ಎಸ್ಬಿಐ, ಆ್ಯಕ್ಸಿಸ್, ಕೆನರಾ ಬ್ಯಾಂಕ್.. ಉಳಿತಾಯ ಖಾತೆಗೆ ಯಾವ ಬ್ಯಾಂಕ್ನಲ್ಲಿ ಹೆಚ್ಚು ಬಡ್ಡಿ? ಇಲ್ಲಿದೆ ವಿವರ
Interest rate on savings account: ಉಳಿತಾಯ ಖಾತೆಯಲ್ಲಿ ನಗದು ಇಡಬೇಕಾದರೆ ಯಾವ ಬ್ಯಾಂಕ್ ಎಷ್ಟು ಬಡ್ಡಿ ನೀಡುತ್ತದೆ ಎಂಬುದನ್ನು ಯೋಚಿಸಬೇಕಾಗುತ್ತದೆ. ಸ್ಥಿರ ಠೇವಣಿಗೆ (fixed deposits) ಸಿಗುವ ಬಡ್ಡಿದರಕ್ಕೆ ಹೋಲಿಸಿದರೆ ಉಳಿತಾಯ ಖಾತೆಯಲ್ಲಿರುವ ಹಣಕ್ಕೆ ಸಿಗುವ ಬಡ್ಡಿದರ ಕಡಿಮೆಯಾಗಿರುತ್ತದೆ.
ಉಳಿತಾಯ ಖಾತೆಯಲ್ಲಿ ನಗದು ಇಡಬೇಕಾದರೆ ಯಾವ ಬ್ಯಾಂಕ್ ಎಷ್ಟು ಬಡ್ಡಿ ನೀಡುತ್ತದೆ ಎಂಬುದನ್ನು ಯೋಚಿಸಬೇಕಾಗುತ್ತದೆ. ಸ್ಥಿರ ಠೇವಣಿಗೆ (fixed deposits) ಸಿಗುವ ಬಡ್ಡಿದರಕ್ಕೆ ಹೋಲಿಸಿದರೆ ಉಳಿತಾಯ ಖಾತೆಯಲ್ಲಿರುವ ಹಣಕ್ಕೆ ಸಿಗುವ ಬಡ್ಡಿದರ ಕಡಿಮೆಯಾಗಿರುತ್ತದೆ. ಖಾಸಗಿ ಬ್ಯಾಂಕ್ಗಳು ಮತ್ತು ಕಿರು ಹಣಕಾಸು ಸಂಸ್ಥೆಗಳು ನೀಡುವ ಬಡ್ಡಿದರಕ್ಕಿಂತಲೂ ಸಾಮಾನ್ಯವಾಗಿ ಸಾರ್ವಜನಿಕ ವಲಯದ ಬ್ಯಾಂಕ್ಗಳು ಉಳಿತಾಯ ಖಾತೆಗೆ ನೀಡುವ ಬಡ್ಡಿದರ ಕಡಿಮೆಯಾಗಿರುತ್ತದೆ. ಹೀಗಿರುವಾಗ ಯಾವ ಬ್ಯಾಂಕ್ ಉಳಿತಾಯ ಖಾತೆಗೆ ಎಷ್ಟು ಬಡ್ಡಿ ನೀಡುತ್ತದೆ ಎಂಬುದರ ಬಗ್ಗೆ ನೋಡೋಣ.
ಭಾರತೀಯ ಸ್ಟೇಟ್ ಬ್ಯಾಂಕ್ (State bank of India – SBI) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಳಿತಾಯ ಖಾತೆಯಲ್ಲಿ ₹ 1 ಲಕ್ಷವರೆಗೆ ನಗದು ಇರಿಸಿದರೆ ಶೇ. 2.75 ಮತ್ತು ಒಂದು ಲಕ್ಷಕ್ಕಿಂತ ಹೆಚ್ಚಿನ ನಗದಿಗೆ ಶೇ.2.75 ಬಡ್ಡಿದರ ಸಿಗಲಿದೆ.
