AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಷೇರುಪೇಟೆಯಲ್ಲಿ ಹೂಡಿಕೆದಾರರ ಸಂಪತ್ತು 3 ದಿನದಲ್ಲಿ 6.39 ಲಕ್ಷ ಕೋಟಿ ರೂಪಾಯಿ ಹೆಚ್ಚಳ

ಕಳೆದ ಮೂರು ದಿನದಲ್ಲಿ ಷೇರು ಮಾರುಕಟ್ಟೆ ಹೂಡಿಕೆದಾರರ ಸಂಪತ್ತು ರೂ. 6.39 ಲಕ್ಷ ಕೋಟಿ ಹೆಚ್ಚಳವಾಗಿದೆ. ಜಾಗತಿಕ ಪ್ರಭಾವದಿಂದ ಈ ಬೆಳವಣಿಗೆ ಆಗಿದೆ.

ಷೇರುಪೇಟೆಯಲ್ಲಿ ಹೂಡಿಕೆದಾರರ ಸಂಪತ್ತು 3 ದಿನದಲ್ಲಿ 6.39 ಲಕ್ಷ ಕೋಟಿ ರೂಪಾಯಿ ಹೆಚ್ಚಳ
ಸಾಂದರ್ಭಿಕ ಚಿತ್ರ
Srinivas Mata
|

Updated on: Apr 28, 2021 | 8:32 PM

Share

ಕೊರೊನಾ ಪ್ರಕರಣಗಳನ್ನು ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳು ಹಾಗೂ ಲಸಿಕೆ ಹಾಕುವುದಕ್ಕೆ ವೇಗ ನೀಡಿರುವುದರಿಂದ ಜಾಗತಿಕ ಬೆಂಬಲ ಸಿಕ್ಕಿದ್ದರಿಂದಾಗಿ ಕಳೆದ ಮೂರು ದಿನದಲ್ಲಿ ಹೂಡಿಕೆದಾರರ ಸಂಪತ್ತು 6.39 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿದೆ. ಕಳೆದ ಮೂರು ದಿನದಲ್ಲಿ ಬೆಂಚ್​ಮಾರ್ಕ್​ ಸೂಚ್ಯಂಕ ಸೆನ್ಸೆಕ್ಸ್ 1855.39 ಪಾಯಿಂಟ್ಸ್ ಅಥವಾ ಶೇ 3.88 ಹೆಚ್ಚಳವಾಗಿ 49,733.84 ಪಾಯಿಂಟ್​ನೊಂದಿಗೆ ವಹಿವಾಟು ಮುಗಿದಿದೆ. ಇನ್ನು ನಿಫ್ಟಿ 532.2 ಪಾಯಿಂಟ್ಸ್ ಅಥವಾ ಶೇ 3.65ರಷ್ಟು ಮೇಲೇರಿ 14,864.55 ಪಾಯಿಂಟ್ಸ್​ನೊಂದಿಗೆ ವ್ಯವಹಾರವನ್ನು ಚುಕ್ತಾ ಮಾಡಿದೆ. ಈ ಏರಿಕೆ ಕಾರಣಕ್ಕೆ ಮೂರು ದಿನಗಳಲ್ಲಿ ಬಿಎಸ್​ಇ- ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು 6.39 ಲಕ್ಷ ಕೋಟಿ ರೂಪಾಯಿ ಏರಿಕೆಯಾಗಿ, 208.76 ಲಕ್ಷ ಕೋಟಿ ರೂಪಾಯಿಯನ್ನು ಮುಟ್ಟಿದೆ.

“ಸತತ ಮೂರು ಸೆಷನ್​ಗಳ ಏರಿಕೆಯಿಂದಾಗಿ ಮಾರುಕಟ್ಟೆಯು ಗಳಿಕೆ ವಿಸ್ತರಿಸಿಕೊಂಡಿದೆ. ಇದು ಕಂಪೆನಿಗಳ ಆದಾಯಗಳ ಫಲಿತಾಂಶ ಘೋಷಣೆ ಋತುವಾದ್ದರಿಂದ ಅದರ ಬೆಂಬಲ ಸಿಕ್ಕಿದೆ. ಜಾಗತಿಕ ಮಾರ್ಕೆಟ್​ಗಳು ಎಚ್ಚರಿಕೆ ಹೆಜ್ಜೆಯ ಹೊರತಾಗಿ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ (FOMC)ಸಭೆಯ ಪೂರ್ವಭಾವಿಯಾಗಿ ಬೆಂಚ್​ಮಾರ್ಕ್ ಸೂಚ್ಯಂಕ ಏರಿಕೆಯೊಂದಿಗೆ ದಿನದ ಆರಂಭ ಮಾಡಿದೆ ಮತ್ತು ಅದೇ ಹೆಚ್ಚಳ ಮುಂದುವರಿದಿದೆ. ಗುರುವಾರದಂದು ಮೊದಲಿಗೆ ಮಾರುಕಟ್ಟೆಯು FOMC ಸಭೆಗೆ ಪ್ರತಿಕ್ರಿಯಿಸಲಿದೆ. ಆ ನಂತರ ತಿಂಗಳ ಡೆರಿವೇಟಿವ್ಸ್ ಎಕ್ಸ್​ಪೈರಿ (ಅವಧಿ ಮುಕ್ತಾಯ) ಮತ್ತು ಗಳಿಕೆಗೆ ಪ್ರತಿಕ್ರಿಯಿಸಲು ಬದಲಾಗಲಿದೆ,” ಎಂದು ರೆಲಿಗೇರ್ ಬ್ರೋಕಿಂಗ್ ಲಿ. ಹೇಳಿದೆ.

ಸೆನ್ಸೆಕ್ಸ್​ನಲ್ಲಿ ಬಜಾಜ್ ಫೈನಾನ್ಸ್ ಪ್ರಮುಖ ಗೇಯ್ನರ್ ಆಗಿತ್ತು. ಶೇ 8.32ರಷ್ಟು ಏರಿಕೆ ಕಂಡಿತು. ಇಂಡಸ್ ಇಂಡ್​ ಬ್ಯಾಂಕ್ ಶೇ 5.08, ಬಜಾಜ್ ಫಿನ್​ಸರ್ವ್ (ಶೇ 4.03), ಐಸಿಐಸಿಐ ಬ್ಯಾಂಕ್ (ಶೇ 3.72) ಹಾಗೂ ಕೊಟಕ್ ಮಹೀಂದ್ರಾ ಬ್ಯಾಂಕ್ (ಶೇ 3.52) ಕಂಪೆನಿ ಷೇರುಗಳು ಏರಿಕೆ ಕಂಡವು. ಮತ್ತೊಂದು ಕಡೆ ನೆಸ್ಟ್ಲೆ ಇಂಡಿಯಾ, ಎಚ್​ಸಿಎಲ್ ಟೆಕ್, ಲಾರ್ಸನ್ ಅಂಡ್ ಟೂಬ್ರೋ, ಟಿಸಿಎಸ್, ಡಾ ರೆಡ್ಡೀಸ್ ಮತ್ತು ಐಟಿಸಿ ಇಳಿಕೆ ಕಂಡಿವೆ. ಬಿಎಸ್​ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಕ್ರಮವಾಗಿ ಶೇ 0.99 ಮತ್ತು ಶೇ 0.71ರಷ್ಟು ಇಳಿಕೆಯಾಗಿವೆ.

ಇದನ್ನೂ ಓದಿ: ಷೇರು ಮಾರ್ಕೆಟ್​ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್

(Indian stock market investors wealth increased by Rs 6.39 lakh crore in 3 days)

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