Axis Bank Wearble Contactless Payment Device: ಧರಿಸುವಂಥ ಸಾಧನ ಬಳಸಿ ಆಕ್ಸಿಸ್ ಬ್ಯಾಂಕ್ ವಹಿವಾಟು; ದೇಶದಲ್ಲಿ ಇದೇ ಮೊದಲು

ದೇಶದ ಮೂರನೇ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಆಕ್ಸಿಸ್ ಬ್ಯಾಂಕ್​ನಿಂದ ವೇರಬಲ್ ಕಾಂಟ್ಯಾಕ್ಟ್​ಲೆಸ್ ಸಾಧನವನ್ನು ಪರಿಚಯಿಸಿದೆ. ಈ ಮೂಲಕ ಇಂಥದ್ದೊಂದು ಪ್ರಯತ್ನಕ್ಕೆ ಕೈ ಹಾಕಿದ ಮೊದಲ ಬ್ಯಾಂಕ್ ಎನಿಸಿದೆ.

Axis Bank Wearble Contactless Payment Device: ಧರಿಸುವಂಥ ಸಾಧನ ಬಳಸಿ ಆಕ್ಸಿಸ್ ಬ್ಯಾಂಕ್ ವಹಿವಾಟು; ದೇಶದಲ್ಲಿ ಇದೇ ಮೊದಲು
ಆಕ್ಸಿಸ್ ಬ್ಯಾಂಕ್ ಪೋಷಕರು ಈ ಖಾತೆಯನ್ನು 5,000 ರೂಪಾಯಿಯ ಆರಂಭಿಕ ಬ್ಯಾಲೆನ್ಸ್‌ನೊಂದಿಗೆ ತೆರೆಯಬಹುದು. ಪೋಷಕರು ಮತ್ತು ಪಾಲಕರು ಈ ಖಾತೆಯ ಸಂಪೂರ್ಣ ನಿಯಂತ್ರಣದಲ್ಲಿ ಇರುತ್ತಾರೆ. ಮಾಸಿಕ ಸ್ಟೇಟ್​ಮೆಂಟ್​ಗಳನ್ನು ಬ್ಯಾಂಕ್​ನಿಂದ ನೀಡಲಾಗುತ್ತದೆ. ಪ್ರತಿ ವಹಿವಾಟಿನ ಇಮೇಲ್ ಮತ್ತು ಎಸ್ಸೆಮ್ಮೆಸ್ ಅಲರ್ಟ್​ಗಳ ಉಚಿತ ಸೇವೆ ಲಾಭವನ್ನು ಪಡೆಯಬಹುದು. ಈ ಖಾತೆಯ ಕೆಲವು ವಿಶೇಷಗಳೆಂದರೆ, ಆರು ತಿಂಗಳಿಗೊಮ್ಮೆ ಕಾರ್ಡ್ ಅನ್ನು ಸ್ವೈಪ್ ಮಾಡಿದರೆ 2,00,000 ರೂಪಾಯಿ ಮೌಲ್ಯದ ವಯಕ್ತಿಕ ಅಪಘಾತ ವಿಮಾ ರಕ್ಷಣೆಯೊಂದಿಗೆ ಬರುತ್ತದೆ. ಪೋಷಕರು ತಮ್ಮ ಮಗುವಿನ ಡೆಬಿಟ್ ಕಾರ್ಡ್ ಅನ್ನು ಮೋಸದ ಅಥವಾ ಕಾನೂನುಬಾಹಿರ ಬಳಕೆಯಿಂದ ರಕ್ಷಿಸಲು ಒಂದು ಕ್ಷಣದ ಸೂಚನೆಯಲ್ಲಿ ಬ್ಯಾಂಕ್ ಶಾಖೆಯಿಂದ ಖರೀದಿ ರಕ್ಷಣೆ ಹೊಣೆಗಾರಿಕೆ ಮತ್ತು ಕಾರ್ಡ್​ ಕಳೆದುಹೋದಲ್ಲಿ ಅದಕ್ಕೂ ಸೇರಿ ಲಯಾಬಿಲಿಟಿ ಸಹ ಪಡೆಯಬಹುದು. ಅಂದಹಾಗೆ ಈ ಪಾಲಿಸಿಗಳ ಮೌಲ್ಯ ಸುಮಾರು 50,000 ರೂಪಾಯಿಯಷ್ಟಿರುತ್ತದೆ.
Follow us
Srinivas Mata
|

