AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಜಾಜ್ ಫೈನಾನ್ಸ್​ ಡಿಜಿಟಲ್ ವ್ಯಾಲೆಟ್​ಗೆ ಅನುಮತಿ ನೀಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

ಬಜಾಜ್ ಫೈನಾನ್ಸ್ ಕಂಪೆನಿಗೆ ಡಿಜಿಟಲ್ ವ್ಯಾಲೆಟ್​ಗೆ ರಿಸರ್ವ್ ಬ್ಯಾಂಕ್​ ಆಫ್ ಇಂಡಿಯಾದಿಂದ ಅನುಮತಿ ನೀಡಲಾಗಿದೆ. ಏನಿದರ ಅನುಕೂಲ ಮತ್ತು ಪಿಪಿಐ ಅಂದರೇನು ಎಂದು ತಿಳಿದುಕೊಳ್ಳಿ.

ಬಜಾಜ್ ಫೈನಾನ್ಸ್​ ಡಿಜಿಟಲ್ ವ್ಯಾಲೆಟ್​ಗೆ ಅನುಮತಿ ನೀಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ರಿಸರ್ವ್​ ಬ್ಯಾಂಕ್ ಆಫ್​ ಇಂಡಿಯಾ (ಸಾಂದರ್ಭಿಕ ಚಿತ್ರ)
Srinivas Mata
|

Updated on: May 06, 2021 | 7:17 PM

Share

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಬಜಾಜ್ ಫೈನಾನ್ಸ್​ ವ್ಯಾಲೆಟ್​ಗೆ ಶಾಶ್ವತ ಮಾನ್ಯತೆ ಕೊಟ್ಟು, ಮಂಜೂರಾತಿ ನೀಡಿದೆ. ಇದರರ್ಥ ಏನೆಂದರೆ, ಕಂಪೆನಿಯಿಂದ ಈ ಹಿಂದೆ ಕೇಳುತ್ತಿದ್ದಂತೆ ಪ್ರತಿ ವರ್ಷ ಮಾನ್ಯತೆ ಕೇಳುವ ಅಗತ್ಯ ಇಲ್ಲ. ಕಂಪೆನಿಗೆ ಮಾರುಕಟ್ಟೆ ಪ್ರವೇಶಿಸಲು ಪರ್ಪೆಚುಯಲ್ ಮಾನ್ಯತೆ ಸಮ್ಮತಿ ಸಿಕ್ಕಿದೆ. ಎಲ್ಲ ಪಾವತಿಯನ್ನೂ ಒಗ್ಗೂಡಿಸಿ, ಒಂದು ಪ್ಲಾಟ್​ಫಾರ್ಮ್ ಆದ ಬಜಾಜ್ ಪೇ ​ ಅಂತ ಮಾಡುವ ಶ್ರಮವೂ ಅದರಲ್ಲಿ ಅಡಗಿದೆ. ಗ್ರಾಹಕರಿಗೆ ದೊಡ್ಡ ಮಟ್ಟದಲ್ಲಿ ಡಿಜಿಟಲ್ ಫೈನಾನ್ಸ್ ಆಫರಿಂಗ್ ವಿಸ್ತರಣೆ ಮಾಡುವ ಯೋಜನೆಯಲ್ಲಿ ಬಜಾಜ್ ಫೈನಾನ್ಸ್​ನ ಡಿಜಿಟಲ್ ವ್ಯಾಲೆಟ್​ ಕೂಡ ಒಂದು ಭಾಗವಾಗಿದೆ. ಪಾವತಿ ಮಾರ್ಕೆಟ್​ನಲ್ಲಿ ವಿಸ್ತರಣೆ ಮಾಡುವ ಉದ್ದೇಶದಿಂದ ಕಂಪೆನಿಯು ಹಂತಹಂತವಾಗಿ “ಬಜಾಜ್​ ಪೇ” ಜಾರಿಗೆ ತರುತ್ತಿದೆ.

ಭಾರತ್ ಬಿಲ್ ಪೇ ವ್ಯವಸ್ಥೆಯು ಜನವರಿಯಲ್ಲಿ ಬಜಾಜ್​ ಪೇನಲ್ಲಿ ಲೈವ್ ಆಗಿತ್ತು ಎಂದು ಕಂಪೆನಿಯ ತ್ರೈಮಾಸಿಕ ಹೂಡಿಕೆದಾರರ ಪ್ರಸೆಂಟೇಷನ್​ನಲ್ಲಿ ತಿಳಿಸಲಾಗಿದೆ. ಮೇ ತಿಂಗಳಲ್ಲಿ ಪೂರ್ಣ ಪ್ರಮಾಣದ ಯುಪಿಐ ಪಾವತಿ ಆಯ್ಕೆಯು ದೊರೆಯುವ ನಿರೀಕ್ಷೆ ಇದೆ. ಕಳೆದ ವಾರ ಕಂಪೆನಿಯಿಂದ 2021ನೇ ಹಣಕಾಸು ವರ್ಷದ ಕನ್ಸಾಲಿಡೇಟೆಡ್ ಲಾಭವನ್ನು ಘೋಷಣೆ ಮಾಡಿದ್ದು, FY20ರಲ್ಲಿ 948 ಕೋಟಿ ರೂಪಾಯಿ ಇದ್ದದ್ದು, FY21ರಲ್ಲಿ ರೂ. 1347 ಕೋಟಿ ಆಗಿದೆ.

