Employees Provident Fund | ಇಳಿಗಾಲದ ಇಡಗಂಟಿಗೆ ಅತ್ಯುತ್ತಮ ಉಪಾಯ ನೌಕರರ ಭವಿಷ್ಯ ನಿಧಿ

ನೀವು ನಿವೃತ್ತರಾದಾಗ ಬರುವ ಸಂಬಳ ನಿಲ್ಲುತ್ತದೆ. ವಾಸ್ತವವಾಗಿ, ನಿವೃತ್ತಿಯ ನಂತರ ಜೀವನ ವೆಚ್ಚ ಏರುತ್ತವೆ. ನಿವೃತ್ತ ಜೀವನಕ್ಕೆ ಕಾರ್ಪಸ್ ಸಂಪೂರ್ಣವಾಗಿ ಅಗತ್ಯವಾಗಿರುತ್ತದೆ.

Employees Provident Fund | ಇಳಿಗಾಲದ ಇಡಗಂಟಿಗೆ ಅತ್ಯುತ್ತಮ ಉಪಾಯ ನೌಕರರ ಭವಿಷ್ಯ ನಿಧಿ
ನೌಕರರ ಭವಿಷ್ಯ ನಿಧಿ ಸಂಸ್ಥೆ
Follow us
shruti hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 04, 2021 | 3:16 PM

ಕಾರ್ಮಿಕರ ಹಿತಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಾಮಾಜಿಕ ಕಲ್ಯಾಣವನ್ನೂ ಉದ್ದೇಶವಾಗಿರಿಸಿಕೊಂಡ ಕಡ್ಡಾಯ ಉಳಿತಾಯ ಯೋಜನೆ ನೌಕರರ ಭವಿಷ್ಯ ನಿಧಿ (Employee Provident Fund – EPF). ನಿವೃತ್ತಿಯ ಜೀವನಕ್ಕಾಗಿ ತಕ್ಕಮಟ್ಟಿಗೆ ಇಡಗಂಟು (ಕಾರ್ಪಸ್) ರೂಪಿಸಿಕೊಳ್ಳಲು ಇಪಿಎಫ್ ಸಹಾಯ ಮಾಡುತ್ತದೆ. ಈ ಯೋಜನೆಯನ್ನು 1952ರಲ್ಲಿ ನೌಕರರ ಭವಿಷ್ಯ ನಿಧಿ ಕಾಯ್ದೆಯೊಂದಿಗೆ ಜಾರಿಗೆ ತರಲಾಯಿತು. ಪ್ರಸ್ತುತದಲ್ಲಿ ಇದನ್ನು ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ನಿರ್ವಹಿಸುತ್ತದೆ.

ಈ ಯೋಜನೆಯಲ್ಲಿ, ನೌಕರನು ತನ್ನ ಸಂಬಳದ ಮೂಲ ಆದಾಯದ ಶೇ 12ರಷ್ಟನ್ನು ಪ್ರತಿ ತಿಂಗಳು ಕಡ್ಡಾಯವಾಗಿ ಸಂಚಿತ ನಿಧಿಗೆ ಕೊಡಡಬೇಕಾಗುತ್ತದೆ. ಉದ್ಯೋಗದಾತರು ತಮ್ಮ ಪಾಲಿನ ವಂತಿಕೆಯನ್ನು ಇದಕ್ಕೆ ಸೇರಿಸುತ್ತಾರೆ. ಇಪಿಎಫ್​ಒ ಮೂಲಕ ಕೇಂದ್ರ ಹಣಕಾಸು ಇಲಾಖೆಯೇ ಈ ಹಣವನ್ನು ನಿರ್ವಹಿಸುತ್ತದೆ. ಸಂಗ್ರಹವಾದ ಹಣಕ್ಕೆ ಪ್ರತಿವರ್ಷ ಕೇಂದ್ರ ಸರ್ಕಾರ ಬಡ್ಡಿಯ ಮೊತ್ತವನ್ನು ಘೋಷಿಸುತ್ತದೆ. ಇತರೆಲ್ಲಾ ತೆರಿಗೆ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ ಇಪಿಎಫ್​ ಬಡ್ಡಿ ಸಾಮಾನ್ಯವಾಗಿ ಉತ್ತಮವಾಗಿರುತ್ತದೆ.

ಕನಿಷ್ಠ 20 ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ EPF ಖಾತೆಗಳನ್ನು ಮಾಡಿಕೊಡಬೇಕು. ಕೆಲ ಉದ್ಯಮಗಳಲ್ಲಿ 20ಕ್ಕಿಂತ ಕಡಿಮೆ ಉದ್ಯೋಗಿಗಳಿದ್ದರೂ ಪಿಎಫ್ ಸೌಲಭ್ಯ ಒದಗಿಸಲು ಅವಕಾಶವಿದೆ. ₹ 15,000ಕ್ಕಿಂತ ಕಡಿಮೆ ಸಂಬಳ ಹೊಂದಿರುವ ಉದ್ಯೋಗಿಗಳಿಗೆ EPF ಖಾತೆಯನ್ನು ಒದಗಿಸುವುದು ಕಡ್ಡಾಯವಾಗಿದೆ.

ಒಂದು ಕೆಲಸದಿಂದ ಇನ್ನೊಂದಕ್ಕೆ ತೆರಳುವಾಗ, EPF ಸಂಚಿತ ನಿಧಿಯನ್ನು ಅನ್ನು ಸುಲಭವಾಗಿ ವರ್ಗಾಯಿಸಬಹುದು. ಯುನಿವರ್ಸಲ್ ಅಕೌಂಟ್ ಸಂಖ್ಯೆ (UAN) ಮೂಲಕ ಹಣ EPF​ ವರ್ಗಾವಣೆ ಈಗ ಸುಲಭವಾಗಿದೆ.

