Jan Dhan account: ಜನ್​ಧನ್ ಖಾತೆಯ ಫಲಾನುಭವಿಗಳ ಸಂಖ್ಯೆ ಏಪ್ರಿಲ್​ನಲ್ಲಿ 11 ಲಕ್ಷ ಹೆಚ್ಚಳ

ಜನ್​ಧನ್ ಖಾತೆಯ ಫಲಾನುಭವಿಗಳ ಸಂಖ್ಯೆಯು ಏಪ್ರಿಲ್​ ತಿಂಗಳಲ್ಲಿ 11 ಲಕ್ಷ ಜಾಸ್ತಿ ಆಗಿದೆ. ಆದರೆ ಒಟ್ಟಾರೆ ಟೇಪಾಸಿಟ್​ಗಳ ಪ್ರಮಾಣ ಮಾತ್ರ ಕಡಿಮೆ ಆಗಿದೆ.

Jan Dhan account: ಜನ್​ಧನ್ ಖಾತೆಯ ಫಲಾನುಭವಿಗಳ ಸಂಖ್ಯೆ ಏಪ್ರಿಲ್​ನಲ್ಲಿ 11 ಲಕ್ಷ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: May 06, 2021 | 4:39 PM

ಕೊರೊನಾ ಎರಡನೇ ಅಲೆ ತೀವ್ರವಾಗಿದ್ದರ ಹೊರತಾಗಿಯೂ 2021ರ ಏಪ್ರಿಲ್​ ತಿಂಗಳಲ್ಲಿ ಜನ್​ ಧನ್ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದೆ. ಇನ್ನು ಸಂಖ್ಯೆ ಹೆಚ್ಚಳವಾಗಿದೆಯಾದರೂ ಇವುಗಳ ಒಟ್ಟಾರೆ ಠೇವಣಿಯಲ್ಲಿ ಇಳಿಕೆ ಆಗಿದೆ ಎಂಬ ಅಂಶ ಸರ್ಕಾರಿ ದತ್ತಾಂಶಗಳಿಂದ ಗೊತ್ತಾಗುತ್ತಿದೆ. ಹಣಕಾಸು ವರ್ಷ 2021ರ ಕೊನೆಗೆ 42.20 ಕೋಟಿಯಷ್ಟಿದ್ದ ಜನ್​ಧನ್ ಖಾತೆದಾರರ ಸಂಖ್ಯೆಯು ಏಪ್ರಿಲ್​ಗೆ 42.31 ಕೋಟಿ ಆಗಿದೆ. ಅಂದರೆ ಒಂದು ತಿಂಗಳಲ್ಲಿ 11 ಲಕ್ಷ ವೈಯಕ್ತಿಕ ಖಾತೆದಾರರ ಹೆಸರು ಸೇರ್ಪಡೆ ಆಗಿದೆ. ಇನ್ನು ಈ ಖಾತೆಗಳಲ್ಲಿನ ಸರಾಸರಿ ಠೇವಣಿ ಮೊತ್ತ ಕೂಡ ಇಳಿಕೆ ಕಂಡಿದ್ದು, ಡೆಬಿಟ್ ಕಾರ್ಡ್ ವಿತರಿಸಿದ್ದವರ ಪಾಲು ಕೂ ಕಡಿಮೆ ಆಗಿದೆ.

6 ಲಕ್ಷ ಡೆಬಿಟ್ ಕಾರ್ಡ್​ಗಳು ಈ ಹೊಸ ಫಲಾನುಭವಿಗಳಿಗೆ ಏಪ್ರಿಲ್​ನಲ್ಲಿ 6 ಲಕ್ಷ ಡೆಬಿಟ್​ ಕಾರ್ಡ್​ಗಳನ್ನು ವಿತರಣೆ ಮಾಡಲಾಗಿದೆ. ಆದರೂ ಕ್ಯುಮುಲೇಟಿವ್ (ಸಂಚಿತ) ಡೆಪಾಸಿಟ್ಸ್​ ಈ ಖಾತೆಗಳಲ್ಲಿ ಮಾರ್ಚ್​ ಕೊನೆಗೆ ಇದ್ದ 145,550 ಕೋಟಿಯಿಂದ ಏಪ್ರಿಲ್ ಅಂತ್ಯಕ್ಕೆ 143,297 ಕೋಟಿ ಆಗಿದೆ. ನಿವ್ವಳವಾಗಿ ಈ ಖಾತೆಯಿಂದ ಹೊರ ಹೋಗಿರುವ ಮೊತ್ತ 2,253 ಕೋಟಿ ರೂಪಾಯಿ.