Updated on:Mar 10, 2021 | 6:06 PM

ವಹಿವಾಟು ನಡೆಸಬೇಕು ಅಂದರೆ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿರುತ್ತೀರಿ. ಆದರೆ ಇಂಥದ್ದನ್ನು ಬಳಸದೆ, ಅಷ್ಟೇ ಯಾಕೆ ಯಾವ ಮಶೀನ್ ಸಹ ಬಳಸದೆ ವಹಿವಾಟು ನಡೆಸುವುದನ್ನು ಕಾಂಟ್ಯಾಕ್ಟ್​ಲೆಸ್ ಎನ್ನಲಾಗುತ್ತದೆ. ಅಂದರೆ ನಿಮ್ಮ ಕಾರ್ಡ್ ಯಾವುದರ ಕಾಂಟ್ಯಾಕ್ಟ್​ಗೆ ಬಾರದೆ ವ್ಯವಹಾರ ನಡೆಸುವುದು ಅಂತರ್ಥ.  ಭಾರತದಲ್ಲಿ ಮೊದಲ ಬಾರಿಗೆ ಸ್ವಂತವಾದ ವೇರಬಲ್ ಕಾಂಟ್ಯಾಕ್ಟ್​ಲೆಸ್ ಪೇಮೆಂಟ್ ಡಿವೈಸ್ ಅನ್ನು ಪರಿಚಯಿಸಿದ ಮೊದಲ ಬ್ಯಾಂಕ್ ಎಂಬ ಶ್ರೇಯ ಇದೀಗ ಆಕ್ಸಿಸ್ ಬ್ಯಾಂಕ್​ಗೆ ಸಂದಿದೆ. ಇದನ್ನು ವೇರ್ ಎನ್ ಪೇ ಎಂದು ಕರೆಯಲಾಗಿದೆ. ಈ ಧರಿಸುವ ಸಾಧನವು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜೋಡಣೆ ಆಗಿರುತ್ತದೆ. ಮತ್ತು ಮಾಮೂಲಿ ಡೆಬಿಟ್ ಕಾರ್ಡ್ ರೀತಿಯಲ್ಲೇ ಕಾರ್ಯ ನಿರ್ವಹಿಸುತ್ತದೆ. ಭಾರತದ ಮೂರನೇ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಆಕ್ಸಿಸ್ ಬ್ಯಾಂಕ್ ಈಗ ಥೇಲ್ಸ್ ಹಾಗೂ ಟ್ಯಾಪಿ ಟೆಕ್ನಾಲಜೀಸ್ ಜತೆಗೆ ಕೈ ಜೋಡಿಸಿ, ಕೈಗೆಟುಕುವ ದರದಲ್ಲಿ ಧರಿಸುವಂಥ ಉತ್ಪನ್ನಗಳನ್ನು ರೂಪಿಸುತ್ತಿದೆ. ಎಕ್ಸ್​ಕ್ಲೂಸಿವ್ ಆಗಿ ಮಾಸ್ಟರ್​ಕಾರ್ಡ್ ಪ್ಲಾಟ್​ಫಾರ್ಮ್​ನಲ್ಲಿ ದೊರೆಯುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ? ಆಕ್ಸಿಸ್ ಬ್ಯಾಂಕ್​ನ ವೇರ್ ಎನ್ ಪೇ ಡಿವೈಸ್​ಗಳು ವಿವಿಧ ಆ್ಯಕ್ಸೆಸರಿಗಳಾದ ಬ್ಯಾಂಡ್, ಕೀ ಚೈನ್ ಮತ್ತು ವಾಚ್ ಲೂಪ್​ಗಳಲ್ಲಿ ದೊರೆಯುತ್ತದೆ. ಪಾವತಿಗಾಗಿ ಗ್ರಾಹಕರು ತಮ್ಮ ಸ್ಮಾರ್ಟ್​ಫೋನ್ ಅಥವಾ ವ್ಯಾಲೆಟ್ ಅನ್ನು ಒಯ್ಯುವ ಅಗತ್ಯ ಇಲ್ಲ. ಧರಿಸಬಲ್ಲ ಸಾಧನಗಳನ್ನು ಸುಲಭವಾಗಿ ಬಳಸಿ, ಕಾಂಟ್ಯಾಕ್ಟ್​ಲೆಸ್ ವಹಿವಾಟುಗಳನ್ನು ಮಾಡಬಹುದು.

ಕಾಂಟ್ಯಾಕ್ಟ್​ಲೆಸ್ ವಹಿವಾಟನ್ನು ಸ್ವೀಕರಿಸುವ ಯಾವುದೇ ವರ್ತಕರ ಬಳಿ ಈ ಸಾಧನಗಳನ್ನು ಬಳಸಬಹುದು. 5000 ರೂಪಾಯಿಯೊಳಗೆ ವಹಿವಾಟು ನಡೆಸುವುದಾದರೆ ಆ ಸಾಧನವನ್ನು ಬಳಕೆದಾರರು ಪಿಒಎಸ್ ಮಶೀನ್ ಬಳಿ ತೋರಿಸಿದರೆ ಸಾಕು. 5000 ರೂಪಾಯಿ ಮೇಲ್ಪಟ್ಟ ವ್ಯವಹಾರಕ್ಕೆ ಆದಲ್ಲಿ ಪಿನ್ ಅಗತ್ಯ ಬರುತ್ತದೆ. ಆಕ್ಸಿಸ್ ಬ್ಯಾಂಕ್ ಗ್ರಾಹಕರು ತಮ್ಮ ಹತ್ತಿರದ ಶಾಖೆಯಲ್ಲಿ 750 ರೂಪಾಯಿಗೆ ಧರಿಸಬಹುದಾದ ಈ ಸಾಧನವನ್ನು ಖರೀದಿ ಮಾಡಬಹುದು.