ಕೆನರಾ ಬ್ಯಾಂಕ್ ಕೆನರಾ ಬ್ಯಾಂಕ್ನಲ್ಲಿ ₹ 50 ಲಕ್ಷಕ್ಕಿಂತ ಕಡಿಮೆ ನಗದು ಇರಿಸಿದರೆ ಶೇ 2.90 ಬಡ್ಡಿ, ₹ 50 ಲಕ್ಷಕ್ಕಿಂತ ಹೆಚ್ಚು ಹಾಗೂ ₹ 100 ಕೋಟಿಗಿಂತ ಕಡಿಮೆ ನಗದು ಇರಿಸಿದರೆ ಶೇ 2.90 ಬಡ್ಡಿ ಸಿಗುತ್ತದೆ. ₹ 100 ಕೋಟಿಗಿಂತ ಹೆಚ್ಚು ಮತ್ತು 300 ಕೋಟಿಗಿಂತ ಕಡಿಮೆ ನಗದು ಇರಿಸಿದರೆ ಶೇ 3 ಬಡ್ಡಿ ದರ ಇದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ 25 ಲಕ್ಷದವರೆಗೆ ಮತ್ತ 25 ಲಕ್ಷಕ್ಕಿಂತ ಹೆಚ್ಚಿನ ನಗದಿಗೆ ಶೇ. 3 ಬಡ್ಡಿದರವಿದೆ.
ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಆಫ್ ಬರೋಡಾದಲ್ಲಿ ₹ 1 ಲಕ್ಷವರೆಗೆ ನಗದು ಇರಿಸಿದರೆ ಶೇ 2.75, ಒಂದು ಲಕ್ಷಕ್ಕಿಂತ ₹ 200 ಕೋಟಿವರೆಗಿನ ಠೇವಣಿಗೆ ಶೇ 2.75 ಬಡ್ಡಿ ಸಿಗಲಿದೆ.
ಪಂಬಾಬ್ ನ್ಯಾಷನಲ್ ಬ್ಯಾಂಕ್ ಈ ಬ್ಯಾಂಕ್ನಲ್ಲಿ ₹ 50 ಲಕ್ಷದವರೆಗೆ ಶೇ 3 ಮತ್ತು ₹ 50 ಲಕ್ಷಕ್ಕಿಂತ ಹೆಚ್ಚಿನ ನಗದು ಉಳಿತಾಯ ಖಾತೆಯಲ್ಲಿದ್ದರೆ ಶೇ 3 ಬಡ್ಡಿದರ ಸಿಗಲಿದೆ.
ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಆಫ್ ಇಂಡಿಯಾದ ಉಳಿತಾಯ ಖಾತೆಯಲ್ಲಿ ಇರಿಸುವ ಹಣಕ್ಕೆ ಶೇ 2.90 ಬಡ್ಡಿ ಸಿಗುತ್ತದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಉಳಿತಾಯ ಖಾತೆಯಲ್ಲಿ ₹ 10 ಲಕ್ಷವರೆಗೆ ನಗದು ಇರಿಸಿದರೆ ಬಡ್ಡಿದರ ಶೇ 3 ಹಾಗೂ ₹ 10 ಲಕ್ಷಕ್ಕಿಂತ ಹೆಚ್ಚು ನಗದು ಇರಿಸಿದರೆ ಬಡ್ಡಿದರ ಶೇ 2.75 ಆಗಿದೆ.
ಇಂಡಿಯನ್ ಓವರ್ಸಿಸ್ ಬ್ಯಾಂಕ್ ಇಂಡಿಯನ್ ಓವರ್ಸಿಸ್ ಬ್ಯಾಂಕ್ನ ಉಳಿತಾಯ ಖಾತೆಯಲ್ಲಿ ₹ 25 ಲಕ್ಷದವರೆಗೆ ನಗದು ಇರಿಸಿದರೆ ಶೇ 3.05 ಬಡ್ಡಿದರವಿದೆ.