ಪ್ರೀಪೇಯ್ಡ್ ಪೇಮೆಂಟ್ ಇನ್​ಸ್ಟ್ರುಮೆಂಟ್ಸ್ (PPI)ಎಂದರೇನು? ಪ್ರೀಪೇಯ್ಡ್ ಪೇಮೆಂಟ್ ಇನ್​ಸ್ಟ್ರುಮೆಂಟ್ಸ್ (PPI)ಅಂದರೆ ಸರಕು ಮತ್ತು ಸೇವೆಗೆ ಪಾವತಿ ಮಾಡುವುದಕ್ಕೆ, ಅಷ್ಟೇ ಅಲ್ಲ, ಅದಾಗಲೇ ಸೇರ್ಪಡೆ ಮಾಡಿರುವ ಹಣದಿಂದ ಪಾವತಿ ಮಾಡಲು ಇರುವ ಸಾಧನ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಈ ಪ್ರೀಪೇಯ್ಡ್ ಇನ್​ಸ್ಟ್ರುಮೆಂಟ್​ಗಳ ಲೈಸೆನ್ಸ್ ನೀಡುವುದು ಮತ್ತು ಅವುಗಳ ನಿಯಂತ್ರಣವನ್ನು ಮಾಡುತ್ತದೆ. ಪೇಮೆಂಟ್ ಅಂಡ್ ಸೆಟ್ಲ್​ಮೆಂಟ್ ಸಿಸ್ಟಮ್ ಆ್ಯಕ್ಟ್, 2007 (PSS Act, 2007) ಸೆಕ್ಷನ್ 10 (2)ರಲ್ಲಿ ತಿಳಿಸಿರುವಂತೆ ಸೆಕ್ಷನ್ 18ರ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

ಇದನ್ನೂ ಓದಿ: 10,000 ರೂಪಾಯಿ ಹೂಡಿದವರಿಗೆ 20 ವರ್ಷದಲ್ಲಿ 2 ಕೋಟಿ ಮಾಡಿಕೊಟ್ಟ ಕಂಪೆನಿಯ ಕಥೆಯಿದು

(Bajaj Finance Company’s digital wallet approved by Reserve Bank Of India (RBI). Here is the details)

6 ತಿಂಗಳಿಂದ ಪಾವತಿಯಾಗಿಲ್ಲ ಸಂಬಳ! ಗುತ್ತಿಗೆ ವೈದ್ಯಾಧಿಕಾರಿ ರಾಜೀನಾಮೆ
6 ತಿಂಗಳಿಂದ ಪಾವತಿಯಾಗಿಲ್ಲ ಸಂಬಳ! ಗುತ್ತಿಗೆ ವೈದ್ಯಾಧಿಕಾರಿ ರಾಜೀನಾಮೆ
ನ್ಯೂಝಿಲೆಂಡ್​ ತಂಡಕ್ಕೆ ಬರೋಬ್ಬರಿ 323 ರನ್​ಗಳ ಜಯ
ನ್ಯೂಝಿಲೆಂಡ್​ ತಂಡಕ್ಕೆ ಬರೋಬ್ಬರಿ 323 ರನ್​ಗಳ ಜಯ
ಬಿಗ್ ಬಾಸ್ ಮನೆಗೆ ಹೋಗಿದ್ದು ಅಶ್ವಿನಿ, ಗಿಲ್ಲಿಗೆ ಠಕ್ಕರ್ ಕೊಡೋಕಾ?
ಬಿಗ್ ಬಾಸ್ ಮನೆಗೆ ಹೋಗಿದ್ದು ಅಶ್ವಿನಿ, ಗಿಲ್ಲಿಗೆ ಠಕ್ಕರ್ ಕೊಡೋಕಾ?
ಪ್ರೊಪೋಸ್ ಮಾಡಲು ಉಂಗುರವಲ್ಲ, ಸಿಂಧೂರದೊಂದಿಗೆ ಬಂದ ಯುವಕ
ಪ್ರೊಪೋಸ್ ಮಾಡಲು ಉಂಗುರವಲ್ಲ, ಸಿಂಧೂರದೊಂದಿಗೆ ಬಂದ ಯುವಕ
ಭೀಕರ ಕೊಲೆ ಪ್ರಕರಣದಿಂದ ಪೊಲೀಸರಿಗೇ ಶಾಕ್! ಎಸ್​ಪಿ ಹೇಳಿದ್ದೇನು ನೋಡಿ
ಭೀಕರ ಕೊಲೆ ಪ್ರಕರಣದಿಂದ ಪೊಲೀಸರಿಗೇ ಶಾಕ್! ಎಸ್​ಪಿ ಹೇಳಿದ್ದೇನು ನೋಡಿ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್