Sign In

By signing in or creating an account, you agree with Associated Broadcasting Company's Terms & Conditions and Privacy Policy.

7 changes from May: ಮೇ ತಿಂಗಳ ಮೊದಲ ದಿನದಿಂದ ಈ 7 ಬದಲಾವಣೆಗಳನ್ನು ನಿರೀಕ್ಷಿಸಿ, ಸಿದ್ಧರಾಗಿ

ಮೇ ತಿಂಗಳ ಮೊದಲ ದಿನದಿಂದ ಈ 7 ಬದಲಾವಣೆಗಳಿಗೆ ಸಿದ್ಧರಾಗಿ. 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಎಂಬುದರಿಂದ ಆರಂಭಗೊಂಡು ಎಲ್​ಪಿಜಿ ದರದಲ್ಲಿನ ಬದಲಾವಣೆಯ ತನಕ ನಿರೀಕ್ಷಿಸಿ, ಸಿದ್ಧರಾಗಿ.

7 changes from May: ಮೇ ತಿಂಗಳ ಮೊದಲ ದಿನದಿಂದ ಈ 7 ಬದಲಾವಣೆಗಳನ್ನು ನಿರೀಕ್ಷಿಸಿ, ಸಿದ್ಧರಾಗಿ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: May 01, 2021 | 11:31 AM

ಮೇ ತಿಂಗಳ ಆರಂಭದೊಂದಿಗೆ ಈ 7 ಬದಲಾವಣೆಗಳನ್ನು ನೀವು ಗಮನಿಸಬೇಕಾಗುತ್ತದೆ. ಅದರಲ್ಲಿ ಬ್ಯಾಂಕಿಂಗ್ ವ್ಯವಹಾರದಿಂದ ಮೊದಲುಗೊಂಡು ಎಲ್​ಪಿಜಿ ಸಿಲಿಂಡರ್​ ದರದ ತನಕ ಇದೆ. ಇವೆರಡನ್ನು ಹೊರತುಪಡಿಸಿ, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕುವ ಮೂರನೇ ಹಂತದ ಕಾರ್ಯಕ್ರಮ ಮುಖ್ಯವಾಗಿ ಶುರುವಾಗುತ್ತದೆ. ಇನ್ಯಾಕೆ ತಡ ಏನು ಆ ಏಳು ಬದಲಾವಣೆಗಳು ಎಂಬುದನ್ನು ತಿಳಿದುಕೊಂಡುಬಿಡಿ.

1) 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್- 19 ಲಸಿಕೆ ಮೂರನೇ ಹಂತದ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮ ಮೇ 1ರಿಂದ ಶುರುವಾಗುತ್ತದೆ. ಈ ಹಂತದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲಾಗುತ್ತದೆ. ಆದರೆ ಅದಕ್ಕಾಗಿ CoWin ಪೋರ್ಟಲ್​ನಲ್ಲಿ ಮೊದಲಿಗೆ ನೋಂದಣಿ ಮಾಡಕೊಳ್ಳಬೇಕು. ಅದಾಗಲೇ ಏಪ್ರಿಲ್ 28ರಿಂದ ಆರಂಭವಾಗಿದೆ.

2) ಆರೋಗ್ಯ ಸಂಜೀವಿನಿ ಪಾಲಿಸಿ ಮೊತ್ತ ದುಪ್ಪಟ್ಟಾಗುತ್ತದೆ ಕೊರೊನಾ ವೈರಸ್ ಎರಡನೇ ಅಲೆಯ ಮಧ್ಯೆ ಇನ್ಷೂರೆನ್ಸ್ ನಿಯಂತ್ರಕ ಐಆರ್​ಡಿಎಐ ನಿರ್ದೇಶನ ನೀಡಿ, ಆರೋಗ್ಯ ಸಂಜೀವಿನಿ ಪಾಲಿಸಿಯ ಕವರ್ ಮೊತ್ತ ದುಪ್ಪಟ್ಟುಗೊಳಿಸಲು ಸೂಚಿಸಿದೆ. ಮೇ 1ರಿಂದ ಅನ್ವಯ ಆಗುವಂತೆ 10 ಲಕ್ಷ ರೂಪಾಯಿ ಕವರ್ ಆಗುವಂತೆ ಪಾಲಿಸಿ ನೀಡಬೇಕು ಎಂದು ಇನ್ಷೂರೆನ್ಸ್ ಕಂಪೆನಿಗಳಿಗೆ ಹೇಳಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕವರೇಜ್ ಮಿತಿ ಏಪ್ರಿಲ್ 1ರಿಂದ 5 ಲಕ್ಷ ರೂಪಾಯಿ ಇತ್ತು. ಈಗ ಜನರಿಗೆ ಈ ಹಿಂದಿಗಿಂತ ದುಪ್ಪಟ್ಟು ಅನುಕೂಲ ದೊರೆಯುತ್ತದೆ.

