Amazon Clearance Sale: ಅಮೆಜಾನ್​ನಲ್ಲಿ ಸ್ಮಾರ್ಟ್​ ಟಿವಿಗಳ ಮೇಲೆ ಶೇಕಡಾ 50ರ ತನಕ ರಿಯಾಯಿತಿ, ಏಸಿಗಳಿಗೆ ಶೇ 40 ಡಿಸ್ಕೌಂಟ್

Amazon Clearance Sale 2021: ಆನ್​ಲೈನ್ ಮಾರ್ಕೆಟ್ ಪ್ಲೇಸ್ ಅಮೆಜಾನ್​ನಲ್ಲಿ ಏಸಿಗಳು, ಮನೆಬಳಕೆ ವಸ್ತುಗಳು, ಸ್ಮಾರ್ಟ್ ಟಿವಿ, ಫ್ಯಾಷನ್ ಮುಂತಾದವುಗಳ ಮೇಲೆ ಅದ್ಭುತವಾದ ರಿಯಾಯಿತಿ, ಕಡಿತ, ಆಫರ್​ಗಳನ್ನು ಘೋಷಣೆ ಮಾಡಲಾಗಿದೆ.

Amazon Clearance Sale: ಅಮೆಜಾನ್​ನಲ್ಲಿ ಸ್ಮಾರ್ಟ್​ ಟಿವಿಗಳ ಮೇಲೆ ಶೇಕಡಾ 50ರ ತನಕ ರಿಯಾಯಿತಿ, ಏಸಿಗಳಿಗೆ ಶೇ 40 ಡಿಸ್ಕೌಂಟ್
ಸಾಂದರ್ಭಿಕ ಚಿತ್ರ
Follow us
Srinivas Mata
| Updated By: Digi Tech Desk

Updated on:Apr 28, 2021 | 2:49 PM

ನವದೆಹಲಿ: ಆನ್​ಲೈನ್ ಮಾರ್ಕೆಟ್ ಪ್ಲೇಸ್ ಅಮೆಜಾನ್​ನಿಂದ ಅದ್ಭುತವಾದ ಡಿಸ್ಕೌಂಟ್ ಆಫರ್​ಗಳನ್ನು ಘೋಷಣೆ ಮಾಡಲಾಗಿದೆ. ಈ ಬೇಸಿಗೆಗೆ ಬೇಕಾದ ಕೂಲಿಂಗ್ ಅಪ್ಲೈಯನ್ಸಸ್ ಸೇರಿದಂತೆ ಹಲವು ಪ್ರಾಡಕ್ಟ್ ಕೆಟಗರಿಗಳ ಮೇಲೆ ರಿಯಾಯಿತಿಗಳಿವೆ. ಲ್ಯಾಪ್​ಟಾಪ್ಸ್, ಮಾನಿಟರ್ಸ್, ಹೆಡ್​ಫೋನ್, ವೈಫೈ ರೌಟರ್​ಗಳ ಮೇಲೆ ಶೇಕಡಾ 50ರ ತನಕ ರಿಯಾಯಿತಿ ಇದ್ದರೆ, ಏಸಿಗಳು, ಕೂಲರ್​ಗಳು, ಫ್ರಿಜ್ ಮುಂತಾದವುಗಳ ಮೇಲೆ ಶೇ 40ರ ತನಕ ರಿಯಾಯಿತಿ ಇದೆ. ಇನ್ನು ಪುರುಷರು ಮತ್ತು ಮಹಿಳೆಯರ ಬಟ್ಟೆಗಳಿಗೆ ಶೇಕಡಾ 70ರ ತನಕ ರಿಯಾಯಿತಿ ಇದೆ.

