ಬಜಾಜ್ ಆಟೋ ಕಂಪೆನಿ ಅಧ್ಯಕ್ಷ ಹುದ್ದೆಗೆ ರಾಹುಲ್ ಬಜಾಜ್ ರಾಜೀನಾಮೆ

ಬಜಾಜ್ ಆಟೋ ಕಂಪೆನಿಯ ಅಧಿಕಾರೇತರ ನಿರ್ದೇಶಕ ಹಾಗೂ ಅಧ್ಯಕ್ಷ ಹುದ್ದೆಗೆ ರಾಹುಲ್ ಬಜಾಜ್ ಅವರು ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಬಜಾಜ್ ಆಟೋ ಕಂಪೆನಿ ಅಧ್ಯಕ್ಷ ಹುದ್ದೆಗೆ ರಾಹುಲ್ ಬಜಾಜ್ ರಾಜೀನಾಮೆ
ರಾಹುಲ್ ಬಜಾಜ್ (ಸಂಗ್ರಹ ಚಿತ್ರ)
Follow us
Srinivas Mata
|

Updated on:Apr 29, 2021 | 6:45 PM

ಬಜಾಜ್ ಆಟೋ ಗುರುವಾರ ಘೋಷಣೆ ಮಾಡಿರುವ ಪ್ರಕಾರ, ರಾಹುಲ್ ಬಜಾಜ್ ಅವರು ಕಂಪೆನಿಯ ಅಧಿಕಾರೇತರ ನಿರ್ದೇಶಕ ಮತ್ತು ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಹುಲ್​ಅವರನ್ನು ಮೇ 1ರಿಂದ ಅನ್ವಯ ಆಗುವಂತೆ 5 ವರ್ಷಗಳ ಅವಧಿಗೆ ಗೌರವಾಧ್ಯಕ್ಷರಾಗಿ ನೇಮಿಸಲಾಗಿದೆ. ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ಕಂಪೆನಿ ಹೇಳಿರುವ ಪ್ರಕಾರ, ನೀರಜ್ ಬಜಾಜ್ ಅವರನ್ನು ಅಧಿಕಾರೇತರ ನಿರ್ದೇಶಕ ಮತ್ತು ಅಧ್ಯಕ್ಷ ಹುದ್ದೆಗೆ ಮೇ 1ರಿಂದ ಜಾರಿಗೆ ಬರುವಂತೆ ನೇಮಿಸಲಾಗಿದೆ.

ಕಂಪೆನಿಯ ಈ ಹುದ್ದೆಯಲ್ಲಿ 1972ರಿಂದ ರಾಹುಲ್ ಬಜಾಜ್ ಇದ್ದಾರೆ. ಐವತ್ತು ವರ್ಷಗಳಿಂದ ಬಜಾಜ್ ಕಂಪೆನಿಯೊಂದಿಗೆ ಇದ್ದಾರೆ. ತಮ್ಮ ವಯಸ್ಸಿನ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಏಪ್ರಿಲ್ 30, 2021ರಂದು ವ್ಯವಹಾರದ ವೇಳೆ ಮುಗಿದ ಕ್ಷಣದಿಂದ ರಾಹುಲ್ ಬಜಾಜ್ ರಾಜೀನಾಮೆ ಜಾರಿಗೆ ಬರಲಿದೆ.

“ಶ್ರೀ ರಾಹುಲ್ ಬಜಾಜ್ ಅವರು ಕಳೆದ ಐದು ದಶಕಗಳಿಂದ ಕಂಪೆನಿ ಮತ್ತು ಸಮೂಹದ ಯಶಸ್ಸಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಅಗಾಧ ಅನುಭವವನ್ನು ಪರಿಗಣನೆಗೆ ತೆಗೆದುಕೊಂಡು ಮತ್ತು ಕಂಪೆನಿಯ ಹಿತದೃಷ್ಟಿಯಿಂದ ಹಾಗೂ ಅವರ ಅನುಭವ, ಜ್ಞಾನ, ತಿಳಿವಳಿಕೆಯ ಅನುಕೂಲವನ್ನು ಪಡೆಯುವ ಉದ್ದೇಶದಿಂದ ಮಾರ್ಗದರ್ಶಕ ಹುದ್ದೆಯಲ್ಲಿ ಅವರು ನಿಂತು ಸಲಹೆ ನೀಡಬೇಕು. ಕಂಪೆನಿ ಆಡಳಿತ ಮಂಡಳಿ ನಿರ್ದೇಶಕರ ಇಂದಿನ ಸಭೆಯಲ್ಲಿ ಅವರ ಹೆಸರನ್ನು ಶಿಫಾರಸು ಮಾಡಲಾಯಿತು. ಅದರಂತೆ ನಾಮಿನೇಷನ್ ಮತ್ತು ಶಿಫಾರಸು ಸಮಿತಿಯು ಶ್ರೀ ರಾಹುಲ್ ಬಜಾಜ್ ಅವರನ್ನು ಗೌರವ ಅಧ್ಯಕ್ಷ ಹುದ್ದೆಯಲ್ಲಿ ಮೇ 1, 2021ರಿಂದ ಅನ್ವಯ ಆಗುವಂತೆ ನೇಮಕ ಮಾಡಲು ಅನುಮತಿಸಿದೆ,” ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಷೇರುದಾರರ ವಾರ್ಷಿಕ ಮಹಾಸಭೆಯಲ್ಲಿ ಈ ವಿಚಾರವನ್ನು ಮುಂದಿಟ್ಟು, ಅನುಮತಿಯನ್ನು ಪಡೆಯಲಾಗುವುದು ಎಂದು ಕಂಪೆನಿಯಿಂದ ತಿಳಿಸಲಾಗಿದೆ.

ಇದನ್ನೂ ಓದಿ: Bajaj Auto CT110X Launch: ಬಜಾಜ್ ಆಟೋ CT110X ಹೊಸ ಬೈಕ್ ಬಿಡುಗಡೆ, ಬೆಲೆ ರೂ. 55,494

(Bajaj Auto ltd Rahul Bajaj resigns as chairman and non executive director. Niraj Bajaj appointed as new chairman, which will come in to effect from May 1, 2021)

Published On - 6:42 pm, Thu, 29 April 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