Sensex crosses 50,000 points: ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಏರಿಕೆ- ಇಳಿಕೆ ಹೊಯ್ದಾಟ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಇಂದು (ಏಪ್ರಿಲ್ 29, 2021) ಏರಿಕೆ ಹಾಗೂ ಇಳಿಕೆ ಮಧ್ಯೆ ಭಾರೀ ಹೊಯ್ದಾಟ ನಡೆಸುತ್ತಿದೆ.

Sensex crosses 50,000 points: ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಏರಿಕೆ- ಇಳಿಕೆ ಹೊಯ್ದಾಟ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: Apr 29, 2021 | 1:19 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಗುರುವಾರ (ಏಪ್ರಿಲ್ 29, 2021) ಲಾಭ- ನಷ್ಟದ ಮಧ್ಯೆ ಹೊಯ್ದಾಡುತ್ತಿದೆ. ಈ ವರದಿ ಆಗುವ ಹೊತ್ತಿಗೆ ಸೆನ್ಸೆಕ್ಸ್ 209 ಪಾಯಿಂಟ್​ಗಳು ಮೇಲೇರಿ, 49,942ರಲ್ಲಿ ವಹಿವಾಟು ನಡೆಸುತ್ತಿದೆ. ಹಿಂದಿನ ದಿನದ ವ್ಯವಹಾರ ಮುಗಿಸಿದಾಗ 49.733.84ರಲ್ಲಿ ಕೊನೆಯಾಗಿತ್ತು. ಇನ್ನು ಈ ದಿನದ ಆರಂಭದಲ್ಲೇ 50 ಸಾವಿರ ಪಾಯಿಂಟ್​ಗಳ ಗಡಿ ದಾಟಿ, 50,093.86ರಲ್ಲಿ ವ್ಯವಹಾರ ಆರಂಭಿಸಿದ್ದು, ಒಂದು ಹಂತದಲ್ಲಿ ಸೂಚ್ಯಂಕವು 50,375.77 ಪಾಯಿಂಟ್​ಗಳಲ್ಲಿ ವ್ಯವಹಾರ ನಡೆಸಿ, ಹೂಡಿಕೆದಾರರಲ್ಲಿ ಉತ್ಸಾಹ ತುಂಬಿತು. ಆದರೆ ಏಪ್ರಿಲ್ ತಿಂಗಳ ಫ್ಯೂಚರ್ ಅಂಡ್ ಆಪ್ಷನ್​ನ ವ್ಯವಹಾರ ಚುಕ್ತಾ ಇರುವುದರಿಂದ ಭಾರೀ ಏರಿಳಿಯ ಕಂಡು ಬರುತ್ತಿದ್ದು, ಅದರ ಪರಿಣಾಮ ಷೇರಿನ ಬೆಲೆಗಳ ಮೇಲೆ ಆಗಿದೆ.

ಇನ್ನು ನಿಫ್ಟಿ 70.75 ಪಾಯಿಂಟ್ ಮೇಲೇರಿ, 14,935.30 ಪಾಯಿಂಟ್​ನಲ್ಲಿ ವಹಿವಾಟು ನಡೆಸಿತು. ದಿನದ ಆರಂಭದ ವ್ಯವಹಾರವನ್ನು 14,979 ಪಾಯಿಂಟ್​ನೊಂದಿಗೆ ಶುರು ಮಾಡಿದ ನಿಫ್ಟಿ, ಹಿಂದಿನ ಸೆಷನ್ ಅನ್ನು 14,864.55 ಪಾಯಿಂಟ್​ನೊಂದಿಗೆ ಮುಗಿಸಿತ್ತು. ಇಂದಿನ ವಹಿವಾಟಿನಲ್ಲಿ 15,044.35 ಪಾಯಿಂಟ್​ಗಳ ಗರಿಷ್ಠ ಮಟ್ಟವನ್ನು ನಿಫ್ಟಿ ಮುಟ್ಟಿತು. ಇಂದಿನ ವ್ಯವಹಾರದಲ್ಲಿ ಲೋಹದ ಷೇರುಗಳು ಭಾರೀ ಗಳಿಕೆಯನ್ನು ಕಂಡಿವೆ.

ನಿಫ್ಟಿಯಲ್ಲಿ ಗಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಜೆಎಸ್​ಡಬ್ಲ್ಯು ಸ್ಟೀಲ್ ಶೇ 6.76 ಟಾಟಾ ಸ್ಟೀಲ್ ಶೇ 5.52 ಬಜಾಜ್ ಫಿನ್​ಸರ್ವ್ ಶೇ 5.15 ಬಜಾಜ್ ಫೈನಾನ್ಸ್ ಶೇ 3.68 ಹಿಂಡಾಲ್ಕೊ ಶೇ 2.10

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಹೀರೋ ಮೋಟೋಕಾರ್ಪ್ ಶೇ -1.57 ಐಷರ್ ಮೋಟಾರ್ಸ್ ಶೇ -1.44 ಎಚ್​ಸಿಎಲ್ ಟೆಕ್ ಶೇ -1.36 ಮಹೀಂದ್ರಾ ಅಂಡ್ ಮಹೀಂದ್ರಾ ಶೇ -1.21 ಲಾರ್ಸನ್ ಶೇ -1.04

ಇದನ್ನೂ ಓದಿ: ಷೇರುಪೇಟೆಯಲ್ಲಿ ಹೂಡಿಕೆದಾರರ ಸಂಪತ್ತು 3 ದಿನದಲ್ಲಿ 6.39 ಲಕ್ಷ ಕೋಟಿ ರೂಪಾಯಿ ಹೆಚ್ಚಳ

(Indian stock market index sensex crosses 50,000 point mark. Index swung between gain and loss)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