ಅಮೆಜಾನ್​ನಲ್ಲಿ ಸದ್ಯಕ್ಕೆ ನಡೆಯುತ್ತಿರುವ ಟಾಪ್ ಡೀಲ್​ಗಳು ಇಲ್ಲಿವೆ: * ಏಸಿಗಳ ಮೇಲೆ ಶೇಕಡಾ 40ರ ತನಕ ವಿನಾಯಿತಿ ಇದೆ ಮತ್ತು ಶೇ 10ರ ತನಕ ರಿಯಾಯಿತಿ ಕ್ರೆಡಿಟ್ ಕಾರ್ಡ್ ಇಎಂಐ ವಹಿವಾಟಿನ ಮೇಲಿದೆ. ಒಂದು ವೇಳೆ ನೀವು AmazonBasics ಕೂಲಿಂಗ್ ಉತ್ಪನ್ನಗಳನ್ನು ಖರೀದಿಸಿದರೆ ಶೇ 50ರ ತನಕ ವಿನಾಯಿತಿ ದೊರೆಯುತ್ತದೆ ಹಾಗೂ ಜತೆಗೆ ನೋ- ಕಾಸ್ಟ್ ಇಎಂಐ ವ್ಯವಸ್ಥೆ ಕೂಡ ಇದೆ. ಸ್ಪ್ಲಿಟ್ ಏಸಿ ರೂ. 22,000ದಿಂದ ಆರಂಭವಾದರೆ, ವಿಂಡೋ ಏಸಿ ರೂ. 17,000ದಿಂದ ಶುರುವಾಗುತ್ತದೆ. * ಇನ್ನು ಗೃಹ ಬಳಕೆಯ ಡಿಶ್​ವಾಷರ್​ಗಳು, ಮೈಕ್ರೋವೇವ್​ಗಳು, ಚಿಮಣಿ, ವಾಷಿಂಗ್​ ಮಷೀನ್​ಗಳಿಗೆ ಕೂಡ ಆಕರ್ಷಕ ರಿಯಾಯಿತಿಯಾದ ಶೇ 10ರಿಂದ 30ರಷ್ಟು ದೊರೆಯುತ್ತದೆ. * 2021ನೇ ಇಸವಿಯ ಬೆಸ್ಟ್ ಮತ್ತು ಈಚಿನ ಸ್ಮಾರ್ಟ್​ಫೋನ್​ಗಳ ಮೇಲೆ ಶೇ 14ರ ತನಕ ಕಡಿತ ಇದೆ. ಆಪಲ್ ಐಫೋನ್ 12 ಮಿನಿ (64ಜಿಬಿ) ಬೆಲೆ ರೂ. 71,990 ಇದೆ. ಇದರ MRP 74,999 ರೂಪಾಯಿ ಇದೆ. * ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್ಸ್ ಮತ್ತು ಕ್ರೆಡಿಟ್ ಇಎಂಐ ಮೇಲೆ ಶೇ 10ರಷ್ಟು ತಕ್ಷಣ ರಿಯಾಯಿತಿ ಇದೆ. * ಕ್ಯಾಶ್​ಬ್ಯಾಕ್ ಮತ್ತು ಅಮೆಜಾನ್ ಪೇ ಆಫರ್​ಗಳು * 200+ ಎಲೆಕ್ಟ್ರಾನಿಕ್ ಬ್ರ್ಯಾಂಡ್​ಗಳ ಮೇಲೆ 6000+ ಡೀಲ್​ಗಳಿವೆ. * ಸ್ಮಾರ್ಟ್ ಟೀವಿಗಳು ಹಾಗೂ ಅಪ್ಲೈಯನ್ಸಸ್​ಗಳ ಮೇಲೆ ಶೇ 50ರ ತನಕ ರಿಯಾಯಿತಿ * Echo, FireTV ಮತ್ತು Kindle ಮೇಲೆ ಶೇ 45ರ ತನಕ ಕಡಿತ * ಫ್ಯಾಷನ್ ಮೇಲೆ ಶೇ 70ರ ತನಕ ಕಡಿತ * 50,000ಕ್ಕೂ ಹೆ್ಚ್ಚು ಮನೆ ಹಾಗೂ ಅಡುಗೆಮನೆ ಉತ್ಪನ್ನಗಳ ಮೇಲೆ ಶೇ 70ರ ತನಕ ಕಡಿತ * 30,000+ ದಿನಬಳಕೆ ಅಗತ್ಯ ವಸ್ತುಗಳ ಬೆಲೆ ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ * ಪುಸ್ತಕಗಳು, ಹವ್ಯಾಸಗಳು, ಗೇಮಿಂಗ್ ಮತ್ತು ಗೊಂಬೆಗಳಿಗೆ ಶೇ 70ರ ತನಕ ಕಡಿತ

ಇದನ್ನೂ ಓದಿ: ಐಸಿಐಸಿಐ ಬ್ಯಾಂಕ್​ನಿಂದ iDelights Summer Bonanza; ಗ್ರಾಹಕರಿಗೆ ಬೇಸಿಗೆಯಲ್ಲಿ ಆಫರ್​ಗಳ ಸುರಿಮಳೆ

(Amazon offering discount up to 50% on smart TVs, 40% on AC and 70% on fashion. Other deals offered by amazon explained here)

Published On - 2:38 pm, Wed, 28 April 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