SBI savings account: ಈ ಉಳಿತಾಯ ಖಾತೆದಾರರಿಗೆ ಎಸ್​ಬಿಐನಿಂದ ರೂ. 2 ಲಕ್ಷದ ಉಚಿತ ಇನ್ಷೂರೆನ್ಸ್

SBI savings account: ಈ ಉಳಿತಾಯ ಖಾತೆದಾರರಿಗೆ ಎಸ್​ಬಿಐನಿಂದ ರೂ. 2 ಲಕ್ಷದ ಉಚಿತ ಇನ್ಷೂರೆನ್ಸ್
ಪ್ರಾತಿನಿಧಿಕ ಚಿತ್ರ

ಜನ ಧನ್ ಖಾತೆ ಹೊಂದಿರುವವರು ಬ್ಯಾಂಕ್​ನಿಂದ ರುಪೇ ಪಿಎಂಜೆಡಿವೈ ಕಾರ್ಡ್ ಪಡೆಯುತ್ತಾರೆ. ಆಗಸ್ಟ್ 28, 2018ರ ನಂತರ ನೀಡಲಾಗುವ ರುಪೇ ಕಾರ್ಡ್‌ಗಳಿಗೆ ಅಪಘಾತ ಕವರ್ ಲಾಭ 2 ಲಕ್ಷ ರೂಪಾಯಿ ತನಕ ದೊರೆಯುತ್ತದೆ.

TV9kannada Web Team

| Edited By: Srinivas Mata

Jul 10, 2021 | 2:38 PM

ರುಪೇ ಪೇ ಡೆಬಿಟ್ ಕಾರ್ಡ್‌ಗಳನ್ನು ಬಳಸುವ ಎಲ್ಲ ಜನ ಧನ್ ಖಾತೆದಾರರಿಗೆ (Jan Dhan Account) 2 ಲಕ್ಷ ರೂಪಾಯಿವರೆಗೆ ಉಚಿತವಾಗಿ ಅಪಘಾತ ವಿಮೆ ಕವರ್ ನೀಡುತ್ತದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ- State Bank Of India). ಎಲ್ಲ ಡೆಬಿಟ್ ಕಾರ್ಡ್‌ಗಳು ಕೆಲವು ಪೂರಕ ಸೇವೆಗಳೊಂದಿಗೆ ಬರುತ್ತವೆ. ಡೆಬಿಟ್ ಕಾರ್ಡ್ ಬಳಕೆದಾರರು ಆಕಸ್ಮಿಕ ಮರಣ ವಿಮೆ, ಖರೀದಿ ರಕ್ಷಣೆ ಕವರ್ ಸೇರಿದಂತೆ ವಿವಿಧ ಪ್ರಯೋಜನಗಳಿಗೆ ಅರ್ಹರಾಗಿದ್ದಾರೆ. ಅದೇ ರೀತಿ ರುಪೇ ಕಾರ್ಡ್‌ಗಳನ್ನು ಬಳಸುವ ಜನ್ ಧನ್​ನ ಎಲ್ಲ ಖಾತೆದಾರರು ಸಹ ಕೆಲವು ಪ್ರಯೋಜನಗಳಿಗೆ ಅರ್ಹರಾಗಿದ್ದಾರೆ. 2014 ರಲ್ಲಿ ಪ್ರಾರಂಭವಾದ ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆಯು ಆರ್ಥಿಕ ಸೇವೆಗಳು, ಬ್ಯಾಂಕಿಂಗ್ ಉಳಿತಾಯ ಮತ್ತು ಠೇವಣಿ ಖಾತೆಗಳು, ಹಣ ರವಾನೆ, ಸಾಲ, ವಿಮೆ, ಪಿಂಚಣಿಯನ್ನು ಆರ್ಥಿಕವಾಗಿ ನಿರ್ಲಕ್ಷ್ಯಕ್ಕೆ ಒಳಪಟ್ಟ ಜನರಿಗೆ ಕೈಗೆಟುಕುವ ರೀತಿಯಲ್ಲಿ ದೊರೆಯುವುದನ್ನು ಖಾತ್ರಿಗೊಳಿಸುತ್ತದೆ. ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (ಕೆವೈಸಿ) ದಾಖಲೆಗಳನ್ನು ಒದಗಿಸುವ ಮೂಲಕ ಆನ್‌ಲೈನ್‌ನಲ್ಲಿ ಜನ್ ಧನ್ ಖಾತೆಯನ್ನು ತೆರೆಯಬಹುದು. ಬೇಸಿಕ್ ಉಳಿತಾಯ ಖಾತೆಯನ್ನು ಜನ ಧನ್ ಯೋಜನೆ ಖಾತೆಗೆ ವರ್ಗಾಯಿಸುವ ಆಯ್ಕೆ ಇದೆ.