ಸರಾಸರಿ ಠೇವಣಿ FY21ರಲ್ಲಿ ಜನ್​ಧನ್ ಖಾತೆ ಸರಾಸರಿ ರೂ. 3,449 ಇದ್ದದ್ದು, ಏಪ್ರಿಲ್ ಕೊನೆ ಹೊತ್ತಿಗೆ ರೂ. 3,386.85 ಆಗಿದೆ. ಮಾರ್ಚ್ 31, 2021ರ ತನಕದ ದತ್ತಾಂಶವನ್ನು ವಿಶ್ಲೇಷಣೆ ಮಾಡಿದಲ್ಲಿ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ದೇಶದಲ್ಲೇ ಅತಿ ಹೆಚ್ಚಿನ ಪ್ರಮಾಣದ ಸರಾಸರಿ ಠೇವಣಿ ಇದೆ. ಮೊದಲೇ ಹೇಳಿದ ಹಾಗೆ ಅಖಿಲ ಭಾರತ ಮಟ್ಟದ ಸರಾಸರಿ 3,449 ಇದ್ದರೆ, ಲಕ್ಷದ್ವೀಪದಲ್ಲಿ ಆ ಸರಾಸರಿ 5.4 ಪಟ್ಟು ಹೆಚ್ಚಾಗಿ, 18,684 ರೂಪಾಯಿ ಇದೆ.

ತಳ ಸೇರಿದೆ ಮಣಿಪುರ್ FY21 ಕೊನೆಗೆ ಠೇವಣಿ ವಿಚಾರದಲ್ಲಿ ಮಣಿಪುರ್ ನೆಲ ಕಚ್ಚಿದ್ದು, ಫಲಾನುಭವಿಗೆ ತಲಾ 2,037 ರೂಪಾಯಿ ದಾಖಲಾಗಿದೆ. ಕಳೆದ ವರ್ಷ ಸರಾಸರಿ ಠೇವಣಿ ಲೆಕ್ಕಾಚಾರದಲ್ಲಿ ಎರಡು ಮತ್ತು ಮೂರನೇ ಸ್ಥಾನದಲ್ಲಿ ಇದ್ದದ್ದು ಕೇಂದ್ರಾಡಳಿತ ಪ್ರದೇಶ ಲಡಾಕ್ ಮತ್ತು ಗೋವಾ. ಆಗ ಲಡಾಕ್​ನಲ್ಲಿ ಸರಾಸರಿ ಠೇವಣಿ ರೂ. 10,931 (ರಾಷ್ಟ್ರೀಯ ಸರಾಸರಿಯ 3.16 ಪಟ್ಟು), ಗೋವಾದಲ್ಲಿ ರೂ. 6.899 (ದೇಶದ ಸರಾಸರಿಯ ಎರಡು ಪಟ್ಟು) ಇತ್ತು.

ಮಾರ್ಚ್ 31, 2021ರ ಕೊನೆಗೆ 12 ರಾಜ್ಯಗಳು ಅಖಿಲ ಭಾರತ ಮಟ್ಟದ ಸರಾಸರಿಯಾದ ರೂ. 3,449ಕ್ಕಿಂತ ಕಡಿಮೆ ಇವೆ. ಇನ್ನು 22 ಆ ಸರಾಸರಿಗಿಂತ ಮೇಲ್ಮಟ್ಟದಲ್ಲಿವೆ.

