾಸಿಕ ಸರಾಸರಿ ಬ್ಯಾಲೆನ್ಸ್ (MAB) 3,000 ರೂಪಾಯಿ. ಎಟಿಎಂ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್ ಸೌಲಭ್ಯದ ಜತೆಗೆ ಆರ್‌ಡಿ, ಎಫ್‌ಡಿ, ಎಸ್‌ಐಪಿ ಇತ್ಯಾದಿ ವಿವಿಧ ಮೂಲಭೂತ ಹೂಡಿಕೆ ಆಯ್ಕೆಗಳೊಂದಿಗೆ ಇವೆ.
Follow us
TV9 Web
| Updated By: Srinivas Mata

Updated on: Jul 10, 2021 | 11:42 AM

ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನಂತರ ಇದೀಗ ಖಾಸಗಿ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್​ನಿಂದ ಮುಂದಿನ ತಿಂಗಳಿನಿಂದ ಎಟಿಎಂ, ಚೆಕ್ ಪುಸ್ತಕಗಳು ಮತ್ತು ಇತರ ಹಣಕಾಸು ವಹಿವಾಟುಗಳಿಂದ ಮೊದಲುಗೊಂಡು ಹಣವನ್ನು ಹಿಂಪಡೆಯುವ ಶುಲ್ಕದ ತನಕ ಪರಿಷ್ಕರಿಸಲು ಸಿದ್ಧತೆ ಆಗಿದೆ. ವೇತನ ಖಾತೆಗಳನ್ನೂ ಒಳಗೊಂಡಂತೆ ದೇಶೀಯ ಉಳಿತಾಯ ಖಾತೆದಾರರಿಗೆ ಈ ಪರಿಷ್ಕೃತ ಶುಲ್ಕಗಳು ಅನ್ವಯ ಆಗುತ್ತವೆ.

ಎಟಿಎಂ ನಗದು ವ್ಯವಹಾರ ಐಸಿಐಸಿಐ ಬ್ಯಾಂಕ್ ಗ್ರಾಹಕರು 6 ಮೆಟ್ರೋ ನಗರಗಳಲ್ಲಿ (ಮುಂಬೈ, ನವದೆಹಲಿ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್) ಮೊದಲ 3 ವಹಿವಾಟುಗಳನ್ನು (ಹಣಕಾಸು ಮತ್ತು ಹಣಕಾಸೇತರ) ಒಂದು ತಿಂಗಳಲ್ಲಿ ಪಡೆಯಲಿದ್ದಾರೆ ಎಂದು ಬ್ಯಾಂಕ್​ನ ವೆಬ್‌ಸೈಟ್ ತಿಳಿಸಿದೆ. ಇತರ ಎಲ್ಲ ಸ್ಥಳಗಳಲ್ಲಿ ಮೊದಲ ಐದು ವ್ಯವಹಾರಗಳು ಉಚಿತವಾಗಿರುತ್ತದೆ. ಅದರ ನಂತರ ಬ್ಯಾಂಕ್ ಪ್ರತಿ ಹಣಕಾಸು ವಹಿವಾಟಿಗೆ ರೂ. 20 ಮತ್ತು ಹಣಕಾಸುೇತರ ವಹಿವಾಟಿಗೆ ರೂ. 8.50 ವಿಧಿಸುತ್ತದೆ. ಈ ಶುಲ್ಕಗಳು ಸಿಲ್ವರ್, ಗೋಲ್ಡ್, ಮ್ಯಾಗ್ನಮ್, ಟೈಟಾನಿಯಂ ಮತ್ತು ವೆಲ್ತ್ ಕಾರ್ಡುದಾರರಿಗೆ ಅನ್ವಯವಾಗುತ್ತವೆ.

ಹೋಮ್​ ಬ್ರ್ಯಾಂಚ್​ನಲ್ಲಿ ನಗದು ವಹಿವಾಟು ಐಸಿಐಸಿಐ ಬ್ಯಾಂಕ್ ಒಟ್ಟಾರೆಯಾಗಿ ಒಂದು ತಿಂಗಳಿಗೆ 4 ಉಚಿತ ವಹಿವಾಟು ನಡೆಸಲು ಅವಕಾಶ ನೀಡುತ್ತದೆ. ಬ್ಯಾಂಕ್​ ವೆಬ್​ಸೈಟ್​ನಲ್ಲಿನ ಮಾಹಿತಿಯಂತೆ, ಆ ಮಿತಿಯ ನಂತರದಲ್ಲಿ ಪ್ರತಿ ವಹಿವಾಟಿಗೆ ರೂ. 150 ಶುಲ್ಕ ತಗುಲುತ್ತದೆ.