ಜನ ಧನ್ ಖಾತೆ ಹೊಂದಿರುವವರು ಬ್ಯಾಂಕ್​ನಿಂದ ರುಪೇ ಪಿಎಂಜೆಡಿವೈ ಕಾರ್ಡ್ ಪಡೆಯುತ್ತಾರೆ. ಆಗಸ್ಟ್ 28, 2018ರ ವರೆಗೆ ತೆರೆಯಲಾದ ಜನ್ ಧನ್ ಖಾತೆಗಳಲ್ಲಿ ನೀಡಲಾದ ರುಪೇ ಪಿಎಂಜೆಡಿವೈ ಕಾರ್ಡ್‌ಗಳ ಮೊತ್ತವು ಒಂದು ಲಕ್ಷ ರೂಪಾಯಿ, ಆಗಸ್ಟ್ 28, 2018ರ ನಂತರ ನೀಡಲಾಗುವ ರುಪೆ ಕಾರ್ಡ್‌ಗಳಿಗೆ ಅಪಘಾತ ಕವರ್ ಲಾಭ 2 ಲಕ್ಷ ರೂಪಾಯಿ ತನಕ ಅನುಕೂಲ ದೊರೆಯುತ್ತದೆ.

ಅರ್ಹತೆ: ಅಪಘಾತದ ದಿನಾಂಕಕ್ಕಿಂತ 90 ದಿನಗಳ ಮೊದಲು ಜನ ಧನ್ ಖಾತೆದಾರರು ರುಪೇ ಡೆಬಿಟ್ ಕಾರ್ಡ್ ಬಳಸಿ ಯಾವುದೇ ಚಾನಲ್‌ನಲ್ಲಿ ಇಂಟ್ರಾ ಮತ್ತು ಇಂಟರ್ ಬ್ಯಾಂಕ್​ನಲ್ಲಿ ಒಂದು ಯಶಸ್ವಿ ಹಣಕಾಸು ಅಥವಾ ಹಣಕಾಸುೇತರ ವಹಿವಾಟು ನಡೆಸಿರಬೇಕು. ಈ ಘಟನೆ ಭಾರತದ ಹೊರಗೆ ನಡೆದರೂ ವೈಯಕ್ತಿಕ ಅಪಘಾತ ನೀತಿ ಅನ್ವಯ ಆಗುತ್ತದೆ/ ಅಗತ್ಯವಾದ ದಾಖಲಾತಿಗಳನ್ನು ಸಲ್ಲಿಸುವಾಗ ವಿಮೆ ಮಾಡಿದ ಮೊತ್ತದ ಪ್ರಕಾರ ಕ್ಲೇಮ್ ಅನ್ನು ಭಾರತದ ರೂಪಾಯಿಗಳಲ್ಲಿ ಪಾವತಿಸಲಾಗುತ್ತದೆ.

ನಾಮಿನಿ: ನ್ಯಾಯಾಲಯದ ಆದೇಶದ ಪ್ರಕಾರ, ಫಲಾನುಭವಿಯು ಕಾರ್ಡ್ ಹೋಲ್ಡರ್​ನ ನಾಮಿನಿ ಅಥವಾ ಕಾನೂನುಬದ್ಧ ಉತ್ತರಾಧಿಕಾರಿ ಆಗಿರಬಹುದು. ಕೆಲವು ಸಂದರ್ಭದಲ್ಲಿ ಒಬ್ಬರಿಗಿಂತ ಹೆಚ್ಚು ಫಲಾನುಭವಿಗಳು ಇರುವ ಸಂದರ್ಭದಲ್ಲಿ, ಸಲ್ಲಿಸಿದ ಕಾನೂನು ಉತ್ತರಾಧಿಕಾರಿ ಪ್ರಮಾಣಪತ್ರದ ಪ್ರಕಾರ ಕ್ಲೇಮ್ ಅನ್ನು ಉತ್ತರಾಧಿಕಾರಿ ಹೆಸರಿನಲ್ಲಿ ಇತ್ಯರ್ಥಪಡಿಸಲಾಗುತ್ತದೆ.