3) ಎಲ್​ಪಿಜಿ ಗ್ಯಾಸ ಸಿಲಿಂಡರ್ ಬೆಲೆ ಬದಲಾವಣೆ ಪ್ರತಿ ತಿಂಗಳ ಮೊದಲ ದಿನ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಎಲ್​ಪಿಜಿ ಗ್ಯಾಸ್ ಸಿಲಿಂಡರ್​ಗಳ ದರ ಬದಲಾವಣೆ ಮಾಡುತ್ತವೆ. ಗ್ಯಾಸ್ ದರಗಳು ಮೇ 1ರಿಂದ ಬದಲಾವಣೆ ಆಗಬಹುದು. ಸದ್ಯಕ್ಕೆ ಸಬ್ಸಿಡೈಸ್ಡ್ ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ ರೂ. 809 ಇದೆ. ಕಳೆದ ಕೆಲವು ತಿಂಗಳಲ್ಲಿ ಗ್ಯಾಸ್ ಸಿಲಿಂಡರ್​ಗಳ ಬೆಲೆಯಲ್ಲಿ ಏರಿಕೆ ಆಗಿದೆ. ಮೇ 1ರಿಂದ ದರ ಏರಿಕೆ ಆಗುತ್ತದೋ ಇಳಿಕೆ ಆಗುತ್ತದೋ ನೋಡಬೇಕು.

4) ಆಕ್ಸಿಸ್ ಬ್ಯಾಂಕ್​ನಿಂದ ಹಲವು ಬದಲಾವಣೆಗಳು ಆಕ್ಸಿಸ್ ಬ್ಯಾಂಕ್​ನಿಂದ ಉಳಿತಾಯ ಖಾತೆಗೆ ನೀಡುವ ವಿವಿಧ ಸೇವೆಗಳ ಮೇಲಿನ ಶುಲ್ಕವನ್ನು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಎಟಿಎಂನಿಂದ ಹಣ ವಿಥ್​ಡ್ರಾ ಮಾಡುವ ಮಿತಿ ಮುಗಿದ ಮೇಲೆ ವಿಧಿಸುವ ಶುಲ್ಕ ಏರಿಸಲಾಗುತ್ತಿದೆ. ಇದರ ಜೊತೆಗೆ ವಿವಿಧ ಉಳಿತಾಯ ಖಾತೆಗಳ ಮೇಲೆ ಕನಿಷ್ಠ ಬ್ಯಾಲೆನ್ಸ್ ಮೊತ್ತವನ್ನು ನಿರ್ವಹಿಸದಿದ್ದಲ್ಲಿ ಅದಕ್ಕೆ ವಿಧಿಸುವ ಶುಲ್ಕ ಬದಲಾಯಿಸಲಾಗಿದೆ. ಆದರೆ ಆ ದಂಡ ಶುಲ್ಕವನ್ನು ಇಳಿಕೆ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಇನ್ನಷ್ಟು ಬದಲಾವಣೆಗಳು ಜಾರಿ ಆಗುತ್ತವೆ.

5) ನಗದು ವಿಥ್​ಡ್ರಾ ಶುಲ್ಕಗಳಲ್ಲಿ ಬದಲಾವಣೆ ಉಚಿತ ವಹಿವಾಟುಗಳು ಮುಗಿದ ಮೇಲೆ ಪ್ರತಿ 1000 ರೂಪಾಯಿಗೆ 5 ರೂಪಾಯಿಯನ್ನು ಸದ್ಯಕ್ಕೆ ಆಕ್ಸಿಸ್​ ಬ್ಯಾಂಕ್​ನಿಂದ ಶುಲ್ಕ ಹಾಕಲಾಗುತ್ತಿದೆ. ಮೇ 1ರಿಂದ ಆಚೆಗೆ ಉಚಿತ ವಹಿವಾಟು ಮಿತಿ ಮುಗಿದ ಮೇಲೆ ಪ್ರತಿ 1000 ರೂಪಾಯಿಗೆ ರೂ. 10 ಶುಲ್ಕ ಬೀಳುತ್ತದೆ.

