ಆಕ್ಸಿಸ್ ಬ್ಯಾಂಕ್ ಖಾತೆದಾರರಿಗೆ ಬದಲಾದ ನಿಯಮಗಳ ಬಗ್ಗೆ ಗಮನ ಇರಲಿ; ಈ ಬಗ್ಗೆ ಲಕ್ಷ್ಯ ಇಲ್ಲದಿದ್ದರೆ ದಂಡ ಗ್ಯಾರಂಟಿ

ದೇಶದ ಪ್ರಮುಖ ಖಾಸಗಿ ಬ್ಯಾಂಕ್​ಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್​ನಿಂದ ಕನಿಷ್ಠ ಬ್ಯಾಲೆನ್ಸ್, ವಿಥ್​ಡ್ರಾ ನಿಯಮ, ಎಸ್ಸೆಮ್ಮೆಸ್ ಶುಲ್ಕ ಇತ್ಯಾದಿಗಳಲ್ಲಿ ಬದಲಾವಣೆ ಆಗಲಿದೆ. ಅದರ ವಿವರಗಳು ಇಲ್ಲಿವೆ.

ಆಕ್ಸಿಸ್ ಬ್ಯಾಂಕ್ ಖಾತೆದಾರರಿಗೆ ಬದಲಾದ ನಿಯಮಗಳ ಬಗ್ಗೆ ಗಮನ ಇರಲಿ; ಈ ಬಗ್ಗೆ ಲಕ್ಷ್ಯ ಇಲ್ಲದಿದ್ದರೆ ದಂಡ ಗ್ಯಾರಂಟಿ
ಆಕ್ಸಿಸ್ ಬ್ಯಾಂಕ್ ಪೋಷಕರು ಈ ಖಾತೆಯನ್ನು 5,000 ರೂಪಾಯಿಯ ಆರಂಭಿಕ ಬ್ಯಾಲೆನ್ಸ್‌ನೊಂದಿಗೆ ತೆರೆಯಬಹುದು. ಪೋಷಕರು ಮತ್ತು ಪಾಲಕರು ಈ ಖಾತೆಯ ಸಂಪೂರ್ಣ ನಿಯಂತ್ರಣದಲ್ಲಿ ಇರುತ್ತಾರೆ. ಮಾಸಿಕ ಸ್ಟೇಟ್​ಮೆಂಟ್​ಗಳನ್ನು ಬ್ಯಾಂಕ್​ನಿಂದ ನೀಡಲಾಗುತ್ತದೆ. ಪ್ರತಿ ವಹಿವಾಟಿನ ಇಮೇಲ್ ಮತ್ತು ಎಸ್ಸೆಮ್ಮೆಸ್ ಅಲರ್ಟ್​ಗಳ ಉಚಿತ ಸೇವೆ ಲಾಭವನ್ನು ಪಡೆಯಬಹುದು. ಈ ಖಾತೆಯ ಕೆಲವು ವಿಶೇಷಗಳೆಂದರೆ, ಆರು ತಿಂಗಳಿಗೊಮ್ಮೆ ಕಾರ್ಡ್ ಅನ್ನು ಸ್ವೈಪ್ ಮಾಡಿದರೆ 2,00,000 ರೂಪಾಯಿ ಮೌಲ್ಯದ ವಯಕ್ತಿಕ ಅಪಘಾತ ವಿಮಾ ರಕ್ಷಣೆಯೊಂದಿಗೆ ಬರುತ್ತದೆ. ಪೋಷಕರು ತಮ್ಮ ಮಗುವಿನ ಡೆಬಿಟ್ ಕಾರ್ಡ್ ಅನ್ನು ಮೋಸದ ಅಥವಾ ಕಾನೂನುಬಾಹಿರ ಬಳಕೆಯಿಂದ ರಕ್ಷಿಸಲು ಒಂದು ಕ್ಷಣದ ಸೂಚನೆಯಲ್ಲಿ ಬ್ಯಾಂಕ್ ಶಾಖೆಯಿಂದ ಖರೀದಿ ರಕ್ಷಣೆ ಹೊಣೆಗಾರಿಕೆ ಮತ್ತು ಕಾರ್ಡ್​ ಕಳೆದುಹೋದಲ್ಲಿ ಅದಕ್ಕೂ ಸೇರಿ ಲಯಾಬಿಲಿಟಿ ಸಹ ಪಡೆಯಬಹುದು. ಅಂದಹಾಗೆ ಈ ಪಾಲಿಸಿಗಳ ಮೌಲ್ಯ ಸುಮಾರು 50,000 ರೂಪಾಯಿಯಷ್ಟಿರುತ್ತದೆ.
Follow us
Srinivas Mata
|