ಹೋಮ್​ ಬ್ರ್ಯಾಂಚ್​ನಲ್ಲಿ ನಗದು ವಹಿವಾಟು ಮಿತಿ ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಹೋಮ್ ಬ್ರ್ಯಾಂಚ್ ನಗದು ಮಿತಿ 1 ಲಕ್ಷ ರೂಪಾಯಿ ಪ್ರತಿ ಖಾತೆಗೆ ಉಚಿತ ಇರುತ್ತದೆ. 1 ಲಕ್ಷಕ್ಕಿಂತ ಹೆಚ್ಚು ಮೊತ್ತಕ್ಕೆ ಪ್ರತಿ 1,000 ರೂಪಾಯಿಗೆ ರೂ. 5, ಕನಿಷ್ಠ 150ಕ್ಕೆ ಒಳಪಟ್ಟಿರುತ್ತದೆ ಎಂದು ಬ್ಯಾಂಕ್ ತಿಳಿಸಿದೆ.

ಹೋಮ್ ಬ್ರ್ಯಾಂಚ್ ಹೊರಗಿನ ನಗದು ವಹಿವಾಟು ದಿನಕ್ಕೆ ರೂ. 25,000 ತನಕದ ನಗದು ವಹಿವಾಟಿಗೆ ಯಾವುದೇ ಶುಲ್ಕವಿಲ್ಲ. ರೂ. 25,000 ಮೇಲ್ಪಟ್ಟಲ್ಲಿ ಪ್ರತಿ 1,000 ರೂಪಾಯಿಗೆ ರೂ. 5, ಕನಿಷ್ಠ 150ಕ್ಕೆ ಒಳಪಟ್ಟಿರುತ್ತದೆ.

ಥರ್ಡ್ ಪಾರ್ಟಿ ನಗದು ವ್ಯವಹಾರ ಥರ್ಡ್ ಪಾರ್ಟಿಯ ವಹಿವಾಟುಗಳಿಗೆ ದಿನಕ್ಕೆ ರೂ. 25,000 ಎಂದು ಮಿತಿಯನ್ನು ನಿಗದಿಪಡಿಸಲಾಗಿದೆ. ಪ್ರತಿ 25,000 ಮಿತಿಯವರೆಗೆ ವಹಿವಾಟಿಗೆ ತಲಾ ರೂ. 150 ಆಗುತ್ತದೆ. 25,000 ರೂಪಾಯಿ ಮಿತಿಗಿಂತ ಹೆಚ್ಚಿನ ನಗದು ವಹಿವಾಟುಗಳನ್ನು ಅನುಮತಿಸುವುದಿಲ್ಲ.

ಚೆಕ್ ಪುಸ್ತಕಗಳು ಒಂದು ವರ್ಷದಲ್ಲಿ ಪಾವತಿಸಬೇಕಾದ 25 ಚೆಕ್ ಲೀವ್ಸ್​ಗಳಿಗೆ ಶುಲ್ಕಗಳು ಇಲ್ಲ. ಉಚಿತ ಮಿತಿಗಿಂತ ಹೆಚ್ಚಾಗಿ, 10 ಲೀವ್ಸ್​ಗಳ ಪ್ರತಿ ಹೆಚ್ಚುವರಿ ಚೆಕ್ ಪುಸ್ತಕಕ್ಕೆ ಬ್ಯಾಂಕ್ ರೂ. 20 ಶುಲ್ಕ ವಿಧಿಸುತ್ತದೆ.

ಐಸಿಐಸಿಐ ಬ್ಯಾಂಕ್ ರೆಗ್ಯುಲರ್ ಪ್ಲಸ್ ಸ್ಯಾಲರಿ ಅಕೌಂಟ್ ಒಂದು ತಿಂಗಳಲ್ಲಿ ಮೊದಲ 4 ವಹಿವಾಟುಗಳಿಗೆ ಯಾವುದೇ ಶುಲ್ಕವಿಲ್ಲ; ಅದರ ನಂತರ ಪ್ರತಿ ಸಾವಿರ ರೂಪಾಯಿಗೆ ರೂ. 5 ಅಥವಾ ಅದರ ಒಂದು ಭಾಗ, ಅದೇ ತಿಂಗಳಲ್ಲಿ ಕನಿಷ್ಠ 150 ರೂ. ಆಗುತ್ತದೆ.

ಇದನ್ನೂ ಓದಿ: SBI cash withdrawal: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಗದು ವಿಥ್​ಡ್ರಾ ನಿಯಮ ಬದಲಾವಣೆ

( India’s leading private bank ICICI Bank will revise ATM withdrawal, cash withdrawal, cheque book charges from August)