ಐಡಿಬಿಐ ಬ್ಯಾಂಕ್ ಷೇರು ಶೇ 14ರಷ್ಟು ಏರಿಕೆ ದಾಖಲೆ; ರೂ. 40ರ ಮೇಲೆ ವಹಿವಾಟು

ಐಡಿಬಿಐ ಬ್ಯಾಂಕ್ ಷೇರು ಬಂಡವಾಳ ಹಿಂತೆಗೆತಕ್ಕೆ ಕೇಂದ್ರ ಸಂಪುಟದಿಂದ ತಾತ್ವಿಕ ಒಪ್ಪಿಗೆ ಸಿಕ್ಕಿರುವುದರಿಂದ ಗುರುವಾರ ಆ ಷೇರಿನ ಬೆಲೆಯಲ್ಲಿ ಶೇ 14ರಷ್ಟು ಏರಿಕೆ ಕಂಡಿತ್ತು.

ಐಡಿಬಿಐ ಬ್ಯಾಂಕ್ ಷೇರು ಶೇ 14ರಷ್ಟು ಏರಿಕೆ ದಾಖಲೆ; ರೂ. 40ರ ಮೇಲೆ ವಹಿವಾಟು
ಐಡಿಬಿಐ ಬ್ಯಾಂಕ್ ಇದಕ್ಕೆ ಕನಿಷ್ಠ ಖಾತೆಯ ಸರಾಸರಿ ಬ್ಯಾಲೆನ್ಸ್ ಕೇವಲ ರೂ. 500 ಅಗತ್ಯ. ಪ್ರತಿ ತಿಂಗಳು ಅದನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ ಯಾವುದೇ ದಂಡ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಆದರೂ ಬ್ಯಾಂಕ್​ನಿಂದ ಎಟಿಎಂ ನಿಯಮ ಅನುಸಾರ ಡೆಬಿಟ್ ಕಾರ್ಡ್‌ನೊಂದಿಗೆ ದಿನಕ್ಕೆ 2000 ರೂಪಾಯಿ ವಿಥ್​ಡ್ರಾ ಮಿತಿಯನ್ನು ನಿಗದಿಪಡಿಸಿದೆ. ಐಡಿಬಿಐ ಬ್ಯಾಂಕ್ ಪವರ್ ಕಿಡ್ಸ್ ಖಾತೆಯಿಂದ ಉಚಿತ ಮಾಸಿಕ ಇಮೇಲ್ ಸ್ಟೇಟ್‌ಮೆಂಟ್‌ಗಳು, ಉಚಿತ ಪಾಸ್‌ಬುಕ್ ಮತ್ತು ವಯಕ್ತಿಕ ಚೆಕ್ ಪುಸ್ತಕವನ್ನು ಸಹ ನೀಡಲಾಗುತ್ತದೆ. ನಿಮ್ಮ ಮಗು ಪ್ರೌಢಶಾಲೆ ಅಥವಾ ಕಾಲೇಜಿನಲ್ಲಿ ಭಾರತ ಅಥವಾ ವಿದೇಶದಲ್ಲಿ ಅಧ್ಯಯನ ಮಾಡಲು ನಿರ್ಧರಿಸಿದರೆ ಮಗುವಿಗೆ ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲ ಪಡೆಯಬಹುದು.
Follow us
Srinivas Mata
|

Updated on: May 06, 2021 | 12:24 PM

ಐಡಿಬಿಐ ಬ್ಯಾಂಕ್ ಷೇರುಗಳು ಗುರುವಾರದಂದು ಶೇ 14ರಷ್ಟು ಏರಿಕೆ ದಾಖಲಿಸಿವೆ. ಸ್ಟ್ರಾಟೆಜಿಕ್ ಬಂಡವಾಳ ಹಿಂತೆಗೆತ ಮತ್ತು ಆಡಳಿತದ ಹತೋಟಿ ವರ್ಗಾವಣೆಗೆ ಕೇಂದ್ರ ಸಂಪುಟದಿಂದ ತಾತ್ವಿಕ ಒಪ್ಪಿಗೆ ಸಿಕ್ಕ ನಂತರ ಷೇರಿನ ಬೆಲೆ ಮೇಲೇರಿದೆ. ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಐಡಿಬಿಐ ಬ್ಯಾಂಕ್ ಸ್ಟ್ರಾಟೆಜಿಕ್ ಮಾರಾಟಕ್ಕೆ ಒಪ್ಪಿಗೆ ನೀಡಿದೆ ಎಂದು ಬುಧವಾರ ಅಧಿಕೃತ ಹೇಳಿಕೆ ನೀಡಲಾಯಿತು. ಕೇಂದ್ರ ಸರ್ಕಾರ ಮತ್ತು ಜೀವ ವಿಮಾ ನಿಗಮವು (ಎಲ್​ಐಸಿ) ಎರಡೂ ಸೇರಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಜತೆಗೆ ಚರ್ಚೆ ನಡೆಸಿದ ನಂತರ, ಎಷ್ಟು ಪ್ರಮಾಣದಲ್ಲಿ ಬಂಡವಾಳ ಹಿಂತೆಗೆದುಕೊಳ್ಳುತ್ತವೆ ನಿರ್ಧರಿಸುತ್ತವೆ ಎನ್ನಲಾಗಿದೆ.