ಡೆಬಿಟ್ ಕಾರ್ಡ್/ಖಾತೆಯಲ್ಲಿ ಕುಸಿತ FY21 ಕೊನೆ ಹೊತ್ತಿಗೆ 42.2 ಕೋಟಿ ಜನ್​ಧನ್​ ಫಲಾನುಭವಿಗಳಿಗೆ 30.9 ಕೋಟಿ ಡೆಬಿಟ್​ ಕಾರ್ಡ್​ಗಳನ್ನು ವಿತರಿಸಲಾಗಿತ್ತು. ಅಂದರೆ ಶೇ 73.22ರಷ್ಟು ಫಲಾನುಭವಿಗಳು ಡೆಬಿಟ್​ ಕಾರ್ಡ್ ಹೊಂದಿದ್ದು, ಅವರು ಎಟಿಎಂನಲ್ಲಿ ವ್ಯವಹರಿಸಬಹುದು ಮತ್ತು ಆನ್​ಲೈನ್​ ಖರೀದಿ ಮಾಡಬಹುದು. ಏಪ್ರಿಲ್ ಕೊನೆಗೆ ಡೆಬಿಟ್ ಖಾತೆ ಹೊಂದಿರುವ ಜನ್​-ಧನ್ ಫಲಾನುಭವಿಗಳ ಸಂಖ್ಯೆ ಶೇ 73.17 ಆಗಿದೆ.

FY21ರ ಕೊನೆಗೆ ಲಡಾಕ್​ನಲ್ಲಿನ ಶೇ 90ರಷ್ಟು ಜನ್​ಧನ್ ಖಾತೆದಾರರ ಬಳಿ ಡೆಬಿಟ್ ಕಾರ್ಡ್ ಇದ್ದವು. ಅದೇ ಮಣಿಪುರ್ ವಿಚಾರಕ್ಕೆ ಬಂದರೆ ಡೆಬಿಟ್ ಕಾರ್ಡ್ ಪಡೆದ ಜನ್​ಧನ್ ಫಲಾನುಭವಿಗಳ ಪ್ರಮಾಣ ಶೇ 35.14 ಮಾತ್ರ. ಅಂದಹಾಗೆ ಮಿಜೋರಾಂನಲ್ಲಿ ಕೂಡ ಶೇ 35.14ರಷ್ಟು ಖಾತೆದಾರರು ಡೆಬಿಟ್ ಕಾರ್ಡ್ ಹೊಂದಿದ್ದಾರೆ.

2014ರ ಆಗಸ್ಟ್​ನಿಂದ 2014ರ ಆಗಸ್ಟ್​ನಲ್ಲಿ ಪ್ರಧಾನಮಂತ್ರಿ ಜನ್ ಧನ್ ಖಾತೆ ಯೋಜನೆ ಶುರುವಾಯಿತು. ಪ್ರತಿ ಕುಟುಂಬಕ್ಕೂ ಬ್ಯಾಂಕ್ ಖಾತೆ ಇರಬೇಕು ಎಂಬ ಉದ್ದೇಶದಿಂದ ಆರಂಭವಾದದ್ದು, ಈಗ ಪ್ರತಿ ವಯಸ್ಕ ವ್ಯಕ್ತಿಗೂ ಬ್ಯಾಂಕ್ ಖಾತೆ ಇರಬೇಕು ಎಂಬಲ್ಲಿಗೆ ಬಂದಿದೆ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳು, ಖಾಸಗಿ ವಲಯದ ಬ್ಯಾಂಕ್​ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳು ಇವುಗಳ ಪೈಕಿ ಯಾವುದರಲ್ಲಾದರೂ ಜನ್ ಧನ್ ಖಾತೆ ತೆರೆಯಬಹುದು.

ಈ ಬ್ಯಾಂಕ್ ಖಾತೆಯ ಅತಿ ಮುಖ್ಯವಾದ ಅನುಕೂಲ ಏನೆಂದರೆ, ನೇರ ನಗದು ವರ್ಗಾವಣೆಯು ಯಾವುದೇ ಸೋರಿಕೆ ಇಲ್ಲದಂತೆ ಫಲಾನುಭವಿಗಳನ್ನು ತಲುಪುತ್ತದೆ. ಮಹಿಳಾ ಸಬಲೀಕರಣವು ಇದರ ಮತ್ತೊಂದು ಅತಿ ಮುಖ್ಯ ಉದ್ದೇಶ.

(ಮಾಹಿತಿ: ಮನಿ9.ಕಾಮ್)

ಇದನ್ನೂ ಓದಿ: 7 changes from May: ಮೇ ತಿಂಗಳ ಮೊದಲ ದಿನದಿಂದ ಈ 7 ಬದಲಾವಣೆಗಳನ್ನು ನಿರೀಕ್ಷಿಸಿ, ಸಿದ್ಧರಾಗಿ

(11 lakh beneficiaries added to Jan Dhan scheme in April 2021)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