ಅಪಘಾತ ಸಾವಿನ ಕ್ಲೇಮ್ ಮಾಡಲು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು: 1) ಸಂಪೂರ್ಣವಾಗಿ ಭರ್ತಿ ಮಾಡಿದ ಕ್ಲೇಮ್ ಫಾರ್ಮ್ ಮತ್ತು ಅದರಲ್ಲಿ ಸಹಿ ಮಾಡಿರಬೇಕು 2) ಮರಣ ಪ್ರಮಾಣಪತ್ರದ ಮೂಲ ಅಥವಾ ಪ್ರಮಾಣೀಕೃತ ಪ್ರತಿ. 3) ಅಪಘಾತದ ವಿವರಣೆಯನ್ನು ನೀಡುವ ಎಫ್‌ಐಆರ್ ಅಥವಾ ಪೊಲೀಸ್ ವರದಿಯ ಮೂಲ ಅಥವಾ ಪ್ರಮಾಣೀಕೃತ ಪ್ರತಿ. 4) ಅಗತ್ಯ ಇರುವ ಕಡೆಗೆ ರಾಸಾಯನಿಕ ವಿಶ್ಲೇಷಣೆ/ಎಫ್‌ಎಸ್‌ಎಲ್ ವರದಿಗಳೊಂದಿಗೆ ಮರಣೋತ್ತರ ವರದಿಯ ಮೂಲ ಅಥವಾ ಪ್ರಮಾಣೀಕೃತ ಪ್ರತಿ. 5) ಕಾರ್ಡ್ ಹೋಲ್ಡರ್ ಮತ್ತು ನಾಮಿನಿಯ ಆಧಾರ್ ಪ್ರತಿಗಳು. 6) ಘೋಷಣಾ ಪತ್ರದಲ್ಲಿ ಕಾರ್ಡ್​ ವಿತರಿಸಿದ ಬ್ಯಾಂಕ್​ ಅಧಿಕೃತ ಸಹಿ ಮತ್ತು ಬ್ಯಾಂಕ್ ಸ್ಟ್ಯಾಂಪ್‌ ಎ) ಕಾರ್ಡ್‌ಹೋಲ್ಡರ್ ಬಳಿ ಇರುವ ರುಪೇ ಕಾರ್ಡ್​ನ ರುಪೇನಲ್ಲಿ ಐಐಎನ್‌ ಇರುತ್ತದೆ. ಮತ್ತು ಅದರಲ್ಲಿ ಇರುವ 16 ಅಂಕಿಯ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಬಿ) 90 ದಿನಗಳ ವಹಿವಾಟು ಮಾನದಂಡಗಳ ಅನುಸರಣೆ (ವಹಿವಾಟಿನೊಂದಿಗೆ ಸಪೋರ್ಟ್ ಮಾಡುವುದಕ್ಕೆ ಬ್ಯಾಂಕಿನ ಸಿಸ್ಟಮ್​ನಿಂದ ಲಾಗ್/ ಖಾತೆ ಸ್ಟೇಟ್​ಮೆಂಟ್), ಸಿ) ನಾಮಿನಿ ಹೆಸರು ಮತ್ತು ಬ್ಯಾಂಕಿಂಗ್ ಡೀಟೇಲ್ಸ್ (ಪಾಸ್‌ಬುಕ್ ನಕಲು ಸೇರಿದಂತೆ), ಡಿ) ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಭಾಷಾಂತರಿಸಿದ ಎಫ್‌ಐಆರ್​ನಲ್ಲಿ ಅಪಘಾತದ ಸಂಕ್ಷಿಪ್ತ ವಿವರಣೆ, ಇ) ಬ್ಯಾಂಕ್ ಅಧಿಕಾರಿಯ ಹೆಸರು ಮತ್ತು ಇಮೇಲ್ ವಿವರಗಳೊಂದಿಗೆ ಸಂಪರ್ಕ ವಿವರಗಳು.

ದಾಖಲೆಗಳನ್ನು ಸ್ವೀಕರಿಸಿದ ದಿನಾಂಕದಿಂದ ಹತ್ತು ಕೆಲಸದ ದಿನಗಳಲ್ಲಿ ಕ್ಲೇಮ್​ಗಳನ್ನು ಇತ್ಯರ್ಥಪಡಿಸಲಾಗುತ್ತದೆ. ಮಾರ್ಚ್ 31, 2022ರ ವರೆಗೆ ಈ ಬೆನಿಫಿಟ್​ಗಳನ್ನು ಒದಗಿಸಲಾಗುವುದು. ರುಪೇ ಪಿಎಂಜೆಡಿವೈ ಕಾರ್ಡ್‌ಗಳಿಗಾಗಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪೆನಿ ಲಿಮಿಟೆಡ್ ಎನ್‌ಪಿಸಿಐ ಜೊತೆ ವಿಮಾ ಪಾಲುದಾರರಾಗಿ ಮುಂದುವರಿಯುತ್ತದೆ.

ಇದನ್ನೂ ಓದಿ: Jan-dhan account: ಸಾಮಾನ್ಯ ಉಳಿತಾಯ ಖಾತೆಯನ್ನು ಜನ್-ಧನ್ ಖಾತೆಗೆ ಬದಲಾಯಿಸುವುದು ಹೇಗೆ?

ಇದನ್ನೂ ಓದಿ: Jan Dhan account: ಜನ್​ಧನ್ ಖಾತೆಯ ಫಲಾನುಭವಿಗಳ ಸಂಖ್ಯೆ ಏಪ್ರಿಲ್​ನಲ್ಲಿ 11 ಲಕ್ಷ ಹೆಚ್ಚಳ

(State Bank Of India provides free accident insurance worth of Rs 2 lakhs to these account holders. Here is the details)

Follow us on

Related Stories

Most Read Stories

Click on your DTH Provider to Add TV9 Kannada