ಕೇಂದ್ರ ಸರ್ಕಾರ ಮತ್ತು ಎಲ್​ಐಸಿ ಎರಡೂ ಸೇರಿಕೊಂಡು ಐಡಿಬಿಐ ಬ್ಯಾಂಕ್​ನಲ್ಲಿ ಶೇ 94ಕ್ಕಿಂತ ಹೆಚ್ಚಿನ ಪ್ರಮಾಣದ ಈಕ್ವಿಟಿ ಪಾಲು ಹೊಂದಿವೆ. ಎಲ್​ಐಸಿ ಸದ್ಯಕ್ಕೆ ಐಡಿಬಿಐ ಬ್ಯಾಂಕ್ ಪ್ರಮೋಟರ್ ಆಗಿದೆ. ಜತೆಗೆ ಆಡಳಿತ ನಿರ್ವಹಣೆ ಹೊಂದಿದ್ದು, ಶೇ 49.21ರಷ್ಟು ಷೇರಿನ ಪಾಲು ಹೊಂದಿದೆ. 2021-22 ಕೇಂದ್ರ ಬಜೆಟ್​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳ ಖಾಸಗೀಕರಣದ ಬಗ್ಗೆ ಘೋಷಿಸಿದ್ದರು. ಒಟ್ಟಾರೆಯಾಗಿ 1.75 ಲಕ್ಷ ಕೋಟಿ ರೂಪಾಯಿ ಬಂಡವಾಳ ಹಿಂತೆಗೆತದ ಭಾಗವಾಗಿ ಈ ಘೋಷಣೆ ಮಾಡಿದ್ದರು.

ಐಡಿಬಿಐ ಬ್ಯಾಂಕ್ ಹೊರತುಪಡಿಸಿ ಇತರ ಎರಡು ಸಾರ್ವಜನಿಕ ಬ್ಯಾಂಕ್​ಗಳು ಹಾಗೂ ಒಂದು ಜನರಲ್ ಇನ್ಷೂರೆನ್ಸ್ ಕಂಪೆನಿಯ ಬಂಡವಾಳದ ಹಿಂತೆಗೆತದ ಗುರಿಯನ್ನು 2021-22ಕ್ಕೆ ಇರಿಸಿಕೊಳ್ಳಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಬೆಳಗ್ಗೆ 10.25ಕ್ಕೆ ಐಡಿಬಿಐ ಬ್ಯಾಂಕ್ ಶೇ 6.85 ಏರಿಕೆಯಾಗಿ ತಲಾ ಷೇರಿಗೆ ಬಿಎಸ್​ಇಯಲ್ಲಿ ರೂ. 40.55ರಲ್ಲಿ ವಹಿವಾಟು ನಡೆಸಿತ್ತು. ಈ ಸುದ್ದಿಯನ್ನು ಪಬ್ಲಿಷ್ ಮಾಡುವ ಹೊತ್ತಿಗೆ ಶೇ 7.25 ಏರಿಕೆಯಾಗಿ ರೂ. 40.70 ಇತ್ತು.

ಇದನ್ನೂ ಓದಿ: Budget 2021 | ಸಾರ್ವಜನಿಕ ವಲಯದ ಬ್ಯಾಂಕ್​ಗಳಿಗೆ ಆಗಬೇಕಿದೆ ಮೇಜರ್ ಸರ್ಜರಿ

(IDBI Bank share price increased by 14% on Thursday, after in principle approval for disinvestment by central government)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