EPF ಹಣ ಲೆಕ್ಕಾಚಾರ: ಪ್ರತಿ ತಿಂಗಳು EPF ಖಾತೆಗೆ ಸೇರಿಸುವ ಮೊತ್ತವು ಹೂಡಿಕೆಯ ರೀತಿಯಲ್ಲಿ ಹಣ ಉಳಿತಾಯವಾಗುವ ಒಂದು ಭಾಗವಾಗಿದೆ. ಹೆಚ್ಚಿನ ಉದ್ಯೋಗಿಗಳಿಗೆ, ಕೊಡುಗೆ ದರವು ಈಗ ಶೇ 12 ಆಗಿದೆ.

EPF ಬಡ್ಡಿದರ: ಪ್ರಸ್ತುತ, EPF ಠೇವಣಿಗಳ ಮೇಲೆ ಚಾಲ್ತಿಯಲ್ಲಿರುವ ದರವು ಶೇ 8.65. ಬಡ್ಡಿದರವನ್ನು ಪ್ರತಿವರ್ಷ ಪರಿಶೀಲಿಸಲಾಗುತ್ತದೆ. ಕಳೆದ ಆರು ವರ್ಷಗಳಲ್ಲಿ EPF ಮೇಲಿನ ಬಡ್ಡಿದರ ಹೇಗೆ ಬದಲಾಗಿದೆ ಎಂಬುದು ಈ ಕೆಳಗಿನಂತಿದೆ.

ವರ್ಷ, EPF, ಬಡ್ಡಿದರ 2020 – 21  8.50% 2019 – 20  8.50% 2018 – 19  8.65% 2017 – 18  8.55% 2016 – 17  8.80% 2015 – 16  8.80% 2014 – 15  8.75%

ನಿಮ್ಮ EPF ಖಾತೆಯಿಂದ ಹಣ ಹಿಂಪಡೆಯಲು ಅವಕಾಶ ವೈದ್ಯಕೀಯ ಖರ್ಚುವೆಚ್ಚಗಳು, ಮದುವೆ, ವಸತಿ ಸಾಲ ಮರುಪಾವತಿ, ಮನೆ ಹಾಗೂ ಜಮೀನಿನ ಖರೀದಿಗೆ ಸಂಬಂಧಿಸಿದಂತೆ EPF​ನಿಂದ ಹಣ ಪಡೆಯಬಹುದು. ಅಲ್ಲದೆ, EPF ಖಾತೆದಾರನು ತೀರಿಕೊಂಡರೆ, ನಾಮಿನಿ ಚಂದಾದಾರ ಹಣ ಹಿಂಪಡೆಯಬಹುದು. ಪ್ರತಿ ತಿಂಗಳು, ನಿಮ್ಮ ಸಂಬಳದ ಒಂದು ಸಣ್ಣ ಭಾಗವನ್ನು ನಿಮ್ಮ EPF ಖಾತೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ವರ್ಷ ಪೂರ್ಣಗೊಳ್ಳುವುದರೊಳಗೆ ದೊಡ್ಡ ಕಾರ್ಪಸ್ ಆಗಿ ಬೆಳೆಯುತ್ತವೆ.

ಒಂದು ವೇಳೆ ಕೆಲಸಕ್ಕೆ ರಾಜೀನಾಮೆ ನೀಡಿದರೆ ಮತ್ತು ಒಂದು ತಿಂಗಳು ನಿರುದ್ಯೋಗಿಗಳಾಗಿ ಉಳಿದಿದ್ದರೆ, ಖರ್ಚುಗಳನ್ನು ಪೂರೈಸಲು EPF ಕಾರ್ಪಸ್‌ನ ಶೇ 75 ವರೆಗೆ ಹಿಂಪಡೆಯಬಹುದು. ಎರಡು ತಿಂಗಳ ನಂತರ ಉದ್ಯೋಗ ಸಿಗದಿದ್ದರೆ, ಉಳಿದ ಮೊತ್ತವನ್ನು ಹಿಂಪಡೆಯಬಹುದಾಗಿದೆ.

ಯುನಿವರ್ಸಲ್ ಖಾತೆ ಸಂಖ್ಯೆಯನ್ನು EPF ಯೋಜನೆಗೆ ಸಂಪರ್ಕಿಸಲಾಗಿದ್ದು, ಹಣ ವರ್ಗಾವಣೆಗೆ ಈ ಸಂಖ್ಯೆ ಅತಿ ಮುಖ್ಯವಾಗಿರುತ್ತದೆ. ಯುನಿವರ್ಸಲ್ ಖಾತೆ ಸಂಖ್ಯೆ 12-ಅಂಕಿಯ ಸಂಖ್ಯೆಯಾಗಿದೆ. ಈ ಸಂಖ್ಯೆಯ ಮೂಲಕ ಕೊನೆಯವರೆಗೂ EPF ಮುಂದುವರೆಸಿಕೊಳ್ಳಬಹುದಾಗಿದೆ.

ತೀರಾ ಸಂಕಷ್ಟದಲ್ಲಿದ್ದೀರಾ? ಮುಕ್ಕಾಲು ಪಾಲು PF ಮೊತ್ತ ಪಡೆಯಿರಿ! ಹೇಗೆ..

Published On - 2:35 pm, Fri, 5 February 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್