Updated on:Apr 29, 2021 | 11:31 AM

ನಿಮ್ಮ ಅಕೌಂಟ್ ಆಕ್ಸಿಸ್ ಬ್ಯಾಂಕ್​ನಲ್ಲಿ ಇದೆಯಾ? ಸ್ಯಾಲರಿ ಅಥವಾ ಸೇವಿಂಗ್ಸ್ ಅಕೌಂಟ್ ಯಾವುದಾದರೂ ಸರಿ, ಅಕೌಂಟ್ ಇದೆಯಾ? ನಿಮಗೆ ಗೊತ್ತಿರಲಿ, ಖಾಸಗಿ ಬ್ಯಾಂಕ್​ಗಳು ಇಂಥ ಉಳಿತಾಯ ಖಾತೆಗಳ ಹಲವು ಸೇವಾ ಶುಲ್ಕಗಳನ್ನು ಹೆಚ್ಚಳ ಮಾಡಿವೆ. ಈಗ ಹೊಸ ದರಗಳು ಮೇ 1ರಿಂದ ಜಾರಿಗೆ ಬರುತ್ತವೆ. ಎಟಿಎಂನಿಂದ ನಗದು ವಿಥ್​ಡ್ರಾ ಮಾಡುವ ಉಚಿತ ಮಿತಿಯನ್ನು ಮೀರಿದ ಮೇಲಿನ ಶುಲ್ಕವನ್ನು ಆಕ್ಸಿಸ್ ಬ್ಯಾಂಕ್ ಜಾಸ್ತಿ ಮಾಡಿದೆ. ಇದನ್ನು ಹೊರತುಪಡಿಸಿ, ಎಸ್ಸೆಮ್ಮೆಸ್ ಶುಲ್ಕ ಕೂಡ ಮುಂಚಿಗಿಂತ ಹೆಚ್ಚಿಗೆ ನೀಡಬೇಕು. ಎಸ್ಸೆಮ್ಮೆಸ್ ಶುಲ್ಕದ ನಿಯಮ ಜುಲೈ 1ನೇ ತಾರೀಕಿನಿಂದ ಜಾರಿಗೆ ಬರುತ್ತದೆ.

ನಗದು ವಿಥ್​ಡ್ರಾ ಶುಲ್ಕಗಳು ಆಕ್ಸಿಸ್ ಬ್ಯಾಂಕ್​ನಿಂದ ಎಟಿಎಂನಲ್ಲಿ ತಿಂಗಳಿಗೆ 4 ಅಥವಾ 2 ಲಕ್ಷ ರೂಪಾಯಿಯ ವಹಿವಾಟು ಉಚಿತವಾಗಿ ಮಾಡಲು ಅವಕಾಶ ಇದೆ. ಇದರ ನಂತರದ ಹೆಚ್ಚುವರಿ ವಹಿವಾಟಿಗೆ ಶುಲ್ಕ ನೀಡಬೇಕಾಗುತ್ತದೆ. ಪ್ರತಿ 1000 ರೂಪಾಯಿಗೆ 5 ರೂಪಾಯಿ ಕಡಿತ ಆಗುತ್ತದೆ. ಆದರೆ ಮೇ 1ನೇ ತಾರೀಕಿನಿಂದ ಅನ್ವಯ ಆಗುವಂತೆ ಹೆಚ್ಚುವರಿಯಾಗಿ ಮಾಡುವ ಪ್ರತಿ 1000 ರೂಪಾಯಿ ವಿಥ್​ಡ್ರಾಗೆ 10 ರೂಪಾಯಿ ಕಡಿತ ಆಗುತ್ತದೆ.