ಈ ಕಾರ್ಯಕ್ರಮದ ಅಡಿಯಲ್ಲಿ ಗ್ರಾಹಕರಿಗೆ ಶೇ 10ರಷ್ಟು ಕ್ಯಾಶ್ ಬ್ಯಾಕ್ ಕೂಡ ಇದ್ದು, ಡೈನಿಂಗ್ ಸಹಭಾಗಿತ್ವ ಇರುವ ಎಲ್ಲಕ್ಕೂ ಆಫರ್ ಇದ್ದು, ವಂಚನೆ ಆದಲ್ಲಿ ಅದಕ್ಕೆ ಖರೀದಿ ಮೊತ್ತ ಮಿತಿಯ ಶೇ 100ರಷ್ಟನ್ನು ಕವರ್ ಮಾಡಿಕೊಡುವ ಜವಾಬ್ದಾರಿ ತೆಗೆದುಕೊಳ್ಳಲಾಗುತ್ತದೆ ಎಂದು ಬ್ಯಾಂಕ್ ಹೇಳಿದೆ. ಕಾಂಟ್ಯಾಕ್ಟ್​ಲೆಸ್ ಪಾವತಿ ಅನ್ನೋದು ಭಾರತದ ಪಾವತಿ ವಲಯದ ಭವಿಷ್ಯ. ಈ ಮಾರ್ಕೆಟ್​ನಲ್ಲಿ ಪ್ರವೇಶಿಸಲು ನಮ್ಮ ವೇರ್ ಎನ್ ಪೇ ಕಾರ್ಯಕ್ರಮವು ಕಾಂಟ್ಯಾಕ್ಟ್​ಲೆಸ್ ಪಾವತಿಯನ್ನು ದರದ ದೃಷ್ಟಿಯಿಂದ ಬಜೆಟ್ ಸ್ನೇಹಿಯಾಗಿಸುತ್ತದೆ. ಜತೆಗೆ ಸುರಕ್ಷಿತ ಹಾಗೂ ಭದ್ರವಾದ ಪಾವತಿಗೆ ಅನುಕೂಲ ಮಾಡಿಕೊಡುತ್ತದೆ ಎಂದು ಬ್ಯಾಂಕ್​ನ ಪ್ರಮುಖರು ತಿಳಿಸಿದ್ದಾರೆ.

ಇಂದಿನ ದಿನಮಾನಕ್ಕೆ ಹೇಗೆ ಕಾಣಬೇಕೋ ಆ ರೀತಿಯ ನೋಟ ಮಾತ್ರ ಅಲ್ಲ, ದಿನ ನಿತ್ಯದ ಬದುಕಿಗೆ ಹೇಗೆ ಅಗತ್ಯವೋ ಆ ರೀತಿಯಲ್ಲಿ ಸಲಕರಣೆಯನ್ನು ರೂಪಿಸಲಾಗಿದೆ. ಆದ್ದರಿಂದ ಕ್ಯಾಶ್​ಲೆಸ್ ವಹಿವಾಟುಗಳಿಗೆ ಬದಲಾಗುವುದು ದಿನದಿನಕ್ಕೂ ಹೆಚ್ಚಾಗುತ್ತದೆ. ನಮ್ಮ ಗ್ರಾಹಕರನ್ನು ವೇರ್ ಎನ್ ಪೇ ಆಕರ್ಷಣೆ ಮಾಡುತ್ತದೆ ಎಂಬ ವಿಶ್ವಾಸ ಇದೆ ಎಂದು ಅವರು ಹೇಳಿದ್ದಾರೆ. ಹೊಸ ಬಗೆಯ ಸುರಕ್ಷಿತ ಪಾವತಿ ವಿಧಾನವನ್ನು ಹುಡುಕುವುದು ಇಂದಿಗೆ ಸೂಕ್ತವಾಗಿದೆ. ಇಲ್ಲಿ ಧರಿಸಬಹುದಾದ ಸಾಧನಗಳು ಪರ್ಯಾಯ ಆಯ್ಕೆಗಳಾಗಿವೆ. ದಿಜಿಟಲ್ ಸಾಧ್ಯತೆಗಳನ್ನು ನಮ್ಮ ಗ್ರಾಹಕರು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಿ ಎಂದು ಬಯಸುತ್ತೇವೆ ಎಂದು ಥೇಲ್ಸ್ ಇಂಡಿಯಾದ ಉಪಾಧ್ಯಕ್ಷ ಎಮಾನ್ಯುಯೆಲ್ ಡಿ ರಕೆಪಿಯುಲ್ ಹೇಳಿದ್ದಾರೆ.

ಇದನ್ನೂ ಓದಿ: ಎಸ್​ಬಿಐ, ಆ್ಯಕ್ಸಿಸ್, ಕೆನರಾ ಬ್ಯಾಂಕ್.. ಉಳಿತಾಯ ಖಾತೆಗೆ ಯಾವ ಬ್ಯಾಂಕ್​ನಲ್ಲಿ ಹೆಚ್ಚು ಬಡ್ಡಿ? ಇಲ್ಲಿದೆ ವಿವರ

Published On - 6:04 pm, Wed, 10 March 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್