ಪಂಜಾಬ್ ಸಿಂಧ್ ಬ್ಯಾಂಕ್ ಪಂಜಾಬ್ ಸಿಂಧ್ ಬ್ಯಾಂಕ್ನಲ್ಲಿ ಉಳಿತಾಯ ಖಾತೆಯಲ್ಲಿರಿಸುವ ನಗದಿಗೆ ಶೇ 3.10 ಬಡ್ಡಿ ಸಿಗುತ್ತದೆ.
ಖಾಸಗಿ ಬ್ಯಾಂಕ್ಗಳು
ಆಕ್ಸಿಕ್ ಬ್ಯಾಂಕ್ ಆಕ್ಸಿಸ್ ಬ್ಯಾಂಕ್ನ ಉಳಿತಾಯ ಖಾತೆಯಲ್ಲಿ ₹50 ಲಕ್ಷಕ್ಕಿಂತ ಕಡಿಮೆ ನಗದು ಇರಿಸಿದರೆ ಶೇ. 3ರಷ್ಟು ಬಡ್ಡಿ ಸಿಗುತ್ತದೆ. ₹ 50 ಲಕ್ಷಕ್ಕಿಂತ ಹೆಚ್ಚು ₹ 10 ಕೋಟಿಗಿಂತ ಕಡಿಮೆ ನಗದು ಇರಿಸಿದರೆ ಸಿಗುವ ಬಡ್ಡಿದರ ಶೇ 3.50.
ಕರ್ಣಾಟಕ ಬ್ಯಾಂಕ್ ಕರ್ಣಾಟಕ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ₹ 50 ಲಕ್ಷವರೆಗೆ ಶೇ 2.75 ಬಡ್ಡಿದರವಿದೆ. ₹ 50 ಲಕ್ಷದಿಂದ ₹ 1 ಕೋಟಿಯವರೆಗೆ ಶೇ .3.50 ಹಾಗೂ ₹ 1 ಕೋಟಿಗೂ ಹೆಚ್ಚು ಮೊತ್ತ ಇರಿಸಿದರೆ ಶೇ 4.50 ಬಡ್ಡಿ ಸಿಗಲಿದೆ.
ಎಚ್ಡಿಎಫ್ಸಿ ಬ್ಯಾಂಕ್ ಎಚ್ಡಿಎಫ್ಸಿ ಬ್ಯಾಂಕ್ನ ಉಳಿತಾಯ ಖಾತೆಯಲ್ಲಿ ₹ 50 ಲಕ್ಷದವರೆಗೆ ಶೇ 3, ₹ 50 ಲಕ್ಷಕ್ಕೂ ಹೆಚ್ಚು ಹಣ ಇದ್ದರೆ ಶೇ 3.5ರ ಬಡ್ಡಿ ಸಿಗಲಿದೆ.
ಐಸಿಐಸಿಐ ಬ್ಯಾಂಕ್ ಐಸಿಐಸಿಐ ಬ್ಯಾಂಕ್ನ ಉಳಿತಾಯ ಖಾತೆಯಲ್ಲಿ ₹ 50 ಲಕ್ಷದವರೆಗೆ ಶೇ 3, ₹ 50 ಲಕ್ಷಕ್ಕೂ ಹೆಚ್ಚು ಹಣ ಇದ್ದರೆ ಶೇ 3.5ರ ಬಡ್ಡಿ ಸಿಗಲಿದೆ.
ಇದನ್ನೂ ಓದಿ: ದಿನಕ್ಕೆ 411 ರೂ. ಉಳಿಸಿದರೆ 15 ವರ್ಷಕ್ಕೆ ಬರೋಬ್ಬರಿ 40.68 ಲಕ್ಷ: ಹಣಕಾಸಿನ ಆಸರೆಗೆ ಪಿಪಿಎಫ್ ಉತ್ತಮ ಆಯ್ಕೆ
ಇದನ್ನೂ ಓದಿ: ಇಳಿಗಾಲದ ಇಡಗಂಟಿಗೆ ಅತ್ಯುತ್ತಮ ಉಪಾಯ ನೌಕರರ ಭವಿಷ್ಯ ನಿಧಿ
Published On - 10:03 pm, Sun, 21 February 21