ಕನಿಷ್ಠ ಬ್ಯಾಲೆನ್ಸ್​ ನಿಯಮ ಕೂಡ ಬದಲು ಇನ್ನು ಆಕ್ಸಿಸ್​ ಬ್ಯಾಂಕ್ ಮೇ 1, 2021ರಿಂದ ಅನ್ವಯ ಆಗುವಂತೆ ಕನಿಷ್ಠ ಬ್ಯಾಂಕ್ ಬ್ಯಾಲೆನ್ಸ್ ನಿಯಮವನ್ನು ಕೂಡ ಬದಲಿಸಿದೆ. ಮೆಟ್ರೋ ನಗರಗಳಲ್ಲಿ ಈಜಿ ಸೇವಿಂಗ್ಸ್ ಸ್ಕೀಮ್​ ಖಾತೆಗೆ ಇರುವ ಕನಿಷ್ಠ ಬ್ಯಾಲೆನ್ಸ್ ಮೊತ್ತ 10,000 ರೂಪಾಯಿ. ಅದೀಗ 15,000 ರೂಪಾಯಿಗೆ ಏರಿಕೆ ಮಾಡಲಾಗುವುದು. ಈ ನಿಯಮ ಎಲ್ಲ ದೇಶೀಯ ಹಾಗೂ ಅನಿವಾಸಿ ಗ್ರಾಹಕರಿಗೆ ಅನ್ವಯ ಆಗುತ್ತದೆ.

ಮೆಟ್ರೋ ನಗರಗಳಲ್ಲಿ ಆಕ್ಸಿಸ್ ಬ್ಯಾಂಕ್​ನ ಪ್ರೈಮ್ ವೇರಿಯಂಟ್ ಅಕೌಂಟ್​ನ ಕನಿಷ್ಠ ಬ್ಯಾಲೆನ್ಸ್ ಅನ್ನು 25,000 ರೂಪಾಯಿ ಇದ್ದದ್ದು ಪರಿಷ್ಕರಣೆ ಮಾಡಿ, 1 ಲಕ್ಷ ರೂಪಾಯಿಯ ಟರ್ಮ್ ಡೆಪಾಸಿಟ್ ಮಾಡಲಾಗಿದೆ. ಪ್ರೈಮ್ ವೇರಿಯಂಟ್ ಖಾತೆಗಳಲ್ಲಿ ಡಿಜಿಟಲ್ ಪ್ರೈಮ್, ಸೇವಿಂಗ್ಸ್ ದೇಶೀಯ, ಅನಿವಾಸಿ ಪ್ರೈಮ್ ಅಥವಾ ಲಿಬರ್ಟಿ ಸ್ಕೀಮ್ ಖಾತೆಗಳಿವೆ. ಈ ನಿಯಮ ಮೇ 1ರಿಂದ ಲಾಗೂ ಆಗುತ್ತದೆ.

ಅರೆ ನಗರಗಳಲ್ಲಿ ಈ ಹಿಂದೆ ಅರೆ ನಗರಗಳಲ್ಲಿ ಪ್ರೈಮ್ ಖಾತೆಗೆ ಕನಿಷ್ಠ ಬ್ಯಾಲೆನ್ಸ್ 15,000 ರೂಪಾಯಿ ಅಥವಾ 1,00,000 ರೂಪಾಯಿ ಟರ್ಮ್ ಡೆಪಾಸಿಟ್ ಮಾಡಬೇಕಿತ್ತು. ಅದನ್ನು ಈಗ ಕನಿಷ್ಠ ಬ್ಯಾಲೆನ್ಸ್ ರೂ. 25,000 ಅಥವಾ 1 ಲಕ್ಷ ರೂಪಾಯಿ ಟರ್ಮ್ ಡೆಪಾಸಿಟ್ ಎಂದು ಮಾಡಲಾಗಿದೆ. ಲಿಬರ್ಟಿ ಸ್ಕೀಮ್ ಖಾತೆದಾರರಿಗೆ ಈ ಹಿಂದೆ ತಿಂಗಳ ಲೆಕ್ಕದಲ್ಲಿ ಕನಿಷ್ಠ 15,000 ರೂಪಾಯಿ ಇರಿಸಬೇಕಿತ್ತು. ಅಥವಾ ತಿಂಗಳಲ್ಲಿ 25,000 ರೂಪಾಯಿ ಖರ್ಚು ಮಾಡಬೇಕಿತ್ತು. ಅದೀಗ ತಿಂಗಳಿಗೆ ಕನಿಷ್ಠ 25,000 ರೂಪಾಯಿ ಬ್ಯಾಲೆನ್ಸ್ ಅಥವಾ ಅಷ್ಟೇ ಮೊತ್ತವನ್ನು ತಿಂಗಳಿಗೆ ಖರ್ಚು ಮಾಡಬೇಕಾಗುತ್ತದೆ.