6) ಕನಿಷ್ಠ ಬ್ಯಾಲೆನ್ಸ್ ಮೇಲೆ ಹಾಕುವ ದಂಢ ಶುಲ್ಕದಲ್ಲಿ ಬದಲಾವಣೆ ಆಕ್ಸಿಸ್​ ಬ್ಯಾಂಕ್​ನಲ್ಲಿ ತಿಂಗಳ ಕನಿಷ್ಠ ಬ್ಯಾಲೆನ್ಸ್ 15,000 ರೂಪಾಯಿ ನಿರ್ವಹಣೆ ಮಾಡಬೇಕು. ಈ ಹಿಂದೆ ಅದು ರೂ. 10,000 ಇತ್ತು. ಪ್ರೈಮ್ ಮತ್ತು ಲಿಬರ್ಟಿ ಬ್ರ್ಯಾಂಡೆಡ್ ಸೇವಿಂಗ್ಸ್ ಖಾತೆಗೆ ಸರಾಸರಿ ತಿಂಗಳ ಬ್ಯಾಲೆನ್ಸ್ 25 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ. ಈ ಹಿಂದೆ ಅದು 15,000 ರೂಪಾಯಿ ಇತ್ತು. ಒಂದು ವೇಳೆ ಗ್ರಾಹಕರು ತಿಂಗಳ ಕನಿಷ್ಠ ಮೊತ್ತ ನಿರ್ವಹಿಸದಿದ್ದಲ್ಲಿ ಪ್ರತಿ 100 ರೂಪಾಯಿ ಕೊರತೆಗೆ ರೂ.10 ದಂಡ ಹಾಕಲಾಗುತ್ತದೆ. ಹೀಗೆ 50ರಿಂದ 800 ರೂಪಾಯಿ ತನಕ ಶುಲ್ಕ ಹಾಕಬಹುದು.

7) ವಹಿವಾಟು ನಡೆಸದ ಖಾತೆಗಳಿಗೆ ವಿಧಿಸುವ ಶುಲ್ಕದಲ್ಲೂ ಬದಲಾವಣೆ ಸ್ಯಾಲರಿ ಖಾತೆಯಿದ್ದು, ಆರು ತಿಂಗಳಷ್ಟು ಹಳೆಯದಾಗಿದ್ದು, ಅದರಲ್ಲಿ ಯಾವುದೇ ತಿಂಗಳು ನಗದು ಜಮೆ ಆಗದಿದ್ದಲ್ಲಿ ಅದರ ಮುಂದಿನ ತಿಂಗಳು 100 ರೂಪಾಯಿ ಶುಲ್ಕ ಹಾಕಲಾಗುತ್ತದೆ ಎಂದು ಆಕ್ಸಿಸ್ ಬ್ಯಾಂಕ್ ಹೇಳಿದೆ. ಇನ್ನು 17 ತಿಂಗಳ ಕಾಲ ಉಳಿತಾಯ ಖಾತೆಗೆ ಯಾವುದೇ ಹಣ ಜಮೆ ಆಗದಿದ್ದಲ್ಲಿ 18ನೇ ತಿಂಗಳು ಒಂದು ಸಲ 100 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ ಎಂದು ಬ್ಯಾಂಕ್ ಹೇಳಿದೆ. ​

ಇದನ್ನೂ ಓದಿ: ಆಕ್ಸಿಸ್ ಬ್ಯಾಂಕ್ ಖಾತೆದಾರರಿಗೆ ಬದಲಾದ ನಿಯಮಗಳ ಬಗ್ಗೆ ಗಮನ ಇರಲಿ; ಈ ಬಗ್ಗೆ ಲಕ್ಷ್ಯ ಇಲ್ಲದಿದ್ದರೆ ದಂಡ ಗ್ಯಾರಂಟಿ

( Here are the 7 changes from Corona vaccination phase 3 beginning to LPG rate expect from May month)

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್