ಗ್ರಾಮೀಣ ಭಾಗಗಳಲ್ಲಿ ಪ್ರೈಮ್​ ಖಾತೆಗೆ ಈ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ 15,000 ರೂಪಾಯಿ ಬ್ಯಾಲೆನ್ಸ್ ಅಥವಾ 1 ಲಕ್ಷ ರೂಪಾಯಿ ಟರ್ಮ್ ಡೆಪಾಸಿಟ್ ಮಾಡಬೇಕಿತ್ತು. ಅದನ್ನು ಈಗ 25,000 ರೂಪಾಯಿಗೆ ಏರಿಸಲಾಗಿದೆ. ಇನ್ನು ಲಿಬರ್ಟಿ ಖಾತೆಯಲ್ಲಿ 15,000 ರೂಪಾಯಿ ಕನಿಷ್ಠ ಬ್ಯಾಲೆನ್ಸ್ ಬದಲಿಗೆ 25,000 ರೂಪಾಯಿ ಇರಿಸಿರಬೇಕು ಅಥವಾ 25,000 ರೂಪಾಯಿ ಖರ್ಚು ಮಾಡಬೇಕು.

ದಂಡ ಶುಲ್ಕ ಎಷ್ಟು? ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಇರಿಸಿಕೊಳ್ಳದಿದ್ದಲ್ಲಿ ಹಾಕುವ ದಂಡದ ಮೊತ್ತವನ್ನು ಈಗಿನ 150 ರೂಪಾಯಿಯಿಂದ 50 ರೂಪಾಯಿಗೆ ಇಳಿಸಲಾಗಿದೆ. ಈ ಮೊತ್ತ ಎಲ್ಲ ಸ್ಥಳಗಳಿಗೂ ಅನ್ವಯ ಆಗುತ್ತದೆ.

ಎಸ್ಸೆಮ್ಮೆಸ್ ಶುಲ್ಕ ಸದ್ಯಕ್ಕೆ ಆಕ್ಸಿಸ್ ಬ್ಯಾಂಕ್​ನಲ್ಲಿ ಎಸ್ಸೆಮ್ಮೆಸ್ ಶುಲ್ಕ ತಿಂಗಳಿಗೆ 5 ರೂಪಾಯಿ ಇದೆ. ಪ್ರತಿ 3 ತಿಂಗಳಿಗೆ ಒಮ್ಮೆ ಗ್ರಾಹಕರ ಖಾತೆಯಿಂದ 15 ರೂಪಾಯಿ ಕಡಿತ ಆಗುತ್ತದೆ. 30 ಜೂನ್ ತನಕ 15 ರೂಪಾಯಿಯನ್ನೇ ನೀಡಬೇಕಾಗುತ್ತದೆ. ಆದರೆ ಜುಲೈ 1ನೇ ತಾರೀಕಿನಿಂದ ಪ್ರತಿ ಎಸ್ಸೆಮ್ಮೆಸ್​ಗೆ 25 ಪೈಸೆ ಆಗುತ್ತದೆ. ಆದರೆ ಆ ಮೊತ್ತ ಒಂದು ತಿಂಗಳಲ್ಲಿ 25 ರೂಪಾಯಿ ದಾಟುವುದಿಲ್ಲ. ಇದರಲ್ಲಿ ಪ್ರಚಾರದ ಸಂದೇಶಗಳು ಅಥವಾ ಗ್ರಾಹಕರ ಒಟಿಪಿ ಸಂದೇಶಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಪ್ರೀಮಿಯಂ ಖಾತೆಗಳು, ಸ್ಯಾಲರಿ ಖಾತೆಗಳು, ಬೇಸಿಕ್ ಖಾತೆಗಳಿಗೆ ಈ ದರ ಪ್ರತ್ಯೇಕವಾಗಿ ಇರಲಿದೆ.

ಇದನ್ನೂ ಓದಿ: Axis Bank Wearble Contactless Payment Device: ಧರಿಸುವಂಥ ಸಾಧನ ಬಳಸಿ ಆಕ್ಸಿಸ್ ಬ್ಯಾಂಕ್ ವಹಿವಾಟು; ದೇಶದಲ್ಲಿ ಇದೇ ಮೊದಲು

(Axis Bank banking service minimum balance, SMS charges and other details to be noticed by customers)

Published On - 11:29 am, Thu, 29 April 21

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್